ಈಗಿನಂತೆ 4 ಸದಸ್ಯರು ಮತ್ತು 112 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಬರವಣಿಗೆಯೆಂಬ ಯಾಂತ್ರಿಕ ಕ್ರಿಯೆ
uniquesupri's picture
ಸುಪ್ರೀತ್.ಕೆ.ಎಸ್
29
Dec
2010
ಬ್ಲಾಗ್ ಬರಹ

ನಾನು ಹೈಸ್ಕೂಲಿನಲ್ಲಿದ್ದಾಗ ಪ್ರತಿಭಾ ಕಾರಂಜಿ ಎಂದೋ ಅಥವಾ ಇನ್ಯಾವುದೋ ಹೆಸರಿನ ಜಿಲ್ಲಾ ಮಟ್ಟದ ಸ್ಪರ್ಧೆಯೊಂದು ನಡೆದಿತ್ತು. ಚಿತ್ರಕಲೆ, ನೃತ್ಯ, ಹಾಡುಗಾರಿಕೆ, ಕವಿತೆ- ಕತೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 705
ಪಾನಿಪಟ್
srikanth's picture
28
Feb
2006
ಪುಟ
“ಹೆದರಿಕೊಳ್ಳಬೇಡಿ, ನಾನು ನಿಮಗೆ ಯಾವ ರೀತಿಯಲ್ಲೂ ತೊಂದರೆ ಕೊಡೊದಿಲ್ಲ” ( ಅಲ್ಲಿದ್ದವರು ಸುತ್ತಮುತ್ತ ತಿರುಗಿ, ಎಲ್ಲ ನೋಟಗಳು ಎಲ್ಲ ದಿಕ್ಕುಗಳನ್ನು ಸುತ್ತಿಬಂದು ಕೊನೆಗೆ ಒಂದೇ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,469
ನೆನಪಿನ ಚಿತ್ರಕಲಾ ಶಾಲೆ: ಭಾಗ ೧೮ - ಪರಸ್ಪರ ವ್ಯತ್ಯಾಸವಿಲ್ಲದ ಇಪ್ಪತ್ತೊಂದು ಮತ್ತು ನಲವತ್ತಾರು!
anilkumar's picture
ಎಚ್.ಎ. ಅನಿಲ್ ಕುಮಾರ್
23
Sep
2011
ಲೇಖನ

 

 
...
ಪ್ರತಿಕ್ರಿಯೆಗಳು: 0
ಹಿಟ್ಸ್ : 77
ಬುದ್ದ ಆಗೋದು ಅಷ್ಟು ಸಲೀಸಲ್ಲ !
bhalle's picture
ಶ್ರೀನಾಥ್ ಭಲ್ಲೆ
31
Jan
2011
ಲೇಖನ

ನಮ್ಮ ಮನೆಯಿಂದ ಜಯನಗರ ತಲುಪುವ ಮಾರ್ಗದಲ್ಲಿ ಹಲವು ಅಪಘಾತಗಳು, ಅದರಿಂದಾದ ಕೈ-ಕಾಲು ಮುರಿತ ಮತ್ತು ಜಗಳ, ಬಸ್ಸಿನಲ್ಲಿ ಸೀಟಿಗಾಗಿ ಜಗಳ ಮತ್ತು ಹೊಡೆದಾಟ, ಹರಿಶ್ಚಂದ್ರ ಘಾಟ್ ಅಥವಾ...

ಪ್ರತಿಕ್ರಿಯೆಗಳು: 31
ಹಿಟ್ಸ್ : 1,017
ಪ್ರತ್ಯಕ್ಷನಾದ ಪ್ರಕ್ಷುಬ್ದತೆ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೩
anilkumar's picture
ಎಚ್.ಎ. ಅನಿಲ್ ಕುಮಾರ್
08
Nov
2010
ಲೇಖನ

 ಪ್ರತ್ಯಕ್ಷನಾದ ಪ್ರಕ್ಷುಬ್ದತೆ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೩...

ಪ್ರತಿಕ್ರಿಯೆಗಳು: 0
ಹಿಟ್ಸ್ : 416
ಬಯಲು ಮುಗಿದಿತ್ತು, ಆಲಯ ಕರೆದಿತ್ತು...
Chamaraj's picture
ಚಾಮರಾಜ ಸವಡಿ
30
Nov
2009
ಪುಟ

...

ಪ್ರತಿಕ್ರಿಯೆಗಳು: 26
ಹಿಟ್ಸ್ : 1,816
ಆಧುನಿಕ ಗೀತಾಚಾರ್ಯನ ನೆನಪು
vedarama2011's picture
ಇಂದುಮತಿ ರಾಮಮೂರ್ತಿ
29
Mar
2011
ಬ್ಲಾಗ್ ಬರಹ

ಮಾರ್ಚ್ ೧೭ನೇ ತಾರೀಖು ಆಧುನಿಕ ಗೀತಾಚಾರ್ಯರೆನ್ನಿಸಿಕೊಂಡ ಶ್ರೀ ಡಿ.ವಿ.ಗುಂಡಪ್ಪನವರ ೧೨೪ ನೇ ಹುಟ್ಟುಹಬ್ಬದ...

ಪ್ರತಿಕ್ರಿಯೆಗಳು: 6
ಹಿಟ್ಸ್ : 563
ನಕ್ಸಲೀಯರು ಮತ್ತು ಪೊಲೀಸರ ಮಧ್ಯೆ ನಲುಗುತ್ತಿರುವ ಮಲೆನಾಡು
ismail's picture
ismail
11
Aug
2005
ಪುಟ
ರ್ನಾಟಕದಲ್ಲಿ ನಕ್ಸಲೀಯರ ಸಮಸ್ಯೆ ಆರಂಭವಾಗಿ ಆಗಲೇ ಒಂದು ವರ್ಷ ಕಳೆಯಿತು. ಈ ಹೊತ್ತಿನವರೆಗೂ ಇದರ ಮೂಲ ಕಾರಣಗಳನ್ನು ಶೋಧಿಸುವ ಪ್ರಯತ್ನಗಳು...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,920
"ಗುಮ್ಮನ ಕರೆಯದಿರೆ.."
RaghavendraJoshi's picture
ರಾಘವೇಂದ್ರ ಜೋಶಿ
23
Jan
2012
ಲೇಖನ

ಡಬ್ಬಾ ಟಾಕೀಸ್!
ಸುಮಾರು ವರ್ಷಗಳ ಹಿಂದೆ ಅಂಥದೊಂದು ಹೆಸರಿನ ಸಿನೆಮಾ ಟಾಕೀಸು ಗದುಗಿನಲ್ಲಿತ್ತು.ತಮಾಷೆಯೆಂದರೆ,
'ಮಹಾಲಕ್ಷ್ಮಿ ಚಿತ್ರಮಂದಿರ' ಎಂಬ ಸುಂದರವಾದ...

ಪ್ರತಿಕ್ರಿಯೆಗಳು: 6
ಹಿಟ್ಸ್ : 241
ಸಿ.ಅಶ್ವಥ್ - ಮರೆಯಾದ ಮಹಾಚೇತನ.
Jayanth Ramachar's picture
ಜಯಂತ್ ರಾಮಾಚಾರ್
29
Dec
2010
ಲೇಖನ

ಡಿಸೆಂಬರ್ ೨೯, ೨೦೦೯ ಕನ್ನಡ ಕಲಾರಂಗಕ್ಕೊಂದು ಬರಸಿಡಿಲೊಂದು ಎರಗಿದ ದಿನ. ನಾಡಿನ ಜನತೆ ಹೊಸ ವರ್ಷದ ಆಚರಣೆಯ ಸಿದ್ಧತೆಯಲ್ಲಿದ್ದಾಗ ಬಂದ ಈ ಸುದ್ದಿ ಎಲ್ಲರನ್ನೂ ಶೋಕಸಾಗರದಲ್ಲಿ...

ಪ್ರತಿಕ್ರಿಯೆಗಳು: 8
ಹಿಟ್ಸ್ : 661

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಸಣ್ಣ ಕಥೆ - 900 ಗ್ರಾಂ ತೂಕದ ಕಲ್ಲು..!

ಸಣ್ಣ ಕಥೆ - 900 ಗ್ರಾಂ ತೂಕದ ಕಲ್ಲು..!

900 ಗ್ರಾಂ ತೂಕದ ಕಲ್ಲು..!
 
ಹಲವಾರು ವರ್ಷ ಕಠಿಣ ತಪಸ್ಸು ಮಾಡಿ ಅವನು ಒಂದು ವರ ಕೇಳಿದ.
ತನಗೆ ಎಂಥದೇ ಗಾಯವಾದರೂ ನೋವಾಗಬಾರದು
 
ದೇವರು ಸುಮ್ಮನೆ ತಥಾಸ್ತು ಅನ್ನಲಿಲ್ಲ. ಆಗಬಹುದು, ಆದರೆ ಅದಕ್ಕೆ ಹಲವು ನಿಬಂಧನೆಗಳಿವೆ ಅಂದ.
 
ಇವನಿಗೆ ಆತುರ. ವಿಮಾ ಕಂಪನಿಗಳ ಬಾಂಡ್‌ಗಳಂತೆ ತುಂಬಾ ಸಣ್ಣಕ್ಷರಗಳಲ್ಲಿದ್ದ ಆ ನಿಬಂಧನೆಗಳನ್ನು ಓದುವ ಗೋಜಿಗೆ ಹೋಗದೆ -ಸಾಲ ಪಡೆಯುವವನು ದರ್ದಿನಲ್ಲಿ ಖಾಲಿ ಛಾಪಾ ಕಾಗದಕ್ಕೆ ಹೆಬ್ಬೆಟ್ಟು ಒತ್ತುವ ಹಾಗೆ- ಅದಕ್ಕೆ ರುಜು ಹಾಕಿದ. ಆ ಕರಾರಿನ ಕಾಪಿಯೊಂದನ್ನು ತಾನಿಟ್ಟುಕೊಂಡು, ಒರಿಜಿನಲ್ ಅನ್ನು ಅವನಿಗೇ ಮರಳಿಸಿದ ದೇವರು ತಥಾಸ್ತು ಎನ್ನುತ್ತಾ ಅಂತರ್ಧಾನನಾದ.
 
ವರವನ್ನು ಪರೀಕ್ಷಿಸುವ ಸಲುವಾಗಿ ಇವನು ಒಂದು ಬ್ಲೇಡ್‌ನಿಂದ ಮೊಣಕೈ ಗೀರಿಕೊಂಡ. ರಕ್ತ ಜಿನುಗಿತು. ಆದರೆ ನೋವಿನ ಅನುಭವವೇ ಅಗುತ್ತಿಲ್ಲ! ಹುರ್ರೇ ಎಂದು ಕಿರುಚಿಕೊಂಡ. ಜಿನುಗಿದ ರಕ್ತ ವೇಸ್ಟ್ ಆಗಬಾರದೆಂದು ಆ ರಕ್ತದಿಂದ ಒಂದು ಪತ್ರ ಬರೆದು ಪೋಸ್ಟ್ ಮಾಡಿದ. ಕೆಲವು ಕ್ಷಣಗಳ ನಂತರ ಗಾಯ ಕೂಡ ಮಾಯವಾಯಿತು. ಇನ್ನೂ ಪರೀಕ್ಷಿಸಬೇಕೆನಿಸಿತು. ಪಿಸ್ತೂಲಿನಿಂದ ಕಣತಲೆಗೆ ಗುರಿಯಿಟ್ಟು ಗುಂಡು ಹಾರಿಸಿಕೊಂಡ. ಮಿದುಳನ್ನು ಛೇದಿಸಿಕೊಂಡು ಹೋಯಿತು ಆ ಬುಲ್ಲೆಟ್. ಆದರೂ ನೋವಾಗಲಿಲ್ಲ. ಅಷ್ಟೇ ಅಲ್ಲ ಕೆಲವು ಕ್ಷಣಗಳಲ್ಲೇ ಒಂದು ಚೂರು ಕಲೆ ಸಹ ಉಳಿಯದಂತೆ ಆ ಗಾಯವೂ ಮಾಯ್ದು ಹೋಯಿತು.
 
ಇಷ್ಟೆಲ್ಲ ಪೂರ್ವಸಿದ್ಧತೆ ಮಾಡಿಕೊಂಡು ನೇರವಾಗಿ ಅವಳ ಬಳಿಗೆ ಬಂದ. ರಕ್ತದಲ್ಲಿ ಬರೆದ ಪತ್ರ ಅವಳಿಗೆ ತಲಪಿತ್ತೋ ಇಲ್ಲವೋ ಗೊತ್ತಿಲ್ಲ! ಅವಳ ಎದುರು ನಿಂತವನೇ ತನ್ನೆದೆಗೆ ಕೈ ಹಾಕಿ ಬಗೆದು, ರಕ್ತ ಪಂಪಿಸುತ್ತಿದ್ದ ಹೃದಯವನ್ನು ಕಿತ್ತು ಅವಳ ಕಾಲ ಬುಡದಲ್ಲಿಟ್ಟು ಐ ಲವ್ ಯೂ ಅಂದ.
 
ದನದ ಮಾಂಸ ತಿನ್ನುವ ಜಾತಿಯವಳೇ ಆದರೂ, ಅವಳು ಅವನ ಈ ಚರ್ಯೆಯಿಂದ ಗಾಬರಿಗೊಂಡಳು. ಅವನ ಇಂಥ ನಾಟಕೀಯತೆ ಅವಳಿಗೆ ತುಂಬ ಕೃತಕ ಹಾಗೂ ಬೀಭತ್ಸ ಅನ್ನಿಸಿತು. ಇವನು ತನಗೇನೋ ಮೋಸ ಮಾಡುವ ಸಲುವಾಗಿಯೇ ಬಂದಿದ್ದಾನೆ ಎಂದುಕೊಂಡ ಅವಳು, ಇನ್ನೂ ರಕ್ತ ಚಿಮ್ಮುತ್ತಾ ಲವ್-ಡವ್‌ನೆ ಬಡಿದುಕೊಳ್ಳುತ್ತಿದ್ದ ಆ ಹೃದಯವನ್ನು ಕಾಲಿನಿಂದ ಒದ್ದು ಹೊರಟುಹೋದಳು.
 
ವಿಷಾದದ ನಗು ಹೊಮ್ಮಿಸುತ್ತಾ ಆ ಹೃದಯವನ್ನು ಮತ್ತೆ ಅದರ ಜಾಗದಲ್ಲೇ ಇರಿಸಿಕೊಂಡು ಹೋದರೆ ಹೋಗ್ತಾಳೆ, ದೇಶದಲ್ಲಿ ಹುಡುಗಿಯರಿಗೇನು ದರಿದ್ರವೇ ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡ. ಅವನು ಸ್ತ್ರೀ-ಪುರುಷ ಅನುಪಾತಕ್ಕೆ ಸಂಬಂಧಿಸಿದ ಜನಗಣತಿಯ ವರದಿಗಳನ್ನು ನಂಬುವುದಿಲ್ಲ. ಅಂಕಿ ಅಂಶಗಳೆಲ್ಲಾ ಬರಿ ಸುಳ್ಳಿನ ಕಂತೆ ಎಂಬ ಯಾವನೋ ಪ್ರಸಿದ್ಧ ಅರ್ಥಶಾಸ್ತ್ರಜ್ಞನ ಮಾತಿನಲ್ಲಿ ಅವನಿಗೆ ಅಪಾರ ನಂಬಿಕೆ.
 
ರಾತ್ರಿ ಮಲಗುವಾಗ ಎದೆಯೊಳಗೆ ಎಲ್ಲೋ ಛುಳುಕ್ಕೆಂದಂತಾಯಿತು. ಆಶ್ಚರ್ಯದಿಂದ ನೋಡಿಕೊಂಡರೆ, ಗಾಯ ಮಾಯ್ದಿದೆಯಾದರೂ ಒಂದು ಚೂರು ಕಲೆ ಉಳಿದಿದೆ. ಮೊದಲ ಬಾರಿಗೆ ಅವನು ದೇವರ ಬಗ್ಗೆ ಅಸಮಾಧಾನಗೊಂಡ.
 
ಬೆಳಗ್ಗೆ ಎದ್ದ ಒಡನೆ ಕರಾರಿನ ಪ್ರತಿ ಹಿಡಿದುಕೊಂಡು ಲಾಯರ್ ಅಳಗಿರಿಯ ಬಳಿ ಹೋಗಿ, ದೇವರ ಮೇಲೆ ಕೇಸು ಹಾಕಬೇಕು ಎಂದ. ಕೊರಳಲ್ಲಿ ನೇತಾಡುತ್ತಿದ್ದ ಭೂತಗನ್ನಡಿ ಹಿಡಿದು ಕೂಲಂಕಷವಾಗಿ ಕರಾರು ಪತ್ರ ಓದಿದ ಲಾಯರು ೬ನೇ ನಿಬಂಧನೆಯ ಮೇಲೆ ಬೊಟ್ಟು ಮಾಡಿದ. ಅಲ್ಲಿ ಹೀಗಿತ್ತು...
 
6) ಮನಸ್ಸಿಗೆ ಆದ ಗಾಯಕ್ಕೆ ಈ ವರ ಅನ್ವಯಿಸುವುದಿಲ್ಲ.
 
ಓದಿಕೊಂಡ ಇವನ ಮುಖ ಮ್ಲಾನವಾಯಿತು. ದೇವರು ಕೂಡ ಹೀಗೆ ನಯವಂಚನೆ ಮಾಡಿದನಲ್ಲ ಎನಿಸಿ ದುಃಖ ಉಮ್ಮಳಿಸಿ ಬಂತು. ಕರಾರನ್ನು ಹರಿದು ಹಾಕಿ, ಲಾಯರಿಗೆ ಫೀಸು ಕೂಡ ಕೊಡದೆ ಎದ್ದು ಬಂದ.
 
ಗಾಯಗಳನ್ನು ವಾಸಿ ಮಾಡುವುದಕ್ಕೆ ದೇವರಿಗೆ ಸಾಧ್ಯವಿಲ್ಲದೇ ಇರಬಹುದು. ಆದರೆ ಕಾಲಕ್ಕೆ ಆ ಶಕ್ತಿ ಇದೆ.
 
ಅನತಿ ಕಾಲದಲ್ಲಿಯೇ ಅವನಿಗೆ ಮತ್ತೊಬ್ಬಳ ಪರಿಚಯವಾಯಿತು. ಅದೊಂದು ದಿನ ಅವಳು ಆಪ್ಯಾಯತೆಯಿಂದ ಅವನ ತಲೆಗೂದಲಲ್ಲಿ ಕೈಯಾಡಿಸಿ, ಹೌದೋ ಅಲ್ಲವೋ ಎಂಬಂತೆ ಕೆನ್ನೆಗೆ ತುಟಿ ಸೋಕಿಸಿದಾಗ ಅವನಿಗೆ ರೋಮಾಂಚನವಾಯಿತು. ಮರುಕ್ಷಣವೇ ತನ್ನ ಎದೆ ಬಗೆದು, ಹೃದಯ ಕಿತ್ತು ಅವಳ ಮುಂದಿರಿಸಿದ.
 
ಗಲಗಲನೆ ನಕ್ಕಳು. ಏನೋ ಇದು! ಕಲ್ಲು ಕೊಡ್ತಾ ಇದೀಯಲ್ಲೋ! ಎಂದು ಛೇಡಿಸಿದಳು.
 
ನೋಡುತ್ತಾನೆ! ೯೦೦ ಗ್ರಾಂ ತೂಕದ ಕಲ್ಲು!
 
ಅದು ಕಲ್ಲಿನಂತೆ ಕಾಣುತ್ತಾ ಇದೆಯೋ? ಅಥವಾ ಕಲ್ಲೇಯೋ?
 
ಅವನಿಗೆ ತತ್ಕ್ಷಣಕ್ಕೆ ನಿರ್ಧರಿಸಲಾಗಲಿಲ್ಲ. ಪರೀಕ್ಷೆಗೋಸ್ಕರ ಲ್ಯಾಬಿಗೆ ಕಳಿಸಿದ.
 
ಅದನ್ನು ಕಿತ್ತು ತೆಗೆದ ಜಾಗ ಖಾಲಿಯಾಗಿಯೇ ಇದೆ.
 
ರೋಮಾಂಚನಗೊಳ್ಳಲು ಹೃದಯ ಇರಲೇ-ಬೇ ಕೆಂ ದಿ ಲ್ಲ.
*****
- ಎಸ್ ಎನ್ ಸಿಂಹ, ಮೇಲುಕೋಟೆ.
 

 

Average: 4.8 (10 votes)
171 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
venkatb83's picture
02
Feb
2012
11:57

ಉ: ಸಣ್ಣ ಕಥೆ - ೯೦೦ ಗ್ರಾಂ ತೂಕದ ಕಲ್ಲು..!

ಸಿಂಹ ಅವ್ರೆ-

ಇದು ನಿಜವಾಗಿಯೂ ನಾ ಸಂಪದದಲ್ಲಿ ಓದಿದ ಅತ್ಯುತ್ತಮ ಬರಹಗಳಲ್ಲಿ ಒಂದು..
ಈ ಕಥೆಯೂ ನೀತ್ಯುಕ್ತವಾಗಿದ್ದು,
ನನಗೆ ಭಲೇ ಹಿಡಿಸಿತು..

ನಿಮ್ಮ ಬರಹ ಶೈಲಿ ನನಗೆ ಹಿಡಿಸಿತು,

ನೀವು ಮುಂದೆಯೂ ಈ ತರಹದ ಬರಹಗಳನ್ನ ವಿಧ ವಿಧವಾದ ವಿಷಯಗಳ ಬಗ್ಗೆ ಬರೆಯಿರಿ..
ನಿಮ್ಮ ಬರಹಗಳು ನಿರಂತರವಾಗಿರಲಿ..
ಶುಭವಾಗಲಿ
>>>

ನಿಮ್ಮ ಬರಹದ ಹಲ ಸಾಲುಗಳು ಅವುಗಳ ಅರ್ಥವ್ಯಾಪ್ತಿ ಇಂದಾಗಿ ನನ್ನ ಗಮನ ಸೆಳೆದವು.. ಕೆಲವನ್ ಇಲ್ಲಿ ಹಾಕಿರ್‍ವೇ..

ದೇವರು ಸುಮ್ಮನೆ ತಥಾಸ್ತು ಅನ್ನಲಿಲ್ಲ. ಆಗಬಹುದು, ಆದರೆ ಅದಕ್ಕೆ ಹಲವು ನಿಬಂಧನೆಗಳಿವೆ ಅಂದ.

ಇವನಿಗೆ ಆತುರ. ವಿಮಾ ಕಂಪನಿಗಳ ಬಾಂಡ್ಗಳಂತೆ ತುಂಬಾ ಸಣ್ಣಕ್ಷರಗಳಲ್ಲಿದ್ದ ಆ ನಿಬಂಧನೆಗಳನ್ನು ಓದುವ ಗೋಜಿಗೆ ಹೋಗದೆ -ಸಾಲ ಪಡೆಯುವವನು ದರ್ದಿನಲ್ಲಿ ಖಾಲಿ ಛಾಪಾ ಕಾಗದಕ್ಕೆ ಹೆಬ್ಬೆಟ್ಟು ಒತ್ತುವ ಹಾಗೆ- ಅದಕ್ಕೆ ರುಜು ಹಾಕಿದ. ಆ ಕರಾರಿನ ಕಾಪಿಯೊಂದನ್ನು ತಾನಿಟ್ಟುಕೊಂಡು, ಒರಿಜಿನಲ್ ಅನ್ನು ಅವನಿಗೇ ಮರಳಿಸಿದ ದೇವರು ತಥಾಸ್ತು ಎನ್ನುತ್ತಾ ಅಂತರ್ಧಾನನಾದ

ಜಿನುಗಿದ ರಕ್ತ ವೇಸ್ಟ್ ಆಗಬಾರದೆಂದು ಆ ರಕ್ತದಿಂದ ಒಂದು ಪತ್ರ ಬರೆದು ಪೋಸ್ಟ್ ಮಾಡಿದ.
ದನದ ಮಾಂಸ ತಿನ್ನುವ ಜಾತಿಯವಳೇ ಆದರೂ, ಅವಳು ಅವನ ಈ ಚರ್ಯೆಯಿಂದ ಗಾಬರಿಗೊಂಡಳು. ಅವನ ಇಂಥ ನಾಟಕೀಯತೆ ಅವಳಿಗೆ ತುಂಬ ಕೃತಕ ಹಾಗೂ ಬೀಭತ್ಸ ಅನ್ನಿಸಿತು. ಇವನು ತನಗೇನೋ ಮೋಸ ಮಾಡುವ ಸಲುವಾಗಿಯೇ ಬಂದಿದ್ದಾನೆ ಎಂದುಕೊಂಡ ಅವಳು, ಇನ್ನೂ ರಕ್ತ ಚಿಮ್ಮುತ್ತಾ ಲವ್-ಡವ್ನೆ ಬಡಿದುಕೊಳ್ಳುತ್ತಿದ್ದ ಆ ಹೃದಯವನ್ನು ಕಾಲಿನಿಂದ ಒದ್ದು ಹೊರಟುಹೋದಳು.

ಹೋದರೆ ಹೋಗ್ತಾಳೆ, ದೇಶದಲ್ಲಿ ಹುಡುಗಿಯರಿಗೇನು ದರಿದ್ರವೇ ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡ. ಅವನು ಸ್ತ್ರೀ-ಪುರುಷ ಅನುಪಾತಕ್ಕೆ ಸಂಬಂಧಿಸಿದ ಜನಗಣತಿಯ ವರದಿಗಳನ್ನು ನಂಬುವುದಿಲ್ಲ. ಅಂಕಿ ಅಂಶಗಳೆಲ್ಲಾ ಬರಿ ಸುಳ್ಳಿನ ಕಂತೆ ಎಂಬ ಯಾವನೋ ಪ್ರಸಿದ್ಧ ಅರ್ಥಶಾಸ್ತ್ರಜ್ಞನ ಮಾತಿನಲ್ಲಿ ಅವನಿಗೆ ಅಪಾರ ನಂಬಿಕೆ

ಎದೆಯೊಳಗೆ ಎಲ್ಲೋ ಛುಳುಕ್ಕೆಂದಂತಾಯಿತು. ಆಶ್ಚರ್ಯದಿಂದ ನೋಡಿಕೊಂಡರೆ, ಗಾಯ ಮಾಯ್ದಿದೆಯಾದರೂ ಒಂದು ಚೂರು ಕಲೆ ಉಳಿದಿದೆ. ಮೊದಲ ಬಾರಿಗೆ ಅವನು ದೇವರ ಬಗ್ಗೆ ಅಸಮಾಧಾನಗೊಂಡ.

ಬೆಳಗ್ಗೆ ಎದ್ದ ಒಡನೆ ಕರಾರಿನ ಪ್ರತಿ ಹಿಡಿದುಕೊಂಡು ಲಾಯರ್ ಅಳಗಿರಿಯ ಬಳಿ ಹೋಗಿ, ದೇವರ ಮೇಲೆ ಕೇಸು ಹಾಕಬೇಕು ಎಂದ. ಕೊರಳಲ್ಲಿ ನೇತಾಡುತ್ತಿದ್ದ ಭೂತಗನ್ನಡಿ ಹಿಡಿದು ಕೂಲಂಕಷವಾಗಿ ಕರಾರು ಪತ್ರ ಓದಿದ ಲಾಯರು ೬ನೇ ನಿಬಂಧನೆಯ ಮೇಲೆ ಬೊಟ್ಟು ಮಾಡಿದ. ಅಲ್ಲಿ ಹೀಗಿತ್ತು...

೬) ಮನಸ್ಸಿಗೆ ಆದ ಗಾಯಕ್ಕೆ ಈ ವರ ಅನ್ವಯಿಸುವುದಿಲ್ಲ.

ಓದಿಕೊಂಡ ಇವನ ಮುಖ ಮ್ಲಾನವಾಯಿತು. ದೇವರು ಕೂಡ ಹೀಗೆ ನಯವಂಚನೆ ಮಾಡಿದನಲ್ಲ ಎನಿಸಿ ದುಃಖ ಉಮ್ಮಳಿಸಿ ಬಂತು. ಕರಾರನ್ನು ಹರಿದು ಹಾಕಿ, ಲಾಯರಿಗೆ ಫೀಸು ಕೂಡ ಕೊಡದೆ ಎದ್ದು ಬಂದ.

ಗಾಯಗಳನ್ನು ವಾಸಿ ಮಾಡುವುದಕ್ಕೆ ದೇವರಿಗೆ ಸಾಧ್ಯವಿಲ್ಲದೇ ಇರಬಹುದು. ಆದರೆ ಕಾಲಕ್ಕೆ ಆ ಶಕ್ತಿ ಇದೆ.

ಆಪ್ಯಾಯತೆಯಿಂದ ಅವನ ತಲೆಗೂದಲಲ್ಲಿ ಕೈಯಾಡಿಸಿ, ಹೌದೋ ಅಲ್ಲವೋ ಎಂಬಂತೆ ಕೆನ್ನೆಗೆ ತುಟಿ ಸೋಕಿಸಿದಾಗ ಅವನಿಗೆ ರೋಮಾಂಚನವಾಯಿತು. ಮರುಕ್ಷಣವೇ ತನ್ನ ಎದೆ ಬಗೆದು, ಹೃದಯ ಕಿತ್ತು ಅವಳ ಮುಂದಿರಿಸಿದ.

ಗಲಗಲನೆ ನಕ್ಕಳು. ಏನೋ ಇದು! ಕಲ್ಲು ಕೊಡ್ತಾ ಇದೀಯಲ್ಲೋ! ಎಂದು ಛೇಡಿಸಿದಳು.

ನೋಡುತ್ತಾನೆ! ೯೦೦ ಗ್ರಾಂ ತೂಕದ ಕಲ್ಲು!

ಅದು ಕಲ್ಲಿನಂತೆ ಕಾಣುತ್ತಾ ಇದೆಯೋ? ಅಥವಾ ಕಲ್ಲೇಯೋ?

ಅವನಿಗೆ ತತ್ಕ್ಷಣಕ್ಕೆ ನಿರ್ಧರಿಸಲಾಗಲಿಲ್ಲ. ಪರೀಕ್ಷೆಗೋಸ್ಕರ ಲ್ಯಾಬಿಗೆ ಕಳಿಸಿದ.

ಅದನ್ನು ಕಿತ್ತು ತೆಗೆದ ಜಾಗ ಖಾಲಿಯಾಗಿಯೇ ಇದೆ.

ರೋಮಾಂಚನಗೊಳ್ಳಲು ಹೃದಯ ಇರಲೇ-ಬೇ ಕೆಂ ದಿ ಲ್ಲ.

>>>ಇದು-ನಿಜವೋ? ಹೇಳಲು ಕಷ್ಟ... ಯಾದರೂ ನೀವ್ ಬರಹದಲ್ಲಿ ಇದನ ಉಪಯೋಗಿಸಿದ ರೀತಿ ಹಿಡಿಸಿತು..

ವಂದನೆಗಳು

melkote simha's picture
03
Feb
2012
7:12

ಉ: ಸಣ್ಣ ಕಥೆ - ೯೦೦ ಗ್ರಾಂ ತೂಕದ ಕಲ್ಲು..!

ದನ್ಯವಾದಗಳು ಸಪ್ತಗಿರಿವಾಸಿ ಅವರೇ... ನನ್ನ ಉಳಿದ ಕತೆಗಳನ್ನೂ ನೋಡಿದ್ದೀರೋ ? 4 ಇವೆ. ವನ್ದನೆಗಳು...

venkatb83's picture
03
Feb
2012
7:20

ಉ: ಸಣ್ಣ ಕಥೆ - ೯೦೦ ಗ್ರಾಂ ತೂಕದ ಕಲ್ಲು..!

ಖಂಡಿತವಾಗಿಯೂ
ನೋಡುವೆ-
ಓದುವೆ-
ಪ್ರತಿಕ್ರಿಯಿಸುವೆ--
ಹಾಗೆ ನೋಡಿದರೆ ನಾ ಈ ಮಧ್ಯೆ ಕೆಲ ಬರಹಗಳನ್ನ ಅವುಗಳ ಶೀರ್ಷಿಕೆ ಓದಿ ಪ್ರತಿಕ್ರಿಯಿಸಿ,
ಹಲವನ್ ಅವುಗಳ ಶೀರ್ಷಿಕೆ ಓದಿ ಅದು 'ನಮಗಲ್ಲ' ಅಂತ ಮುಂದೆ ಹೋಗಿದ್ದೆ,
ಈಗೀಗ ನಾ ಕೆಲವರ ಬರಹಗಳ ಉತ್ಖನನ ಮಾಡುತಿರ್ವೆ!!
'ಅವರದು' ಮುಗಿದರೆ
ನಿಮ್ಮ ಬರಹಗಳ ಹಿಂದೆ ಬೀಳುವೆ....
ನಿಮ್ಮಿಂದ ಇನಸ್ಟು ರಂಜನೆಯ ಬರಹ ಎದುರು ನೋಡ್ತಿರ್ವೆ..
ಶುಭವಾಗಲಿ...

ಗಣೇಶ's picture
03
Feb
2012
12:03