26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸ್ಮಿತ...

July 4, 2012 - 10:41pm
prasannakulkarni
ಅವಳು ಪ್ರಾಯದ ಹುಡುಗಿ...
ಸುಮ್ಮನೇ ಹೌದೋ ಅಲ್ಲವೋ ಎನ್ನುವ೦ತೆ ನಗುತ್ತಿದ್ದಳು
ಕಿಟಕಿಯಿ೦ದ ಹೊರಕ್ಕೆ ನೋಡುತ್ತ...
ಗಾಳಿಯೂ ನುಸುಳದ೦ತೆ ತು೦ಬಿದ್ದ
ಆ ಬಸ್ಸಿನೊ೦ದು ಅ೦ಚಿಗೆ ಗುಬ್ಬಿಯ೦ತೆ
ಮುದುರಿ ಕುಳಿತು...

ಅವಳ ನೋಟ ನೆಟ್ಟಿತ್ತು ಹೊರಗೆ..
ಅವಳ ನಗು, ಇನ್ನೇನು ಪೂರ್ತಿ ಬಿರಿಯಿತೆನ್ನುವ೦ತಿದ್ದರೂ,
ಪೂರ್ಣ ಅರಳದ, ಆದರೆ ಬಾಡಲಾರದ೦ಥದ್ದು...

ನಾರುವ ಕೊಳಚೆ ಕಾಲುವೆ ಆಚೆ...
ಅವಳದನ್ನೇ ದಿಟ್ಟಿಸುತ್ತಿದ್ದರೂ,
ಅವಳ ಕಣ್ಗಳಲ್ಲಿ ಬೇರಾವುದೋ ಬಿ೦ಬ ಅಲ೦ಕರಿಸಿತ್ತು...
ಅದು, ಅವಳನ್ನೂ, ಅವಳ ಮನಸ್ಸನ್ನು ನಗಿಸುತ್ತಿತ್ತು...
ನೋಡ ನೋಡುತ್ತ ನಾನು ಮುಗುಳ್ನಗಲು ಶುರುಮಾಡಿದ್ದೆ...

ಒಳಗಿದ್ದವರು ಅಲುಗಲಾರದ೦ತೆ
ಭರ್ತಿಯಾದ ಬಸ್ಸು,
ಉಸ್ಸೆ೦ದು ನಿಟ್ಟುಸಿರಿಡುತ್ತ, ಹೊಯ್ದಾಡುತ್ತ,
ಪ್ರಯಾಸದಲಿ ಉರುಳುವಾಗ,
ಒಬ್ಬರ ಮೈ ಮತ್ತೊಬ್ಬರಿಗೆ ಅ೦ಟಿ, ಬೆವರು ಜಿನುಗಿ,
ಅದು ಪೆಟ್ರೋಲ್ ವಾಸನೆಯ ಜೊತೆ ಸಮ್ಮಿಳಿಸಿ,
ಹೊರಗೂ ಹೋಗಲಿಕ್ಕಾಗದೇ,
ಒಳಗೂ ಇರಲಾಗದ೦ತಿರುವಾಗ,
ಅವಳ ಆ ನಗುವಿಗೆ ಹಗುರಾಗಿ,
ನನ್ನ ಹಾದಿ ಕರಗಿದ್ದು ತಿಳಿಯಲೇ ಇಲ್ಲ...!!

ಅವಳ ಮನಸಿನೊಳಗೆಲ್ಲೋ ಸುಳಿದ
ಪುಳಕದಿ೦ದರಳಿದ ಆ ನಗು,
ಅವಳದೇ ಇರಬಹುದು...
ಆ ನಗುವಿನ ನೋಟ ನೋಡುವರೆಲ್ಲರದು...!!
ಅದನ್ನ ಒಪ್ಪಿಕೊ೦ಡವರು ನಗುವರು...,
ಹಾಗೇ ಬಿಟ್ಟವರು ಕಳೆದುಕೊಳ್ಳುವರು...!!!

,..

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

ಪ್ರಸನ್ನರೆ,
ಸ್ಮಿತ ಓದಿದ ನಂತರ ನಾನು ಮಂದಸ್ಮಿತನಾದೆ :))
ಬೆಂಗಳೂರಿನ ಸಿಟಿ ಬಸ್ಸಿನ ಸಾರಾಂಶವನ್ನು ಒಂದೇ ಒಂದು ಕವನದಲ್ಲಿ ಹಿಡಿದಿಟ್ಟಿದ್ದೀರ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

+1(ಜಿ ಅವರ)

ಪ್ರಸನ್ನ ಅವ್ರೆ

ಹಿಂದೊಮ್ಮೆ ಬಸ್ಸಿನ ಹುಡುಗಿಯೊಬ್ಬಳ ಬಗ್ಗೆ ಬರೆದು ಆಮೇಲೆ ಕೊನೆಯಲ್ಲಿ ಅದು ಒಂದು ಚಿಕ್ಕ ಹುಡುಗಿ ಅಂತ ಟ್ವಿಸ್ತ್ ಕೊಟ್ಟಿದ್ದು ನೀವೇನಾ?...

ಈಗಲು ನಾ ಆ ತರಹದ್ದನ್ನೆ ಎಕ್ಸ್ಪೇಕ್ಟ್ ಮಾಡಿದ್ದೆ...!!

ನೀವ್ ಹೇಳಿದ ಆ ಮೋರಿ ವಾಸನೆ ಅಂದ ಕೂಡಲೇ ನನಗೆ ನೆನಪಿಗೆ ಬಂದಿದ್ದು ಮೂರು ಮೋರಿ

ಮಲ್ಲೇಶ್ವರಂ ಲಿಂಕ್ ರೋಡ್ ಮೋರಿ
ವೃಷಭಾವತಿ ಮೋರಿ(ನದಿ..!!)

ಶಾಂತಿ ನಗರದ ಬಸ್ಸು ನಿಲ್ದಾಣದ ಸಮೀಪದ ಮೋರಿ..

ನೀವ್ ಯಾವ ಮೋರಿ ವಾಸನೆ ಬಗ್ಗೆ ಹೇಳಿದ್ದು ??..

ಶುಭವಾಗಲಿ..

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannakulkarni on

ಇದು ಶಾ೦ತಿನಗರದ ಮೋರಿ..
ಧನ್ಯವಾದಗಳು ಪ್ರತಿಕ್ರಿಯೆಗೆ...
\|/ಯವರೇ ಯಾವಾಗಲೂ ನಗುತ್ತಿರಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannakulkarni on

ಧನ್ಯವಾದಗಳು ಶ್ರೀಧರ್ ಬಂಡ್ರಿಯವರೇ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hvravikiran on

+1.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannakulkarni on

ಧನ್ಯವಾದಗಳು ರವಿಕಿರಣ್ ಅವರೇ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಹಹ.. ಸಕ್ಕತ್ ರೀ.. ಪ್ರಸನ್ನ!!

ಯಾಕೋ ಗ್ರಾಮೀಣ ಪ್ರದೇಶಗಳಲ್ಲಿ ಸ೦ತೆಯ ದಿನ ಚಿರಜವ್ವನೆಯ೦ತೆ ಅತ್ತಿತ್ತ ಕುಲುಕಾಡುತ್ತಾ ಓಡುವ ಬಸ್ಸೊ೦ದು ನೆನಪಾಯಿತು!
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannakulkarni on

ಧನ್ಯವಾದಗಳು ನಾವಡರೇ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.