July 24, 2012 - 8:51pm
ತುಂಬು ಗರ್ಭಿಣಿಯಾದ ಗುಂಡನ ಹೆಂಡತಿಗೆ ಭಾನುವಾರದ ದಿವಸ ಬೆಳ್ಳಂಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಸರಿಯೆಂದುಕೊಂಡು ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಹೆಂಡತಿಯನ್ನು ಸ್ಕೂಟರಿನ ಮೇಲೆ ಕೂರಿಸಿಕೊಂಡು ಹೊರಟ. ಹಿಂದಿನ ರಾತ್ರಿ ಬಿದ್ದ ಭಾರಿ ಮಳೆ-ಗಾಳಿಗೆ Dry-Cleaning ಅಂಗಡಿಯ ಬೋರ್ಡೋಂದು ಆ ಹೆರಿಗೆಯ ಆಸ್ಪತ್ರೆಯ ಮುಂದೆ ಬಂದು ಬಿದ್ದಿತ್ತು. ಅದನ್ನು ನೋಡಿದವನೇ ಗುಂಡ ಏನು ಮಾಡಬೇಕೆಂದು ತೋಚದೆ ತಲೆಯ ಮೇಲೆ ಕೈಹೊತ್ತು ಕುಳಿತುಕೊಂಡ. ಏಕೆಂದರೆ ಆ ಬೋರ್ಡಿನಲ್ಲಿ ಹೀಗೆಂದು ಬರೆಯಲಾಗಿತ್ತು:
"Urgent Delivery 8 hours,
Ordinary Delivery 24 hours,
Sunday No Delivery"
ಸರಣಿ:
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮
:) :)
ಅಂದ ಹಾಗೆ "ಹೆಂಗಸರ ಹೆರಿಗೆ ಆಸ್ಪತ್ರೆ" ಬೋರ್ಡ್ ಎಲ್ಲಿ ಹೋಗಿ ಬಿದ್ದಿರಬಹುದು?
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮
ಗಂಡಸರ ಶೇವಿಂಗ್ ಸೆಲೂನ್ ಮುಂದೆ :))
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮
:)))
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮
ಗಂಡಸರ ಶೇವಿಂಗ್ ಸೆಲೂನಿನ ಬೋರ್ಡ್ ಮಕ್ಕಳ ಶಿಶುವಿಹಾರದ ಹತ್ತಿರ ಹೋಗಿ ಬಿದ್ದಿತ್ತಂತೆ. :))
ಗಣೇಶರ ಪ್ರತಿಕ್ರಿಯೆ ಮತ್ತು ಅದಕ್ಕೆ ಕೊಟ್ಟ ಮರುಪ್ರತಿಕ್ರಿಯೆಯನ್ನು ಸರಿಯಾಗಿ ಗ್ರಹಿಸಿದ್ದೀರ ಕವಿಗಳೆ, ಧನ್ಯವಾದಗಳು.
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮
ಗಣೇಶ್ ಜಿ, `ಹೆಂಗಸರ ಹೆರಿಗೆ ಆಸ್ಪತ್ರೆ` ಈಗ ಒಲ್ದ್ ಬೋರ್ಡ್, At present ಬರಿ ಸಿಸೇರಿಯನ್.
ದನ್ಯವಾದಗಳು, ರಾಮೋ.
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮
ನಿಜ ರಾಮಮೋಹನ್ ಸರ್,
ಈಗ ಮಾಮೂಲಿ ಹೆರಿಗೆ ಮಾಡಿಸುವ ಸೂಲಗಿತ್ತಿಯರಿಗೆ ಕೆಲಸವೂ ಇಲ್ಲಾ :((
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು ೮@ ಜೀ
ಜೀ ಇದು ನನಗೆ ಹೊಸ ಜೋಕ್....
ಈಗೀಗ ಜೋಕ್ ಅಂದ್ರೇನೆ ಮಾರು ದೂರ ಓಡುವ ಹಾಗ್ ಹಾಗಿದೆ..;((
ಕಾರಣ ಅದೇ ಹಳಸಲು ಜೋಕುಗಳು..
ಆದರೆ ನೀವ್ ಇಲ್ಲಿ ಫ್ರೆಶ್(ನಂಗೆ) ಜೋಕ್ ತೋರಿಸಿದಿರಿ...
ಓದಿ ಮಾತು ಇದಕೆ ಬಂದ ಪ್ರತಿಕ್ರಿಯೆ(ಗಣೇಶ್ ಅಣ್ಣಾ- ರಾಮೋ ಅವರು) ಮಾತು ಅವ್ಕೆ ಮರು ಪ್ರತಿಕ್ರಿಯೆ (ನೀವ್ ಹೇಳಿದ ಗಂಡಸರ ಶೇವಿಂಗ್ ಸೆಲೂನ್ ಮುಂದೆ -ಅದ್ಕೆ ಕಾರಣವೋ ಇದೆ) ಸಖತ್....
ಅಂದ್ ಹಾಗೆ -ನನಗೆ ಬಹು ದಿನಗಳಿಂದ ಒಂದು ಅಂಶ ತಲೆ ಕೊರೆಯುತ್ತಿತ್ತು ಅದ್ಕೆ ಯಾರೂ ಸರಿಯಾಗಿ ಕಾರಣ ಹೇಳಿಲ ಆದರೆ ಈಗ ನನನ್ ಊಹೆ ನಿಜವಾದರೆ ನೀವು ಮತ್ತು ಗುರುಗಳು ಗಣೇಶ್ ಅಣ್ಣಾ - ರಾಮೋ ಅವರು ಉತ್ತರಿಸಬಹುದು ಅನ್ನಿಸುತ್ತೆ
ಅದು- ಹೆಂಡತಿ ಗರ್ಭಿಣಿ ಆದ್ರೆ ಗಂಡ ಶೇವಿಂಗ್ , ಕಟಿಂಗ್ ಯಾಕೆ ಮಾಡಿಸೋಲ್ಲ...(ನಮ್ಮ ಕಡೆ ಹೆರಿಗೆ ಆಗುವವರೆಗೆ ಕಟಿಂಗ್ ಶೇವಿಂಗ್ ಮಾಡಿಸೋಲ್ಲ್ವಲ್ಲ)
ಬರಹ ಓದಿ ಮುಸ್ಸಂಜೇಲಿ ಮನ ಪ್ರಫುಲ್ಲಗೊಂಡಿತು..
ಪಾಪ ಗುಂಡ..!
ಗಾಳಿ ಸಹಾ ಮನುಷ್ಯನ ಜೀವನದಲ್ಲಿ ಆಟ ಆಡುತ್ತೆ...!!
ಶುಭವಾಗಲಿ..
\|/
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು ೮@ ಜೀ
ಸಪ್ತಗಿರಿಯವರೇ,
ನನಗೆ ಮಧ್ಯ ಕರ್ನಾಟಕ(ಚಿತ್ರದುರ್ಗ), ದಕ್ಷಿಣ ಕರ್ನಾಟಕ (ಮೈಸೂರು) ಮತ್ತು ಉತ್ತರ ಕರ್ನಾಟಕ (ಧಾರವಾಡ) ಹೀಗೆ ಮೂರು ವಿಭಿನ್ನ ಪ್ರಾಂತಗಳಲ್ಲಿ ವಿದ್ಯಾಭ್ಯಾಸ ಮಾಡುವ ಅವಕಾಶ ಒದಗಿ ಬಂದಿತ್ತು. ಹಾಗಾಗಿ ಸಹಜವಾಗಿಯೇ ಕರ್ನಾಟಕದ ವಿವಿಧ ಪ್ರಾಂತಗಳ ಜನರ ಪರಿಚಯ ನನಗಾಯಿತು. ಹಾಗಾಗಿ ವಿವಿಧ ಪ್ರಾಂತದಲ್ಲಿ ಪ್ರಚಲಿತವಿರುವ ಹಲವಾರು ಸಂಗತಿಗಳ ಜೊತೆಗೆ ಗಾದೆ ಮಾತುಗಳು ಮತ್ತು ಹಾಸ್ಯ ಪ್ರಸಂಗಗಳನ್ನು ತಿಳಿದುಕೊಳ್ಳುವ ಸೌಭಾಗ್ಯ ನನಗೆ ಸಿಕ್ಕಿತು. ಆಸು ಹೆಗಡೆಯವರ ಅಪ್ಪಯ್ಯ ಹೇಳಿದ ಕಥೆಗಳನ್ನು ಓದುತ್ತಿದ್ದಾಗ ಥಟ್ಟನೆ ನಮ್ಮ ಜಮಾನದಲ್ಲಿ ಪ್ರಚಲಿತವಿದ್ದ ಜೋಕುಗಳನ್ನು ಏಕೆ ಸಂಪದದಲ್ಲಿ ಹಂಚಿಕೊಳ್ಳಬಾರದು ಎನ್ನುವ ಆಲೋಚನೆ ಬಂದದ್ದೇ ತಡ, ಅದನ್ನೇ ಕಾರ್ಯರೂಪಕ್ಕೆ ತಂದೆ. ಅದಕ್ಕೆ ನಿಮ್ಮಂತಹ ಕಿರಿಯರೂ ಮತ್ತು ಹಿರಿಯರಿಗೂ ಅವು ಮೆಚ್ಚುಗೆಯಾಗುತ್ತಿರುವುದಕ್ಕೆ ನನಗೂ ಸಂತಸವುಂಟಾಗಿದೆ. ಇದಕ್ಕೆ ತಕ್ಕಂತೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನನ್ನ ಕಕ್ಷಿದಾರರು ಬಿತ್ತನೆ ಮತ್ತು ಬೀಜ ಮಾರಾಟ ಕಾರ್ಯದಲ್ಲಿ ನಿರತರಾಗಿರುವುದರಿಂದ ನನಗೆ ಸಾಕಷ್ಟು ಬಿಡುವು ದೊರೆಯುತ್ತಿದೆ. ನನ್ನ ಬಹುತೇಕ ಕೆಲಸವೇನಿದ್ದರೂ ಬೆಳೆ ನಾಟಿ ಮಾಡಿದ ಒಂದರಿಂದ ಒಂದೂವರೆ ತಿಂಗಳಿಗೆ ಪ್ರಾರಂಭವಾಗುವುದರಿಂದ ಮತ್ತು ಮಳೆಯೂ ಈ ಬಾರಿ ತಡವಾಗಿ ಬೀಳುತ್ತಿರುವುದರಿಂದ ನಾನು ಸಂಪದದಲ್ಲಿ ಹೆಚ್ಚು ಸಕ್ರಿಯನಾಗಲಿಕ್ಕೆ ಸಾಧ್ಯವಾಯಿತು. (ಇದೇ ನನ್ನ ಒಳಗುಟ್ಟು, ಏಕೆಂದರೆ ನಾನು ನಿಮ್ಮನ್ನು ಭೇಟಿ ಮಾಡಿದ್ದು ಜೂನ್ ಮೊದಲವಾರದಲ್ಲಿ ...ನನ್ನ ಕೆಲಸದ ಒತ್ತಡ ಆಗ ಬಹುತೇಕ ಮುಗಿದಿತ್ತು)
ಹೆಂಡತಿ ಹೆರಿಗೆಗೆ ಹೋದಾಗ ಗಡ್ಡ ಬಿಡುವುದೇಕೆ? ಅದಕ್ಕೆ ನನಗೂ ಉತ್ತರ ಗೊತ್ತಿಲ್ಲ. ಬಹುಶ: ಈಗ ನನ್ನನ್ನು ಯಾರೂ ಕೇಳುವವರಿಲ್ಲ ಆದ್ದರಿಂದ ನಾನು ಸಂನ್ಯಾಸಿಯಂತೆ ಜೀವಿಸುತ್ತಿದ್ದೇನೆ ಎಂದು ತೋರಿಸಲೋ ಗೊತ್ತಿಲ್ಲಾ :))
ನೀವು ಇತ್ತೀಚೆಗೆ ಸಂಪದದಲ್ಲಿ ಬರೆಯಲಾಗುತ್ತಿಲ್ಲ ಎಂದು ಪ್ರತಿಕ್ರಿಯೆಯೊಂದರಲ್ಲಿ ಹೇಳಿಕೊಂಡಿದ್ದೀರಿ. ಭರ್ಜರಿ ಊಟವಾದ ನಂತರ ಸ್ವಲ್ಪ ವಿರಾಮ ಕೊಡಬೇಕು ಇಲ್ಲದಿದ್ದರೆ ತಿಂದದ್ದು ಅಜೀರ್ಣವಾಗುತ್ತದಲ್ಲವೇ ಅದೇ ರೀತಿ ಸ್ವಲ್ಪ ಸಮಯದ ನಂತರ ಹೊಸ ವಿಷಯಗಳ ಕುರಿತು ಆಲೋಚಿಸಲು ನಿಮ್ಮ ಮನಸ್ಸಿನಲ್ಲಿ ಸ್ವಲ್ಪ ಸ್ಥಳಾವಕಾಶ ಮಾಡಿಕೊಳ್ಳಿ. ಮತ್ತೆ ನಿಮಗೆ ಹೊಸ ವಿಷ್ಯಗಳು ಖಂಡಿತಾ ಹೊಳೆಯುತ್ತವೆ ಆಗ ನಿಮ್ಮಿಂದ ಮತ್ತಷ್ಟು ಒಳ್ಳೆಯ ಬರಹಗಳು ಬರುತ್ತವೆ. ಆಲ್ ದ ಬೆಸ್ಟ್.
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮
:):):)
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮
ನಿಮಗೆ ಸಂತೋಷವಾಗಿದ್ದಕ್ಕೆ ನನಗೂ ಸಂತೋಷ ವಾಡ್ಕಿಯವರೆ. :))
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮
ಸಕತ್
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮
<<< "ತುಂಬು ಗರ್ಭಿಣಿಯಾದ ಗುಂಡನ .... " >>>
:-)
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮
<<< " ಹೆಂಡತಿ ಹೆರಿಗೆಗೆ ಹೋದಾಗ ಗಡ್ಡ ಬಿಡುವುದೇಕೆ? ಅದಕ್ಕೆ ನನಗೂ ಉತ್ತರ ಗೊತ್ತಿಲ್ಲ. ಬಹುಶ: ಈಗ ನನ್ನನ್ನು ಯಾರೂ ಕೇಳುವವರಿಲ್ಲ ಆದ್ದರಿಂದ ನಾನು ಸಂನ್ಯಾಸಿಯಂತೆ ಜೀವಿಸುತ್ತಿದ್ದೇನೆ ಎಂದು ತೋರಿಸಲೋ ಗೊತ್ತಿಲ್ಲಾ :)) " >>>
ಸನ್ಯಾಸಿಯಂತೆ ನಡೆವಳಿಕೆ ಇರಬೇಕು ಎಂಬುದಕ್ಕಾಗಿ !
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮
<<ಸನ್ಯಾಸಿಯಂತೆ ನಡೆವಳಿಕೆ ಇರಬೇಕು ಎಂಬುದಕ್ಕಾಗಿ !>>
ಗೊತ್ತಾಯಿತು ಬಿಡಿ ಶ್ರೀಕರ್..ಜಿ...ಅರ್ಜುನ ಸಂನ್ಯಾಸಿಯಂತೆ? :))
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮
ನಿಮ್ಮ ಪ್ರತಿಕ್ರಿಯೆಯೂ ಸಖತ್ :)) ಧನ್ಯವಾದಗಳು ಚಿಕ್ಕೂ.
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮: @ಜೀ..2
ಜೀ
ನೀವ್ ಹೇಳಿದ್ದು ನಿಜ...
ಅತಿ ಆದ್ರೆ... ನಂಗೂ ಅನ್ವಯಿಸುತ್ತೆ..!!
ಅದ್ಕೇನೆ ಸುಮಾರು ತಿಂಗಳು ಬರೀ ಪ್ರತಿಕ್ರಿಯುಸುವ....
ಆಮೇಲೆ.....
ಏನಾರ ಕುತೂಹಲಕಾರಿ ಆಗಿರ್ವದು ಬರೆಯುವ...
ನೀವ್ ಸಕ್ರಿಯ ಆಗಿರ್ವದರ ರಹಸ್ಯ ತಿಳಿಯಿತು...
\|/
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮: @ಜೀ..2
ಸಪ್ತಗಿರಿಗಳೆ,
ಗಾಡಿಯನ್ನು ಸ್ವಲ್ಪ ರಿವರ್ಸ್ ತೆಗೆದುಕೊಂಡು ಆಮೇಲೆ ಸ್ಪೀಡಿನಲ್ಲಿ ಮುನ್ನುಗುವುದಿಲ್ಲವೇ ಹಾಗೆ. ನೀವು ಕೂಡಾ ಹೊಸ ಸ್ಪೀಡಿನಿಂದ ಸಂಪದದಲ್ಲಿ ಸಕ್ರಿಯರಾಗಿ ಎಂದು ಹಾರೈಸುತ್ತಿದ್ದೇನೆ. :))
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮: @ಜೀ..3
ಜೀ
ನಂಗೆ ಬೇಡ ಬೇಡಾ ಅಂದ್ರೂ
'ಅತಿ ವೇಗ ತಿಥಿ ಬೇಗ' ಎನ್ನುವ ವಾಹನಗಳ ಹಿಂದಿನ ಬರಹ ನೆನಪಿಗೆ ಬಂತು,......!!
ಬರೆಯಲು ಹಲವು ವಿಶ್ಯಗಳು ಇವೆ ಆದರೆ ಸೋಮಾರಿಯಾಗಿರುವೆ....!!
\|/
ಉ: ಸಂಡೇ ಸಮಸ್ಯೆ: ಜಮಾನಾದ ಜೋಕುಗಳು - ೮: @ಜೀ..3
:))