ಶ್ಯಾಮ ಕಶ್ಯಪ
ಸಾವಿರಾರು ಬ್ಲಾಗುಗಳ ನಡುವೆ ಮತ್ತೊಂದು 'different' ಬ್ಲಾಗ್.
ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?
ಉತ್ತರ: ಇಂಥಾ ರೈತ ಇಂಥಾ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂದು ಎಕ್ಸೆಲ್ ಫ಼ೈಲಿನಲ್ಲಿ ಬರೆದುಕೊಳ್ಳುತ್ತೇನೆ.
ರೈತನಾದರೂ ವಾಸಿ. ಅವನ ಸಾವಾದರೂ ನನ್ನ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ. ಕೂಲಿ ಕಾರ್ಮಿಕರೋ ರೈತನ ಮನೆಯ ಹೆಣ್ಣುಮಕ್ಕಳೋ ಆತ್ಮಹತ್ಯೆ ಮಾಡಿಕೊಂಡರೆ ಇದೂ ಇಲ್ಲ.

- ಶ್ಯಾಮ ಕಶ್ಯಪ ರವರ ಬ್ಲಾಗ್
- Login or register to post comments
- 356 hits
- Email this blog





RSS:
ಪ್ರತಿಕ್ರಿಯೆಗಳು
ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?
ಗಂಭೀರ ವಿಚಾರ. ವಿಷಯ ತಿಳಿಸಿದ್ದಕ್ಕೆ ನನ್ನಿ. ನಾನೂ ಕೂಡ ಈ ರೀತಿ ಏನಾದರೂ ದಾಖಲೆ ಮಾಡಿಕೊಳ್ಳಬಹುದಾ ನೋಡ್ತೀನಿ.
ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?
ಈ ದೇಶದ ಬೆನ್ನೆಲಬು ಅನ್ನದಾತ ನಾದ ಬಡ ರೈತನ ಸಾವು ನಮ್ಮ ಮನೆಗಳ ಕಂಪ್ಯೂಟರ್ ಕೋಣೆಯಲ್ಲಿ ಇಟ್ಟ ಲೆಕ್ಕದ ಪುಸ್ತಕಕ್ಕೆ ಸೇರುವ ಗತಿ ಬರಬಾರದಿತ್ತು. ನಾನು ಒಪ್ಪುವೆ ರವಿ ಅವರು ಹೇಳಿದ ಹಾಗೆ ಈ ರೀತಿ ಸಂಗ್ರಸಿದ ಮಾಹಿತಿ ನಮ್ಗೆ ಸಹಾಯಕವಾಗ ಬಲ್ಲದು ಎಂದು. ಆದರೆ ನಮ್ಮ ಕೆಲಸ ಅಷ್ಟಕ್ಕೆ ಸೀಮಿತವಾದರೆ ನಮಗೂ ಲೇಕ ಬರೆಯುವ ಗುಮಾಸ್ತನಿಗೂ ವ್ಯತ್ಯಾಸವಿಲ್ಲ ಅಲ್ವ.
ಉ:
ಕೆಲ ದಿನಗಳ ಹಿಂದೆ ಇಸ್ಮಾಯಿಲ್ ಇದರ ಬಗ್ಗೆ ಬರದಿದ್ದರು ಸಂಖ್ಯೆಯಷ್ಟೇ ಆಗಿಬಿಟ್ಟ ರೈತನ ಸಾವು ಎಂಬ ಲೇಖನದಲ್ಲಿ. ನೀವೆಲ್ಲರೂ ಹೇಳಿದ ಹಾಗೆ ಈ ಮಾಹಿತಿಯನ್ನು ಸಂಗ್ರಹಿಸುವ ಅವಶ್ಯಕತೆಯಿದೆ. ಅದನ್ನು ಮಾಡಲಿಕ್ಕೂ ಜನರಿದ್ದಾರೆ. ಆದರೆ, ನನ್ನ ಮತ್ತು ಇಸ್ಮಾಯಿಲರ ವೃತ್ತಿಯಲ್ಲಿ (ಪತ್ರಿಕೋದ್ಯಮ, ಸಂಶೋಧನೆ, ಇತ್ಯಾದಿ) ರೈತರ ಸಾವುಗಳು (ಕೇವಲ ರೈತರ ಸಾವುಗಳಷ್ಟೇ) ಸಂಖ್ಯೆಯಷ್ಟೇ ಆಗಿ ಉಳಿದಿರುವುದರ ಬಗ್ಗೆ ದುಃಖದಿಂದ ಬಂದ ಮಾತು ಇದು.
ಇದರ ಹಿಂದೆ, ನಮ್ಮ ಸಂಶೋಧನಾ ವೈಫಲ್ಯಗಳು, ನಮ್ಮ ಸಮಾಜದ ಸಂಕುಚಿತ ದೃಷ್ಟಿಕೋನಗಳು, ಇದನ್ನೆಲ್ಲ ತಿಳಿದೂ ಏನೂ ಮಾಡಲಿಕ್ಕಾಗದ ಅಸಹಾಯಕತೆ ಇವೆಲ್ಲ ಆಡಗಿದೆ. ಇದನ್ನು ಇಸ್ಮಾಯಿಲ್ ಕೂಡ ಒಪ್ಪುತ್ತಾರೆ ಎಂದುಕೊಳ್ಳುತ್ತೇನೆ.
@belagu, ನಿಮ್ಮ ಕಳಕಳಿಯನ್ನು ಮೆಚ್ಚುವೆ. ನನ್ನ ಮಾತುಗಳನ್ನು ತಪ್ಪಾಗಿ ತಿಳಿಯಬೇಡಿ.
ಭಾರತೀಯ ಕೃಷಿಯ ಜಟಿಲತೆಯನ್ನು ಅರ್ಥಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಸಂಖ್ಯೆಗಳನ್ನು ಬಳಸಲು ಆಗದಿರುವುದಕ್ಕೆ ಇದೂ ಒಂದು ಕಾರಣವೇ. ಇದರ ಜೊತೆಗೆ ಯಾವ ತರಹದ ಸಂಖ್ಯೆಗಳಿಲ್ಲದೇ, ಅಂಕಿ ಅಂಶಗಳಿಲ್ಲದೇ ಹುಟ್ಟುಕೊಂಡಿರುವ ಹಲವು ಅಸತ್ಯಗಳಿವೆ. ಅವುಗಳಲ್ಲಿ ಕೆಲವನ್ನು belagu ಇಲ್ಲಿ ಹೇಳಿದ್ದಾರೆ. ವಿಷಯವನ್ನು romanticize ಮಾಡಬಹುದಷ್ಟೇ ವಿನಃ ಇವುಗಳಿಂದ ಕೇವಲ ಸಂಖ್ಯೆಗಳಿಂದಾಗಬಹುದಾದಷ್ಟೂ ಉಪಯೋಗವಿಲ್ಲ.
ಉದಾಹರಣೆಗೆ:
೧. ಇವತ್ತಿಗೆ ರೈತರು(ರೈತರೆಲ್ಲರೂ) ನಮ್ಮ ದೇಶದ ಬೆನ್ನೆಲುಬಾಗಿ ಉಳಿದಿಲ್ಲ. ನಮ್ಮ ದೇಶದ ತುಂಬಾ ಇರುವರೇ ಅವರು. ಅವರಿಗೆ ಬೆನ್ನೆಲುಬಾಗಿ ಇತರರು ನಿಲ್ಲಬೇಕಷ್ಟೇ.
೨. ರೈತರೆಲ್ಲ ಅನ್ನದಾತರಲ್ಲ. ಕೇವಲ ಅನ್ನವನ್ನು ನೀಡುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ.
೩. ರೈತರೆಲ್ಲರೂ ಬಡವರಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರೆಲ್ಲರೂ ಬಡವರಾಗಿರಲಿಲ್ಲ.
--
ನೀ ಲೋಕದ ಕಾಳಜಿ ಮಾಡುವೆನಂತಿ, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ
ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?
ಶ್ಯಾಮ್,
ದಯವಿಟ್ಟು ಇದನ್ನು ಮಾಡಿಯೇ ಮಾಡಿ (ತತ್‍ಕ್ಷಣದಿಂದಲೆ) ಮತ್ತು ಆದರೆ ಅದಕ್ಕೆ ಪೂರಕವಾಗಿ ನನ್ನ ಈ ಕೋರಿಕೆಯನ್ನೂ ತೆಗೆದುಕೊಳ್ಳಿ.
ಇಂತಹುದನ್ನು ನಾನೆ ಮಾಡಬೇಕೆಂದಿದ್ದೆ. ವಿಕ್ರಾಂತದಲ್ಲಿ ಒಮ್ಮೆ ನಾನು ಬರೆದಿದ್ದ ರೈತರ ಬಗೆಗಿನ ಲೇಖನವನ್ನು ನನ್ನ ಬ್ಲಾಗ್‍ಗೆ ಹಾಕಿ, ರೈತರ ಆತ್ಮಹತ್ಯೆ ಸುದ್ಧಿ ಬಂದಾಗಲೆಲ್ಲ ಅದನ್ನು ಸಂಖ್ಯೆ ಸಮೇತ ಅಪ್‍ಡೇಟ್ ಮಾಡುತ್ತಾ ಹೋಗಬೇಕು ಎಂದುಕೊಂಡಿದ್ದೆ. ಆದರೆ, ಸಮಯಾಭಾವದಿಂದ ಇಂದು ನಾಳೆ ಎಂದು ಮುಂದೂಡತ್ತಲೆ ಬರುತ್ತಿದ್ದೇನೆ. ದಯವಿಟ್ಟು ನೀವು ನಿಮ್ಮ ಕಂಪ್ಯೂಟರ್ನಲ್ಲಿ ಸೇವ್ ಮಾಡಿಕೊಳ್ಳುವ ಬದಲು, ಅದೇ ಸುದ್ಧಿಯನ್ನು ಮತ್ತು ಸಂಖ್ಯೆಯನ್ನು ನಿಮ್ಮ ಬ್ಲಾಗಿನಲ್ಲಿ ಹಾಕುತ್ತಾ ಹೋಗಿ. ಟೇಬಲ್ ಮಾಡಿ ಅದನ್ನು ಅಪ್‍ಡೇಟ್ ಮಾಡುತ್ತಿರಿ.
ಉದಾ:
http://icasualties.org/oif/Statecity.aspx
ಇಂತಹ ಕೆಲಸ ಅನೇಕ ರೀತಿಯಲ್ಲಿ ಪಾಸಿಟಿವ್ ಪರಿಣಾಮ ಕೊಡುತ್ತದೆ. ಚರ್ಚೆ ಮತ್ತು ಕ್ರಿಯೆಯನ್ನು (ತನ್ನ ನೆಲೆಯಲ್ಲಿ) ಅನಿವಾರ್ಯ ಮಾಡುತ್ತದೆ.
ದಯವಿಟ್ಟು ಇದನ್ನು ಸಲಹೆ ಎನ್ನುವುದಕ್ಕಿಂತ ಕೋರಿಕೆ ಎಂದು ತೆಗೆದುಕೊಳ್ಳಿ.
ರವಿ...
http://amerikadimdaravi.blogspot.com