ಹಣ್ಣಾದ ಹೂಗಳು..(ರಿಪಬ್ಲಿಕ್ ಡೇ ಫ್ಲವರ್ ಶೋ ೨೦೧೪)

ಹಣ್ಣಾದ ಹೂಗಳು..(ರಿಪಬ್ಲಿಕ್ ಡೇ ಫ್ಲವರ್ ಶೋ ೨೦೧೪)

ಚಿತ್ರ

 ರಿಪಬ್ಲಿಕ್ ಡೇ ಫ್ಲವರ್ ಶೋ ಈ ಬಾರಿ ನೋಡಲಾಗುವುದಿಲ್ಲ ಅಂದುಕೊಂಡಿದ್ದೆ. ಅದೇ ದಿನ ಎರಡು ಸಮಾರಂಭಗಳಿದ್ದವು. ಹತ್ತಿರದ ಒಂದು ಫಂಕ್ಷನ್‌ಗೆ ಮನೆಯಾಕೆಗೆ ಹೋಗಲು ಹೇಳಿ, ಇನ್ನೊಂದಕ್ಕೆ ಆ ದಿನ ಬೆಳಗ್ಗೆ ಬೇಗನೆ ಹೊರಟೆನು. ಲಾಲ್‌ಬಾಗ್ ಹತ್ತಿರ ಬಂದಾಗ ಮನಸ್ಸು ಕೇಳಲೇ ಇಲ್ಲ- ಶಾಂತಿನಗರದ ಬಸ್ ಸ್ಟಾಪ್‌ನ ಪಾರ್ಕಿಂಗ್ ಏರಿಯಾದಲ್ಲಿ ಬೈಕ್ ಪಾರ್ಕ್ ಮಾಡಿ, ಲಾಲ್ ಬಾಗ್‌ಗೆ ಹೋದೆನು.
ಟಿಕೆಟ್ ಕೌಂಟರ್ ಖಾಲಿ ಖಾಲಿ ನೋಡಿ ಆಶ್ಚರ್ಯವಾಯಿತು. ಗಾಜಿನಮನೆಯೊಳಗೂ ರಶ್ ಇಲ್ಲ!ಬೇಗನೆ ಫ್ಲವರ್ ಶೋ ನೋಡಿ ಫಂಕ್ಷನ್‌ಗೆ ಹೋಗಬಹುದು ಅಂದುಕೊಂಡೆ.
 ವೆರೈಟಿ ವೆರೈಟಿ ಹಣ್ಣುಗಳು-ಹೂವಲ್ಲಿ ಮಾಡಿದ್ದರು. ಅದಕ್ಕೆ ಮುಖದ ಆಕಾರ ಕೊಟ್ಟು ಮುದ್ದಾಗಿ ಮಾಡಿದ್ದರು-ಮಕ್ಕಳಂತೂ ಬಹಳ ಖುಷಿಪಡುತ್ತಿದ್ದರು. ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್-ಕ್ಯಾಮರಾ ಇದ್ದುದರಿಂದ,ಎಲ್ಲಿ ನೋಡಿದರೂ ಫೋಟೋ ತೆಗೆಯುವವರೇ- ಹೂಗಳು ಸಿನೆಮಾಸ್ಟಾರ್‌ಗಳಂತೆ ಮಿಂಚಿದ್ದೇ ಮಿಂಚಿದ್ದು. ನೋಡುತ್ತಾ ಇದ್ದ ಹಾಗೇ ನಾನು ಫ್ಲಾಶ್ ಬ್ಯಾಕ್‌ಗೆ ಹೋದೆ.
೮೦-೮೫ರ ಕಾಲದಲ್ಲಿ ಫೋಟೋ ತೆಗೆಯುತ್ತಿದ್ದುದು ನೆನಪಾಯಿತು. ಯಾರೂ ಅಡ್ಡಬರದಂತೆ ನಿಂತುಕೊಂಡು, ಕೆಲವರಿಗೆ ಪಕ್ಕಕ್ಕೆ ಸರಿಯಲು ರಿಕ್ವೆಸ್ಟ್ ಮಾಡಿ, ಬೆಳಕು -  ಆಂಗ್‌ಲ್ ಎಲ್ಲಾ ಅಂದಾಜು ಮಾಡಿ, ಕ್ಲಿಕ್ ಮಾಡಿ, ರೀಲು ಮುಗಿದ ಮೇಲೆ- ಡೆವಲಪ್ ಮಾಡಲು ಕೊಟ್ಟು-ವಾರಗಟ್ಟಲೆ ಕಾದು- ಫೋಟೋಗಳನ್ನು ಕೊಂಡು ನೋಡಿ-ಉಳಿದವರಿಗೆ ತೋರಿಸಿದರೆ "ಈ ಬೇಲಿ ಬದಿ ಹೂವನ್ನು ಏನೂಂತ ತೆಗೆದಿದ್ದಿ? ದುಡ್ಡು ವೇಸ್ಟ್" ಅನ್ನುತ್ತಿದ್ದರು. ಹೆಂಡತಿಯ ಅಥವಾ ಮಕ್ಕಳ ಪಕ್ಕದಲ್ಲಿ ಹೂವಿನ ಚಿತ್ರವಿದ್ದರೆ ಮಾತ್ರ ಅದಕ್ಕೆ ಬೆಲೆ.
ಈವಾಗ ಡಿಜಿಟಲ್ ಯುಗ. ಯಾರು ಅಡ್ಡನೀಟ ಹೋಗುತ್ತಿದ್ದರೂ ಚಿಂತಿಲ್ಲ. ಕ್ಲಿಕ್ ಕ್ಲಿಕ್ ಕ್ಲಿಕ್..ಅಲ್ಲೇ ನೋಡಿ ಸರಿಬರಲಿಲ್ಲ-ಡಿಲೀಟ್. ಅಲ್ಲಿಂದಲೇ- ವಾಟ್ಸಪ್- ಫ್ರೆಂಡ್ಸ್‌ಗೆ ತೋರಿಸಿ, ಅವರ ಮೆಚ್ಚುಗೆ ಬಂದೂ ಆಯಿತು!
ಗಾಜಿನಮನೆಯಿಂದ ದೊಡ್ಡಕಲ್ಲಿನ ಬಳಿ ಹೋಗುವಾಗ ರಸ್ತೆಬದಿಯಲ್ಲಿ ಗಿಡಗಳನ್ನು (ಹೂವಿನದಲ್ಲ)ಮಾರಾಟಕ್ಕಿಟ್ಟಿದ್ದರು(ಕೊನೆಯೆರಡು ಚಿತ್ರಗಳು). ರೇಟು ನೋಡಿದರೆ ೮೦೦೦ರೂನಿಂದ ೧೫೦೦೦!!
ಎಲ್ಲಾ ಸುತ್ತಾಟದಲ್ಲಿ ಸಮಯ ಹೋದುದೇ ಗೊತ್ತಾಗಲಿಲ್ಲ. ಪಂಕ್ಷನ್ ಕ್ಯಾನ್ಸಲ್ ಮಾಡಿ ಮನೆಗೆ ಹಿಂತಿರುಗಿದೆ. ಹೊಟ್ಟೆ ತಾಳ ಹಾಕುತ್ತಿತ್ತು.

Rating
No votes yet

Comments

Submitted by nageshamysore Mon, 02/10/2014 - 03:08

ಗಣೇಶ್ ಜಿ, ಪೋಟೊಗಳಲ್ಲೆ ಮಾಡಿರೊ ಆಕಾರಗಳೆಲ್ಲ ಮುದ್ದಾಗಿ ಕಾಣಿಸುತ್ತಿವೆ. ಬಹುಶಃ ನೀವು ಬೇಗ ಹೋದ ಕಾರಣ ಜನಸಂದಣಿ ಕಮ್ಮಿಯಿತ್ತೇನೊ? ಕ್ಯಾಮರ ಬಗ್ಗೆ ನೀವು ಹೇಳಿದ್ದು ನಿಜ - ಈಗೆಲ್ಲಾ ವೇಗದ ಮುಂದೆ ಆ ಹಳೆಯ ರೀತಿ ನೆನೆಸಿಕೊಂಡರೆ - ಅಬ್ಬಾ! ಎಷ್ಟು ಬದಲಾವಣೆ? ಆಗ ನೆಟ್ಟಗೆ ತೆಗೆದಿರಲಿ ಸೊಟ್ಟಗೆ ತೆಗೆದಿರಲಿ ಪ್ರಿಂಟು ಹಾಕುವವರೆಗೂ ತಿಳಿಯುತ್ತಿರಲಿಲ್ಲ! ಪ್ರಿಂಟು ಹಾಕಿದ ಮೇಲಂತೂ ಕಾಸು ತೆರಲೇಬೇಕಲ್ಲ? ಈಗೆಲ್ಲ ಡಿಜಿಟಲ್ ಜಮಾನ - ಯಾರು ಬೇಕಾದರೂ ಪೋಟೊ ತೆಗೆಯಬಹುದು ಮೊಬೈಲಿನಲ್ಲಿ. ಬದಲಾಗದೆ ಇದ್ದದ್ದೆಂದರೆ ಆ ಹೂವಿನ ಕುರಿತಾದ ಸೌಂದರ್ಯ ಪ್ರಜ್ಞೆ, ಆದರ, ಪ್ರೇಮ. ಗಣರಾಜ್ಯೋತ್ಸವಕ್ಕೆ ಇದ್ದನ್ನು ಸಹನೆ ಕಾಳಜಿಯಿಂದ ಸಿದ್ದಪಡಿಸಿದ ಹಿನ್ನಲೆ ವ್ಯಕ್ತಿಗಳಿಗೆ ಅಭಿನಂಧನೆಗಳು :-)
- ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

Submitted by ಗಣೇಶ Mon, 02/10/2014 - 23:27

In reply to by nageshamysore

>>ಬದಲಾಗದೆ ಇದ್ದದ್ದೆಂದರೆ ಆ ಹೂವಿನ ಕುರಿತಾದ ಸೌಂದರ್ಯ ಪ್ರಜ್ಞೆ, ಆದರ, ಪ್ರೇಮ. ಗಣರಾಜ್ಯೋತ್ಸವಕ್ಕೆ ಇದ್ದನ್ನು ಸಹನೆ ಕಾಳಜಿಯಿಂದ ಸಿದ್ದಪಡಿಸಿದ ಹಿನ್ನಲೆ ವ್ಯಕ್ತಿಗಳಿಗೆ ಅಭಿನಂಧನೆಗಳು :-)
ನಾಗೇಶರೆ,ಆ ಹಿನ್ನಲೆ ವ್ಯಕ್ತಿಗಳಲ್ಲಿ ಕೆಲವರನ್ನು ಈ ಕೊಂಡಿಯಲ್ಲಿ ಕಾಣಬಹುದು‍ http://www.udayavanienglish.com/news/420710L14-Annual-Republic-Day-Flowe...

Submitted by nageshamysore Tue, 02/11/2014 - 02:57

In reply to by ಗಣೇಶ

ಗಣೇಶ್ ಜಿ ಸುಪರ್ ! ಕೊಂಡಿಯಲ್ಲಿ ಚಿತ್ರ ನೋಡಿದರೆ ಇಡೀ ಸಿದ್ದತೆಯ ಚಿತ್ರಣವೆ ಕಣ್ಮುಂದೆ ಬಂದು ನಿಂತುಬಿಡುತ್ತದೆ!

Submitted by kavinagaraj Tue, 02/11/2014 - 08:27

ಸುಂದರ ಅನುಭವದ ಸುಂದರ ನಿರೂಪಣೆ, ಗಣೇಶರೇ. ವಂದನೆಗಳು.
ಎರಡಕ್ಕಿಂತ ಹೆಚ್ಚು ಫೋಟೋಗಳನ್ನು ನನಗೆ ಹಾಕಲಾಗುತ್ತಿಲ್ಲ. ಮುನ್ನೋಟದಲ್ಲಿ ಎಲ್ಲಾ ಫೋಟೋಗಳು ಕಾಣಿಸುತ್ತವೆ. ಪ್ರಕಟಿಸಿದಾಗ ಎರಡು ಫೋಟೋಗಳು ಮಾತ್ರ ಬರುತ್ತವೆ. ಹೇಗೆ ಹಾಕುವುದು ಅನ್ನುವ ಬಗ್ಗೆ ಸಲಹೆ ಕೊಡುವಿರಾ?

Submitted by ಗಣೇಶ Tue, 02/11/2014 - 23:36

ಕವಿನಾಗರಾಜರೆ,
ತಾವು http://sampada.net/%E0%B2%87%E0%B2%95%E0%B3%8D%E0%B2%95%E0%B3%87%E0%B2%B... ಮತ್ತು ನಾಗರಾಜು ನಾನಾ http://sampada.net/comment/185728#comment-185728 ಅವರು ಚಿತ್ರಗಳನ್ನು ಸೇರಿಸುವ ಬಗ್ಗೆ ಪ್ರಶ್ನಿಸಿದಾಗಲೇ ಉತ್ತರಿಸಬೇಕೆಂದಿದ್ದೆ. ಸಮಯವಾಗಲಿಲ್ಲ. ಹಿಂದೆಲ್ಲಾ ಪಿಕಾಸಾದಿಂದ ಫೋಟೋಗಳ url ನ್ನು ಕಟ್ ಪೇಸ್ಟ್ ಮಾಡಿ ಫೋಟೋಗಳನ್ನು ಹಾಕುತ್ತಿದ್ದೆ. ಈಗ ಚಿತ್ರಗಳನ್ನು ಸೇರಿಸುವುದು ಅದಕ್ಕಿಂತಲೂ ಸುಲಭ. (ನಾನು ಮಾಡುತ್ತಿರುವ ವಿಧಾನ ಹೇಳುವೆ. ಬೇರೆ ವಿಧವೂ ಇರಬಹುದು) ಕ್ಯಾಮರಾ ಫೋಟೋಗಳನ್ನು ಕಂಪ್ಯೂಟರ್‌ಗೆ ವರ್ಗಾಯಿಸುವೆ. ಬ್ಲಾಗ್ ಬರಹ ಸೇರಿಸುವಾಗ, "ಶೀರ್ಷಿಕೆ"ಯ ನಂತರ ಕೆಳಗೆ "ಚಿತ್ರ" ದ ವಿಭಾಗದಲ್ಲಿ Add a new file ಕೆಳಗೆ "Browse" ಒತ್ತಿ, ಚಿತ್ರ ಸಿಲೆಕ್ಟ್ ಮಾಡಿ "ಅಪ್ಲೋಡ್" ಒತ್ತುವೆ. ಪುನಃ ಇದೇ ಕ್ರಮದಲ್ಲಿ ಚಿತ್ರಗಳನ್ನು ಸೇರಿಸುತ್ತಾ ಹೋಗಬಹುದು. ಕೆಳಗಿನ ಚಿತ್ರವನ್ನು ಮೊದಲಿಗೆ ತರುವ, ಮೊದಲ ಚಿತ್ರವನ್ನು ಬೇರೆ ಕಡೆ ಹಾಕುವ ಸೌಲಭ್ಯವೂ ಇದೆ.
ತಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಾಗೇಶರಿಗೂ ಧನ್ಯವಾದಗಳು.

Submitted by kavinagaraj Wed, 02/12/2014 - 10:08

In reply to by ಗಣೇಶ

ನಾನೂ ಮಾಡಿದ್ದೂ ನೀವು ಹೇಳಿದ ಹಾಗೇನೇ. ಹಾಕಿದ ಚಿತ್ರಗಳೆಲ್ಲವೂ ಅಪ್ ಲೋಡ್ ಆದವು. ಮುನ್ನೋಟದ ಸಂಕ್ಷಿಪ್ತದಲ್ಲಿ ಎಲ್ಲಾ ಚಿತ್ರಗಳೂ ಕಂಡವು. ದೀರ್ಘ ಮುನ್ನೋಟದಲ್ಲಿ ಎರಡು ಚಿತ್ರಗಳು ಮಾತ್ರ ಕಂಡವು. ಎರಡು ಮೂರು ಸಲ ಹೀಗೆಯೇ ಆಯಿತು. ಸುಮ್ಮನಾಗಿಬಿಟ್ಟೆ. ಧನ್ಯವಾದ, ಗಣೇಶರೇ.

Submitted by ಗಣೇಶ Fri, 02/14/2014 - 00:18

In reply to by kavinagaraj

ಎರಡು ಮೂರು ಸಲಕ್ಕೆ ಬಿಟ್ಟುಬಿಡುವುದಲ್ಲ‌. ಪ್ರಯತ್ನ‌ ಬಿಡಬೇಡಿ, ಕೊನೆಗೆ ತಪ್ಪೆಲ್ಲಿ ಆಯ್ತು ಅಂತ‌ ನೀವೇ ಹೇಳುವಿರಿ.