ಕನ್ನಡ ಅಂಕಿಗಳು ಮಾಡಿದ ಪಾಪವೇನು?
ಕೆಲ ದಿನಗಳ ಹಿಂದೆ ಪುಣೆಗೆ ಹೋಗಿದ್ದೆ. ಅಲ್ಲಿ ಬಸ್ಸಲ್ಲಿ ಟಿಕೆಟ್ ಮೇಲೆ ದರ ದೇವನಾಗರಿ ಅಂಕಿಯಲ್ಲಿ ಅಚ್ಚಾಗಿತ್ತು. ಏನ್ ಬಂತಪ್ಪ ಅಂದುಕೊಂಡೆ,. ಹಂಗೂ ಹಿಂಗು ದೇವನಾಗರಿ ಅಂಕಿಗಳು ತುಸು ಗೊತ್ತಿರುವದರಿಂದ ತಿಳೀತು ಅನ್ನಿ. ಬಾಂಬೆಯಲ್ಲೂ ಅಸ್ಟೇ ಅಂತೆ,.. ಟಿಕೆಟ್ ಮೇಲಿರುವ ಒಂದೊಂದು ಪದಾನೂ ದೇವನಾಗರಿ(ಮರಾಟಿ ಬರೆಯಲು ಬಳಸುವ ಲಿಪಿ).. ಕೂಡಲೆ ಕನ್ನಡ ನಾಡಿನ ಸರಕಾರಿ ಬಸ್ಸುಗಳ ಟಿಕೆಟುಗಳ ಮೇಲೆ ಕಾಣದ ಕನ್ನಡ ಅಂಕಿಗಳ ಬಗ್ಗೆ ನೆನೆದು ಮನಸ್ಸು ಮುದುಡಿತು.
ಕೆ.ಎಸ್.ಆರ್.ಟಿ.ಸಿ ಆಗಲಿ,.ಬಿ.ಎಮ್.ಟಿ.ಸಿ ಆಗಲಿ ಬಸ್‍ಗಳ ಟಿಕೆಟ್‍ಗಳ ಮೇಲೆ ಇಂಗಳಿಸಿನಲ್ಲಿಯೇ ದರ ಬರೆದಿರುತ್ತದೆ.ಎಲ್ಲೋ ಅಲ್ಲೊಂದು ಇಲ್ಲೊಂದು ಕನ್ನಡ ಪದ ಕಂಡರೂ ದರ ಇಂಗಳೀಸಿನಲ್ಲಿಯೇ. ಯಾಕೆ? ಕನ್ನಡ ಅಂಕಿಗಳು ಕನ್ನಡಿಗರಿಗೆನೇ ಗೊತ್ತಿಲ್ಲ ಅಂತಲೋ ಇಲ್ಲ ಹೊರಗಿನವರಿಗೆ ತೊಂದರೆಯಾಗುತ್ತದೆ ಅಂತಲೋ? ಹೀಗೆ ಎಸ್ಟು ಅಂತ ಹೊರಗಿನವರಿಗೆ ಅನುಕೂಲ ಮಾಡಿ ಕೊಡಲು ನಮ್ಮ ನುಡಿಯನ್ನು ನಾವು ಹಿಂತಳ್ಳುತ್ತ ಇರುವದು?
ಈಗಿನ ಹಲವು ಪೇಪರ್‍ಗಳಾಗಲಿ,.ತಿಂಗಳೋಲೆ(ಮ್ಯಾಗಜೀನ್‍ಗಳು)ಗಳ ಪುಟಗಳ ಸಂಕೆಗಳನ್ನು ನೋಡಿ,.. ಇಂಗಳೀಸಿನಲ್ಲೇ ಇರುತ್ತವೆ ಯಾಕೆ? ಪುಣೆ,ಬಾಂಬೆಗಳಲ್ಲಿ, ತೊಂದರೆ ಆಯಿತು ಅಂತ ಏನಿಲ್ಲವೆಂದರೂ ದೇವನಾಗರಿ ಸಂಕೆಗಳನ್ನಾದರೂ ಕಲಿತುಕೊಳ್ಳುತ್ತಾರೆ. ಅಂತ ಕಲಿತುಕೊಳ್ಳಬೇಕಾದ ಪರಿಸ್ತಿತಿ ತಂದೊಡ್ಡದೇ ಹೊರಗಿನವರಿಗೆ ಕನ್ನಡ ಕಲಿಯಿರಿ ಅಂದರೆ ಹೇಗೆ ಕಲಿತಾರು?
ಇಸ್ಟಕ್ಕೆ ನನಗೆ ಬೇಸರವಾಗಲಿಲ್ಲ. ೨೦೦೮ರ ಕನ್ನಡ ಅಂಕಿಗಳಲ್ಲಿ ಮೂಡಿಸಿರುವ ಕ್ಯಾಲೆಂಡರ್ ಹುಡುಕುತ್ತಿದ್ದೆ.. ಬೆಂಗಳೂರಲ್ಲೆಲ್ಲೂ ನನಗೆ ಸಿಗಲಿಲ್ಲ..
ಯಾಕೆ ಹೀಗೆ ನಾವು ಕನ್ನಡ ಅಂಕಿಗಳನ್ನು ಮೂಲೆಗಟ್ಟುತ್ತಿದ್ದೇವೆ,.. ಈ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕಿದೆ ಅಲ್ಲವೇ?

- ಸಂಗನಗೌಡ ರವರ ಬ್ಲಾಗ್
- Login or register to post comments
- 381 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ನೀವು ಹೇಳೂದು ಖರೇರಿ ಸಂಗನಗೌಡ್ರ, ನಾನೂ ಇಷ್ಟ ವರ್ಷ ಮಹಾರಾಷ್ರದಾಗ ಇದ್ದು ಬಂದಕೀನ. ಅಲ್ಲೆಲ್ಲ ತಿಕೀಟ್ ಮ್ಯಾಲೆ ಮರಾಠಿ ಸಂಖ್ಯಾನ ಇರ್ತಾವ. ನಮ್ಮಲ್ಲೇನಪಾ ಅಂದ್ರ ನಾವು, ನಮ್ಮಂಥೋರು ಬರೀ ಹಿಂಗ ಕುಂತಲ್ಲೆ ಹಂಗಾಗಬೇಕು, ಹಿಂಗಾಗಬೇಕು ಅಂತೀವಿ ಮರೀತೀವಿ. ಯಾಕಂದ್ರ ನಮ್ ಕೋತ್ ಇಷ್ಟ! ಹಾಳಿ ಮ್ಯಾಲಿನ ಹುಲಿಗೋಳು ನಾವು!
ಜಯಲಕ್ಷ್ಮೀ.ಪಾಟೀಲ್.
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ಬರೀ ಹಾಳೆ ಮೇಲಿನ ಹುಲಿಗಳಾಗೋದು ಬೇಡ.. ನಿಮ್ಮ ಅನಿಸಿಕೆಯನ್ನು ctm@bmtcinfo.comಗೆ ಮೇಲ್ ಮಾಡಿ.
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ಕನ್ನಡದ ಅಂಕಿಗಳು ಕನ್ನಡದವರಿಗೆ ಗೊತ್ತಾಗೊಲ್ಲ ಅಂತಿರಬಹುದು. ನಮ್ಮ ಪಠ್ಯ ಪುಸ್ತಕಗಳಲ್ಲಿಯೂ ಅದ್ರ ಬಳಕೆ ಕಡಿಮೆ. ಯಾವ ಭಾಷೆ ಮಾತನಾಡುತ್ತಾರೊ ಅವರಿಗೆ ಅಂತಹುದೇ ಭಾಷೆಯಲ್ಲಿ ಪ್ರತಿಕ್ರಿಯಿಸುವುದು. ಕನ್ನಡ ಗೊತ್ತಿಲ್ಲ ಅಂತ ಹೇಳೋದು ಅವರ ಹೆಗ್ಗಳಿಕೆ ಅಂತ ಭಾವನೆ ಬಂದಿದೆ.ನಾವು ಬಹು ಭಾಷೆಯನ್ನು ಬಲ್ಲವರು ಎಂದು ತೋರಿಸಲ್ಲಿಕ್ಕೊ ಏನೊ ಅವರು ಕನ್ನಡ ಮಾತಿಗಿಂತ ಬೇರೆ ಭಾಷೆಯನ್ನು ಮಾತನಾಡುವುದೇ ಹೆಚ್ಚು. ಈ ಸಂಸ್ಕೃತಿ ಚೆನ್ನೈ ಅಥವ ಮುಂಬೈನಲ್ಲಿ ಇಲ್ಲ.
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ಮರಾಟಿಗೆ ಅದರದ್ದೇ ಆದ ಲಿಪಿಯೂ ಇಲ್ಲ ಅಂಕಿಗಳೂ ಇಲ್ಲ...
ಕನ್ನಡಕ್ಕೆ ತನ್ನದೇ ಆದ ಲಿಪಿ ಮತ್ತು ಅಂಕಿ ಎರಡೂ ಇದೆ...
ನಮ್ಮ ಸರಕಾರ ಇತ್ತ ಕಡೆ ಗಮನ ಹರಿಸಬೇಕು.. ಕನ್ನಡ ಅಂಕಿಗಳನ್ನು ಬಂಡಿಗಳ ಮೇಲೆ ಹಾಕಿಕೊಳ್ತಾ ಇದ್ದಾರೆ ಹೆಚ್ಚು ಮಂದಿ ಈಗ..ಇದು ಒಂದು ನಲಿವು.
=====================================
ಮಾಯ್ಸ!
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ನಾನೂ ನಿಮ್ಮ ಜತೆ ದನಿಗೂಡಿಸುತ್ತೇನೆ ಸ್ವಾಮಿ. ೦ ೧ ೨ ೩ ೪ ೫ ೬ ೭ ೮ ೯ ಕ್ರಮವಾಗಿ 0 1 2 3 4 5 6 7 8 9 ಎಂದು ಜನರಿಗೆ ಹೇೞ್ತೇನೆ ಸ್ವಾಮಿ.
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ಕ.ರಾ.ರ.ಸಾ.ಸಂ ನವರು ಮೊದಲು ಟಿಕೆಟ್ ನಲ್ಲಿ ಕನ್ನಡ ಅಂಕಿಗಳನ್ನೇ ಬಳಸುತ್ತಿದ್ದರು. ಆದ್ರೆ ಬೆ.ಮ.ನ.ಸಾದಲ್ಲಿ ಇಲ್ಲ. ನಾನೊಮ್ಮೆ ಕೋಲ್ಕೋತ್ತಾಗೆ ಹೋದಾಗ ಅಲ್ಲಿನ ಸಿಟಿ ಬಸ್ಸಿನ ಟಿಕೆಟ್ಟುಗಳಲ್ಲಿ ದೇವನಾಗರಿ ಲಿಪಿಯಲ್ಲೇ ಅಂಕಿಗಳಿದ್ದವು.
ಮೊದಲು ಕನ್ನಡ ಪತ್ರಿಕೆಗಳು ಕೂಡ ಕನ್ನಡ ಅಂಕಿಗಳನ್ನೇ ಬಳಸುತ್ತಿದ್ದರು. ಈಗ ಜನರಿಗೆ ಓದಲು ಕಷ್ಟವಾಗುತ್ತವೆ ಎಂಬ ಸ್ವಯಂ ನಿರ್ಧಾರದಿಂದ ಅವುಗಳ ಬಳಕೆ ನಿಲ್ಲಿಸಿ ಇನ್ನೂ ಯಾರಿಗೂ ಮುಂದೆ ಪರಿಚಯವೇ ಇಲ್ಲದ ಹಾಗೆ ಮಾಡಿಬಿಟ್ಟಿದ್ದಾರೆ!. ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಗಳಲ್ಲಿ ಈಗ್ಲೂ ಕನ್ನಡ ಅಂಕಿಗಳೆ ಇರುತ್ತವೆ.
**************************
http://vikasavada.blogspot.com/
**************************
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ಬೆಂ.ಮ.ನ.ಸಾದ ವೋಲ್ವೊ ಬಸ್ಸುಗಳ ಟಿಕೇಟ್‍ಗಳ ಮೇಲೆ ಒಂದೇ ಒಂದು ಕನ್ನಡ ಪದ ಕಾಣದು ಗೊತ್ತೇ?
ಕನ್ನಡವನ್ನು ಎತ್ತಿ ಹಿಡಿಯಬೇಕಾದ ಸಂಸ್ತೆಗಳೇ ಕನ್ನಡವನ್ನು ಕಡೆಗಣಿಸುತ್ತಿವೆ..
ಕ.ರಾ.ರ.ಸಾ.ಸಂನ ಟಿಕೇಟ್ ಮೇಲೆ ಕನ್ನಡ ಕಂಡರೂ ಅಂಕಿಗಳು ಕನ್ನಡದಲ್ಲಿಲ್ಲ.
ಇದಕ್ಕಾಗೇ ಬೇಸರವಾಗುತ್ತಿರುವದು. ಕನ್ನಡ ಅಂಕಿಗಳನ್ನು ಓದಲು ಕನ್ನಡಿಗರಿಗೇ ಕಸ್ಟಾನೇ? ನಾಳೆ ಕನ್ನಡವನ್ನೇ ಓದಲು ಕನ್ನಡಿಗರಿಗೆ ಕಸ್ಟ ಅನ್ನುವ ಅನಿಸಿಕೆ ಬೆಳೆದೀತೇನೋ? ಆಗ ಈ ಕನ್ನಡ ಪೇಪರ್‍ಗಳು,ತಿಂಗಳೋಲೆಗಳನ್ನು ಇಂಗಳೀಸಲ್ಲೇ ಅಚ್ಚು ಮಾಡತೊಡಗುವರೇನೋ!!
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ನಿಜ.ಎಲ್ಲೆಲ್ಲೂ ಕನ್ನಡ ಅಂಕಿಗಳನ್ನೇ ಬಳಸುವ ಪರಿಪಾಠ ಇನ್ನಾದರೂ ರೂಢಿಯಾಗಬೇಕು.ಇಲ್ಲದಿದ್ದರೆ ಪ್ರತಿಕ್ರಿಯೆಗಳ ಮೂಲಕ ರೂಢಿ ಮಾಡಿಸೋಣ.
-ಸುಶೀಲ್.
****************************
ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ..
ಜಲವೆಂದರೆ ಕೇವಲ ನೀರಲ್ಲ ಅದು ಪಾವನತೀರ್ಥ!!
****************************
ಕನ್ನಡ ನಮ್ಮ ರಕ್ತದಲ್ಲಿ ಹರಿಯುತ್ತಲೇ ಇರುತ್ತದೆ ನಾವೆಲ್ಲೇ ಹೋದರೂ..
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ctm@bmtcinfo.com ಗೆ ಮೇಲ್ ಮಾಡಿ, ದಯವಿಟ್ಟು.
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ನನಗೆ ಕಂಡುಬಂದದ್ದು ಇಷ್ಟು:
೧) ಕನ್ನಡ ಸಂಖ್ಯೆಗಳು ಸುಲಭವಾಗಿ ಗುರುತು ಹಿಡಿಯಲು ಹಲವರಿಗೆ ಕಷ್ಟವಿರುವಂತಿದೆ.
೨) ತಾಂತ್ರಿಕ ಕಾರಣಗಳಿಂದ ರೋಮನ್ ಸಂಖ್ಯೆಗಳೇ ಹೆಚ್ಚಾಗಿ ಬಳಕೆಯಲ್ಲಿರುವಂತಿದೆ.
(ಸ್ವಲ್ಪ ಬೇಗ ನನಗೆ ತೋಚಿದ್ದು ಬರೆದಿರುವೆ. ಕನ್ನಡ ಸಂಖ್ಯೆಗಳು ಬಳಕೆಗೆ ತರಬೇಕೆಂಬುದಕ್ಕೆ ನನ್ನದೂ ಬೆಂಬಲವಿದೆ. ಆದರೆ ಯಾರಿಗೂ ಅದು ಹೇರಿಕೆಯಾಗಕೂಡದು)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ಹಾಗಿದ್ದರೆ ಮುಂದೆ ಕನ್ನಡ ಅಕ್ಷರಗಳು ಗುರುತಿಸಲು ಕಷ್ಟವಾಗುತ್ತದೆ ಮತ್ತು ತಾಂತ್ರಿಕ ತೊಂದರೆಗಳಿವೆ ಎಂದು ಕನ್ನಡ ಲಿಪಿಯ ಬಳಕೆಯೂ ಕೂಡ ಕ್ರಮೇಣ ಮಾಯವಾದರೆ ಆಶ್ಚರ್ಯವೇನಿಲ್ಲ. ತೀರ ಐದು ದಶಕಗಳಿಂದ ಇಲ್ಲದ ತಾಂತ್ರಿಕ ತೊಂದರೆಗಳು ಈಗ ಇವೆ ಎಂದರೆ ಏನರ್ಥ!! ನಮಗೆ ಬೇಕಾದಂತೆ ತಂತ್ರಜ್ಞಾನವನ್ನು ಬಗ್ಗಿಸಿಕೊಳ್ಳುವುದರಲ್ಲೇ ಮನುಷ್ಯನ ಬುದ್ಧಿವಂತಿಕೆ ಎಂಬುದು ನನ್ನಭಿಪ್ರಾಯ. ಹೋಗಲಿ, ಪಕ್ಕಾ ತಾಂತ್ರಿಕ ತೊಂದರೆಗಳಿಲ್ಲದಿದ್ದ ಕಡೆಯಾದರೂ ಕನ್ನಡ ಅಂಕಿ ಧಾರಾಳವಾಗಿ ಬಳಸಬಹುದಲ್ವಾ?
**************************
http://vikasavada.blogspot.com/
**************************
ಉ:
ಗೆಳೆಯ ಹರಿ..
FYI ಮಯ್ಸೂರು ಸಂಸ್ತಾನದ ಆಳ್ವಿಕೆಯಲ್ಲಿ ಕನ್ನಡದ ಅಂಕಿಗಳು ಇರಲಿಲ್ಲವಂತೆ. ನಮ್ಮ ಅಜ್ಜ ಅಜ್ಜಿಯರೂ ಕೂಡ ಕನ್ನಡದ ಅಂಕಿಗಳನ್ನು ಬರೀ ಜಾತಕದಲ್ಲಿ ನೋಡಿದ್ದಾರಂತೆ.
ಅವರು ಹೇಳಿದಂತೆ ಕನ್ನಡದ ಅಂಕಿಗಳು ಮುಂಚಿನಿಂದಲೂ ತುಂಗೆಯ ಬಡಗಣದಲ್ಲಿ ಹೆಚ್ಚು ಬಳಕೆಯಲ್ಲಿ ಇತ್ತಂತೆ.. ಹಾಗಾಗಿ.. ನಮ್ಮ ಅಂಕಿಗಳು ಬಳಕೆ ತಪ್ಪಿವೆ/ಕಡಮೆಯಾಗಿವೆ.
ಆದರೆ ನಮ್ಮ ಈಗಿನ ಸರಕಾರ ತುಸು ಅಕ್ಕರೆ ತೋರಿದರೆ ಎಲ್ಲಡೆ ಬಳಸಬೋದು.. ನನಗೆ ಒಂದು(೧) ಮತ್ತು ಸೊನ್ನೆ(೦) ಎರಡೂ ಒಂದೇ ತರ ಕಾಣತ್ತೆ ಈ ಪಾಂಟಲ್ಲಿ....
ನಾನು ಕನ್ನಡ ಅಂಕಿಗಳನ್ನು ಹೀಗೆ ನೆನೆಪಿಟ್ಟುಕೊಂಡಿದ್ದೀನಿ
೧
೨
೩
೪
೫
೬
೭
೮
೯
೧೦
=====================================
ಮಾಯ್ಸ!
ಉ:
ಗಮನಸಿಸು
ಕನ್ನಡ ೯ ಅನ್ನು ತಲೆಕೆಳಗೆ ಮಾಡಿದರೆ ಕನ್ನಡ ೬ ಸಿಗುವುದು ರೋಮನ್ ಅಂತೆ.
೯/9 ೬/6
=====================================
ಮಾಯ್ಸ!
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ಅಯ್ಯೋ ಹರಿ, ನಾವು ಕನ್ನಡಿಗರ ಈ ಬಗೆಯ ಅಟಿಟ್ಯೂಡ್ ಇಂದಾಗಿಯೇ ಹೊರಗಿನಿಂದ ಬಂದವರು ನಮ್ಮನ್ನು ದಬ್ಬುತ್ತಿದ್ದಾರೆ. ಆಂದ್ರ ಮತ್ತು ಮರಾಟ ಗಡಿಗಳಲ್ಲಿ ಕನ್ನಡದ ಆಗು ಹೇಗಿದೆ ಅಂತ ನಿಮಗೆ ತಿಳಿದಿಲ್ಲ ಅನಿಸುತ್ತೆ. ಬಳ್ಳಾರಿಯಯಲ್ಲಿರುವವರಿಗೆಲ್ಲ ತೆಲುಗು ಗೊತ್ತು,.. ಆದರೆ ಅಲ್ಲಿನ ಎಲ್ಲರಿಗೂ ಕನ್ನಡ ಗೊತ್ತಾ? ಅಂತ ಕೇಳಿದರೆ ತುಸು ವಿಚಾರ ಮಾಡಿ ಉತ್ತರ ಕೊಡಬೇಕಾಗುತ್ತೆ. ಮರಾಟಿ ಗಡಿಯಲ್ಲಿನ ಕನ್ನಡಿಗರಿಗೆ ಸರಕಾರದ ನೆರವು ಕವಡೆಯಸ್ಟು ಇಲ್ಲ,.. ಅವರಲ್ಲಿ ಕನ್ನಡದ ಬಗ್ಗೆ ಹೆಮ್ಮೆ ಮೂಡಲು ಸರಕಾರ ಏನೂ ಮಾಡದೇ ಅವರಲ್ಲಿ ಅದು ಹೇಗೆ ಬಂದೀತು? ಮರಾಟಿ ಸರಕಾರ ಮರಾಟಿಗರೆ ಏನೆಲ್ಲ ಒದಗಿಸುವದನ್ನು ನೋಡಿ,,. ಮರಾಟನಾಗಿರುವದೇ ಮೇಲು ಅಂತ ಅನಿಸದಿರದೇ?.
ಕನ್ನಡ ಅಂಕಿಗಳನ್ನು ಬಳಕೆಗೆ ತಂದರೆ ಹೊರಗಿಂದ ಬಂದವರಿಗೆ ಅದು "ಹೇರಿಕೆ"ಯಾಗೇ ತೋರೀತು. ಆದರೆ ಅದು ನಮ್ಮ ನುಡಿಯನ್ನು ಕಾಯ್ದುಕೊಂಡು ಹೋಗಲು ನಾವು ತೆಗೆದುಕೊಳ್ಳುವ ಒಂದು ಮುನ್ನೆಚ್ಚರಿಕೆಯ ಕೆಲಸ. ಅದಕ್ಕೆ ನಾವು ಕನ್ನಡಿಗರು ಒಮ್ಮನಸ್ಸಿನಿಂದ ಕೈಗೂಡಿಸಬೇಕು. ನಮ್ಮ ಒಳ್ಳೆಯತನ ನಮ್ಮ ಪೊಳ್ಳುತನ(ದೌರ್ಬಲ್ಯ) ಆಗಬಾರದು ಅಲ್ಲವೇ?
-------------------------------------------------------------
"ಕನ್ನಡ ಬರುತ್ತಾ" ಅಂತ ಕೇಳಿದರೆ ಹೇಳುವೆ, ಕನ್ನಡ ನನ್ನ ನೆತ್ತರಿನಲ್ಲಿದೆ ಎಂದು.
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ಮರಾಟಿಗರಿಗೆ*
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
ಬೆ.ಮ.ಸಾ.ಸಂನ ಇನ್ನೊಂದು ಮಿನ್ನೋಲೆ ಗುರುತುಪದ, ctmobmtc@gmail.com ಮಿನ್ನೋಲೆ ಕಳಿಸಿ, ಕನ್ನಡಕ್ಕಾಗಿ.
-------------------------------------------------------------
"ಕನ್ನಡ ಬರುತ್ತಾ" ಅಂತ ಕೇಳಿದರೆ ಹೇಳುವೆ, ಕನ್ನಡ ನನ್ನ ನೆತ್ತರಿನಲ್ಲಿದೆ.