ಟೊರೊಂಟೋದ ಬಹುಮಹಡಿ ಕಟ್ಟದ ಬಗ್ಗೆ ಬರೆಯುತ್ತಾ ವೆಂಕಟೇಶ್ ಸರ್ ಅವರು ಭಾರತೀಯರ ಗೊಣಗುವ ಸ್ವಭಾವದ ಬಗ್ಗೆ ಬರೆದಿದ್ದಾರೆ. http://sampada.net/b... ಆಗ ನೆನಪಾದದ್ದೇ ನಮ್ಮ ಜಮಾನದಲ್ಲಿ ಪ್ರಚಲಿತವಿದ್ದ ಈ ಹಳೆಯ ಹಾಸ್ಯ ತುಣುಕು, ಹೌದೆನಿಸಿದರೆ ಒಮ್ಮೆ ನಕ್ಕು ಬಿಡಿ.
ಒಂದು ಪ್ರವಾಸಿ ಕೇಂದ್ರದಲ್ಲಿ ಹೋಟೆಲ್ಲೊಂದು ಇತ್ತು, ಅದರಲ್ಲೇನು ವಿಶೇಷ ಅಂದಿರಾ, ಅಲ್ಲೋ ನೊಣಗಳದು ವಿಪರೀತ ಉಪಟಳ. ಇದ್ದದ್ದು ಒಂದೇ ಹೋಟೆಲ್ಲಾದ್ದರಿಂದ ಎಲ್ಲಾ ಪ್ರವಾಸಿಗಳು ಅಲ್ಲಿಗೇ ಬರಬೇಕಾಗಿತ್ತು. ಅಲ್ಲಿಗೆ ಅಮೇರಿಕದ ಪ್ರಜೆಯೊಬ್ಬ ಚಹಾ ಕುಡಿಯಲೆಂದು ಬಂದ. ಅವನ ಚಹಾ ಕಪ್ಪಿನಲ್ಲಿ ಅಕಸ್ಮಾತ್ತಾಗಿ ಒಂದು ನೊಣ ಬಂದು ಬಿತ್ತು; ಅವನ ಅಮೇರಿಕನ್ ಸ್ವಭಾವದಂತೆ, ಛೀ! ಗಲೀಜು ಎಂದು ಚಹಾವನ್ನು ಚೆಲ್ಲಿ ಹೊರಟು ಹೋದ. ನಂತರ ಅಲ್ಲಿಗೆ ಒಬ್ಬ ಬ್ರಿಟೀಷ್ ಪ್ರಜೆ ಬಂದ, ಅವನ ಕಪ್ಪಿನಲ್ಲೂ ಒಂದು ನೊಣ ಬಂದು ಬಿತ್ತು; ತನ್ನ ದರ್ಪಕ್ಕನುಗುಣವಾಗಿ ಅವನು ಬೇರೆ ಚಹಾ ತರಿಸಿಕೊಂಡು ಕುಡಿದ. ತದನಂತರ ಅಲ್ಲಿಗೆ ಬಂದದ್ದು ಒಬ್ಬ ಭಾರತೀಯ ಪ್ರವಾಸಿ; ಆಕಸ್ಮಿಕವಾಗಿ ಅವನ ಕಪ್ಪಿನಲ್ಲೂ ಒಂದು ನೊಣ ಬಂದು ಬಿತ್ತು. ಅವನು ಸ್ವಚ್ಛತೆಯ ಬಗ್ಗೆ ಗೊಣಗುತ್ತಲೆ, ನೊಣವನ್ನು ತೆಗೆದು ಚಹಾ ಸೇವಿಸಿ ಹೊರಟು ಹೋದ. ಇವರೆಲ್ಲರೂ ಹೋದಮೇಲೆ ಅಲ್ಲಿಗೆ ಬಂದದ್ದು ಒಬ್ಬ ಚೀನಿ ಪ್ರವಾಸಿ; ಯಥಾಪ್ರಕಾರ ಅವನ ಕಪ್ಪಿನಲ್ಲೂ ನೊಣವೊಂದು ಬಂದು ಬಿತ್ತು. ಮೊದಲು ನೊಣವನ್ನು ತಿಂದು ಆಮೇಲೆ ಚಾ ಕುಡಿದು ಸಂತೋಷದಿಂದ ಅಲ್ಲಿಂದ ಹೊರಟ.
ಸ್ವಭಾವ: ಜಮಾನಾದ ಜೋಕುಗಳು - ೨
July 7, 2012 - 10:43am
ಸರಣಿ:
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಸ್ವಭಾವ: ಜಮಾನಾದ ಜೋಕುಗಳು - ೨
ವೆಂಕಟೇಶ್ ಸರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಆದರೆ ಈ ಕೆಳಗಿನದು ಯಾರನ್ನು ಉದ್ದೇಶಿಸಿ ಹೇಳಿದ್ದೀರೆಂದು ಅರ್ಥವಾಗಲಿಲ್ಲ.
<<ಅಬ್ಬಬ್ಬ ಎಲ್ಲಿ ನೋಡಿದ್ರೂ ಅವರೆ. ಇಲ್ಲೂ ಅಷ್ಟೇ. ಅಮೆರಿಕಾದಲ್ಲೂ !>>
ಉ: ಸ್ವಭಾವ: ಜಮಾನಾದ ಜೋಕುಗಳು - ೨
ಜೀ,,,
ಸಖತ್ ....
ನೋಣ ಛಿತ್ರ(ಈಗ) ಬನ್ದಾಗಲೆ ಆ ಬಗ್ಗೆ ಬರೆದದ್ದು ವಿಶೆಷ....!!
>0<=
\|/
ಉ: ಸ್ವಭಾವ: ಜಮಾನಾದ ಜೋಕುಗಳು - ೨
"ಈಗ" ಚಿತ್ರ ಬೆಂಗಳೂರಿನಲ್ಲೂ ಈಗಲೇ ಬಿಡುಗಡೆಯಾಗಿದೆಯಾ? ಅಲ್ಲಿ ಪರಭಾಷಾ ಚಿತ್ರಗಳನ್ನು ಮೂರು ವಾರಗಳ ತನಕ ರಿಲೀಸ್ ಮಾಡಬಾರದೆನ್ನುವ ನಿಯಮವಿದೆಯಲ್ಲವೇ?
ಜೋಕ್ ಮೆಚ್ಚುಗೆಯಾದದ್ದಕ್ಕೆ ನನಗೂ :)). ಧನ್ಯವಾದಗಳು, ಸಪ್ತಗಿರಿ.
ಉ: ಜಮಾನಾದ ಜೋಕುಗಳು ೨:ಮೂರು ವಾರಗಳ ತನಕ ರಿಲೀಸ್..!!
" ಪರಭಾಷಾ ಚಿತ್ರಗಳನ್ನು ಮೂರು ವಾರಗಳ ತನಕ ರಿಲೀಸ್ ಮಾಡಬಾರದೆನ್ನುವ ನಿಯಮವಿದೆಯಲ್ಲವೇ?"
ಜಿ,,,,
ನಿಯಮ ಇರುವುದೆ, ಮುರಿಯಲು ಅಲ್ಲವೆ...:())))
ಕಾಯ್ದೆ ಮಾಡುವವರು ನಾವೆ , ಉಲ್ಲ0ಘಿಸುವವರು ನಾವೆ...:(((
ಅಥವ ಕನ್ನಡ ನಟ ಇರುವನು ಅನ್ತ ಹಾಗಾಯ್ತ?....!!
\|/
ಉ: ಜಮಾನಾದ ಜೋಕುಗಳು ೨:ಮೂರು ವಾರಗಳ ತನಕ ರಿಲೀಸ್..!!
.ಶಾಸ್ತ್ರಗಳನ್ನೇ ನಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸಿಕೊಳ್ಳುವಾಗ ಈ ಚಿತ್ರರಂಗದ ಕಾಯಿದೆಗಳೇನು ಮಹಾ ಅಲ್ವೆ? ನಿಮ್ಮ ಮಾತು ನಿಜ ಸಪ್ತಗಿರಿಗಳೇ, ರೂಲ್ಸ್ ಆರ್ ಫ್ರೇಮ್ಡ್ ಟು ಬ್ರೇಕ್ ದೆಮ್"
ಉ: ಸ್ವಭಾವ: ಜಮಾನಾದ ಜೋಕುಗಳು - ೨
ವ್ಹಾ..ಕ್ :(
ಜೋಕ್ ಚೆನ್ನಾಗಿದೆ.
-ಗಣೇಶ.
ಉ: ಸ್ವಭಾವ: ಜಮಾನಾದ ಜೋಕುಗಳು - ೨
ವ್ಹಾ..ಕ್ :( ...... ಏನು ಮಾಡೋದು ಸ್ವಾಮಿ, "ಒನ್ ಮ್ಯಾನ್ಸ್ ಫುಡ್ ಈಸ್ ಅನಧರ್ ಮ್ಯಾನ್ಸ್ ಪಾಯ್ಸನ್". ಹೋಗಲಿ ಬಿಡಿ ಜೋಕ್ ಚೆನ್ನಾಗಿದೆಯಲ್ಲಾ ಗುರುಗಳೆ ಅದನ್ನು ಎಂಜಾಯ್ ಮಾಡೋಣ. ಮೆಚ್ಚುಗೆ ವ್ಯಕ್ತ ಪಡಿಸಿದ್ದಕ್ಕೆ ಧನ್ಯವಾದಗಳು ಗಣೇಶ್..ಜಿ.
ಉ: ಸ್ವಭಾವ: ಜಮಾನಾದ ಜೋಕುಗಳು - ೨
ಆತ್ಮೀಯ ಶ್ರೀಧರ್,
ಹೋಟೆಲ್ಲಿಗೆ ಹೋದ ನಂಬರ್ ಒನ್ ಕ್ಲೀನ್, ಟೀ ಕೇಳಿದ. ಹೋಟೆಲ್ ಮಾಣಿ ಟೀ ತಂದಿಟ್ಟ. ನೋಡಿದರೆ ಟೀ ಒಳಗೆ ನೊಣ. ದರ್ಪದಿಂದ ಮಾಣಿಯನ್ನು ಕರೆದು " ಏನಿದು? ಟೀಯೊಳಗೆ ನೊಣ ಇದೆ, ನೋಡೋಕ್ಕಾಗೊಲ್ವ? " ಎಂದು ಗದರಿದ. ಅಷ್ಟೇ ದರ್ಪದಿಂದ ಮಾಣಿ ಉತ್ತರಿಸಿದ. " ನೀವು ಕೊಡೊ ಐದು ರುಪಾಯಿಗೆ ಇನ್ನೇನು ಆನೆ ತಂದು ಟೀ ಒಳಗೆ ಹಾಕೋಕ್ಕೆ ಆಗುತ್ತಾ? " ನಮ್ಮ ನಂಬರ್ ಒನ್ ಕ್ಲೀನ್ ಬೇಹೋಶ್.
ನಿಮ್ಮ ಜೋಕಿನೋಟ್ಟಿಗೆ ಇದೊಂದು ಸೇರ್ಪಡೆ. ಧನ್ಯವಾದಗಳು.
ಪ್ರಕಾಶ್
ಉ: ಸ್ವಭಾವ: ಜಮಾನಾದ ಜೋಕುಗಳು - ೨
ನಿಮ್ಮ ಜೋಕ್ ಕೂಡಾ ಚೆನ್ನಾಗಿದೆ ಪ್ರಕಾಶ್ ಅವರೆ, ಧನ್ಯವಾದಗಳು.
ಉ: ಸ್ವಭಾವ: ಜಮಾನಾದ ಜೋಕುಗಳು - ೨
:) :) :)
ವೆಜ್ ನಾನ್ವೆಜ್ ಒಂದ್ರಲ್ಲೇ, ಲಾಟರಿ ಅವ್ನಿಗೆ!
ಉ: ಸ್ವಭಾವ: ಜಮಾನಾದ ಜೋಕುಗಳು - ೨
ಹ್ಹ.ಹ್ಹ...ಹ್ಹಾ...ನಿನ್ನ ತಲೆ ಸೂಪರ್ರೋ..ಸೂಪರ್ರು..ಚಿಕ್ಕೂ :))