August 10, 2012 - 3:00pm
ಇ೦ದಿನ ದಿನಪತ್ರಿಕೆಯೊ೦ದಲ್ಲಿ ಕೆಲವೊ೦ದು ಶಾಲೆಗಳು ಶಾಲೆಗೆ ಬರುವ ಮಕ್ಕಳು ಹಣೆಗೆ ಕು೦ಕುಮ ಇಡಬಾರದೆ೦ದು, ಮತ್ತೊ೦ದು ಶಾಲೆಯವರು ಕು೦ಕುಮ ಹಾಗು ಬೊಟ್ಟನ್ನು ಇಡಬಾರದೆ೦ದು, ಮತ್ತೊ೦ದು ಶಾಲೆಯವರು ಹೂ ಮುಡಿಯಬಾರದೆ೦ದು, ಮತ್ತೊ೦ದು ಶಾಲೆಯವರು ಕೈಗಳಿಗೆ ಬಳೆ ತೊಡಬಾರದೆ೦ದು ನಿರ್ಬ೦ಧ ಹೇರಿದ್ದಾರೆ೦ದು ಕೇಳಿ ಮನಸಿಗೆ ಬಹಳ ಖೇದ ಉ೦ಟಾಯಿತು.
ಮಕ್ಕಳೆಲ್ಲರೂ ಒ೦ದೇ ರೀತಿಯ ಸಮವಸ್ತ್ರ ಧರಿಸಬೇಕೆನ್ನುವುದು ಮಕ್ಕಳಲ್ಲಿ ಭೇದ ಭಾವ ಇರಬಾರದೆ೦ಬ ಉದ್ದೇಶದಿ೦ದ. ಆದರೆ ಈ ಮೇಲೆ ಹೇರಿರುವ ನಿಯಮಗಳೆಲ್ಲ ಯಾಕೆ?
ವಿಷಾದದ ಸ೦ಗತಿ ಎ೦ದರೆ ಈ ನಿಯಮಗಳನ್ನು ಹೇರಿರುವ ಬಹುಪಾಲು ಶಾಲೆಗಳು ಕ್ರೈಸ್ತ ಸಮುದಾಯಕ್ಕೆ ಸೇರಿದ ಶಾಲೆಗಳು.
ಈ ಶಾಲೆಗಳು ನಮ್ಮ ಸ೦ಸ್ಕ್ರುತಿ ಹಾಳು ಮಾಡುತ್ತಿದ್ದಾರ? ಅಥವಾ ಅವರ ಸ೦ಸ್ಕ್ರುತಿ ನಮ್ಮ ಮೇಲೆ ಹೇರುತ್ತಿದ್ದಾರ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಶಾಲೆಯ ನಿಯಮಗಳು
ಒಂದು ವೇಳೆ ಕುಂಕುಮ ಇಟ್ಟಿ, ಬಳೆ ತೊಟ್ಟು ಬರಬೇಕೆಂದು ಕಡ್ಡಾಯವೆಂದು ಯಾವುದಾದರು ಶಾಲೆ ನಿಯಮ ಮಾಡಿದಲ್ಲಿ
ಆಗ ನೋಡಿ ವಿಧಾನಸೌದವೆ ಅಲ್ಲಾಡಿ ಹೋಗುವಂತೆ ಗಲಾಟೆ ಆಗುತ್ತೆ ನಮ್ಮ ಮಾಧ್ಯಮಗಳೆಲ್ಲ ಬೊಬ್ಬೆ ಹಾಕುತ್ತೆ.
ಉ: ಶಾಲೆಯ ನಿಯಮಗಳು
ಪಾರ್ಥರೆ,
ಇಂದಿನ (ನಿನ್ನೆಯ :) ) ನ್ಯೂಸ್ ಓದಿಲ್ಲವೆ?
http://www.coastaldi...
-ಗಣೇಶ.
ಉ: ಶಾಲೆಯ ನಿಯಮಗಳು
ಜಯಂತ್, ಅಂಥಾ ಶಾಲೆಗಳಿಗೆ ಮಕ್ಕಳನ್ನು ಸೇರಿಸದಿರುವುದೇ ಒಳ್ಳೆಯದು.
ಪಾರ್ಥವ್ರು ಹೇಳಿದಂತೆ ನಡೆಯುವುದು ಖಂಡಿತ.
ಉ: ಶಾಲೆಯ ನಿಯಮಗಳು
<<ಅಂಥಾ ಶಾಲೆಗಳಿಗೆ ಮಕ್ಕಳನ್ನು ಸೇರಿಸದಿರುವುದೇ ಒಳ್ಳೆಯದು.>> ಚಿಕ್ಕೂ ಇದು ಖಂಡಿತಾ ಸರಿಯಲ್ಲ. ಆದರೆ ಪ್ರತಿಭಟಿಸಬೇಕು. ಇದೇನು ಬ್ರಿಟೀಷರ ಸಾಮ್ರಾಜ್ಯ ಕೆಟ್ಟು ಹೋಯಿತಾ! ಆ ಶಾಲೆಗಳು ವಿಧಿಸಿದಂತೆ ಕೇಳಿಕೊಂಡು ಸುಮ್ಮನೆ ಇರಲು. ಹೈದರಾಬಾದಿನಲ್ಲಿ ಈ ರೀತಿ ಕೆಲವೊಂದು ಶಾಲೆಗಳು ನಡೆದುಕೊಂಡಾಗ ಪೋಷಕರು ಆ ಶಾಲೆಯ ಮ್ಯಾನೇಜ್ ಮೆಂಟಿನ ಜೊತೆ ಹೊಡೆದಾಡಿ ಅದನ್ನು ನಿವಾರಿಸಿದ್ದಾರೆ.
<<ಪಾರ್ಥವ್ರು ಹೇಳಿದಂತೆ ನಡೆಯುವುದು ಖಂಡಿತ.>> ಇದಾಗಲೇ ನಡೆದೇ ಬಿಟ್ಟಿದೆ...ಗಣೇಶಣ್ಣನವರ ಕೊಂಡಿಯನ್ನು ನೋಡಿ.
ಉ: ಶಾಲೆಯ ನಿಯಮಗಳು
" ಅಥವಾ ಅವರ ಸ೦ಸ್ಕ್ರುತಿ ನಮ್ಮ ಮೇಲೆ ಹೇರುತ್ತಿದ್ದಾರ? "
ಶಾಲೆ, ಕಾಲೇಜು, ಕಂಪೆನಿ ಆಫೀಸುಗಳು, ಅಂಗಡಿ ಮುಂಗಟ್ಟುಗಳು, ಸರಕಾರೀ ಸಂಘ ಸಂಸ್ಥೆಗಳು '
ಹೀಗೆ ಭಾರತದಾದ್ಯಂತ ಸಾರ್ವತ್ರಿಕವಾಗಿ ಭಾನುವಾರ ರಜೆ ಇರುವುದು ಕ್ರಿಸ್ತೀಯ ಬ್ರಿಟಿಷರಿಂದ ಬಂದ ಪರಂಪರೆ --
ಅವರ ಬೈಬಲ್ಲಿನಲ್ಲಿರುವಂತೆ !
ಇದು ನಿಧಾನವಾಗಿ ಬದಲಾಗುತ್ತಿದೆ - ಮುಸ್ಲಿಂ ಶಾಲೆ, ಕಾಲೇಜುಗಳಲ್ಲಿ ಶುಕ್ರವಾರ ರಜೆಯನ್ನು ಪರಿಚಯಿಸುತ್ತಿದ್ದಾರೆ!
ಉ: ಶಾಲೆಯ ನಿಯಮಗಳು
ಕಾನ್ವೆಂಟುಗಳಲ್ಲಿ ಕಲಿಯುವ ಯಾರೂ ಹಣೆಗೆ ಕುಂಕುಮ/ಬಿಂದಿ ಇಡುವುದಿಲ್ಲ. ಕ್ರೈಸ್ತ ಕಾಲೇಜುಗಳಲ್ಲಿ ಇದೆಲ್ಲಾ ಸಾಮಾನ್ಯ. ಶಿಸ್ತಿನ ಹೆಸರಿಟ್ಟು ಇದನ್ನೆಲ್ಲಾ ನಿಷೇಧಿಸಲಾಗುತ್ತದೆ. ಸ್ಕೂಲುಗಳಲ್ಲಿ ಕಲಿಸುವ ಶಿಕ್ಷಕರ ಮನೋಭಾವದ ಪ್ರಭಾವ ಇದರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಸಂಸ್ಕೃತಿ ಎನ್ನುವುದು ದೊಡ್ಡ ಶಬ್ದವಾಯಿತು. ನಾನು ಕಲಿತ ಸ್ಕೂಲಿನಲ್ಲೂ ಇದೇ ಪದ್ಧತಿ ಜಾರಿಯಲ್ಲಿತ್ತು. ಆದರೂ ಹುಡುಗಿಯರ ಹಣೆಯಲ್ಲಿ ಬಿಂದಿಗಳನ್ನು ನೋಡುತ್ತಿದ್ದೆ. ನಾನು ಕಲಿಯುತ್ತಿದ್ದ ಹೊತ್ತಿಗೆ ಬಿಂದಿ ಇಡುವುದು ಔಟ್ ಆಫ್ ಫ್ಯಾಶನ್ ಕೂಡ ಆಗಿದ್ದರಿಂದ ಅದನ್ನು ಧರಿಸದರ ಬಗ್ಗೆ ವಿಶೇಷವೇನೂ ಅನಿಸದಿರಲು ಕಾರಣವಿರಬಹುದು.