ಬದುಕು ಬವಣೆಯಾಗದಿರಲಿ

ಬದುಕನ್ನು ಬವಣೆಯೆಂದಿಣಸದಿರು

ಬವಣೆಪಟ್ಟರೂ ಜೀವಂತ ಹೋದವರುಂಟೆ?

 

ಸಂಕಟಗಳಿಗೆಲ್ಲ ಆಸೆಯೇ ಬೇರು

ಆಸೆಯ ಬಲೆಯಿಂದ ಪಾರಾದವರುಂಟೆ?

 

ತನ್ನೊಟ್ಟಿಗೆ ತಾನಾಗಿರು

ತಾನಾಗಿ ಎಲ್ಲ ದೊರೆವುದು

 

ತನ್ನಂಬುಗೆ ಇರಲಿ

ಅದು ಜಂಬ ಅನಿಸದಿರಲಿ

 

ಬದುಕಿದು ಒಡೆಯನ ತೇರು

ನಗುನಗುತಲೆ ಎಳೆಯುತಿರು.  ಮುಂದೆ ಓದಿ »

Ornamental seperator

ಜಿಲೇಬಿ ಮತ್ತು ಕನ್ನಡ

ಹಲವರು (especially ತಮಿಳರು) ಕನ್ನಡ ಲಿಪಿಯನ್ನು ಜಿಲೇಬಿಯಂತೆ ಕಾಣುತ್ತೆ ಅಂತ ಜರಿಯೋಕೆ ನೋಡ್ತಾರೆ. ಕನ್ನಡದ ಎಲ್ಲ ಅಕ್ಕರಗಳು ಗುಂಡು ಗುಂಡಾಗಿರುವದು ದಿಟ. ಆದರೂ ತಮಿಳನೊಬ್ಬ ಹಂಗಂದಾಗ "ನಿಮ್ಮ ___ಗಿಂತ ಬೆಟರ್ ಆಗಿದೆ" ಅಂತ ತಿರುಗೇಟು ನೀಡಬೇಕು. ಬಿಟ್ಟ ತಾಣ ತುಂಬಿ ಪ್ಲೀಸ್.

Ornamental seperator

ಶ್ರದ್ಧೆ

ಜೀವನದಲ್ಲಿ ದೇವರಲ್ಲಿ ನಾನೇನಾದರು ಕೇಳೋದಾದ್ರೆ... ಅದೊಂದೆ.....

"ಶ್ರದ್ಧೆ"  ಮುಂದೆ ಓದಿ »

Ornamental seperator

ಗಾಯ

ಹೂವಿಗಾಗಿ ಕೈ ಮಾಡಿದೆ

ಸಿಕ್ಕಿದ್ದು ಬರೀ ಮುಳ್ಳಿನ ಗೀರು ಗಾಯ

 

ಹಣ್ಣಿಗಾಗಿ ಮರವೇರ ಹೋದೆ

ಸಿಕ್ಕಿದ್ದು ಬರೀ ಮೈತುಂಬ ಪರಚು ಗಾಯ

 

ಹಾಲು ಕೊಡೆಂದು ಹಸುವ ಕೇಳಿದೆ

ಸಿಕ್ಕಿದ್ದು ಬರೀ ಅದರ ಒದೆತದ ಗಾಯ

 

ನಲಿವಿನ ಹೊತ್ತು ನೀಡಲು ನೆನಪನು ಕೇಳಿದರೂ

ಸಿಕ್ಕಿದ್ದು ಬರೀ ಮನನೊಂದ ಹಸಿ ಗಾಯ

Ornamental seperator

ಎಲ್ಲರೂ ಇತ್ತ ನೋಡಿ... ಈ poll ನಲ್ಲಿ yes ಅಂತ ಕೊಡಿ-ರಜನಿಕಾಂತ್ ಹೇಳಿಕೆ ಬಗ್ಗೆ

ರಜನಿಕಾಂತ್ ಕನ್ನಡಿಗರನ್ನು ಕ್ಷಮೆ ಕೇಳಬೇಕೆ ಎಂಬುದರ ಬಗ್ಗೆ ಯಾರೋ ಒಬ್ಬ yahoo ನಲ್ಲಿ poll ನಡೆಸಿದ್ದಾನೆ... yes ಅಂತ ಎಲ್ಲ ಸಂಪದಿಗರು please ಕೊಡಿ.

ಕೊಂಡಿ...

http://js.polls.yahoo.com/quiz/quiziframe.php?poll_id=34563

Ornamental seperator
Syndicate content