January 21, 2012 - 5:52pm
ಜಗದ ಪೋಷಕ ಹಗಲದೀವಿಗೆ ದಿನಕರಗಿಲ್ಲ ಕಿಂಚಿತಹಂಕಾರ
ತಂಬೆಳಕನಿತ್ತು ತಂಪೆರೆವಾ ತಂಗದಿರಗಿಲ್ಲ ಒಂದಿನಿತಹಂಕಾರ
ತಂನೆಳಲು, ತಣಿವಣ್ಣು, ಹೂವನೀವ ವೃಕ್ಷಕ್ಕಿಲ್ಲಿಂತಿಷ್ಟಹಂಕಾರ
ನಿನಗೇಕೆ ಬೇಕು ಸಲ್ಲದ ಬಿಂಕ ಬಿಗುಮಾನ - ನನ ಕಂದ||
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಸಲ್ಲದ ಬಿಂಕವೇಕೆ
ಹಿರಿಯರೇ ನಿಮ್ಮ
ಸಲ್ಲದ ಬಿಂಕವೇಕೆ?
ಎರಡು ಸಲ ಸೇರ್ಸಿದ್ದೀರ,
http://sampada.net/a...
---------------------------------------------------------------------------------------------------------------------------------
ಒಂದಕ್ಕೆ ಆರು ಇನ್ನೊಂದಕ್ಕೆ ೮ ಹಿಟ್ಸ್ ಬಿದ್ದಿದೆ...
ಎರಡೂ ಬ್ಲಾಗ್ ಬರಹಗಳೇ...
ಶನಿವಾರ, 21 January 2012 - 5:52pm
ವಿಧ: ಬ್ಲಾಗ್ ಬರಹ
ಹಿಟ್ಸ್: 8
ಸಲ್ಲದ ಬಿಂಕವೇಕೆ
ಪದ್ಮ.ಎ
ಶನಿವಾರ, 21 January 2012 - 5:51pm
ವಿಧ: ಬ್ಲಾಗ್ ಬರಹ
ಹಿಟ್ಸ್: 6
ಅದ್ನ ತೆಗೆಯುವ ಬಗೆ ನನಗೂ ಗೊತ್ತಿಲ್ಲ, ಒಂದನ್ನ ನೀವು ಎಡಿಟ್ ಮಾಡಿ ಬೇರೆ ಬರಹ ಸೇರಿಸಬಹುದು ಅನ್ಸುತ್ತೆ...
------------------------------------------------------------------------------------------------------------------------------------
ಇವತ್ತು ಸಂಪದ ಲೋಡ್ ಆಗಲು ತಡ ಅದಾಗ ಆ ತರಹ ಆಗಿರಬೇಕು ಅನ್ಸುತ್ತೆ ...
ನಿಮ್ಮ ಕವನದ ಬಗ್ಗೆ;
ಒಳ್ಳೆಯ ಕವನ..
ಅರ್ಥಪೂರ್ಣವಾಗಿದೆ...
ನಾಲ್ಕೇ ಸಾಲುಗಳಲ್ಲಿ ಒಳ್ಳೆಯ ಮಾತು ಹೇಳಿದೀರ...
ಈ ವಾಕ್ಯ ('ತಂಗದಿರಗಿಲ್ಲ')ನನಗೆ ಅರ್ಥ ಆಗಲಿಲ್ಲ,
--------------------------------------------
ತಂಬೆಳಕನಿತ್ತು ತಂಪೆರೆವಾ 'ತಂಗದಿರಗಿಲ್ಲ'
-----------------------------------------------------
ನಾ ಚಂದಿರ-ಅಥವಾ ಗಾಳಿ ಅನ್ಕೊಂಡಿರ್ವೆ..
ಉ: ಸಲ್ಲದ ಬಿಂಕವೇಕೆ
ಸಪ್ತಗಿರಿ ನೀವು ಹೇಳಿರುವಂತೆ ಎರಡು ಬಾರಿ ಲೋಡ್ ಆಗಿದ್ದು ನನ್ನ ಗಮನಕ್ಕೂ ಬಂತು ತೆಗೆಯುವುದು ಹೇಗೆ ತಿಳಿಯಲಿಲ್ಲ ಸುಮ್ಮನಾದೆ.
ನಿಮ್ಮ ನಿರಂತರ ಪ್ರತಿಕ್ರಿಯೆಗೆ ಧನ್ಯವಾದಗಳು.
ತಂಗದಿರ = ಚಂದ್ರ, ತಂಪಾದ ಕಿರಣಗಳನ್ನು ಹೊಂದಿರುವವನು,
(ಬೆಂಗದಿರ= ಸೂರ್ಯ) ಕದಿರ್=ಕಿರಣ
ಉ: ಸಲ್ಲದ ಬಿಂಕವೇಕೆ
ಸಪ್ತಗಿರಿ ನಿಮ್ಮ ಸಲಹೆ ಚೆನ್ನಾಗಿದೆ ಅನ್ನಿಸಿತು 'ಸಲ್ಲದ ಬಿಂಕವೇಕೆ' ಒಂದನ್ನ ಎಡಿಟ್ ಮಾಡಿ ಬೇರೆ ಬರಹ ಸೇರಿಸಿದ್ದೇನೆ.
ಧನ್ಯವಾದಗಳು