ಶ್ರದ್ಧೆ
ಜೀವನದಲ್ಲಿ ದೇವರಲ್ಲಿ ನಾನೇನಾದರು ಕೇಳೋದಾದ್ರೆ... ಅದೊಂದೆ.....
"ಶ್ರದ್ಧೆ"
.... ಅದಿದ್ದರೆ ಎಲ್ಲವೂ... ಅದಿಲ್ಲದಿದ್ದರೆ.. ಏನೂ ಇಲ್ಲ.. ಅಲ್ವ?
ನುಗ್ಗು ನುಗ್ಗು ನುಗ್ಗು
ಸತತವಾಗಿ ನುಗ್ಗು
ಎಡೆಬಿಡದೆ ನುಗ್ಗು
ನೋಟ ಸಡಿಲದಿರಲಿ
ನಡೆಯದು ನೆಟ್ಟಗಿರಲಿ
ಹುಟ್ಟಿದ್ದೇ ಪಡೆಯಲು
ಪಡೆಯದೆ ಅದನು ಬಿಡದಿರು
ಧ್ಯಾನಗಯ್ಯಿ
ಎಚ್ಚರದಿಂದಿರು
ಎದ್ದು ಹೊರಡು
ಕೂತು ಕೊರಗದಿರು
ನಾನೆಂಬ ಅಹಂ ಬೇಡ
ಆಗದೆಂಬ ಅಳುಕು ಬೇಡ
ಹೊಂದುವದೊಂದೆ ಗುರಿ
ಬಿಡದಂತೆ ಮುಂದುವರಿ
-ಸಂಗನಗೌಡ

- ಸಂಗನಗೌಡ ರವರ ಬ್ಲಾಗ್
- Login or register to post comments
- 366 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಶ್ರದ್ಧೆ
ಜಗವೆ ಒಂದು ರಣರಂಗ!
ಧೈರ್ಯ ಇರಲಿ ನಿನ್ನ ಸಂಗ!!
ಅಣ್ಣಾವ್ರ ಈ ಹಾಡು ನೆನಪಾಯ್ತು ನೋಡಿ ನಿಮ್ಮ ಮಾತು ಕೇಳಿ.
ಉ: ಶ್ರದ್ಧೆ
ನನ್ನಿ ರೀ,.
ಉ: ಶ್ರದ್ಧೆ
ಮನ್ಸಂಗೆ ಹಮ್ಮಿಲ್‌ದ್ರೆ ಅವನು ಸತ್ತಂತೆ...!
ನಾನ್ ಇರೋದೇ, ’ನಾನ್’ ಇರೋದ್ರಿಂದ! !!
=====================================
ಮಾಯ್ಸ!
ಉ: ಶ್ರದ್ಧೆ
ಮಾಯ್ಸ್,
ನಾನ್ ಬಿಟ್ಟು ಬದುಕಿಲ್ಲ.. ಒಪ್ಪಲೇಬೇಕಿರುವದು.. ಆದರೆ ಈ ನಾನ್ ಎಂಬುದರ ಹರುವು ನಮ್ಮಲ್ಲೇ ದೊಡ್ಡದಾಗ್ತಾ ಹೋಗಬೇಕು. ಕನ್ನಡ ಮತ್ತು ನಾನು ಬಂದಾಗ ನಾನು ನನಗಿಂತ ಕನ್ನಡವೇ ಹೆಚ್ಚು ಅಂದುಕೊಂಡಾಗ, ಅಲ್ಲಿ ನಾನು ಅಂಬುದರ ಹರುವು ನನ್ನೊಳಗೇ ಹೆಚ್ಚಿದೆ ಅಂತ ತಾನೇ?
ಅದು ಹೆಚ್ಚುತ್ತಾ ಹೋದಂತೆ, ಒಂದೊಮ್ಮೆ ಇಡೀ ಜಗತ್ತೇ "ನಾನಾಗಿ" ಬಿಡ್ತೇವೆ.
ಉ: ಶ್ರದ್ಧೆ
ಇಲ್ಲಿ ಶ್ರದ್ದೆಯ ಜೊತೆ ವಿಶ್ವಾಸ ( self confidence) ವೂ ಎದ್ದು ಕಾಣುತ್ತಿದೆ.
ಆಗದು ಎಂದು.. ಕೈಲಾಗದು ಎಂದು.. ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ .....
ನಡೆ ಮುಂದೆ ನಡೆ ಮುಂದೆ ... ನುಗ್ಗು ನಡೆ ಮುಂದೆ...ಜಗ್ಗದೆಯೇ ಕುಗ್ಗದೆಯೇ ನುಗ್ಗು ನಡೆ ಮುಂದೆ...
ಬೋಮ್ಬಾಟಾಗಿದೆ.
ಸವಿತೃ
ಉ: ಶ್ರದ್ಧೆ
thanks ಸವಿತ್ರು. overconfidence, underconfidence ಎರಡೂ ಸರಿ ಅಲ್ಲ. ಓವರ್‍ಕಾನ್ಫಿಡೆನ್ಸ್ ಇದ್ರೆ.. ಪದೇ ಪದೇ ಅನ್ಕೊಂಡಿದ್ದು ಕೈ ಕೊಡ್ತಾ ಹೋದ್ರೆ... ಅಂಡರ್‍ಕಾನ್ಫಿಡೆಂಟ್ ಆಗಿ ಬಿಡ್ತೀವಿ. ಅದಕ್ಕೆ ಇವೆರಡೂ ಒಂದೇ ನಾಣ್ಯದ ಎರಡು ಮೋರೆಗಳು.
ನಮ್ಮದು, ಇವೆರಡೂ ಆಗಿರದೇ ದಿಟವಾದ ತನ್ನಂಬುಗೆ(self confidence) ಅಂತ ಗೊತ್ತಾಗೋದು ಅಂದುಕೊಂಡಿದ್ದನ್ನು ನಾವು ಒಂದೊಂದು ಸಲಾನೂ ಪಡಕೊಳ್ತಾ ಹೋದಾಗಲೇ..
ಅಲ್‍ವ್ರಾ?