ಚಿತ್ರ ಕೃಪೆ:
http://madhusameer.f...
ರಾಮ ಕಪಿಸೇನೆಯೊಡನೆ ಬಂದು ರಾವಣನೊಡನೆ ಯುದ್ಧ ಮಾಡಿ ಅವನನ್ನು ಕೊಂದಾದ ಮೇಲೆ ಹನುಮಂತನ ಮೂಲಕ ಈ ಸಮಾಚಾರವನ್ನು ಸೀತೆಗೆ ಹೇಳಿ ಕಳುಹಿಸುವನು. ಸೀತೆ ಒಂದು ವರುಷದಿಂದ ಇಂತಹ ಸಂತೋಷ ಸಮಾಚಾರಕ್ಕಾಗಿ ಕಾಯುತ್ತಿದ್ದಳು. ಈಗ ಹನುಮಂತನು ಅದನ್ನು ತಂದನು. ಸೀತೆ ಆನಂದ ಪರವಶಳಾಗುತ್ತಾಳೆ. "ಎಂತಹ ಮಾತನ್ನು ನೀನು ಹೇಳುತ್ತಿರುವೆ, ಇದಕ್ಕಾಗಿ ಕೊಡುವುದಕ್ಕೆ ನನ್ನ ಬಳಿ ಏನೂ ಇಲ್ಲ" ಎಂದು ವ್ಯಥೆ ಪಡುವಳು. ಆಗ ಹನುಮಂತ ಒಂದನ್ನು ಕೇಳುತ್ತಾನೆ. ಅವನು ಹಿಂದೆ ಬಂದಿದ್ದಾಗ ರಾಕ್ಷಸಿಯರು ಸೀತೆಗೆ ಕೊಡುತ್ತಿದ್ದ ಕಾಟವನ್ನು ನೋಡಿದ್ದ. ಅವರನ್ನು ಚೆನ್ನಾಗಿ ಹೊಡೆಯಬೇಕೆಂದಿದ್ದ. ಆದರೆ ಹಾಗೆ ಮಾಡಿದರೆ ಸೀತೆಯ ಪ್ರಾಣಕ್ಕೇ ಏನಾದರೂ ಅಪಾಯ ಬರಬಹುದು ಎಂದು ಸುಮ್ಮನೆ ಬಿಟ್ಟಿದ್ದ. ಆದರೆ ಈಗ ಅಂತಹ ಅಂಜಿಕೆಗೆ ಅವಕಾಶವಿಲ್ಲ. "ತಾಯಿ ನೀವು ಒಂದನ್ನು ಕೊಡಬಹುದು. ರಾಕ್ಷಸಿಯರಿಗೆ ಸ್ವಲ್ಪ ಬುದ್ಧಿ ಕಲಿಸಬೇಕೆಂದು ಆಸೆ, ಅದಕ್ಕೆ ನೀವು ಅವಕಾಶ ಮಾಡಿ ಕೊಡಿ" ಎನ್ನುತ್ತಾನೆ. ಆಗ ಸೀತೆ ತನ್ನ ಗೌರವಕ್ಕೆ ತಕ್ಕುದಾದ ಮಾತನ್ನು ಆಡುತ್ತಾಳೆ. ಆಗ ರಾಕ್ಷಸಿಯರು ರಾವಣನ ಆಜ್ಞಾನುವರ್ತಿಗಳಾಗಿದ್ದರು, ಅವರು ಸ್ವತಂತ್ರರಲ್ಲ, ಅವನು ಏನು ಹೇಳಿದರೆ ಅದನ್ನು ಮಾಡಬೇಕಿತ್ತು. ಅದು ಅವರ ತಪ್ಪಲ್ಲ. ಒಂದು ವೇಳೆ ಅವರೇ ಏನಾದರೂ ತಪ್ಪು ಮಾಡಿದರೂ ನಾವು ಅವರನ್ನು ಕ್ಷಮಿಸಬೇಕು. "ಮಗು ಈ ಪ್ರಪಂಚದಲ್ಲಿ ತಪ್ಪು ಮಾಡದವರು ಯಾರಿದ್ದಾರೆ? ಅವರನ್ನು ಕ್ಷಮಿಸುವುದೇ ಆರ್ಯರ ಮಹಾಗುಣ" ಎಂದು ಹೇಳಿ ಒಂದು ಸುಂದರವಾದ ಕಥೆಯನ್ನು ಹನುಮಂತನಿಗೆ ಹೇಳುತ್ತಾಳೆ.
ಒಂದು ಕಾಡಿನಲ್ಲಿ ಒಬ್ಬ ನಡೆದು ಬರುತ್ತಿದ್ದ. ಹಿಂದಿನಿಂದ ಒಂದು ಹುಲಿ ಅವನನ್ನು ಅಟ್ಟಿಸಿಕೊಂಡು ಬಂದಿತು. ಅದರಿಂದ ಪಾರಾಗುವುದಕ್ಕಾಗಿ ಒಂದು ದೊಡ್ಡ ಮರವನ್ನು ಏರಿದ, ಅದರ ಮೇಲೆ ಒಂದು ಕರಡಿ ಇತ್ತು. ಕೆಳಗೆ ಕುಳಿತುಕೊಂಡು ಹುಲಿ ಮೇಲಿರುವ ಕರಡಿಗೆ ಹೇಳಿತು - ಅವನು ನಮ್ಮಿಬ್ಬರಿಗೂ ಶತ್ರು, ಅವನನ್ನು ನೂಕಿ ಬಿಡು, ತಿಂದು ಹೋಗುತ್ತೇನೆ ಎಂದು. ಆದರೆ ಕರಡಿ, ಮರ ನನ್ನ ಮನೆ, ಅತಿಥಿಯಂತೆ ಅವನು ನನ್ನ ಮನೆಗೆ ಬಂದಿದ್ದಾನೆ. ಅವನನ್ನು ಮೃತ್ಯುವಿನ ಬಾಯಿಗೆ ನಾನು ನೂಕುವುದಿಲ್ಲ ಎಂದು ಹೇಳಿತು. ಹುಲಿ ಕೆಳಗೇ ಕುಳಿತಿತ್ತು. ಸ್ವಲ್ಪ ಹೊತ್ತಾದ ಮೇಲೆ ಕರಡಿ ಸ್ವಲ್ಪ ತೂಕಡಿಸುವುದಕ್ಕೆ ಪ್ರಾರಂಭಿಸಿತು. ಆಗ ಹುಲಿ ಮನುಷ್ಯನಿಗೆ ಹೇಳಿತು. ನಾನು ನಿನ್ನನ್ನು ತಿನ್ನಲು ಬಂದೆ, ನೀನು ಹೇಗೋ ತಪ್ಪಿಸಿಕೊಂಡು ಹೋದೆ, ಈಗ ಕರಡಿಯನ್ನಾದರೂ ನೂಕು. ಅದನ್ನು ತಿಂದು ಹೋಗುತ್ತೇನೆ ಎಂದು. ಆಗ ಮನುಷ್ಯನು ತಾನು ಬದುಕಿದರೆ ಸಾಕೆಂದು ತೂಕಡಿಸುತ್ತಿದ್ದ ಕರಡಿಯನ್ನು ನೂಕುತ್ತಾನೆ. ಅದೊಂದು ದೊಡ್ಡ ಮರ, ಕೊಂಬೆಯಿಂದ ಕೊಂಬೆಗೆ ತಾಕಿ ಬೀಳುತ್ತಿದ್ದಾಗ ಮಧ್ಯ ಕರಡಿ ಎಚ್ಚೆತ್ತು ಒಂದು ಕೊಂಬೆಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಹಾಗೇ ನೇತಾಡುತ್ತಿತ್ತು. ಹುಲಿ ಕರಡಿಗೆ ಹೇಳಿತು. ನೋಡಿದೆಯಾ ನೀನು ಅವನನ್ನು ರಕ್ಷಿಸಿದೆ, ಅವನು ನಿನ್ನನ್ನು ಮೃತ್ಯುವಿನ ಬಾಯಿಗೆ ನೂಕಿದ. ಈಗಲಾದರೂ ಗೊತ್ತಾಯಿತೋ ಮನುಷ್ಯರು ಎಂತಹ ಕೃತಘ್ನರು ಎಂಬುದು. ಈಗ ಅವನನ್ನು ನೂಕು ಎಂದಿತು. ಆಗ ಕರಡಿ, ಅವನು ನನ್ನನ್ನು ನೂಕಿದರೂ, ನಾನು ಅವನನ್ನು ನೂಕಲಾರೆ ಎಂದಿತು. ಬಹುಶಃ ಯಾವ ಸ್ತ್ರೀಯಲ್ಲಿಯೂ ಇಲ್ಲದ ಇಂತಹ ಕ್ಷಮಾಶಕ್ತಿ ಸೀತೆಯಲ್ಲಿತ್ತು. ಆದಕಾರಣವೇ ಅವಳು ಆ ಗುಣಕ್ಕೆ ಗಣಿಯಾಗಿದ್ದಾಳೆ.
=======================================================================================================================================
ವಿ. ಸೂ: ಶ್ರೀ ರಾಮಕೃಷ್ಣಾಶ್ರಮದ, ಸ್ವಾಮಿ ಸೋಮನಾಥಾನಂದರು ರಚಿಸಿರುವ "ರಾಮಾಯಣ ಶೀಲ ಸೌರಭ"ದಲ್ಲಿ ಸೀತೆಯ ಬಗ್ಗೆ ಬರೆದ ಭಾಗದಿಂದ ಆಯ್ದ ಲೇಖನ ಭಾಗ ಇದು. ರಾಮಾಯಣದ ಇತರ ಪಾತ್ರಗಳಾದ ರಾಮ, ಲಕ್ಷ್ಮಣ, ಹನುಮಂತ, ರಾವಣ, ದಶರಥನ ಮೂವರು ಹೆಂಡತಿಯರ ಗುಣಗಳ ಬಗ್ಗೆ ಬೆಳಕು ಚೆಲ್ಲುವ ವಿಚಾರಗಳು ಈ ಪುಸ್ತಕದಲ್ಲಿವೆ.
ಸೀತೆಯ ಕ್ಷಮಾ ಗುಣ
January 13, 2012 - 2:51pm
ಸರಣಿ:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:










ಪ್ರತಿಕ್ರಿಯೆಗಳು
ಉ: ಸೀತೆಯ ಕ್ಷಮಾ ಗುಣ
ಕ್ಷಮಾಗುಣ ದೋ....ಡ್ಡದು...!!!
ಒಳ್ಳೆಯ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆ೦ಬ ಉದ್ದೇಶದಿ೦ದಲೇ ಸೀತೆ ಹೇಳಿದ ಕಥೆಯ೦ತಹ ಅನೇಕ ಉಪಕಥೆಗಳು ರಾಮಾಯಣ-ಮಹಾಭಾರತದ ಭಾಗಗಳಾಗಿವೆ ಅ೦ತ ನನ್ನ ಅನಿಸಿಕೆ...
ಒಳ್ಳೆಯ ಕಥೆ ಮತ್ತು ಪುಸ್ತಕದ ಪರಿಚಯಕ್ಕಗಿ ಧನ್ಯವಾದಗಳು.
ಉ: ಸೀತೆಯ ಕ್ಷಮಾ ಗುಣ
ನಿಜ ಪ್ರಸನ್ನರೆ,
ಸ್ವಾಮಿ ಸೋಮನಾಥಾನಂದರು ಒಂದು ಕಡೆ ವಿಟಮಿನ್ ಎನ್ನುವುದನ್ನು ನಾವು ಮಾತ್ರೆಗಳ ಮೂಲಕ ನುಂಗು ಎಂದರೆ ನಮಗೆ ಅದರ ಬಗ್ಗೆ ಅಲರ್ಜಿ ಉಂಟಾಗಬಹುದು; ಆದರೆ ಅದೇ ವಿಟಮಿನ್ನುಗಳನ್ನು ಹಣ್ಣುಗಳ ಮೂಲಕ ನಮ್ಮ ಹೊಟ್ಟೆ ಸೇರುವಂತಾದರೆ ಇಷ್ಟಪಟ್ಟು ತಿನ್ನುತ್ತೇವಲ್ಲ ಆ ರೀತಿ ಈ ಕಥೆಗಳು ಎಂದು ಹೇಳುತ್ತಾರೆ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಉ: ಸೀತೆಯ ಕ್ಷಮಾ ಗುಣ
ಪ್ರಸನ್ನರು ಹೇಳಿದಂತೆ ಕಥೆಯ ತಿರುಳು ಮುಖ್ಯ. ಅದನ್ನು ಅಳವಡಿಸಿಕೊಳ್ಳುವುದೂ ಮುಖ್ಯ. ಚೆನ್ನಾಗಿದೆ, ಶ್ರೀದರರೆ.
ಉ: ಸೀತೆಯ ಕ್ಷಮಾ ಗುಣ
ನಿಮ್ಮ ಮಾತು ನಿಜ ಕವಿಗಳೆ; ಆದರೆ ನಾವು ಬಹುತೇಕ ತಿರುಳನ್ನು ಬಿಟ್ಟು ಸಿಪ್ಪೆಗಾಗಿಯೇ ಹೊಡೆದಾಡುತ್ತೇವೆ ಅದೇ ವಿಪರ್ಯಾಸ. ಕಥೆಯ ಬಗ್ಗೆ ಮೆಚ್ಚುಗೆಗೆ ಧನ್ಯವಾದಗಳು.
ಉ: ಸೀತೆಯ ಕ್ಷಮಾ ಗುಣ
ಸುಂದರ ನೀತಿಯುತ ಕಥೆಯನ್ನು ಹೇಳಿದ ಶ್ರೀಧರ್ ಅವರಿಗೂ ಪ್ರಸನ್ನರಿಗೂ ಧನ್ಯವಾದಗಳು
ಉ: ಸೀತೆಯ ಕ್ಷಮಾ ಗುಣ
ಅದನ್ನು ಓದಿ ಆನಂದಿಸಿದ ಮತ್ತು ಸಾರವನ್ನು ಗ್ರಹಿಸಿದ ನಿಮಗೂ ಕೂಡ ಧನ್ಯವಾದಗಳು ಗೋಪಿನಾಥ ರಾವ್ ಅವರೆ.
ಉ: ಸೀತೆಯ ಕ್ಷಮಾ ಗುಣ
ಜೀ
ಮೊದಲಿಗೆ ನಿಮ್ಮ ಬರಹಕ್ಕೆ ನಕ್ಚತ್ರ (***) ಕೊಟ್ಟು
ಈಗ ಪ್ರತಿಕ್ರಿಯಿಸುತ್ತಿರ್ವೆ....
ಸೀತೆಯ ಕ್ಷಮಾ ಗುಣಗಳ ಕುರಿತು ಒಂದು ಒಳ್ಳೆಯ 'ಧೃಸ್ಟಾ0ತದ' ಮೂಲಕ ಚೆನ್ನಾಗಿ ಹೇಳಿದೀರ...
ಉ: ಸೀತೆಯ ಕ್ಷಮಾ ಗುಣ
ಅಯ್ಯೋ ಸಪ್ತಗಿರಿಗಳೇ,
ಇದು ನಾ ಬರೆದ ಕಥೆಯಲ್ಲ; ಸ್ವಾಮಿ ಸೋಮನಾಥಾನಂದ ಅವರು ಬರೆದಿರುವ "ರಾಮಾಯಣ ಶೀಲ ಸೌರಭ" ಎನ್ನುವ ಪುಸ್ತಕದಿಂದ ಆಯ್ದು ಬರೆದದ್ದು. ಆ ಪುಸ್ತಕವನ್ನು ಶ್ರೀ ರಾಮಕೃಷ್ಣಾಶ್ರಮದವರು ಪ್ರಚುರಪಡಿಸಿದ್ದಾರೆ. ಈಗಾಗಲೇ ಅದು ಹಲವಾರು ಬಾರಿ ಮುದ್ರಣಗೊಂಡಿದೆ. ನನ್ನ ಬಳಿಯಿರುವ ಪುಸ್ತಕ ನಾಲ್ಕನೆಯ ಮರುಮುದ್ರಣ 2006 ರಲ್ಲಿ ಕಂಡದ್ದು. ಆಗ ಬೆಲೆ ಕೇವಲ 10ರೂಪಾಯಿಗಳಷ್ಟೇ ಇದ್ದದ್ದು. ಈಗ ಬಹಳ ಅಂದರೆ 15 ಅಥವಾ 20 ಇರಬಹುದು. ಸಾಧ್ಯವಾದರೆ ಕೊಂಡುಕೊಂಡು ಓದಿ ಬಹಳ ಒಳ್ಳೆಯ ಪುಸ್ತಕ ಆಮೇಲೆ ನೀವು ಪುಸ್ತಕಕ್ಕೆ 5*****+1* ಹಾಕುತ್ತೀರ ಖಂಡಿತವಾಗಿ. ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಉ: ಸೀತೆಯ ಕ್ಷಮಾ ಗುಣ
ಖಂಡಿತ--
ಜೀ
ಅದನ್ನು 'ಸ್ವಪ್ನ' ಬುಕ್ ಸ್ಟಾಲ್ ನಲ್ಲಿ ಹುಡುಕಿ ಖರೀದುಸುವೆ..
ನನಗೋ ಮೊದಲಿಂದಲೂ ರಾಮಾಯಣ- ಮಹಾ ಭಾರತ, ಪಂಡರಾಪುರ ದೇವರ(ಅಸ್ತು ಸರಿಯಾಗಿ ಗೊತ್ತಿಲ್ಲ ) ಕುರಿತು ಭಲೇ ಆಸಕ್ತಿ,
ಮತ್ತು ಅದಕ್ಕೆ ಕಾರಣ ಅಸಲು ಶಾಲೆ ಮೆಟ್ಟಿಲು ಹತ್ತದಿದ್ದರೂ, ಸ್ವಯಂ ತಾವೇ ಅಕ್ಚರ ಕಲಿತು, ಪುಸ್ತಕಗಳನ್ ಖರೀದಿಸಿ ತಂದು ಓದಿ, ಅದು ನಮ್ಮನ್ನು ಸೆಳೆದು ಓದುವಂತೆ ಪ್ರೇರೇಪಿಸಿದ - ನಮ್
ತಂದೆಯವರು...
ನಿಮಗೆ ಮಕರ ಸಂಕ್ರಾಂತಿ ಶುಭಾಶಯಗಳು
ಶುಭವಾಗಲಿ
ಉ: ಸೀತೆಯ ಕ್ಷಮಾ ಗುಣ
ಪಂಡರಾಪುರದ ದೇವರು ವಿಠ್ಠಲ; ಅಣ್ಣಾವ್ರ ಭಕ್ತ ಕುಂಬಾರ ನೋಡಿಲ್ಲವೆ? ಅದರಲ್ಲಿ ಇದೆ ಮತ್ತು ಸತಿ ಸಕ್ಕೂಬಾಯಿ ಕೂಡ ಪಾಂಡುರಂಗನ ಭಕ್ತಳು. ಅಲ್ಲಿ ನೆಲೆನಿಂತಿರುವುದು ಕಾನಡಾವು ವಿಠ್ಠಲ ಅಂದರೆ ಮೂಲತ: ಕರುನಾಡಿನವನು. ಇನ್ನು ನಿಮಗೆ ನಾನು ತಿಳಿಸಿದ ಪುಸ್ತಕ ಬಸವನಗುಡಿಯ ಶ್ರೀ ರಾಮಕೃಷ್ಣಾಶ್ರಮದಲ್ಲಿಯೂ ಸಿಗಬಹುದು ಪ್ರಯತ್ನಿಸಿ. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಸಂಕ್ರಾಂತಿಯ ಶುಭಾಶಯಗಳು.
ಉ: ಸೀತೆಯ ಕ್ಷಮಾ ಗುಣ
ಈಗ ನೆನಪಿಗೆ ಬಂತು -ಪಾಂಡುರಂಗ ವಿಠಲ ,
(ಅಣ್ಣಾವ್ರ - ಭಕ್ತ ಕುಂಬಾರ ತುಂಬಾ ಸಾರಿ ನೋಡಿರ್ವೆ-ನಮ್ಮ ಇಡೀ ಕುಟುಂಬ - ಅವರ ಅಭಿಮಾನಿ ವೃಂದ !!))
ಆದರೆ ನಾ ಓದಿದ ಆ ಪುಸ್ತಕದಲ್ಲಿ(ಎಸ್ಟೋ ಚಿತ್ರಗಳ ಸಮೇತ) ಆ ದೇವರ ಹೆಸರು ದತ್ತಾತ್ರೇಯ ಇದ್ದ ಹಾಗೆ ನೆನಪು...
ಉ: ಸೀತೆಯ ಕ್ಷಮಾ ಗುಣ
ಶ್ರೀಧರ್ ಅವರೇ ಸೀತಾಮಾತೆಯ ಕ್ಷಮಾಗುಣ ಬಹಳ ದೊಡ್ಡದು. ರಾಮಾಯಣದ ಒ೦ದು ಸನ್ನಿವೇಶವನ್ನು ನಮಗೆ ನೀಡಿದ್ದಕ್ಕೆ ಧನ್ಯವಾದಗಳು,.
ಉ: ಸೀತೆಯ ಕ್ಷಮಾ ಗುಣ
ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಜಯಂತರೆ. ಮಕರ ಸಂಕ್ರಾಂತಿಯ ಶುಭಾಶಯಗಳು ನಿಮಗೆ.
ಉ: ಸೀತೆಯ ಕ್ಷಮಾ ಗುಣ
ಅದಕ್ಕೆಲ್ಲಾ ಅಷ್ಟೊಂದು ಹೊಗಳಿಕೆ ಬೇಕೆ?
>>>>>> :)))
ಜೀ
ಮಕರ ಸಂಕ್ರಾತ್ರಿ ಹಬ್ಬದ ಶುಭಾಶಯಗಳು......
ಉ: ಸೀತೆಯ ಕ್ಷಮಾ ಗುಣ
:))