August 4, 2012 - 2:22pm
ನ್ಯಾಲಯದಲ್ಲಿ ಅಂದು ಕೊಲೆ ಪ್ರಕರಣವೊಂದು ಇತ್ತು. ನ್ಯಾಯಾದೀಶರು ಬಂದು ತಮ್ಮ ಪೀಠದಲ್ಲಿ ಕುಳಿತು
ವಿಚಾರಣೆಗೆ ಅನುಮತಿ ನೀಡಿದರು ಇಬ್ಬರು ಪೋಲಿಸಿನವರು ಒಬ್ಬ ವ್ಯಕ್ತಿಯನ್ನು ಕರೆ ತಂದು ಕಟಕಟೆಯಲ್ಲಿ ನಿಲ್ಲಿಸಿದರು. ನ್ಯಾಯಾದೀಶರು ಅವನನ್ನು ನೋಡಿ ಕೊಲೆ ಮಾಡಿದವನು ಇವನೇನಾ ಅಂದರು, ಸರ್ಕಾರಿ ವಕೀಲರು ಎದ್ದು ನಿಂತು ಮಹಾಸ್ವಾಮಿ ಈತ ಕೊಲೆಗಾರ ಅಲ್ಲ ಕೊಲೆಯನ್ನು ಕಣ್ಣಾರೆ ಕಂಡ ಸಾಕ್ಷಿ ಅದಕ್ಕೆ ಪೋಲೀಸ್ ವಶದಲ್ಲಿದ್ದಾನೆ ಅಂದರು. ಹಾಗದರೆ ಕೊಲೆಗಾರ ಎಲ್ಲಿದ್ದಾನೆ ಅವನನ್ನು ಕರೆದು ತನ್ನಿ ಅಂದರು ನ್ಯಾಯಾದೀಶರು
:
:
:
:
:
:
:
:
:
:
:
:
:
:
:
:
:
:
:
:
:
:
:
:
:
:
:
:
:
:
:
ಮಹಾಸ್ವಾಮಿ ಆತ ಜಾಮಿನು ಪಡೆದು ಹೊರಗೆ ಇದ್ದಾನೆ ಇನ್ನೇನು ಬರ್ತಾರೆ ಸ್ವಾಮಿ ಎಂದು ಆರೋಪಿ ಪರ ವಕೀಲರು ಹೇಳಿದರು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಸುಮ್ಮನೆ ನಗುವಿಗಾಗಿ 2 @ ಸತಿಶ್ ಅವ್ರೆ
ಸತಿಶ್ ಅವ್ರೆ
ನಿಮ್ಮಿಂದ ಎರಡನೇ ಜೋಕ್
ಮತ್ತು ಫ್ರೆಶ್...!!
ಹಾಗೆಯೆ ಸನ್ನಿವೇಶ ನಮ್ ದೇಶದ ನ್ಯಾಯ ವ್ಯವಸ್ಥೆ ಅಪರಾಧಿ ನಿರಪರಾಧಿ ಉಳ್ಳವ ಇಲ್ಲದವರ ಮಧ್ಯೆ ಇರ್ವ ಅಂತರ ಕಣ್ಣ ಮುಂದೆ ತೋರಿಸುವುದು...:(((
ಶುಭವಾಗಲಿ..
\|/
ಉ: ಸುಮ್ಮನೆ ನಗುವಿಗಾಗಿ 2 @ ಸತಿಶ್ ಅವ್ರೆ
ಧನ್ಯವಾದಗಳು ವೆಂಕಟೇಶ್ ರವರೇ
...ಸತೀಶ್
ಉ: ಸುಮ್ಮನೆ ನಗುವಿಗಾಗಿ 2
ಸತೀಶ್ ಅವರೆ,
ನೀವು ಹೇಳಿರುವುದು ಹಾಸ್ಯಕ್ಕಾದರೂ ಕೂಡಾ ಅದು ಕಟು ವಾಸ್ತವ :((
ಉ: ಸುಮ್ಮನೆ ನಗುವಿಗಾಗಿ 2
ಧನ್ಯವಾದಗಳು ಶ್ರೀಧರ್ ರವರೇ
...ಸತೀಶ್
ಉ: ಸುಮ್ಮನೆ ನಗುವಿಗಾಗಿ 2
ನೋಡಿದೊನು ಸಿಕ್ಕಿಹಾಕಿಕೊಂಡ, ಮಾಡಿದೋನು ನುಣಚಿಕೊಂಡ. ( ಗಾದೆ ಸ್ವಲ್ಪ ತಿರುಚಿದೆ) ಕೆಳಿದೊನು?
ಉ: ಸುಮ್ಮನೆ ನಗುವಿಗಾಗಿ 2
ಹ್ಹ...ಹ್ಹ..ಹ್ಹ. ಚನ್ನಾಗಿದೆ ನಿಮ್ಮ ಹೊಸ ಗಾದೆ. ಧನ್ಯವಾದಗಳೊಂದಿಗೆ
...ಸತೀಶ್
ಉ: ಸುಮ್ಮನೆ ನಗುವಿಗಾಗಿ 2
+1
ಇದೇ ಸತ್ಯ, ಇದು ಹೀಗೆಯೇ ಆಗಬೇಕಾಗಿದ್ದು!!
ಉ: ಸುಮ್ಮನೆ ನಗುವಿಗಾಗಿ 2
ಧನ್ಯವಾದಗಳು ಚೇತನ್ ರವರೇ
ಈಗ ಕೊಲೆ ಮಾಡೋದು ಸುಲಭ ಆದರೆ ಸಾಕ್ಷಿ ಹೇಳೋದೆ ಕಷ್ಟ...!!
...ಸತೀಶ್
ಉ: ಸುಮ್ಮನೆ ನಗುವಿಗಾಗಿ 2
ಹಾಸ್ಯ ಚೆನ್ನಾಗಿದೆ.
ತಾಂತ್ರಿಕ ಲೋಪವೆಂದರೆ ಸಾಕ್ಷಿ ನ್ಯಾಯಾಲಯಕ್ಕೆ ಹಾಜರಾಗಲು ತಪ್ಪಿದರೆ ಮಾತ್ರ ನ್ಯಾಯಾಲಯ ವಾರೆಂಟ್ ನೀಡಿದರೆ ಮಾತ್ರ ಪೋಲಿಸರು ಸಾಕ್ಷಿಯನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಬಹುದು. {ಏನು ಮಾಡಲಿ, ನನಗೆ ಪೋಲಿಸರ, ಕೋರ್ಟಿನ, ಸಾಕ್ಷಿಗಳ ಒಡನಾಟ ಇದ್ದುದರಿಂದ ಇದನ್ನು ಬರೆದುಬಿಟ್ಟೆ!} ಈ ಪ್ರಕರಣದಲ್ಲಿ ಸಾಕ್ಷಿ ಹೇಳಲು ಮೊದಲೊಮ್ಮೆ ಸಾಕ್ಷಿ ತಪ್ಪಿದ್ದರಿಬಹುದೆಂದುಕೊಳ್ಳುವೆ. :)
ಉ: ಸುಮ್ಮನೆ ನಗುವಿಗಾಗಿ 2
ನಗುವಿನೊಂದಿಗೆ ವಾಸ್ತವತೆಯ ಅರಿವು.
ಕೃಷ್ಣ ಕುಲಕರ್ಣಿ