ಬದುಕು ಬವಣೆಯಾಗದಿರಲಿ
ಬದುಕನ್ನು ಬವಣೆಯೆಂದಿಣಸದಿರು
ಬವಣೆಪಟ್ಟರೂ ಜೀವಂತ ಹೋದವರುಂಟೆ?
ಸಂಕಟಗಳಿಗೆಲ್ಲ ಆಸೆಯೇ ಬೇರು
ಆಸೆಯ ಬಲೆಯಿಂದ ಪಾರಾದವರುಂಟೆ?
ತನ್ನೊಟ್ಟಿಗೆ ತಾನಾಗಿರು
ತಾನಾಗಿ ಎಲ್ಲ ದೊರೆವುದು
ತನ್ನಂಬುಗೆ ಇರಲಿ
ಅದು ಜಂಬ ಅನಿಸದಿರಲಿ
ಬದುಕಿದು ಒಡೆಯನ ತೇರು
ನಗುನಗುತಲೆ ಎಳೆಯುತಿರು.

- ಸಂಗನಗೌಡ ರವರ ಬ್ಲಾಗ್
- Login or register to post comments
- 286 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಬದುಕು ಬವಣೆಯಾಗದಿರಲಿ
badukidu odeyana theru..
nagunaguthale eleyuthiru..!!!
tumbaa chennagide..
------------
Kannada lipiyalli type maadalagalilla mannisi.
ಉ: ಬದುಕು ಬವಣೆಯಾಗದಿರಲಿ
ಹೆನ್ನನ್ನಿ ವಿನಾಯಕ...
ಬದುಕಿದು ಒಡೆಯನ ತೇರು
ನಗುನಗುತಲೆ ಎಳೆಯುತಿರು
ಹೆಜ್ಜೆ ಹೆಜ್ಜೆಗು ಅವಗೆ
ಮಣಿಪುದ ಮರೆಯದಿರು
ದಣಿವಾಯಿತು ಎಂದು
ಎಲ್ಲಿಯೂ ನಿಲ್ಲದಿರು
ನವಣೆಯಸ್ಟಾದರು ಸರಿಯೇ
ಮುನ್‍ಮುಂದಕೆ ಸಾಗುತಲೇ ಇರು.
-ಮಣಿಪು.