ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಸಂಗನಗೌಡ ರವರ ಬ್ಲಾಗ್

ದೆವ್ವದ ಕತೆಗಳು.

January 17, 2008 - 12:45am — ಸಂಗನಗೌಡ

ಮೊನ್ನೆ ಕೆ.ಪಿ.ಪಿ.ಯವರ "ಮಾಯಾಮ್ರುಗ" ಓದಿದಂದಿನಿಂದ ದೆವ್ವಗಳ ಬಗ್ಗೆ ತುಸು ಎನೋ ಕೌತುಕತೆ. ದೆವ್ವಗಳು ಇವೆಯಾ ಇಲ್ಲವಾ ಅನ್ನುವದಕಿಂತ ದೆವ್ವದ ಕತೆಗಳು ಕೇಳೋಕೆ, ಓದೋಕೆ ಬಾಳಾ ಮಜಾ. ನಾನು ಕೇಳಿದ ಕೆಲ ದೆವ್ವದ ಕತೆಗಳನ್ನು ಇಲ್ಲಿ ಹಂಚಿಕೊಳ್ಳೋಣ ಅಂತ.

ನನ್ನ ಗೆಳೆಯ ಶಂಕರ್ ಅವರದು ಬೇರೆಯಾಗದ ದೊಡ್ಡ ಕುಟುಂಬ. ಅವರದು ಟ್ರಕ್ಕುಗಳನ್ನು ಬಾಡಿಗೆಗೆ ಬಿಡುವ ದೊಡ್ಡ ಬಿಜಿನೆಸ್. ಒಂದು ಸಲ ಅವರ ಚಿಕ್ಕಪ್ಪ ಸರಿರಾತ್ರಿ ಟ್ರಕ್ಕಿನಲ್ಲಿ ಬರುವಾಗ, ಊರು ತಲುಪುವ ಹೊತ್ತಿಗಾಗಲೇ ನಡುರಾತ್ರಿ. ಟ್ರಕ್ಕನ್ನು ಆಪೀಸ್ ಹತ್ತಿರ ಬಿಟ್ಟು, ಮನೆ ಕಡೆ ನಡೆದುಕೊಂಡೇ ಹೊರಟಿದ್ದಾರೆ. ದಾರಿಯಲ್ಲಿ ಗುಡಿಯೊಂದರಲ್ಲಿ ಹೆಣ್ಣು ಮಗಳೊಬ್ಬಳು ಅಳುತ್ತ ಕೂತಿದ್ದಳು. ಇದ್ಯಾರು ಇಸ್ಟೊತ್ತಲ್ಲಿ ಇಲ್ಲಿ ಕೂತು ಅಳ್ತಿರೋದು ಅಂತ ನೋಡಿದ್ರೆ ಅವರ ತಂಗಿ! "ಯಾಕ್ ತಂಗಿ ಇಲ್ಲಿ ಅಳ್ತಾ ಕೂತಿದಿಯಾ, ಮನೇಗ್ ನಡಿ" ಅಂದ್ರೇ ಉತ್ತರಾನೆ ಇಲ್ಲ. ತಲೆ ಬಗ್ಗಿಸಿಕೊಂಡು ಆ ಹೆಂಗಸು ಅಳುತ್ತಲೇ ಇದ್ದಳು. ಇದ್ಯಾಕೋ ಎನೋ ಬೇರೇ ತರ ಇದೇ ಅನ್ನಿಸಿ ಅವರು ಸುಮ್ಮನೇ ಮನೇಗ್ ಬಂದಿದಾರೆ,ಆವರ ತಂಗಿ ಅಲ್ಲೇ ಇದಾಳೆ. ಆದರೂ "ಅದ್ಯಾಕೇ ಗುಡ್ಯಾಗ್ ಕುಂತ್ ಅಳಾಕತ್ತಿದ್ದಿ?" ಅಂತ ಕೇಳಿದ್ರು, "ಇಸ್ಟೋತ್ತಲ್ಯಾಕ್ ಅಣ್ಣಾ ಗುಡಿಗ್ ಹೊಗ್ಲಿ?" ಅಂದಳು ತಂಗಿ. ಅವರ ಚಿಕ್ಕಪ್ಪನಿಗೆ ಮೂರು ದಿನ ಫುಲ್ ಜ್ವರ!

ಇನ್ನೊಂದು ಬಿಜಾಪುರ, ಹಾಸನ, ಇನ್ನೂ ಹಲವಾರು ಕಡೆ ನಮ್ಮೂರಾಗ ನಡೆದದ್ದು, ನಮ್ಮೂರಾಗ್ ನಡೆದದ್ದು ಅಂತ ಸಕ್ಕತ್ ಫೇಮಸ್ ಆದ ಕತೆ.

ಅಟೋ ಡ್ರೈವರ್ ರಾಜುಗೆ ಅವತ್ತು ಜಾಸ್ತಿ ಕಲೆಕ್ಶನ್ ಆಗಿರಲಿಲ್ಲ. ಅದಕ್ಕೆ ದೂರದೂರುಗಳಿಂದ ಬರುವ ಬಸ್ಸುಗಳಿಂದ ಇಳಿಯುವ ಮಂದಿಗೆ ಸರಿರಾತ್ರಿಯಲ್ಲಿ ಅಟೋನೇ ಗತಿ, ಅದಕ್ಕೇ ತುಸು ಹೆಚ್ಚಿಗೇ ಹಣ ಕೇಳಬಹುದು ಅಂತ ಮನೆಗ್ ಹೊಗ್ದೇ ಕಾಯ್ತಿದ್ದ. ಎಸ್ಟೊತ್ತಾದ್ರೂ ಯಾವ ಬಸ್ಸೂ ಬರಲಿಲ್ಲ, ಬೇಸರವಾಯ್ತು, ನಿದ್ದೇ ಬೇರೇ ಎಳೀತಿತ್ತು, ಹಿಂಗಾಗಿ ಇನ್ ಕಾಯೋದ್ ಬೇಡ ಅಂತ ಹೊರಟ. ಸ್ಟಾರ್ಟ್ ಮಾಡಿ ಹೊರಡೋ ಅಸ್ಟೊತ್ತಿಗೇ ಹಿಂದಿನಿಂದ ಗಂಡಸೊಬ್ಬ ಓಡಿ ಬಂದು ಹತ್ತಿದ, ಆತ ಎಲ್ಲಿಂದ ಬಂದ ಅಂತಾನೇ ತಿಳಿಲಿಲ್ಲ. ಎಲ್ಲಿ ಹೋಗ್ಬೇಕು ಅಂತ ಕೇಳಿದ ರಾಜು. ಆತ ಇವನ ಏರಿಯಾ ಹೆಸರನ್ನೇ ಹೇಳಿದ. ಸರಿ ಒಳ್ಳೇದೇ ಆಯ್ತು ಅಂತ ಹತ್ತಿಸಿಕೊಂಡು ಹೊರಟ.
ದಾರಿಯಲ್ಲಿ ಹೆಣ್ಣು ಮಗಳೊಬ್ಬಳು ಕೂಸಿನೊಂದಿಗೆ ನಿಂತಿದ್ದಳು, ಅಡ್ಡ ಕೈ ಮಾಡಿದಳು. ಇವನಿಗೆ ತುಸು ಹೆದ್ರಿಕೇ ಆಯ್ತು, ಆದರೂ ಇನ್ನೊಬ್ಬ ಇರೋವಾಗ ಯಾಕೆ ಹೆದರ್ಬೇಕು ಅಂತ ನಿಲ್ಲಿಸಿದ. ಹಿಂದೆ ಕೂತಿದ್ದ ಗಂಡಸನ್ನು ಕರೆದು ತನ್ನ ಪಕ್ಕ ಕೂರಿಸಿಕೊಂಡು, ಆ ಹೆಣ್ಮಗಳನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಹೊರಟ.
ಹಾಗೆ ಹೋಗ್ತಿರಬೇಕಾದರೇ, ಆ ಹೆಂಗಸು ಎನೋ ಮಾಡುತ್ತಿರುವಂತೆ ಅನ್ನಿಸಿತು, ಮುಂದಿದ್ದ ಕನ್ನಡಿಯಲ್ಲಿ ನೋಡಿದ. ಅದನ್ನು ನೋಡಿ ಅವನ ಎದೆ ಒಂದು ಚಣ ನಿಂತಂತಾಯ್ತು. ಕೈ, ಕಾಲೆಲ್ಲ ತಣ್ಣಗಾಗಿ ನಡುಕ ಶುರು ಆಯ್ತು. ಆ ಹೆಂಗಸು ತನ್ನ ಮಗುವಿನ ಕೈ-ಕಾಲುಗಳನ್ನು ಕಿತ್ತುಕೊಂಡು ತಿನ್ನುತ್ತಿದ್ದಳು!!
ಹೇಗಾದ್ರು ಮಾಡಿ ಪಕ್ಕದವನಿಗೆ ಇದನ್ನು ಹೇಳಬೇಕು, ಆಗ ಇಬ್ಬರೂ ಒಟ್ಟಿಗೆ ಓಡಬಹುದು, ಅನಿಸಿತವನಿಗೆ.
ಆಗ ಮೆಲ್ಲಗೆ ಪಕ್ಕದವನ ಕಿವಿಯಲ್ಲಿ "ತುಸು ಹಿಂದೆ ನೋಡು" ಅಂದ. ಅದಕ್ಕವನು "ಅಲ್ಲೇನ್ ನೋಡ್ತಿಯೋ ಇಲ್ಲಿ ನೋಡು" ಅಂದ. ನೋಡಿದ್ರೇ ಅವನ ಬಾಯ್ತುಂಬ ಉದ್ದುದ್ದ ಕೋರೆ ಹಲ್ಲು!!

ಇದೊಂದು ಮಂದಿಯಿಂದ ಮಂದಿಗೆ ಹಬ್ಬಿದ್ದ ಕಟ್ಟುಕತೆ ಅಸ್ಟೆ, ಹೆದರಿಕೊಂಡ್ರಾ? :--)

  • thriller
  • ಅಂಜಿಕೆ
  • ದೆವ್ವ
  • ಭಯಾನಕ
  • ಭೂತಗಳು
  • ಹೆದರಿಕೆ
~.~
  • ಸಂಗನಗೌಡ ರವರ ಬ್ಲಾಗ್
  • Login or register to post comments
  • 475 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 17, 2008 - 10:10am — ASHMYA

ಉ: ದೆವ್ವದ ಕತೆಗಳು.

ASHMYA's picture

ಬದುಕು ಬರಡಾಗದಿರಲಿ..........

ಹೌದು..ಇದು ನಮ್ಮೂರಾಗ್ ನಡೆದದ್ದು .. Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 17, 2008 - 10:57am — ಶ್ರೀನಿವಾಸ ವೀ. ಬ೦ಗೋಡಿ

ಉ: ದೆವ್ವದ ಕತೆಗಳು.

ಶ್ರೀನಿವಾಸ ವೀ. ಬ೦ಗೋಡಿ's picture

ಎಲ್ಲರ ಊರಲ್ಲೂ ನಡೆದ ಕತೆ, ಅದ್ ಹೆಂಗ್ ನಮ್ಮೂರಾಗ ನಡಿಲಿಲ್ಲಾ? Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 17, 2008 - 11:15am — Sunil Jayaprakash

ಉ: ದೆವ್ವದ ಕತೆಗಳು.

Sunil Jayaprakash's picture

ಏಕೆಂದರೆ, ನಿಮ್ಮೂರಲ್ಲಿ "ಡರ್ನಾ ಮನಾ ಹೈ" ಓಡ್ತಾ ಇತ್ತು. ಅಥವಾ ನಿಮ್ಮ ಊರಿನ "ಮಾರಮ್ಮ" ನಿಮ್ಮನ್ನೆಲ್ಲ ತಣ್ಣಗಿಟ್ಟಿತ್ತು Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 17, 2008 - 12:12pm — ಶ್ರೀನಿವಾಸ ವೀ. ಬ೦ಗೋಡಿ

ಉ: ದೆವ್ವದ ಕತೆಗಳು.

ಶ್ರೀನಿವಾಸ ವೀ. ಬ೦ಗೋಡಿ's picture

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 18, 2008 - 12:20am — kpbolumbu

ಉ: ದೆವ್ವದ ಕತೆಗಳು.

kpbolumbu's picture

ಅದು ಮೊದಲು ನಡೆದದ್ದು ತಮಿಳುನಾಡಿನಲ್ಲಿ. ನಂತರ ಅದನ್ನು ಕನ್ನಡಕ್ಕೆ ರೀಮೇಕ್ ಮಾಡಲಾಯಿತು. Eye-wink
______
ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 14, 2008 - 8:11pm — Sunil Jayaprakash

ಉ: ದೆವ್ವದ ಕತೆಗಳು.

Sunil Jayaprakash's picture

ಅಯ್ಯೋ, ಬೊಳಂಬು. ಅದು ಮೊದಲು ಮಲೆಯಾಳಮ್ಮನಲ್ಲಿತ್ತು. ಜನಸಂಖ್ಯೆ ಸಾಲದೆ ಅದು ಎಲ್ಲ ಕಡೆಯೂ ಹರಿದಾಡಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 15, 2008 - 12:28pm — kpbolumbu

ಉ: ದೆವ್ವದ ಕತೆಗಳು.

kpbolumbu's picture

ಮಲೆಯಾಳದಲ್ಲಿದ್ದದ್ದು ಯಾವುದ್ರೀ 'ನನ್ನಿ ಸುನಿಲ್'? ದೆವ್ವದ್ ಕತೆ ತಾನೇ? Eye-wink ಅಲ್ಲ, ಮೊದಲು ಅದು ಪ್ರಚಾರಕ್ಕೆ ಬಂದದ್ದು ತಮಿಳುನಾಡಿನಲ್ಲೇ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 15, 2008 - 6:06pm — ಸಂಗನಗೌಡ

ಉ: ದೆವ್ವದ ಕತೆಗಳು.

ಸಂಗನಗೌಡ's picture

ಅವರು ಹೇಳ್ತಿರೋದು, ಆ ದೆವ್ವ ಮೊದ್ಲು "ಮಲಯಾಳಮ್ಮ"ನಲ್ಲಿ ಸೇರ್‍ಕೊಂಡಿತ್ತಂತೆ... ಆಮೇಲೆ ಬೇರೆಯವರಿಗೆ ಹಬ್ಬಿತು ಅಂತಿರಬೇಕು Smiling...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಯ್ಯಿಗೆ ಮುಯ್ಯಿ
  • ನೀಳ್ಗತೆ
  • ಬೈಟೊ ಕಾಫಿ !!! - ೧
  • ಹೊಸಾಆಆಆಆಆಆಆ ಚರ್ಚೆ ಮಾಡ್ತೀರಾ? ತಾಕತ್ತಿದ್ರೆ!!! ಹೂಹ್ಹಾಹ್ಹಾಹ್ಹಾಆಆಆಆಆಆ!
  • ಮುಕ್ತಾಯ
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಕನ್ನಡಿಗ, ಬೆಂಗಳೂರಿನಲ್ಲಿರುವದು. ಹೇಳಿಕೊಳ್ಳುವಂತದ್ದೇನೂ ಇಲ್ಲ, ಎಲ್ಲಾರಂತೆ ನಾರ್ಮಲ್ ಮನಸ್ಯಾ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
  • ಕುಮಾರವ್ಯಾಸ ಭಾರತ
  • ಬನವಾಸಿ ಆಸುಪಾಸಿನ ಕನ್ನಡ
  • ಬಾರೋ ಸಾಧನಕೇರಿಗೆ...
  • ಎಲ್ಲಾ ಓಕೆ ಬರೀ ಹುಡುಗೀರ್ಗೆ ಯಾಕೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 52 ಅತಿಥಿಗಳು ಆನ್ಲೈನ್ ಇರುವರು.


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator