19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸವಿ ಸಮಯ

June 28, 2012 - 12:17am
Manasa G N
            ಅಂತು ಇಂತು ಈ ವರ್ಷದ ಮೊದಲ ಬರಹ ಪ್ರಕಟಿಸುವ ಸಮಯ ಬಂತು. ಇಷ್ಟು ದಿನಗಳು ಕಛೇರಿಯ ಕೆಲಸದಲ್ಲಿ ಪೂರ್ತಿ ಸಮಯ ಕಳೆದು ಹೋಗ್ತಿತ್ತು.  ಹೊಸ ಪ್ರಾಜೆಕ್ಟ್  ನ  ಪ್ರಾರಂಭ  ಮಾಡೋದು ತುಂಬಾ ಕಷ್ಟ ಎಲ್ಲದರ ಬಗ್ಗೆ ಸಂಶೋದನೆ ಮಾಡಿ,   ಉದಾಹರಣೆಯೊಂದಿಗೆ  ಉಪಯೋಗಿಸೋದು, ವಿಶ್ಲೇಷಸಿ ನಿರ್ಣಯ ಮಾಡೋಕ್ಕೆ ೩ ತಿಂಗಳು ತಕೊಂಡೆ. ಕೊನೆಗೆ ASP.NET MVC ಬಳಸೋದು ಅಂತ ತೀರ್ಮಾನ ಮಾಡಿ, ಅದರಲ್ಲಿ ತರಬೇತಿ ತಕೊಂಡು, ಮಾಡಿದಿವಿ. ೬-೭ API ರೆಡಿಯಾಗಿದೆ. ಈ Agile, Sprint,Scrum ಅಲ್ಲಿ; ನನಗೆ ಅಂತ ಸಮಯ ಸಿಗೋದು ಸ್ವಲ್ಪ ಕಷ್ಟ ಅನ್ಸುತ್ತೆ. ಇನೇನು ೧ ವರ್ಷ ಆಗ್ತಾ ಇದೆ ಹೊಸ ಸಂಸ್ಥೆಗೆ ಸೇರಿ ಆದರೆ ಇನ್ನು ಹೊಂದಾಣಿಕೆ ನಡೀತಾ ಇದೆ.
 
            ಹಾಂ ಈಗ ವಿಷಯಕ್ಕೆ ಬರ್ತೀನಿ. ಬಹಳ ದಿನಗಳ ನಂತರ ಇವತ್ತು  ೬ ಘಂಟೆಗೆ ಕಛೇರಿ ಬಿಟ್ಟೆ ಆದರೆ ಟ್ರಾಫಿಕ್  ಜಾಮ್ ಅಲ್ಲಿ  ಕೆಟ್ಟೆ. ORR  ಮೇಲು ಸೇತುವೆಗಳು  ಯಾವಾಗ ಆಗುತ್ತೋ ದೇವರೇ. ಕೊನೆಗೆ ಉಡುಪಿ ಗಾರ್ಡನ್ ತಲ್ಪಷ್ಟ್ರಲ್ಲಿ ೭.೩೦. ಸರಿ ಎಗೋ ತಲಪಿದೆ, ಇನ್ನು ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡೋಣ ಅಂತ ಹಣ್ಣುಗಳ ಖರೀದಿಗೆ  ಶುರು  ಮಾಡಿದೆ. ಕೊಂಡಿದ್ದು ೨ ಸೇಬು, ೨ ಮಾವು, ೨ ಬಾಳೆಹಣ್ಣು, ೨ ಸವತೆ ಕಾಯಿ, ೧ ಪರಂಗಿ. ರಾತ್ರಿ ಊಟ ಮಾಡಿ ೧ ಸವತೆ, ೧ ಮಾವು ಖಾಲಿ ಮಾಡಿದೆ. ಇನ್ನು ಬಹಳ ಸಮಯ ಇದೆ ಪವಡಿಸೋಕ್ಕೆ ಅಂತ ಪುಸ್ತಕ ಹಿಡಿದೇ, ಆಮೇಲೆ ಕನ್ನಡ ಕೊಟ್ಯಾದಿಪತಿ , ಮತ್ತೆ ಆಮೇಲೆ ಮತ್ತೆ ಪುಸ್ತಕ, ನಂತರ ಸಂಗೀತ ಕೇಳ್ತಾ ಕೇಳ್ತಾ ಹಾಡೋದು ಸ್ವಲ್ಪ ಹಾಗೆ ಹೆಜ್ಜೆ . ಬಹಳ ದಿನಗಳ ನಂತರ ಮನಸ್ಸು ನೆರಾಳ, ನಿಶ್ಚಿಂತೆ, ನಲಿವು. ಇನ್ನು ಈ ದಿನದಲ್ಲಿ ಬಾಕಿ ಮಾಡೋಕ್ಕೆ ಇರೋದು ಅಂದ್ರೆ ಅನಿಸಿದ್ನ ಗೀಚಿ ಸಂಪದಕ್ಕೆ ಸೇರಿಸಿದರೆ ಈ ದಿನ ಪರಿಪೂರ್ಣ . ಆಮೇಲೆ ಮಲಗಿ ಮತ್ತೆ ಇನೊಂದು ಭವ್ಯ ಬೆಳಗಿನ ಮುಂಜಾನೆ ಸ್ವಲ್ಪ ವ್ಯಾಯಾಮ ಆಮೇಲೆ ಕಛೇರಿ ಮತ್ತೆ ನನ್ನ API ಗಳ ಜೊತೆ .
 
ಸದ್ಯಕ್ಕೆ ಸಂತಸ ಸುರಿಸುತ್ತಿರುವ ಸ್ಟುಡಿಯೋ (VS2010) ಸಮಯದೊಂದಿಗೆ ಸಂಜೆಯಾ ಸವಿ ಸಮಯ ಸೇರಿದೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Chikku123 on

<ಅಂತು ಇಂತು ಈ ವರ್ಷದ ಮೊದಲ ಬರಹ ಪ್ರಕಟಿಸುವ ಸಮಯ ಬಂತು> ಅರ್ಧ ವರ್ಷ ಆಗ್ಲೇ ಮುಗಿದುಹೋಗಿದೆ
ವೆಲ್ಕಂ ಬ್ಯಾಕ್!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

+1

:())

ಕಡುಬಿಸನ ಹಳ್ಳಿಯ ಕಮ್ಪನಿ ಮತ್ತು ಹೊರ ವರ್ತುಲ ರಸ್ತೆ ಟ್ರಫಿಕ್ ಜಾಮ್ ಬಗ್ಗೆ ಹೆಳ್ತ ಹೊದ್ರೆ ಮುಗ್ಯೊದೆ ಇಲ್ಲ...!!

ಹಿನ್ದಿನ ತಿ0ಗಳು ಬರಹ

http://sampada.net/b...

ಬರೆದು ಈಗ ಮತ್ತೆ 2 ಬರಹ ಒಟ್ಟಿಗೆ..!!

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.