ಸೌಜನ್ಯತೆಗೆ ಮತ್ತೊಂದು ಹೆಸರೇ ಮೋದಿ

ಸೌಜನ್ಯತೆಗೆ ಮತ್ತೊಂದು ಹೆಸರೇ ಮೋದಿ

ಸೌಜನ್ಯತೆಗೆ ಮತ್ತೊಂದು ಹೆಸರೇ ಮೋದಿ..ಓದಿ ಈ ಘಟನೆ. .

ಹೊಸದಿಗಂತ ಪತ್ರಿಕೆಯ ಅಂಕಣಕಾರರದ ಶ್ರೀ ಸಂತೋಷ್ ತಮ್ಮಯ್ಯನವರು ಮೊನ್ನೆ ದೂರವಾಣಿಯ ಮೂಲಕ ಮಾತಿಗೆ ಸಿಕ್ಕಿದ್ದರು.ತಮ್ಮ'ಉಘೇ ವೀರ ಭೂಮಿಗೆ' ಅಂಕಣದ ಮೂಲಕ ಹಲವರಿಗೆ ಇವರು ಚಿರಪರಿಚಿತರು. ಫೇಸ್ಬುಕ್ಕಿನಲ್ಲು ಆಗಾಗ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಹಲವರ ಅಭಿಮಾನಕ್ಕು ಪಾತ್ರರಾಗಿರುವವರು.ಭಾರತ ಪ್ರಧಾನಿಗಳಾದ ಮೋದಿಯವರನ್ನು ನೇರವಾಗಿ ಭೇಟಿಯಾದ ಭಾಗ್ಯವಂತರಲ್ಲಿ ಇವರು ಕೂಡ ಒಬ್ಬರು.ಹೀಗಾಗಿ ಮೋದಿಯವರನ್ನು ಭೇಟಿಯಾದಾಗಿನ ಅನುಭವವನ್ನು ನನ್ನ ಜೊತೆ ಹಂಚಿಕೊಳ್ಳುವಿರಾ..? ಎಂದು ಕೇಳಿದಾಗ,ಅವರು ಹೇಳಿದ ಮಾತುಗಳನ್ನು ಯಥಾವತ್ತಾಗಿ ನಿಮ್ಮ ಮುಂದಿಡುತ್ತಿದ್ದೇನೆ..ದಯವಿಟ್ಟು ಓದಿ...

'ನಾನು ಮತ್ತು ನನ್ನ ಸಹೋದ್ಯೋಗಿ ದು.ಗು.ಲಕ್ಷ್ಮಣರು ಗುಜರಾತ್ ನಲ್ಲಿ ಅಯೋಜಿಸಿದ್ದ ನಮ್ಮ ಸಮೂಹದ ಪತ್ರಕರ್ತರ ಸಮಾವೇಶದಲ್ಲಿ ಪಾಲ್ಲೊಂಡಿದ್ದೆವು.ಹೀಗಾಗಿ ಆಗ ಅಲ್ಲಿನ ಮುಖ್ಯಮಂತ್ರಿಗಳಾಗಿದ್ದ ಮೋದಿಯವರನ್ನು ಭೇಟಿಯಾಗುವ ಉತ್ಕಟ ಬಯಕೆಯೊಂದು ನಮ್ಮ ಮನಸ್ಸಿನಲ್ಲಿ ಮೂಡಿತು.ಹೇಗೊ ಅವರ ಅಧಿಕೃತ ಈ-ಮೇಲ್ ವಿಳಾಸವನ್ನು ಸಂಪಾದಿಸಿ, ನಾವು ನಮ್ಮ ಪರಿಚಯವನ್ನು ಬರೆದು ತಮ್ಮನ್ನು ಭೇಟಿಯಾಗಲು ಬಯಸಿದ್ದೇವೆ ಎಂದು ಮಿಂಚಚೆ ಕಳುಹಿಸಿದೆವು.ಆಶ್ಚರ್ಯವೆಂದರೆ, ಮಿಂಚಚೆ ಕಳಿಸಿದ ಕೆಲವೇ ಕ್ಷಣದಲ್ಲಿ ಮೋದಿ ಕಛೇರಿಯಿಂದ,'ನಿಮಗೆ ಭೇಟಿಯಾಗಲು ಅವಕಾಶ ಮಾಡಿಕೊಡಲಾಗಿದೆ,ಸಂಜೆ 4.30ಕ್ಕೆ ಸಮಯನಿಗದಿಪಡಿಸಲಾಗಿದೆ
ಎಂಬ ಮರುಸಂದೇಶ ಬಂದಿತ್ತು.ದಿನದ 18 ತಾಸು ಬ್ಯುಸಿಯಾಗಿರುವ ವ್ಯಕ್ತಿ ನಮ್ಮಂತ ಸಾಮಾನ್ಯ ಪತ್ರಕರ್ತರಿಗೆ ಸಮಯ ಕೊಡುತ್ತಾರೆಂಬ ನಂಬಿಕೆ ನಮ್ಮಲ್ಲಿರಲಿಲ್ಲ.ಆದರೆ ನಮ್ಮ ಯೋಚನೆ ತಪ್ಪಾಗಿತ್ತು.ನಿಗದಿತ ಸಮಯಕ್ಕೆ ಮೋದಿಯವರ ಕಛೇರಿಗೆ ಹೋದೆವು.ನಾವು ಅವರ ಕಛೇರಿಯ ಒಳಗೆ ಪ್ರವೇಶಿಸುತ್ತಿದ್ದಂತೆ ಮೋದಿಯವರು ಎದ್ದು ನಿಂತು,'ಬನ್ನಿ. .ಕುಳಿತುಕೊಳ್ಳಿ' ಎಂದರು.ನಾವು ಕುಳಿತ ಮೇಲೆ ಅವರು ಕುಳಿತುಕೊಂಡರು.ಸುಮಾರು ಇಪ್ಪತ್ತು ನಿಮಿಷ ನಮಗಾಗಿ ತಮ್ಮ ಅಮೂಲ್ಯ ಸಮಯವನ್ನು ನೀಡಿದರು.ಒಬ್ಬ ಸರಕಾರಿ ಜವಾನನಿಗೂ ಬಾರದ ಸೌಜನ್ಯತೆಯನ್ನು ಒಂದು ರಾಜ್ಯದ ಮುಖ್ಯಸ್ಥರಲ್ಲಿ ಕಂಡು ನಾವು ಅಕ್ಷರಶಃ ಮೂಕವಿಸ್ಮಿತರಾಗಿದ್ದೆವು.ಇಪ್ಪತ್ತು ನಿಮಿಷಗಳಲ್ಲಿ ಮೋದಿ ನಮ್ಮನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದರು.ಇದು ನನ್ನ ಜೀವನದಲ್ಲಿ ಅವಿಸ್ಮರಣೀಯ ಕ್ಷಣ.ಈ ಭೇಟಿಯಿಂದ ಮೋದಿಯವರ ಬಗೆಗಿನ ನಮ್ಮ ಅಭಿಮಾನ ನೂರ್ಮಡಿಯಾಯಿತು'.ಎಂದು ಸಂತೋಷ್ ತಮ್ಮಯ್ಯನವರು ನನ್ನ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಾಗ ನನಗೂ ಮೋದಿಯವರ ಮೇಲಿನ ಅಭಿಮಾನ ನೂರ್ಮಡಿಯಾಯಿತು. ಮೋದಿ ಜೊತೆ ತಮ್ಮಯ್ಯನವರು ತೆಗೆಸಿಕೊಂಡ ಫೋಟೋವನ್ನು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಕವರ್ ಫೋಟೋವಾಗಿ ಹಾಕಿಕೊಂಡಿದ್ದಾರೆ.ಮೋದಿಯವರ ಬಗ್ಗೆ ನಾವು ತಿಳಿಯಬೇಕಾದ್ದು ಸಾಕಷ್ಟಿದೆ.ಸ್ವಲ್ಪ ತಿಳಿಸಿಕೊಟ್ಟ ತಮ್ಮಯ್ಯ ಸರ್ ಗೆ ನನ್ನ ಕೃತಜ್ಞತೆಗಳು. ..

-@ಯೆಸ್ಕೆ

Rating
No votes yet

Comments

Submitted by ಗಣೇಶ Fri, 11/21/2014 - 00:01

ಬರೀ ಮಿಂಚಂಚೆಗೇ ಸ್ಪಂದಿಸಿದ ಮೋದಿ.ಎಲ್ಲಾ ರಾಜಕಾರಣಿಗಳು ಮೋದಿಯಿಂದ ಕಲಿಯಬೇಕಾದದ್ದು ಬಹಳವಿದೆ. ಅಧಿಕಾರದ ಅಮಲು ತಲೆಗೇರದ ಮೋದಿಗೆ ಜೈ. ಈ ಘಟನೆಯನ್ನು ನಮಗೂ ತಿಳಿಸಿದ ಸುನಿಲ್‌ಗೆ ಧನ್ಯವಾದಗಳು.