May 10, 2012 - 7:46pm
ತಪ್ಪು ಸರಿ
೧. ಸಭಿಕ (ಜೂಜು ಕಟ್ಟೆಯ ಯಜಮಾನ ಎಂದರ್ಥ) ಸಭ್ಯ ಅಥವಾ ಸಭಾಸದ
೨. ಅನಾನುಕೂಲ ಅನನುಕೂಲ
೩. ನಂತರ ಅನಂತರ (ಅಂತರದ ವಿರುದ್ಧ ಪದ- ಅಂತರವಿಲ್ಲದೆ)
೪. ಫಲಹಾರ ಫಲಾಹಾರ
೫. ಉಪಹಾರ ಉಪಾಹಾರ
೬. ತತ್ವ ತತ್ತ್ವ
೭. ಅಂತರರಾಷ್ಟ್ರೀಯ ಅಂತಾರಾಷ್ಟ್ರೀಯ
೮. ಪುನರ್ರಚನೆ ಪುನಾರಚನೆ
೯. ಶೃತಿ ಶ್ರುತಿ
೧೦. ಸಂಭಂಧ ಸಂಬಂಧ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು
ನಂಜುಂಡರವರೆ
ಲೇಖನದ ವಿಷಯ ಚೆನ್ನಾಗಿದೆ
ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲಕರ
ಮುಂದುವರೆಸಿ
ಹಾಗೆ ಪದಗಳ ಅರ್ಥವೆತ್ಯಾಸದೊಡನೆ ಅವುಗಳ ಅಕರವನ್ನು
ಮತ್ತು ನೀವು ಯಾವ ಅದಾರದಲ್ಲಿ ಬರೆಯುತ್ತಿರಿವಿರಿ ಎಂಬದನ್ನು
ತಿಳಿಸಿದಲ್ಲಿ ಸಂತಸ
*ಪಾರ್ಥಸಾರಥಿ
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು
http://www.mrc-cbu.c...
ಪಾರ್ಥಸಾರಥಿಯವರೆ,
ಈಗ ಒಮ್ಮೆ ಬರೆದ ಮೇಲೆ, ಪುನಃ ಓದಿ ತಿದ್ದುವಷ್ಟು ಸಮಯ ಯಾರಿಗೂ ಇಲ್ಲ. ವಿಷಯ ಮುಖ್ಯ. ಸ್ಪೆಲ್ಲಿಂಗ್‌ಗೆ ಗೋಲೀಮಾರ್.
ಹಾಗೂ ತಿದ್ದಲೇ ಬೇಕು ಎಂಬ ಹಠ ನಿಮಗಿದ್ದರೆ ಇನ್ನೂ ಕೆಲ ಶಬ್ದಗಳು :
ತಪ್ಪು..............................ಸರಿ
ವೆತ್ಯಾಸ..........................ವ್ಯತ್ಯಾಸ
ಅಕರ.............................ಆಕರ
ಅದಾರ..........................ಆಧಾರ
ಬರೆಯುತ್ತಿರಿವಿರಿ.................ಬರೆಯುತ್ತಿರುವಿರಿ
ಎಂಬದನ್ನು......................ಎಂಬುದನ್ನು
:)
-ಗಣೇಶ
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು: :(((
:((((
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು
ತಪ್ಪು..............................ಸರಿ
ವೆತ್ಯಾಸ..........................ವ್ಯತ್ಯಾಸ
ಅಕರ.............................ಆಕರ
ಅದಾರ..........................ಆಧಾರ
ಬರೆಯುತ್ತಿರಿವಿರಿ.................ಬರೆಯುತ್ತಿರುವಿರಿ
ಎಂಬದನ್ನು......................ಎಂಬುದನ್ನು
:)
ನಿಜ ಗಣೇಶರೆ
ಇನ್ನು ಮುಂದೆ ಸಾದ್ಯವಾದಷ್ಟು ತಪ್ಪುಗಳಿಲ್ಲದೆ ಬರೆಯಲು
ಪ್ರಯತ್ನಪಡುವೆ.
ಬಹಳಷ್ಟು ಸರಿ ಗೊತ್ತಿಲ್ಲದೆ ಆಗುವ ತಪ್ಪು ಸಮಯದ ಅಭಾವದಿಂದ ಆಗುವ ತಪ್ಪಲ್ಲ.
ಮೊದಲಿನಿಂದಲು ನಾವು ನಮ್ಮ ತಪ್ಪುಗಳನ್ನು ಕೀಪ್ಯಾಡ್ ಮೇಲೆ ಟೈಪಿಂಗ್ ಮೇಲೆ ಹಾಕುವೆವು.
ನಂಜುಂಡರು ಮತ್ತು ನೀವು ಈ ರೀತಿಯ ಬರಹಗಳನ್ನೇಕೆ ಬರೆಯಬಾರದು.
ನಿಮಗೆ ಗೊತ್ತ ಹಿಂದಿನ ದಿನಗಳಲ್ಲಿಯು ಸಹ ಪ್ರಖ್ಯಾತ ಲೇಖಕರ ಬರಹಗಳ ಹಸ್ತಪ್ರತಿಗಳನ್ನು
ತಿದ್ದುವುದು ನಂತರ ಪ್ರೂಪ್ ರೀಡಿಂಗ್ ಇಂತವೆಲ್ಲ ದೊಡ್ಡ ಸಾಹಸವಾಗುತ್ತಿತ್ತು.
ನಾನು ಹೆಚ್ಚು ತಪ್ಪುಗಳನ್ನು ಮಾಡುತ್ತಿರುವದರಿಂದ ನಾನು ಪ್ರಖ್ಯಾತನಾಗಬಹುದು!!! .
ಅಥವ ಎಲ್ಲಿ ನನಗೆ ಯಾವುದು ಸರಿ ಎನ್ನುವ ಅನುಮಾನ ಬರುತ್ತೊ ಅಲ್ಲೆಲ್ಲ
ಸಪ್ತಗಿರಿಯವರಂತೆ..........ಲೆ?
**** ಪಾರ್ಥಸಾರಥಿ
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು
ಪಾರ್ಥಸಾರಥಿಯವರೆ,
>>>ನಾನು ಹೆಚ್ಚು ತಪ್ಪುಗಳನ್ನು ಮಾಡುತ್ತಿರುವದರಿಂದ ನಾನು ಪ್ರಖ್ಯಾತನಾಗಬಹುದು!!! .
ನೀವು ಪ್ರಖ್ಯಾತರೆ. ತಪ್ಪುಗಳ ಬಗ್ಗೆ ಯೋಚಿಸದೇ ಬರೆಯಿರಿ.
ಆದರೆ ಸಪ್ತ.... ಹಾ. ....ಡಿ. :)
ಪ್ರೂಫ್ ರೀಡಿಂಗ್ ನಾನು ಮಾಡುವೆ. :)
-ಗಣೇಶ.
..
(ಹಾ. ....ಡಿ=ಹಾಗೆ ಬರೆಯಬೇಡಿ)
ಉ: ತಪ್ಪಾಗಿ ಬಳಸುವ ಪದಗಳು:ಗಣೆಶ್ ಅಣ್ನ ಮತ್ತು ಗುರುಗಳೆ..!!
ನಾ ಹಾಗೆ ........... ದು
ನಿವ್ .......ಲಿ ....ತ
:()))
\|/
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು
ನಂಜುಂಡ ಅವ್ರೆ
ನಾವ್ ತಪ್ಪಾಗಿ ಉಚ್ಚರಿಸುವ ಪದಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ
ನೀವ್ ಇದನ್ನು ಸರಣಿ ಯನ್ನಾಗಿಸಿ ಪ್ರಕಟಿಸುವಿರಾ?
ಒಳ್ಳೆಯ ಬರಹ..
ತಿದ್ದಿಕೊಳ್ಳಲು ಸಹಾಯಕ..
ಶುಭವಾಗಲಿ
ನನ್ನಿ
\|/
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು
"ನಡೆಯುವವನೆಡವದೆ ಕುಳಿತವನೆಡವುವನೆ?" (ಹರಿಹರ/ರಾಘವಾಂಕ?)
http://www.usconstit...
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು: ಶ್ರೀಕರ್ ಅವ್ರೆ...?
ಶ್ರೀಕರ್ ಅವ್ರೆ.
ನೀವ್ ಕೊಟ್ಟ ಕೊಂಡಿ ಕ್ಲಿಕ್ ಮಾಡಿ ಓದಿ-
ಬ್ರಿಟಿಷ್ ಮತ್ತು ಅಮೇರಿಕನ್ನರ ಭಾಷೆ -ಅಕ್ಚರಗಳ ನಡುವಿನ ವ್ಯತ್ಯಾಸ ಗಮನಿಸಿದೆ..
ಹಾಗೆಯೇ ಈ ಬಗ್ಗೆ ಇನ್ನಸ್ತು ಗೂಗಲಿಸಿದಾಗ ,
ಮತ್ತಸ್ತು ಆಸಕ್ತ್ತಿಕರ ಮಾಹಿತಿ ಸಿಕ್ಕವು, ಎಲ್ಲವುಗಳ ಲಿಂಕ್ ಹಾಕುತ್ತಿರುವೆ..
http://www.indiaspel...
http://theoatmeal.co...
http://trustman.org/...
http://www.dailywrit...
http://www.caclubind...
ಭಾರತದಲ್ಲಿ ಈ ಸ್ಪೆಲ್ಲಿನ್ ಮಿಸ್ಟೆಕ್ ಬಗ್ಗೆ ಅರಿವು ಮೂಡಿಸುತ್ತಾ ಸ್ಪೆಲಿಂಗ್ ತಪ್ಪು ಇಲ್ಲದೇ ಹೇಳುವ- ಉಚ್ಚರಿಸುವ ಬಗೆಗಿನ ಮಾಹಿತಿ ಸಹಾ ಉಂಟು..
http://www.indiaspel...
ನಿಮ್ಮ ಒಂದು ಕೊಂಡಿ ಕಾರಣವಾಗಿ ಈಗ ನಂಗೆ ಹಲವು ವಿಷ್ಯ ತಿಳಿದವು..
ನಿಮ್ಮ ಕೊಂಡಿ
ತೋರಿಸಿತು ನನಗೆ
ಜ್ಞಾನದ-ಕಲಿಯುವಿಕೆಯ ಬೆಳಕಿಂಡಿ...!!
ನಿಮ್ಮ ಕೊಂಡಿ ಸಹಾಯಕ್ಕೆ
ನನ್ನಿ
\|/
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು
ಶ್ರೀಕರ್ ರವರೇ, ನೀವು ಹೇಳುವುದು ಸರಿಯಾಗೇ ಇದೆ. ’ಯೋಗಾದ್ರೂಢೀ ಬಲೀಯಸೀ’ ಎಂದು ವ್ಯಾಕರಣಕಾರರು ಒಂದು ಸೂತ್ರವನ್ನು ಕೊಟ್ಟಿರುತ್ತಾರೆ. ನಾವು ರೂಢಿಯಲ್ಲಿ ಬಳಸುವ ಪದಗಳು ವ್ಯಾಕರಣಶುದ್ಧ ಪದಗಳಿಗಿಂತ ಬಲವತ್ತರವಾದುದು. ನುಡಿಗಳ ನಡೆಯ ಕಲಿಯುವಿಕೆ ನಿರಂತರವಾಗಿದ್ದರೆ ಚೆನ್ನ. ಎಡುವುದನ್ನು ಬಿಡುವುದೇ ಇಲ್ಲ ಎನ್ನುವವರಿಗೆ ಏನೂ ಮಾಡಲು ಬರುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಹೆಚ್ಚು ಜನ ಒಂದು ಪದವನ್ನು ತಪ್ಪಾಗಿ ಬಳಸಿದರೆ ಅದೇ ಸರಿಯಾದ ಪದವಾಗಬಹುದೇನೋ? ತಪ್ಪು ಇರಲೇಬೇಕು. ತಪ್ಪು ಇರದಿದ್ದರೆ ಸರಿಗೆ ಅಸ್ತಿತ್ವವೇ ಇಲ್ಲ ಎನ್ನುವುದೂ ನಿಜ. ಅಂತ್ಯಕಾಲ ಸಮೀಪಿಸಿದರೂ ವ್ಯಾಕರಣದ ಬಗ್ಗೆ ಚಿಂತಿಸಬೇಡ. ಅದನ್ನು ಬಿಟ್ಟು ಗೋವಿಂದನನ್ನು ಮನದಲ್ಲಿ ಭಜಿಸು ಎಂದು ’ಭಜಗೋವಿಂದಂ’ ಸ್ತುತಿಯಲ್ಲಿ ಶಂಕರಾಚಾರ್ಯರು ಹೇಳಿರುತ್ತಾರೆ. ಒಟ್ಟಿನಲ್ಲಿ ವ್ಯಾಕರಣವೇ ಮುಖ್ಯವಲ್ಲ. ಭಾವನೆಗಳ ಅಭಿವ್ಯಕ್ತಿ ಮುಖ್ಯ. ಆದರೂ...... ಭಾಷಾವಿಜ್ಞಾನ ಒಂದು ಆಸಕ್ತಿದಾಯಕ ವಿಷಯ. ತಪ್ಪು ಬಳಕೆಯನ್ನು ಸದಾ ಗುರುತಿಸಿಕೊಂಡು ಸರಿಬಳಕೆ ಯಾವುದೆಂದು ತಿಳಿದುಕೊಳ್ಳುವುದು ನನ್ನ ಒಂದು ಹವ್ಯಾಸ. ಇದು ನನಗೆ ಇಷ್ಟವೂ ಹೌದು. ಒಂದು ಉದಾ.... ಮುಗ್ಗಟ್ಟು ( ಮೂರು ಕಡೆ ಕಟ್ಟು) ಇಕ್ಕಟ್ಟು ( ಎರಡು ಕಡೆ ಕಟ್ಟು), ಒಗ್ಗಟ್ಟು (ಒಂದೇ ಕಡೆ ಕಟ್ಟು) ಇರಬಹುದೇ!? ಹೀಗೆ ಚಿಂತನೆ ಮುಂದುವರೆಯುತ್ತದೆ. ಕೊಂಡಿಯನ್ನು ನೀಡಿದ ನಿಮಗೆ ಹಾಗೂ ಸಪ್ತಗಿರಿಗಳಿಗೆ ಧನ್ಯವಾದಗಳು
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು
ಹುಡುಕು ಪದ: ಸಭಿಕ
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು
ಸಭಿಕ ನಾಮಪದ
(ಸಂ) ೧ ಸಭಾಸದ ೨ ಜೂಜಿನ ಮನೆಯ ವ್ಯವಸ್ಥಾಪಕ
ಹುಡುಕು ಪದ: International
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು
international ಗುಣವಾಚಕ
ಅಂತರರಾಷ್ಟ್ರೀಯ, ರಾಷ್ಟ್ರಗಳ ನಡುವಣ
international ನಾಮಪದ
ಅಂತರರಾಷ್ಟ್ರೀಯ ಕ್ರೀಡಾ-ಸ್ಪರ್ಧೆ, ಸ್ಪರ್ಧಿ
ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು
international ಗುಣವಾಚಕ
ನಾಡುನಡುವಿನ
ನಿಮ್ಮದೇ ನಿಘಂಟು
International -
ಅಂತರಾಷ್ಟ್ರೀಯ
ಹುಡುಕು ಪದ: ತತ್ವ
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು
ತತ್ವ ನಾಮಪದ
(ಸಂ) ೧ ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ ೨ ದಿಟ, ಸತ್ಯ ೩ ಸಾರ, ತಿರುಳು ೪ ಸಿದ್ಧಾಂತ, ನಿಯಮ ೫ ಅರ್ಥ, ತಾತ್ಪರ್ಯ ೬ ಇಪ್ಪತ್ತೈದು ಎಂಬ ಸಂಖ್ಯೆಯ ಸಂಕೇತ ೭ ಶ್ಲೇಷಾಲಂಕಾರಗಳಲ್ಲಿ ಒಂದು
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು
ಆಸು ಹೆಗ್ಡೆ ಯವರೇ ನಿಮ್ಮ ಹುಡುಕುವಿಕೆಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ಉತ್ತರಿಸುವುದು ದೀರ್ಘವಾಗುತ್ತದೆಯಾದುದರಿಂದ ಬ್ಲಾಗ್ ಬರಹದಲ್ಲೇ ಬರೆದಿರುತ್ತೇನೆ. ಈ ಬರಹ ಒಂದು ಮಂಥನ ಮಾತ್ರ. ಅನಂತರ ಓದುಗರಿಗೆ ಬಿಟ್ಟಿದ್ದು. ಧನ್ಯವಾದಗಳು.
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು
ನಂಜುಂಡ ಅವರೇ,
ನೀವು ಯಾವ ಆಧಾರದಲ್ಲಿ ಕೆಲವು ಪದಗಳನ್ನು ತಪ್ಪು ಎಂದು ಹೇಳಿದ್ದೀರಿ ? ಏಕೆಂದರೆ ನನ್ನ ಬಳಿ ಇರುವ "ಕನ್ನಡ-ಕನ್ನಡ-ಇಂಗ್ಲೀಷ್ ನಿಘಂಟು"ವಿನಲ್ಲಿ ( ಸಂಪಾದಕರು ಜಿ. ವೆಂಕಟಸುಬ್ಬಯ್ಯ, ಎಲ್.ಎಸ್. ಶೇಷಗಿರಿರಾವ್ ಮತ್ತು ಎಚ್.ಕೆ ರಾಮಚಂದ್ರಮೂರ್ತಿ. ಪ್ರಕಾಶಕರು ಐ.ಬಿ.ಎಚ್. ಪ್ರಕಾಶನ ) ಈ ಕೆಳಕಂಡ ಪದಗಳ ಜೊತೆ ಅರ್ಥವನ್ನೂ ನೀಡಿದ್ದಾರೆ.
ಸಭಿಕ - ಸಭಾಸದ
ನಂತರ - ತರುವಾಯ, ಆಮೇಲೆ
ತತ್ವ - ಸಿದ್ಧಾಂತ, ನಿಯಮ
ಅಂತರ್ರಾಷ್ಟ್ರೀಯ ( ಅಂತರ + ರಾಷ್ಟ್ರೀಯ ) - ಬೇರೆ ಬೇರೆ ದೇಶಗಳಿಗೆ ಸಂಬಂಧಿಸಿದ
ಇವುಗಳನ್ನು ತಪ್ಪು ಎಂದರೆ ತೀರಾ ಗೊಂದಲವಾಗುತ್ತದೆ. ಕನ್ನಡದ ಖ್ಯಾತ ಭಾಷಾ ತಜ್ಞರು ನೀಡಿದ ಪದಗಳೇ ತಪ್ಪು ಅನ್ನಲಾದೀತೇ ? ಅಥವಾ ನೀವು ಅನುಸರಿಸಿರುವ ಮಾನದಂಡ ಯಾವುದು ಎಂದು ತಿಳಿಸುವಿರಾ ?
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು
ಶ್ರೀಪತಿಯವರೇ,
ಅನ್ ಅಂತರ=ಅನಂತರ (ನ ಅಂತರ)
ಅನ್ ಅಭ್ಯಾಸ=ಅನಭ್ಯಾಸ ( ನ ಅಭ್ಯಾಸ)
ಅನ್ ಅನುಕೂಲ=ಅನನುಕೂಲ (ನ ಅನುಕೂಲ)
ಅನ್ ಉಪಾಯ=ಅನುಪಾಯ (ನ ಉಪಾಯ)
ಯಾವುದೇ ಪದಗಳಿಗೆ’ ’ಅದು ಅಲ್ಲ’ ಎಂದು ನಕಾರರೂಪದಿಂದ ವಿರುದ್ಡಪದದರೂಪದಲ್ಲಿ ಅಕಾರ ಆದಿಯಲ್ಲಿ ಸೇರುತ್ತದೆ. ಉದಾ:-ಅಜ್ಞಾನ (ನ ಜ್ಞಾನ.) ಆದರೆ ಪದದ ಆದಿಯಲ್ಲಿ ಅಕಾರ, ಇಕಾರ ಉಕಾರಾದಿ ಸ್ವರಾಕ್ಷರಗಳೇ ಇದ್ದರೆ ಅಲ್ಲಿ ಅನ್ ರೂಪವನ್ನು ಸೇರಿಸಿ ವಿರುದ್ಧಪದವನ್ನು ಮಾಡಬೇಕಾಗುತ್ತದೆ. ಮೇಲೆ ಉದಾಹರಣೆಗಳನ್ನು ಕೊಟ್ಟಿದೆ. ಅಂತರವಿಲ್ಲದೆ( ನ ಅಂತರ) ಎನ್ನುವಾಗ ಅದು ಅನಂತರ ಎಂದಾಗುತ್ತದೆ. ಉಳಿದ ಸಂದೇಹಗಳಿಗೆ ಲಿಂಕ್ ನೋಡಿ. ಧನ್ಯವಾದಗಳು.
http://sampada.net/b...
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು:@ ನಂಜುಂಡ ಸಾರ್-
ನಂಜುಂಡ ಸಾರ್-
ಏನು ಇಸ್ತು ದಿನ ಸಂಪದದಲ್ಲಿ ಕಾಣಿಸಲೇ ಇಲ್ಲ ?? ಸೌಖ್ಯವೇ ಮತ್ತೇನು ವಿಶೇಷ?..
ನಾ ಮತ್ತು ಶ್ರೀಧರ್ ಜೀ ಮೆಜೆಸ್ಟಿಕ್ ನಲ್ಲಿ ಭೇಟಿ ಆದಾಗ ನಿಮ್ಮ ವ್ಯಾಕರಣ ಜ್ಞಾನದ ಬಗ್ಗೆ ಮಾತಾಡಿದೆವು...
ಸಕ್ರಿಯರಾಗಿರಿ...
ಶುಭವಾಗಲಿ...
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು
ಸಪ್ತಗಿರಿವಾಸಿಗಳೇ,
ನಮ್ಮ ಕಾಲೇಜಿನಲ್ಲಿ ಒಟ್ಟು 2700 ವಿದ್ಯಾರ್ಥಿಗಳಿದ್ದು 28 ವಿಭಾಗಗಳಿವೆ. ಪಾಠಪ್ರವಚನದ ಜೊತೆಗೆ ವಿದ್ಯಾರ್ಥಿಗಳ ಪ್ರವೇಶಪ್ರಕ್ರಿಯೆ ಇತ್ಯಾದಿ ಕೆಲಸಕಾರ್ಯಗಳಲ್ಲಿ ಮಗ್ನನಾಗಿರುವುದರಿಂದ ಪುರುಸೊತ್ತಾಗುತ್ತಿಲ್ಲ ಆದುದರಿಂದ ಏನೂ ಬರೆಯುತ್ತಿಲ್ಲ. ಧನ್ಯವಾದಗಳು.
ಉ: ಸಾಮಾನ್ಯವಾಗಿ ತಪ್ಪಾಗಿ ಬಳಸುವ ಪದಗಳು
"ಕಾಲೇಜಿನಲ್ಲಿ ಒಟ್ಟು 2700 ವಿದ್ಯಾರ್ಥಿಗಳಿದ್ದು 28 ವಿಭಾಗಗಳಿವೆ. ಪಾಠಪ್ರವಚನದ ಜೊತೆಗೆ ವಿದ್ಯಾರ್ಥಿಗಳ ಪ್ರವೇಶಪ್ರಕ್ರಿಯೆ ಇತ್ಯಾದಿ ಕೆಲಸಕಾರ್ಯಗಳಲ್ಲಿ ಮಗ್ನ"
ಒಹೋ ಅದಾ ವಿಶ್ಯ...?
ಬಿಡುವಿದ್ದಾಗ ಬರೆಯಿರಿ...
ಪ್ರತಿಕ್ರಿಯಿಸಿ...
ತ್ವರಿತ ಪ್ರತಿಕ್ರಿಯೆಗೆ ನನ್ನಿ
\|/