ಸಿಟಿಗೆ ಹಾರ :(

ಸಿಟಿಗೆ ಹಾರ :(

ಚಿತ್ರ

 ಜನಪ್ರಿಯ ಸರಕಾರವಿದೆ. ವಿರೋಧ ಪಕ್ಷವಿದೆ. ಕೆರೆಗೆ, ಪರ್ಯಾವರಣಕ್ಕೆ, ಮಣ್ಣು, ಮಸಣ ಎಂದು ಅನೇಕ ಇಲಾಖೆಗಳು-ಅಧಿಕಾರಿಗಳೂ ಇದ್ದಾರೆ.  ಬೇರೆ ಬಿಡಿ- ಈ ಕೆರೆಯ ಪಕ್ಕದಲ್ಲೇ ಪಂಚಾಯತ್ ಆಫೀಸ್ ಸಹ ಇದೆ! ಕೆರೆ ಸತ್ತಿದೆ :(
 ಕೆರೆ ಕಾಣಿಸುತ್ತಿದ್ದರೂ "ಸತ್ತಿದೆ" ಎಂದದ್ದು ಯಾಕೆಂದರೆ ಕೊಳೆತು ನಾರುವ ವಾಸನೆ- ಪಕ್ಕದಲ್ಲಿರುವ ಚಿತ್ರ ನೋಡುವಾಗಲೂ ವಾಂತಿ ಬರುವ ಹಾಗೆ ಆಗುತ್ತಿದೆ.. ಈ ಗಲೀಜಲ್ಲೂ ಹಾರಾಡುತ್ತಿರುವ ಸುಂದರ ಪಕ್ಷಿಗಳನ್ನು ನೋಡುವಾಗ ಅಯ್ಯೋ ಪಾಪ ಅನಿಸುತ್ತಿತ್ತು.
 ಸಾವಿರಾರು ಅಡಿ ಕೊರೆದರೂ ಬೋರ್‌ವೆಲ್‌ನಲ್ಲಿ ನೀರಿಲ್ಲ. ಮಾರ್ಚ್ ಬಂದ ಕೂಡಲೇ ಕಾವೇರಿ ನೀರಿಗೆ ಕೊರತೆಯಾಗಿ, ಟ್ಯಾಂಕರ್ ನೀರೇ ಗತಿ. ಇಂತಹ ಬೆಂಗಳೂರಲ್ಲಿ ಹೊಸಕೆರೆಗಳನ್ನು ಮಾಡುವುದು ಬೇಡ-ಇರುವ ಕೆರೆಗಳನ್ನೂ ಉಳಿಸಲಾಗದ ಸರಕಾರ- ತಾರೀಖ್ ಪೆ ತಾರೀಖ್..ನೋಟೀಸ್ ಪೆ ನೋಟೀಸ್ ಕೊಡುತ್ತಾ ಹೋಗುತ್ತದೆ. ಕೆರೆಗಳು ಕಣ್ಣುಮುಚ್ಚುತ್ತಲೇ ಇದೆ.
 ಯಾವುದೀ ಕೆರೆ ಎಂದು ನಾನು ಮೊದಲೇ ಹೇಳಿಲ್ಲ. ಇದೊಂದೇ ಅಲ್ಲ-ಇಂತಹ ಅನೇಕ ಕೆರೆಗಳು ಬೆಂಗಳೂರು ಸುತ್ತಮುತ್ತ ಸತ್ತಿವೆ/ಸಾಯುತ್ತಲಿವೆ. ನಿದ್ರಿಸಿದಂತೆ ನಟಿಸುವ ಸರಕಾರ ಎಚ್ಚತ್ತುಕೊಳ್ಳುವ ಮೊದಲೇ ಕೆರೆಗೆ ಕಸಕಡ್ಡಿಮಣ್ಣು ಮುಚ್ಚಿ, ಅಲ್ಲೊಂದು ಬಡಾವಣೆ/ಅಪಾರ್ಟ್‌ಮೆಂಟ್ ಮಾಡಿ ಕೋಟಿಕೋಟಿ ಸಂಪಾದನೆ ಮಾಡಿ, ಆತನೇ ಮುಂದೆ ಇಲೆಕ್ಷನ್‌ಗೆ ನಿಂತು ಗೆದ್ದು ಅಕ್ರಮವನ್ನು-ಸಕ್ರಮ ಮಾಡಿಯಾನು.
 ಇದು ಚಿಕ್ಕಬಾಣಾವರ ಕೆರೆ. ಬೆಂಗಳೂರಿಂದ ಹೇಸರಘಟ್ಟಕ್ಕೆ ಹೋಗುವದಾರಿಯಲ್ಲಿ ಚಿಕ್ಕಬಾಣಾವರ ರೈಲ್ವೇ ನಿಲ್ದಾಣದ ಸಮೀಪವಿದೆ. ಚಿಕ್ಕಬಾಣಾವರದಿಂದ ಅಬ್ಬಿಗೆರೆಗೆ ಹೋಗುವ ರಸ್ತೆಯಿಂದ ಕಾಣುವ ಕೆರೆಯ ದೃಶ್ಯಗಳು-( ಚಿತ್ರ ೨,೩,೪,೫)
ಇದೇ ಕೆರೆಯ ಇನ್ನೊಂದು ಪಕ್ಕದಲ್ಲಿ ಚಿಕ್ಕಬಾಣಾವರದಿಂದ ಗಾಣಿಗರಹಳ್ಳಿಗೆ ಹೋಗುವ ದಾರಿ ಇದಕ್ಕಿಂತಲೂ ಕಡೆ(ಚಿತ್ರ ೭,೮,೯,೧೦). ನರಕ ನೋಡಬೇಕೆಂದು ಯಾರಿಗಾದರೂ ಆಸೆಯಿದ್ದರೆ ನೇರ ಅಲ್ಲಿಗೆ ಹೋಗಿ. :( ರಸ್ತೆಯನ್ನು ಅಗಲ ಮಾಡಲೆಂದು ಎರಡೂ ಪಕ್ಕದಲ್ಲಿ ಎಲ್ಲಾ ಗಲೀಜು ತಂದು ತುಂಬಿಸಿರುವರು. ನಾಯಿಗಳು,ಹಂದಿಗಳು,ಹಸುಗಳು,ಹಕ್ಕಿಗಳು ಆ ದುರ್ವಾಸನೆಯಲ್ಲೇ ಪ್ಲಾಸ್ಟಿಕ್ಗಳನ್ನು ತಿನ್ನುತ್ತಿತ್ತು. ನಾನು ನೋಡಿದ ದಿನ ಒಂದು ಹಸು ಸತ್ತು ಬಿದ್ದಿತ್ತು, ಅಥವಾ ಸತ್ತ ಹಸುವನ್ನು ಅಲ್ಲಿ ತಂದು ಹಾಕಿದ್ದರು.
 ಸಿಟಿ ಬೆಳೆಯುತ್ತಾ ಹೋದಹಾಗೆ ಸುತ್ತಮುತ್ತಲಿನ ಹಳ್ಳಿಗಳನ್ನು/ಕೆರೆಗಳನ್ನು/ಗದ್ದೆಗಳನ್ನು ಕಸದ ತೊಟ್ಟಿ ಮಾಡುವುದು ಸರಿಯಾ?
http://www.prajavani.net/article/%E0%B2%95%E0%B3%8A%E0%B2%B3%E0%B3%86%E0...
http://www.prajavani.net/article/%E0%B2%A4%E0%B3%8D%E0%B2%AF%E0%B2%BE%E0...
http://www.prajavani.net/article/%E0%B2%9A%E0%B2%BF%E0%B2%95%E0%B3%8D%E0...
http://46.5c.344a.static.theplanet.com/Content/Nov232010/bangalore201011...
http://www.kannadaprabha.com/districts/bangalore/%E0%B2%95%E0%B3%86%E0%B...

Rating
No votes yet

Comments

Submitted by venkatb83 Mon, 06/02/2014 - 20:06

"ಹೇಸರಘಟ್ಟ"
>????
ಗಣೇಶ್ ಅಣ್ಣಾ -
ಅಲ್ಲಿವರೆಗೆ ಬಂದವರೂ ನನ್ನ ಭೇಟಿ ಮಾಡದೆ ಹೋದಿರಾ ???
ಆ ಕೆರೆಯನ್ನ ಮೊನ್ನೆ ಮೊನ್ನೆ ತುಮಕೂರಿಗೆ ಹೋಗುವಾಗ ನೋಡಿದೆ ... ಮೊದಲಿಂದಲೂ ನೋಡುತ್ತಿರುವೆ ... ಆ ಕೆರೆ ಮುಚ್ಚಲು ಆಕ್ರಮಿಸಲು ಹಲವು ಜನ ಮಹನೀಯರು ಹಲವು ದೂರ್ ಯೋಜನೆ ರೂಪಿಸಿರುವುದು ಸತ್ಯ ....!!!
ಕೆರೆ ಚೆನ್ನಾಗಿದೆ ಎಲ್ಲೆಲಿಯ ಕಸ ತಂದು ಸುರಿದು ನಿದಾನವಾಗಿ ಮುಚ್ಚುತ್ತಿರುವರು :((( ಅದನ್ನು ಅಭಿವೃದ್ಧಿ ಮಾಡುವುದಾಗಿ ಸ್ಥಳೀಯ ಶಾಸಕರು ಹೇಳಿದ್ದು ಈಗ್ಗೆ 3 ವರ್ಷಗಳ ಹಿಂದೆ ವರದ್ದಿ ಆಗಿತ್ತು ..!!
ಹಿಂದಿನ ಮೇಯರ್ ಅಲ್ಲಿಯವರೇ ....ಅವರದೇ ಸರ್ಕಾರ ಇತ್ತು ...ಏನುಪಯೋಗ ??
ಅಕ್ಕ ಪಕ್ಕದಲ್ಲಿ ಅಪಾರ್ಟೆಂಟ್ಸ್ ಸ್ಟಾರ್ಟ್ ಆಗಿವೆ ( ಡಿ ಎಕ್ಷ್ಶ್ ಮ್ಯಾಕ್ಸ್ ).... ಕೆಲವೇ ದಿನಗಳಲ್ಲಿ ಅದರ ಮರಣ ಇರ್ವ ಹಾಗಿದೆ .. ಪರಿಸರವಾದಿಗಳು ಎಲ್ಲಿ???
ಪೀ ಐ ಎಲ್ ಹಾಕುವ ಬಗ್ಗೆ ಯಾರಿಗಾದ್ರೂ ಹೊಳೆದರೆ ಚೆನ್ನ ....
ನಿಮ್ಮ ಕಾಳಜಿಗೆ ನನ್ನಿ
ಶುಭವಾಗಲಿ
\|/

Submitted by ಗಣೇಶ Tue, 06/03/2014 - 23:52

In reply to by venkatb83

ಸಪ್ತಗಿರಿವಾಸಿಯವರೆ, ಬೆಂಗಳೂರಿನ ಇಂಚಿಂಚು ತಮಗೆ ಪರಿಚಯವಿದೆ! ನೀವು ತುಮಕೂರಿಗೆ ಹೋಗುವಾಗ, ಕೆರೆಯ ಪಕ್ಕದಲ್ಲಿ ಒಂದು ಕೈಯಲ್ಲಿ ಮೂಗು ಮುಚ್ಚಿಕೊಂಡು ಇನ್ನೊಂದು ಕೈಯಲ್ಲಿ ಫೋಟೋ ತೆಗೆಯುತ್ತಿದ್ದ ವ್ಯಕ್ತಿ ಕಾಣಿಸಲಿಲ್ಲವಾ!? :)

Submitted by nageshamysore Tue, 06/03/2014 - 05:37

ಗಣೇಶ್ ಜಿ, ನೀರು ತುಂಬಲೆಂದು ಕೆರೆಗೆ ಹಾರವಾಗುತ್ತಿದ್ದ ಅಂದಿನ ಮಂದಿಯೆಲ್ಲಿ? ಸಿಟಿಗೆ ಹಾರವನ್ನಾಗಿಸಿ ಕಾಂಕ್ರೀಟು ಕಾಡಾಗಿಸಿ ಗಗನ ಚುಂಬಿ ಕಟ್ಟಡ, ಕೃತಕ ಈಜುಕೊಳ, ಉದ್ಯಾನ ನಿರ್ಮಿಸುವ ಇಂದಿನ ಮಂದಿಯೆಲ್ಲಿ? ಪರಿಸರ ಸಮತೋಲನ ಅನಿವಾರ್ಯವನ್ನು ಮೀರಿ ಬೆಳೆಯುವ ಸ್ವಾರ್ಥಲಾಲಸೆಯ ವಿಪರ್ಯಾಸಕ್ಕೆ - ಕಾಲಾಯ ತಸ್ಮೈ ನಮಃ ಎನ್ನದೆ ವಿಧಿಯಿಲ್ಲವೇನೊ?

Submitted by ಗಣೇಶ Wed, 06/04/2014 - 00:09

In reply to by nageshamysore

ಭೃಷ್ಟ ವ್ಯವಸ್ಥೆಯಿಂದ ನಾವೇನನ್ನೂ ಸುಧಾರಿಸಲು ಸಾಧ್ಯವಿಲ್ಲ. ಹಣವೊಂದಿದ್ದರೆ ಏನೂ ಮಾಡಬಹುದು. ಬೇಕಿದ್ದರೆ ಪೋಲೀಸ್ ಸ್ಟೇಷನ್ ಎದುರಿಗೇ ಒಂದು ಲೋಡ್ ಗಾರ್ಬೇಜ್ ಹಾಕಿದರೂ ಕಂಪ್ಲೈಂಟ್ ಇಲ್ಲ ಎಂದು ಮೂಗು ಮುಚ್ಚಿಕೊಂಡು ಸುಮ್ಮನಿರುವರು. "ನಾನೇ ಕಣ್ಣಾರೆ ನೋಡಿದೆ, ಇಂತಹವರೇ ಗಾರ್ಬೇಜ್ ಹಾಕಿದ್ದು.." ಎಂದು ಒಬ್ಬರನ್ನು ಬೊಟ್ಟು ಮಾಡಿ ತೋರಿಸಿದಿರಿ ಅಂತಿಟ್ಟುಕೊಳ್ಳಿ- ಆತ ಹಣವಂತ,ಗಟ್ಟಿಕುಳ ಅಂತ ಆದರೆ ಕೇಸು ಗಾರ್ಬೇಜ್ ನಿಮ್ಮ ವಿರುದ್ಧ! ಬೇಕಿದ್ದರೆ ಕೋರ್ಟಲ್ಲಿ ಫೈಟ್ ಮಾಡಿ..ಕೇಸು ವರ್ಷಾನುಗಟ್ಟಲೆ.........
ನಾಗೇಶರೆ, ಕಾಲವನ್ನೇ ದೂರಿ ಸುಮ್ಮನಿರುವುದು ವಾಸಿ..:)

Submitted by kavinagaraj Wed, 06/04/2014 - 08:52

ನನ್ನ ಸೇವಾನುಭವದಿಂದ ಹೇಳಬೇಕೆಂದರೆ ಇವೆಲ್ಲವೂ ಸರ್ಕಾರದ "ಅಕ್ರಮ-ಸಕ್ರಮ" ನೀತಿಯ ಫಲಗಳು. ಈಗ ಅಕ್ರಮವೇ ಸಕ್ರಮ!!