ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಸಂಗನಗೌಡ ರವರ ಬ್ಲಾಗ್

ದಿ ಪರ್ಫೆಕ್ಟ್ ಕಿಲ್ಲಿಂಗ್.....

December 8, 2007 - 12:47am — ಸಂಗನಗೌಡ

ಮೂಲ : Denis R. Soreng

(.........)

ಎಂದಿನಂತೆ ನಾನು ಹಾವ್ಡಾ ಸ್ಟೇಸನ್ ತಲುಪಿದಾಗ ಸಂಜೆಯ ಮಬ್ಬುಗತ್ತಲು ಕವಿದಿತ್ತು. ಸ್ಟೇಸನ್ ಇಡೀ ದಿನವೆಲ್ಲ ದುಡಿದು ಮನೆಗೆ ಹೋಗಲು ಹಾತೊರೆಯುತ್ತಿದ್ದ ದೇಹ, ಮನಸ್ಸುಗಳಿಂದ ಗಿಜಿಗುಡುತ್ತಿತ್ತು. ನನಗೆ ಮನೆಗೆ ಹೋಗಲು ಒಂಚೂರೂ ಮನಸ್ಸಿರಲಿಲ್ಲ. ನನ್ನ ಗಂಡ,ನನ್ನ ನಡುವೆ ಪ್ರೀತಿ ಅನ್ನುವದು ಸತ್ತು ಮಲಗಿತ್ತು. ನಾವಿಬ್ಬರೂ ಪ್ರೀತಿಯಿಂದ ಮಾತಾಡಿ ವರುಸಗಳೇ ಆಗಿದ್ದವು. ಆಪೀಸಿನಲ್ಲಿ ನಡಿಯುವ ಲಗು ಹಾಸ್ಯಗಳೇ ನನ್ನ ನೀರಸ ಜೀವನಕ್ಕೆ ತುಸು ಜೀವ ತುಂಬುತ್ತಿದ್ದುದು. ಇನ್ನು ಕೆಲವೇ ದಿನಗಳಲ್ಲಿ ನಾವಿಬ್ಬರೂ ಬೇರೆಯಾಗುವವರಿದ್ದೇವೆ, ಅದಕ್ಕೆ ನನ್ನ ಗಂಡ ಕೊಡುವ ಸಬೂಬು ನನ್ನ ತಲೆ ಸರಿ ಇಲ್ಲ ಎಂಬುದು, ಬೇರೆ ಕಾರಣವೇ ಹೊಳೆಯದೆ ಹೋಯ್ತೆ??

ನಾನು ಆಗ ತಾನೆ ಬಂದ ರೈಲಿನೊಳಗೇ ಹೇಗೋ ತೂರಿಕೊಂಡೆ. ಕಾಲಿ ಇದ್ದ ಸೀಟು ಅದೇಗೋ ಸಿಕ್ಕು ಬಿಟ್ಟಿತು. ನನಗೆ ಸೀಟು ಸಿಕ್ಕಿದ್ದು ತುಂಬಾ ಸಮಾದಾನ ಆಯಿತು. ನೋಡ ನೋಡುತ್ತಿದ್ದಂತೆ ರೈಲು ಜನರಿಂದ ತುಂಬಿ ತುಳುಕತೊಡಗಿತು. ಆ ದಾರಿಯಲ್ಲಿ ಸಾಗುವ ದಿನದ ಕೊಟ್ಟ ಕೊನೆಯ ರೈಲು ಅದಾಗಿತ್ತು. ಗಿಜಿಗುಡುವ ಜನರಿಂದಾಗಿ ಗಾಳಿ ಆಡದೆ ಉಸಿರುಗಟ್ಟಿಸುವ ವಾತಾವರಣ ಉಂಟಾಯ್ತು. ಅದು ಜೂನ್ ತಿಂಗಳು. ಕಲ್ಕತ್ತೆಯ ಅತೀ ಬಿಸಿ ತಿಂಗಳು ಅದು. ಇದ್ದ ತುಸುವೇ ಗಾಳಿಯೊಳಗೆ ಜನರ ಬೆವರಿನ ವಾಸನೆ ಸೇರಿಕೊಂಡು ಎಲ್ಲ ಕಡೆ ಕೆಟ್ಟ ವಾಸನೆ ಹರಡಿತು. ನನಗೆ ವಾಂತಿ ಬಂದಂತಾಯ್ತು, ಹೇಗೋ ತಡೆದುಕೊಂಡೆ.

ನಾನು ಸೀಟಿಗೆ ಒರಗಿಕೊಂಡು ಸೀಲಿಂಗ್ ಕಡೆ ಕಣ್ಣಾಡಿಸಿದೆ, ಹಳೆಯ ಸೀಲಿಂಗ್ ಪ್ಯಾನು ಮಿಸುಕಾಡದೇ ಇತ್ತು. ಜಾಡುಗಟ್ಟಿದ ಅದರ ಸ್ತಿತಿ ನೋಡಿದರೆ ಅದು ತಿರುಗಿ ವರ್ಶಗಳೇ ಆಗಿರಬೇಕೆಂದು ಯಾರಿಗಾದರೂ ಅನಿಸದಿರದು. ನಾನು ಹಾಗೇ ನಿದ್ದೆಗೆ ಜಾರಿದೆ.

ನಾನು ಕಣ್ಣು ಬಿಟ್ಟಾಗ ರೈಲು ಹಲವಾರು ಮೈಲಿ ನಗರದ ಆಳಕ್ಕೆ ನುಗ್ಗಿತ್ತು. ನನ್ನ ಪಕ್ಕದ ಸೀಟಿನಲ್ಲಿ ಸುಂದರ ಹರೆಯದ ಹುಡುಗಿ ಕುಳಿತಿದ್ದಳು. ಅವಳ ಕಣ್ಣುಗಳಲ್ಲಿ ಆತಂಕದ ನೆರಳಿತ್ತು. ಅವಳ ಆತಂಕಕ್ಕೆ ಕಾರಣ ನಮ್ಮ ಎದುರು ಕುಳಿತಿದ್ದ ವ್ಯಕ್ತಿ. ಅವನ ಕೆಂಪು ಕಣ್ಣುಗಳನ್ನು ನೋಡಿದರೆ ಅವನು ಕುಡಿದಿರುವದು ನಿಚ್ಚಳವಾಗುತ್ತಿತ್ತು. ಅವನ ವಿಕಾರವಾದ ಮೂತಿ ಎಂತವರಲ್ಲೂ ಅಂಜಿಕೆ ಮೂಡಿಸುವಂತಿತ್ತು. ಅವನ ಕಣ್ಣುಗಳು ಒಂದೇ ಸವನೆ ಆ ಹುಡುಗಿಯನ್ನೆ ತಿನ್ನುವಂತೆ ನೋಡುತ್ತಿತ್ತು.

ಆ ಯುವತಿಯೊಂದಿಗೆ ನನಗೂ ಆತಂಕ ಸುರು ಆಯಿತು. ನಾನು ಕಂಪಾರ್ಟ್ಮೆಂಟಿನಲ್ಲಿ ಸುತ್ತ ಕಣ್ಣಾಡಿಸಿದೆ, ನಾವು ಮೂವರನ್ನು ಹೊರತುಪಡಿಸಿ ಅಲ್ಲಿ ಇನ್ನೊಂದು ನರಪಿಳ್ಳೆ ಇರಲಿಲ್ಲ!. ನನಗ್ಯಾಕೋ ಎನೋ ವಿಚಿತ್ರ ತಳಮಳ ಉಂಟಾಗತೊಡಗಿತು. ಯುವತಿ ನನ್ನ ಕೈ ಮೆಲ್ಲಗೆ ಅದುಮಿ ಪೇಪರೊಂದನ್ನು ಮುಂದೆ ಹಿಡಿದಳು, ಮುಕಪುಟ ಸುದ್ದಿಯೊಂದರ ಕಡೆ ಬೆರಳು ಮಾಡಿ ತೋರಿಸದಳಾಕೆ. ಅದು ಹಲವು ವಾರಗಳಿಂದ ಕಲ್ಕತ್ತಿಗರನ್ನು ಕಾಡುತ್ತಿರುವ ಸೀರಿಯಲ್ ಕಿಲ್ಲರ್ ಬಗಗಿನ ಸುದ್ದಿ.ನಗರದ ಬೇರೆ ಬೇರೆ ಕಡೆಗಳಲ್ಲಿ ಆರು ಹರೆಯದ ಹುಡುಗಿಯರ ದಾರುಣ ಹತ್ಯೆಗಳಾಗಿತ್ತು. ಅವರೆಲ್ಲರನ್ನು ಕುತ್ತಿಗೆ ಸೀಳಿ ಕೊಲೆ ಮಾಡಲಾಗಿತ್ತು. ಪೋಲಿಸರು ಯಾವೊಂದು ಸುಳಿವೂ ಸಿಗದೇ ಹೈರಾಣಾಗಿ ಹೋಗಿದ್ದರು, ತೊಂಬತ್ತರ ಡಿಕೇಡಿನಲ್ಲಿ ಎಲ್ಲರ ನಿದ್ದೆ ಕೆಡಿಸಿದ್ದ ನಿಗೂಡ ’ಸ್ಟೋನ್ ಮ್ಯಾನ್’ ನಂತೆಯೇ ಈ ಕೇಸೂ ಎಲ್ಲರ ನಿದ್ದೆ ಕೆಡಿಸಿತ್ತು.

ಹುಡುಗಿ ಕಂಗಾಲಾಗಿ ಬೆವೆತು ಹೋಗಿದ್ದಳು.ಆ ಕಿಲ್ಲರ ಅವನೇ ಇರಬೇಕೆಂದು ಆಕೆ ಕಣ್ಣಿನಲ್ಲೇ ಸಣ್ಣೆ ಮಾಡಿದಳು. ಅವಳ ಗಾಬರಿ ನೋಡಿ ನನಗೂ ನನ್ನ ಬಗೆಗೆ ಚಿಂತೆ ಆಯ್ತು. ಅಸ್ಟರಲ್ಲಿ ರೈಲು ನಿದಾನವಾಯ್ತು; ಮುಂದೆ ಬಂದ ಸ್ಟೇಶನ್ನಿನಲ್ಲಿ ನಿಲ್ಲಲು. ನನ್ನ ಇಳಿಯುವ ಜಾಗ ಇನ್ನೂ ದೂರ ಇದ್ದರೂ ಇಲ್ಲೇ ಇಳಿದು ಬಿಡಬೇಕು ಅಂತ ಇಳಿಯಲು ಅನುವಾಗುವಸ್ಟರಲ್ಲಿ ಆ ವ್ಯಕ್ತಿ ಎದ್ದು ನಿಂತಿತು, ಸರಸರನೆ ಇಳಿದು ಆತ ಹೋಗೇ ಬಿಟ್ಟ. ಹುಡುಗಿ ನನ್ನ ಕಡೆ ನೋಡಿದಳು, ಇಬ್ಬರೂ ಒಟ್ಟಿಗೆ ನಿಡಿದಾದ ಒಂದು ದೊಡ್ಡ ನಿಟ್ಟುಸಿರು ಬಿಟ್ಟೆವು. ಬಂದೊದಗಿದ ದೊಡ್ಡ ಗಂಡಾಂತರವೊಂದು ತಪ್ಪಿತ್ತು, ಹುಡುಗಿ ಸಂತಸದಿಂದ ಕುಲು ಕುಲು ನಗತೊಡಗಿದಳು, ಅವಳ ಅಕಾರಣ ನಗುವಲ್ಲಿ ನಾನೂ ಕೂಡಿಕೊಂಡೆ, ಕೊಂಚ ಹೊತ್ತಿನಲ್ಲೇ ನಾವಿಬ್ಬರೂ ಗಹಗಹಿಸಿ ನಗತೊಡಗಿದೆವು.

ಒಂದು ಸಣ್ಣ ನೂಕಿನೊಂದಿಗೆ ರೈಲು ಮತ್ತೆ ಹೊರಟು ನಿಂತಿತು. ಬಹು ಬೇಗ ರೈಲು ವೇಗ ಪಡೆದುಕೊಂಡು ಬಾಣ ಬಿಟ್ಟಂತೆ ಓಡತೊಡಗಿತು. ಆತಂಕವೆಲ್ಲ ಇಳಿದು ಹೋಗಿದ್ದರಿಂದ ಹುಡುಗಿ ತನ್ನ ಸೀಟಿನಲ್ಲಿ ತೂಕಡಿಸತೊಡಗಿದ್ದಳು. ಹರೆಯದ ಹುಡುಗಿಯರು ಎಸ್ಟೊಂದು ನಂಬುತ್ತಾರಲ್ಲ ಅಂತ ಅವಳನ್ನೆ ನಾನು ನೋಡುತ್ತ ಬೆರಗುಗೊಂಡೆ. ನನ್ನ ಬ್ಯಾಗಿನಲ್ಲಿ ಕೈ ಹಾಕಿ,ನಾನು ಯಾವಾಗಲೂ ಒಯ್ಯುತ್ತಿದ್ದ ನನ್ನ ಚಾಕುವಿನ ಹಿಡಿಯನ್ನು ಬಲವಾಗಿ ಹಿಡಿದೆ. ಕೈ ಯಾಕೋ ಮರಗಟ್ಟಿದಂತಾಯ್ತು, ಆದರೆ ನಾನಿದನ್ನು ಮಾಡಲೇಬೇಕಿತ್ತು. ಅಸ್ಟಕ್ಕೂ ಆಕೆಯ ಕುತ್ತಿಗೆ ಮೋಡಿ ಮಾಡುವಸ್ಟು ಸುಂದರವಾಗಿತ್ತು!, ಪಾಪ!!

  • ಕತೆ
  • ರೋಮಾಂಚಕ
~.~
  • ಸಂಗನಗೌಡ ರವರ ಬ್ಲಾಗ್
  • Login or register to post comments
  • 549 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 8, 2007 - 1:43am — anivaasi

ಉ: ದಿ ಪರ್ಫೆಕ್ಟ್ ಕಿಲ್ಲಿಂಗ್.....

anivaasi's picture

ಸಂಗನಗೌಡರೆ,
ಕತೆ ಚೆನ್ನಾಗಿದೆ. ನಿಮ್ಮ ಅನುವಾದವೂ... ಹಂಚಿಕೊಂಡದ್ದಕ್ಕೆ ಥ್ಯಾಂಕ್ಸ್!

ಕಡೆಯಲ್ಲಿ ಖುಷಿಯಲ್ಲಿರುವ ನಾಯಕಿ ಮತ್ತು ತರುಣಿಯರ ಹಿಂದೆ ಒಂದು ಹೆಣ ಬಿದ್ದರಬಹುದೆಂದು ಎಣಿಸಿದ್ದೆ...

ಯಾರು ಈ ಡೆನಿಸ್. ಆರ್‍. ಸಾರೆಂಗ್? ಕಥಾ ಸಂಕಲನವೇನಾದರೂ ಇದೆಯ?

ಅಂದ ಹಾಗೆ, ಕತೆಗೆ ಮೊದಲು ಹೆಂಗಸು ಹೇಳಿಕೊಂಡು ಹೋಗುತ್ತಾಳೆ ಎಂದು ಹೇಳುವ ಅಗತ್ಯ ಕಾಣಲಿಲ್ಲ. ಕತೆಯೇ ಅದನ್ನು ಸೊಗಸಾಗಿ ಹೇಳುತ್ತದೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 8, 2007 - 8:05pm — ಸಂಗನಗೌಡ

ಉ: ದಿ ಪರ್ಫೆಕ್ಟ್ ಕಿಲ್ಲಿಂಗ್.....

ಸಂಗನಗೌಡ's picture

ನನ್ನಿ ಅನಿವಾಸಿಗಳಿಗೆ,

ನನಗಿದು ಮಿಂಚಂಚೆಯಲ್ಲಿ ಬಂದಿದ್ದು. ಇಲ್ಲಿ ಕತೆ ಇದೆ ನೋಡಿ. ಹೆಸರು ಬಿಟ್ಟು ಡೆನಿಸ್ ಆರ್ ಸಾರೆಂಗ್ ಬಗ್ಗೆ ಬೇರೇನೂ ನನಗೆ ಗೊತ್ತಿಲ್ಲ Sticking out tongue
ಹೌದಲ್ವಾ... ಸರಿ ಆ ಸಾಲನ್ನು ತೆಗಿತೀನಿ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 10, 2007 - 1:32am — hpn

ಉ: ದಿ ಪರ್ಫೆಕ್ಟ್ ಕಿಲ್ಲಿಂಗ್.....

hpn's picture

ಎಲ್ಲೆಡೆ ಶ -> ಸ ಆಗಿದೆ. ಟೈಪ್ ಮಾಡುವಾಗ ಆದದ್ದಾ?
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 10, 2007 - 5:20pm — ಸಂಗನಗೌಡ

ಉ: ದಿ ಪರ್ಫೆಕ್ಟ್ ಕಿಲ್ಲಿಂಗ್.....

ಸಂಗನಗೌಡ's picture

ಹೆಚ್ಪಿಎನ್, ನನ್ನ ಪಿ.ಸಿನಲ್ಲಿ ಬರಹ ಡೈರೆಕ್ಟ್ ತೊಂದರೆ ಇತ್ತು, ಅದೂ ಅಲ್ಲದೇ ನಮ್ಮದು ಅಚ್ಚಕನ್ನಡ ಪಾರ್ಟೀ ಅಲ್ವಾ... Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 9, 2007 - 5:20pm — ಗಣೇಶ

ಉ: ದಿ ಪರ್ಫೆಕ್ಟ್ ಕಿಲ್ಲಿಂಗ್.....

ಗಣೇಶ's picture

ಕೊನೆ ಪ್ಯಾರಾ ಓದಿದ ಮೇಲೆ ಕತೆ ಪುನ: ಓದಿದೆ.
ಕತೆ ಚಿನ್ನಾಗಿದೆ.sorry,ಭಯಾನಕ..ಹೀಗೂ ಉಂಟೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 10, 2007 - 11:20pm — hamsanandi

ಉ: ದಿ ಪರ್ಫೆಕ್ಟ್ ಕಿಲ್ಲಿಂಗ್.....

hamsanandi's picture

ಸಂಗನಗೌಡರೆ,

ಕಥೆ ತುಂಬಾ ಚೆನ್ನಾಗಿದೆ -- ಅಚ್ಚರಿಯನ್ನು ಕೊನೆಯವರೆಗೆ ಚೆನ್ನಾಗಿ ಕಾಯ್ದುಕೊಳ್ಳುತ್ತದೆ. ನಿಮ್ಮ ಅನುವಾದವೂ ಅಷ್ಟೇ ಚೆನ್ನಾಗಿದೆ!

ಕತೆಗಾರರು ಪೂರ್ವೋತ್ತರ ಭಾರತ (ಹೆಸರು ನೋಡಿದರೆ ಅರುಣಾಚಲ ಪ್ರದೇಶದವರಿರಬಹುದೇ?) ಎನಿಸುತ್ತೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 11, 2007 - 5:35pm — sonalisiddarth

ಉ: ದಿ ಪರ್ಫೆಕ್ಟ್ ಕಿಲ್ಲಿಂಗ್.....

sonalisiddarth's picture

ಅನುವಾದ ತುಂಬಾ ಚೆನ್ನಾಗಿ ಮಾಡಿದೀರ....ಕಥೆ ಎಷ್ಟು ಬೇಗ ಮುಗಿಯುತ್ತೆ ಅಲ್ವಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಪ್ರೀತಿಸಿದ ಹುಡುಗಿ"
  • ರೈಲು ಪಯಣದ ಮಧುರಾನುಭವ
  • ಸಾಹಿತ್ಯ
  • ಹರವಬೇಡ ಕೂದಲು
  • ಕಲ್ಪನೆಯ ಹುಡುಗಿ
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಕನ್ನಡಿಗ, ಬೆಂಗಳೂರಿನಲ್ಲಿರುವದು. ಹೇಳಿಕೊಳ್ಳುವಂತದ್ದೇನೂ ಇಲ್ಲ, ಎಲ್ಲಾರಂತೆ ನಾರ್ಮಲ್ ಮನಸ್ಯಾ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator