18
June
2013

ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)

June 21, 2012 - 11:45pm
ಗಣೇಶ

"ದಯಮಾಡಿ ಕೊಲ್ಲಬೇಡಿ...ಪ್ಲೀಸ್.." ಎಂದು ಶರ್ಮಿಳಾ ಗೋಗರೆಯುತ್ತಿರುವಳು.

"ಹ್ಹ..ಹ್ಹ.."ಎಂದು ನಗುತ್ತಾ (ಎರಡು ಬಾರಿ ಬದಲು ನಾಲ್ಕು ಬಾರಿ ಹ್ಹ ಹ್ಹ ಇದ್ದರೆ ಒಳ್ಳೆಯ ಎಫೆಕ್ಟ್ ಇರುವುದು)

"ಹ್ಹಹ್ಹ..ಹ್ಹಹ್ಹಾ" ಎಂದು ನಗುತ್ತಾ (ಈಗ ಸರಿಯಾಗಿದೆ), ರಮೇಶ ಒಂದೊಂದೇ ಹೆಜ್ಜೆ..."ಶು..ಶೂ" (ಅರೆ "ಟಕ್ ಟಕ್" ಎಂದಾಗಬೇಕಿತ್ತಲ್ಲಾ.........?)

" ಹ್ಹಹ್ಹ..ಹ್ಹಹ್ಹಾ" ಎಂದು ನಗುತ್ತಾ, ರಮೇಶ ಒಂದೊಂದೇ ಹೆಜ್ಜೆ..."ಶು..ಶು..", ಪುನಃ ತಪ್ಪು ಶಬ್ದ ಬಂದಾಗ ಪಾರ್ಥಸಾರಥಿಯವರಿಗೆ ಕಿರಿಕಿರಿ ಎನಿಸಿ ಎಚ್ಚರವಾಗಿ ನೋಡುತ್ತಾರೆ..........

ಕಿಟಕಿಯಿಂದ ಸಪ್ತಗಿರಿವಾಸಿ "ಶು..ಶ್ಚು. ಶೂ..." ಎಂದು ಮೆಲ್ಲನೆ ಕರೆಯುತ್ತಿರುವನು!

ಪಾರ್ಥಸಾರಥಿಯವರು ಗಡಿಯಾರದ ಕಡೆ ನೋಡಿದರೆ ಸಮಯವಿನ್ನೂ ಎರಡು ಗಂಟೆ!

"ಐದು ಗಂಟೆಗೆ ಹೊರಡುವುದಲ್ಲಾ? ಈಗಲೇ ಯಾಕೆ ಬಂದೆ? ಒಳ್ಳೆಯ ಕೊಲೆ ಕೇಸ್.. ನಿನ್ನಿಂದಾಗಿ ಅಡ್ಜರ್ನ್ ಆಯಿತು" ಅಂದು ಕೋಪಿಸಿದರು ಪಾರ್ಥಸಾರಥಿಯವರು.

ಸಪ್ತಗಿರಿವಾಸಿ : ಸಾರಿ.. ಗುರುಗಳೇ..ಬೇಗನೆ ಹೊರಟರೆ ಬಿಸಿಲೇರುವುದರೊಳಗೆ ನಾವು ರೈಲ್ವೇ ಟ್ರಾಕ್‌ನಲ್ಲಿ ಅರ್ಧ ದಾರಿ ಕ್ರಮಿಸಿಯಾಗುವುದು. ಅದಕ್ಕೆ ಬಂದೆ."

ಪಾ : ಇಲ್ಲಿಂದಲೇ ನಡಕೊಂಡು ಹೋಗುವುದಾ!? ಸಕಲೇಶ್ಪುರದವರೆಗೆ ರಾಮ್ ಮೋಹನರ ಇಂಡಿಕಾ ಕಾರಲ್ಲಿ ಹೋಗುವುದು ಎಂದು ನಿನ್ನೆ ಹೇಳಿದ್ದಲ್ವಾ?

ಸ : ಗುರುಗಳೇ, ಅವರದ್ದು ಐಟೆನ್ ಕಾರು..

ಪಾ : ಯಾವುದೋ ಒಂದು.. ಅವರೂ ಬರಬೇಕಲ್ಲಾ?

ಸ : ಅವರನ್ನೆಲ್ಲಾ ಎಬ್ಬಿಸಿ, ಆಗಲೇ ಕರಕೊಂಡು ಬಂದಿದ್ದೇನೆ! ನೀವೊಬ್ಬರೇ ಬಾಕಿ ಅಷ್ಟೆ.

ಅವಸರದಲ್ಲಿ ಪಂಚೆ ಸಿಕ್ಕಿಸಿಕೊಂಡು ಪಾರ್ಥರು ಹೊರಬಂದು ನೋಡುತ್ತಾರೆ- ಕಾರಲ್ಲಿ ಚೇತನ್, ಜಯಂತ್, ರಾಮಮೋಹನರು ಒಬ್ಬರಿಗೊಬ್ಬರು ಒರಗಿ ನಿದ್ರಿಸುತ್ತಿದ್ದಾರೆ.

ಪಾ : ಸರಿ. ನಾನು ಮುಖ ತೊಳೆದು, ಹೊರಟು ಬರುವೆನು.

"ನಾಸ್ಟಾ ಎಲ್ಲಾ ಕಾರಲ್ಲೇ ರೆಡಿ ಇದೆ. ಉಳಿದುದನ್ನು ನೀವು ಟ್ರಾಕಲ್ಲೇ ಮಾಡಿದರಾಯಿತು. ಬೇಗ ಹೋಗೋಣ" ಎಂದು ಗುರುಗಳನ್ನು ಕಾರೊಳಗೆ ಕೂರಿಸಿ ಕಾರು ಸ್ಟಾರ್ಟ್ ಮಾಡಿದ ಸಪ್ತಗಿರಿವಾಸಿ.

ಕಾರು ಹೈವೇಯಲ್ಲಿ ಹೋಗದೇ ಹಳ್ಳಿ ಕಡೆ ಹೋಗುವುದನ್ನು ಗಮನಿಸಿದ ಪಾರ್ಥಸಾರಥಿಯವರು "ಏನೋ ಇದು? ಹಳಿ ತಪ್ಪಿ ಹಳ್ಳಿಕಡೆ ಹೋಗುತ್ತಿದೆ?" ಅಂದರು.

ಸ : ಗಣೇಶಣ್ಣರನ್ನೂ ಕರಕೊಂಡು ಹೋಗೋಣ..

"ಗಣೇಶರನ್ನಾ!!!!!" ಎಲ್ಲರೂ ಒಟ್ಟಿಗೆ ಕಿರುಚಿದರು..................

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by RAMAMOHANA on

>>"ನಾಸ್ಟಾ ಎಲ್ಲಾ ಕಾರಲ್ಲೇ ರೆಡಿ ಇದೆ. ಉಳಿದುದನ್ನು ನೀವು ಟ್ರಾಕಲ್ಲೇ ಮಾಡಿದರಾಯಿತು. ಬೇಗ ಹೋಗೋಣ" ಎಂದು ಗುರುಗಳನ್ನು ಕಾರೊಳಗೆ ಕೂರಿಸಿ ಕಾರು ಸ್ಟಾರ್ಟ್ ಮಾಡಿದ ಸಪ್ತಗಿರಿವಾಸಿ.<<

ಕಾರಲ್ಲೇ ಮಾಡೋ ನಾಸ್ಟಾ ಏನೋ ಅರ್ಥ ಆಯ್ತು ಆದ್ರೆ, ಟ್ರಾಕಲ್ಲೇ ಮಾಡೊ ಉಳಿದಿದ್ದು ಯಾವ್ದು ಅಂತ ತಲೆ ಕೆರ್ಕೋತಿದ್ದೀನಿ.
ಮುಂದುವರೆಯಲಿ ಗಣೇಶ್ ಜಿ.
ರಾಮಮೋಹನ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ಟ್ರಾಕಲ್ಲೇ ಮಾಡೊ ಉಳಿದಿದ್ದು ಯಾವ್ದು ಅಂತ ತಲೆ ಕೆರ್ಕೋತಿದ್ದೀನಿ."

ಅಯ್ಯೊ..!! ಗೊತ್ತಗಲಿಲ್ಲವೆ?

ಆದೂ......
ಆದೂ...............
..........>

.
.
.
.
.
..

.

ಆದ್ ಹೇಗೇ ಹೇಳಲೀ?...

:())))

ನನಗೂ ಗೊತ್ತಿಲ್ಲ>>>>ಬರೆದವರು ಗಣೇಷ್ಹ್ ಅಣ್ಣಾ‍ ಅವರೆ ಹೆಳಬೇಕೂ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ನನಗೂ ಗೊತ್ತಿಲ್ಲ>>>>ಬರೆದವರು ಗಣೇಷ್ಹ್ ಅಣ್ಣಾ‍ ಅವರೆ ಹೇಳಬೇಕೂ..
-ಪುಣ್ಯ. "ಳ" ಬರೆದಿರಿ :)
ಸಪ್ತಗಿರಿವಾಸಿ ಹಾಗೂ ರಾಮಮೋಹನರಿಗೆ ನನ್ನಿ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

>>ನನಗೂ ಗೊತ್ತಿಲ್ಲ>>>>ಬರೆದವರು ಗಣೇಷ್ಹ್ ಅಣ್ಣಾ‍ ಅವರೆ ಹೇಳಬೇಕೂ..
-ಪುಣ್ಯ. "ಳ" ಬರೆದಿರಿ :)<<

ಎಲ್ಲರನ್ನೂ ಮಲಗಿಸಿ `ನಾಸ್ಟಾ` ಎಲ್ಲ ಖಾಲಿ ಮಾಡೋರೇ ಹೇಳ್ಬೇಕು.
ಹ್ಮು.... ಈಗ ಯಾವ `ಕಾರ` ಬೇಕಾದ್ರೂ ಹಾಕ್ಕೊಳ್ಳಿ, ಆದ್ರೆ ಯಾವ `ಕಾರ` ಹಾಕ್ತೀರ ಅದನ್ನ ತೀರ್ಮಾನ ಮಾಡ್ಕೊಂಡು ಆಮೇಲೆ ನನ್ನ ಕಾರು ಹತ್ತಿ please..
ರಾಮಮೋಹನ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

:) :)
"ಳ"ಕಾರನೇ..ಬರಲಾ?
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

"ಗಣೇಶರನ್ನಾ!!!!!" ಎಲ್ಲರೂ ಒಟ್ಟಿಗೆ ಕಿರುಚಿದರು..................
ಅವರ ಸಮಸ್ಯೆ ಏನೆಂದು ಅರ್ಥವಾಯಿತು ಬಿಡಿ. ಒಂದು ಗಣೇಶರನ್ನು ಕಾರಲ್ಲಿ ಕೂರಿಸಿಕೊಂಡರೆ ಉಳಿದವರು ಕೂರಲು ಜಾಗವೆಲ್ಲಿ ಎನ್ನುವುದು. ಒಂದು ವೇಳೆ ಹೇಗೋ ಅಡ್ಜೆಸ್ಟ್ ಮಾಡಿಕೊಂಡರೂ ಕೂಡಾ ಟ್ರ್ಯಾಕ್ ಮೇಲೆ ತಿನ್ನಲು ಇನ್ನೇನು ಉಳಿದೀತು? :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

:) :)
ಈಗಲೇ ನೀವು ಹೇಳಿದಿರಾ.. ಇನ್ನು ನಾಸ್ಟಾ,ಚಿಪ್ಸ್,ಚೌಚೌ, ಸ್ವೀಟ್ಸ್,ಪುಳಿಯೊಗರೆ, ಚಿತ್ರಾನ್ನ, ಮೊಸರನ್ನ, ಹಣ್ಣುಗಳ ಚೀಲವನ್ನು ಕೈಯಲ್ಲೇ ಗಟ್ಟಿ ಹಿಡಕೊಂಡು ಪಾರ್ಥರು ಕುಳಿತುಕೊಳ್ಳುವರು. :(
ನನ್ನಿ ಜೀ..
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

""ನಾಸ್ಟಾ ಎಲ್ಲಾ ಕಾರಲ್ಲೇ ರೆಡಿ ಇದೆ. ಉಳಿದುದನ್ನು ನೀವು ಟ್ರಾಕಲ್ಲೇ ಮಾಡಿದರಾಯಿತು. ಬೇಗ ಹೋಗೋಣ" ಎಂದು ಗುರುಗಳನ್ನು ಕಾರೊಳಗೆ ಕೂರಿಸಿ ಕಾರು ಸ್ಟಾರ್ಟ್ ಮಾಡಿದ ಸಪ್ತಗಿರಿವಾಸಿ."

ಗಣೆಶ್ ಅಣ್ಣ ‍ ಸ‍.ವಾ ಗೆ ಸೈಕಲ್ಲು ಹೊಡೆಯಲೆ ಬರೊಲ್ಲ ....!! ಇನ್ನು ನಾ
ಬೈಕು ‍,
ಕಾರು ,
ರೈಲು ,
ವಿಮಾನ.....
ಓಡಿಸುವುದು ಕನಸಲ್ಲಿ ಮಾತ್ರ..:()))

ಈ ಭಾಗ ಓದಲು ಭಲೆ ಮಜವಾಗಿದೆ

ಇಲ್ಲಿ ಭಾಗ೨ ಅನ್ತ ಇರುವುದರಿನ್ದ ಭಾಗ ೧ ಎಲ್ಲಿದೆ? ಗೊತ್ತ್ಗಲಿಲ್ಲ ..

ನನಗೆ ಗೊತ್ತಿಲ್ಲದೆ ಮತ್ತೊಮ್ಮೆ ನನ್ನನು ಸಕಲೆಶಪುರಕೆ ಕರೆದೊಯ್ತಿರುವಿರಿ....!!

ಇನು ಹಲವು ಭಾಗಗಳಿವೆ ಅನಿಸುತ್ತಿದೆ...
ಮುನ್ದಿನ ಭಾಗಕ್ಕೆ ಕಾಯ್ತಿರುವೆ...
.......ಲಿ

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಸಪ್ತಗಿರಿಯವರೆ
ಅಂ.ಬಂ.ಸ್ವಾಮಿಯನ್ನು ನಂಬಿ
ಏನು ಬರದಿದ್ದರು ಕಡೆ ಪಕ್ಷ ರೈಲು ಬಿಡುವದನ್ನು ಖಂಡೀತ ಕಲಿತೆ ಕಲಿಯುತ್ತೀರಿ :)))
...
ಕಂಬಿ ಇರಬೇಕೆಂಬ ನಿಯಮವೇನು ಇಲ್ಲ

‍ ‍_ ಪಾರ್ಥಸಾರಥಿ

@ಗಣೇಶ ಸಾರ್

'ಸ' ರವರು ಇನ್ನು ಹೊರಟ್ಟಿದ್ದಾರೆ ಹಳ್ಳಿಗೆ ಗಣೇಶರನ್ನು ಹುಡುಕಿ
ಆಗೆಲೆ ಎಲ್ಲ ಥ್ರಿಲ್ ಆಗಿಬಿಟ್ಟಿದ್ದಾರೆ !
.
.
.
.
.
.
.
.
.
.
.
.
.
.
.
.
.
.
.
.
ಆದರೆ ಗಣೇಶರಿನ್ನು ಸಿಕ್ಕಿಲ್ಲ
ಅವರು ಜೊತೆಗೆ ಬರುವರೊ ಇಲ್ಲವೊ ಗೊತ್ತಿಲ್ಲ

_ ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ಏನು ಬರದಿದ್ದರು ಕಡೆ ಪಕ್ಷ ರೈಲು ಬಿಡುವದನ್ನು ಖಂಡೀತ ಕಲಿತೆ ಕಲಿಯುತ್ತೀರಿ :)))
...

=======================
ಕಂಬಿ ಇರಬೇಕೆಂಬ ನಿಯಮವೇನು ಇಲ್ಲ"
=======================

:()))

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

:) :) ಬೆಂಗಳೂರಲ್ಲಿ ಬೈಕ್ ಕಾರು ಓಡಿಸುವವರು ಡ್ರೈವಿಂಗ್ ಗೊತ್ತಿದ್ದವರು ಎಂದರೆ ನಾನು ನಂಬೊಲ್ಲ.
ನೀವು ಹಿಂದೆ ಒಮ್ಮೆ ಡ್ರೈವಿಂಗ್ ಬರೊಲ್ಲ ಎಂದು ಹೇಳಿದ್ದು ನೆನಪಾಗಿ, ನೀವೇ ರಾಮಮೋಹನರ ಕಾರು ಬಿಡಲು ತಕ್ಕವರು ಅಂತ ಅನಿಸಿತು. :)
>>>ಇಲ್ಲಿ ಭಾಗ೨ ಅನ್ತ ಇರುವುದರಿನ್ದ ಭಾಗ ೧ ಎಲ್ಲಿದೆ? ಗೊತ್ತ್ಗಲಿಲ್ಲ ..
ಇದು "ತಿಂಬಟ್ ಸ್ವಾಮಿಯ ಉದ್ಗಾರ"ದ ಎರಡನೇ ಭಾಗ. :) ಅವರು ಯಾವಾಗ ಬರುತ್ತಾರೋ ಗೊತ್ತಿಲ್ಲ :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಗಣೇಶರೆ

ಅಯ್ಯಯ್ಯೊ ! ಅದೇನು ಗ್ರಹಚಾರ ಕಾದಿದೆಯೊ !
ನನಗೆ ಕಾರ್ ಡ್ರೈವಿಂಗ್ ಗೊತ್ತಿಲ್ಲ ಎಂದು ಸಪ್ತಗಿರಿ ಹೇಳುತ್ತಿದ್ದರು ಬಿಡದೆ
ಅವರ ಕೈಲಿ ಕಾರು ಸ್ಟೇರಿಂಗ್ ಕೊಟ್ಟಿದ್ದೀರಿ
ಅದು
ಕಾರಿನ ಒಳಗೆ ನಾಲ್ವರು ಡ್ರೈವರ ಗಳನ್ನು ಕೂಡಿಸಿ !!!
ನಾನಂತು ಮುಚ್ಚಿದ ಕಣ್ಣು ತೆಗೆಯಲ್ಲ ಏನಾದರು ಆಗಲಿ

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

:) :)
ರಾಮಮೋಹನರ ವಿಶೇಷ ಕಾರು ಡ್ರೈವಿಂಗ್ ಮಾಡಿ ಗೊತ್ತಿರುವ "ಸತೀಶ"ರು ಸಿಗಲಿಲ್ಲ. ಕಾರೊಳಗೆ ಇರುವ ನಾಲ್ವರು ಡ್ರೈವರ್‌ಗಳಿಗೆ ನಿದ್ರೆನೇ ಬಿಟ್ಟಿಲ್ಲಾ.. ಗಟ್ಟಿ ಕಣ್ಣುಮುಚ್ಚಿಯೇ ಇರಿ. ನಾಸ್ಟಾ ಖಾಲಿಯಾದ ಮೇಲೆ ಎಚ್ಚರಿಸುವೆ. :)
ನನ್ನಿ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sm.sathyacharana on

ಕಣ್ಣು ಮುಚ್ಚಿ ಕೂತರೆ ಕತೆ ಹೆಂಗೆ ಮುಂದುವರಿಸುತ್ತಿರಾ ಪಾರ್ಥಸಾರಥಿಯವರೇ, ಗನೇ'ಸಣ್ಣ" ಕೈ ಕೊಟ್ಟಾಗ‌?

ನಿಮ್ಮೊಲವಿನ‌
ಸತ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ನಾನಂತು ಮುಚ್ಚಿದ ಕಣ್ಣು ತೆಗೆಯಲ್ಲ "ಏನಾದರು ಆಗಲಿ" :))))

ಸತ್ಯಚರಣರೆ ತುಂಬಾ ಅಪರೂಪಕ್ಕೆ ನಿಮ್ಮ ಪ್ರತಿಕ್ರಿಯೆ ನೋಡಿದೆ,
ಸಂತಸವಾಯಿತು

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sm.sathyacharana on

ಧನ್ಯವಾದಗಳು..
ಸಂತಸ ನಮಗೂ ತಂದಿದೆ. ಅನ್ನಿಸಿತ್ತು..
ಯಾರಾದರೂ ಈ (ನನ್ನ ಅನುಪಸ್ಥಿತಿಯ) ವಿಚಾರ ಎತ್ತುವರು ಅಂತ. ನಿಮ್ಮಿಂದ ಖಂಡಿತ ನಿರೀಕ್ಷೆ ಇತ್ತು... :) ಹ..ಹ.. !

ಸಮಯದ ನಿಯಂತ್ರಣ ತಪ್ಪಿದೆ.
ಇಷ್ಟವಿದ್ದರೂ ಎಷ್ಟೋ ಕಡೆ ಭೇಟಿ ನೀಡುವುದು ಕಷ್ಟವಾಗಿದೆ.
ಸಮಯಕ್ಕೆ ವ್ಯವಧಾನವಿಲ್ಲವೋ, ನನಗೆ ಇಲ್ಲವೋ ಸದಾ ಯೋಚಿಸುತ್ತಿರುತ್ತೇನೆ.. :‍‍‍‍‍)

ನಿಮ್ಮೊಲವಿನ,
ಸತ್ಯ.. ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಸತ್ಯಚರಣರೆ,
ನಿಮ್ಮ ಪ್ರತಿಕ್ರಿಯೆ ನೋಡಿ ನನಗೂ ಸಂತಸವಾಯಿತು.
>>...ಕಣ್ಣು ಮುಚ್ಚಿದರೆ ಹೇಗೆ ಗಣೇ"ಸಣ್ಣ" ಕೈಕೊಟ್ಟ...
- ಪಾರ್ಥಸಾರಥಿಯವರು ಕಣ್ಣುಮುಚ್ಚಿ ಕುಳಿತದ್ದು ಮಾತ್ರವಲ್ಲ, ಟ್ರೆಕಿಂಗ್‌ಗೆ ಕೈ ಕೊಟ್ಟರೂ ಸಹ .................ಸಪ್ತಗಿರಿವಾಸಿ ಬಹಳ ಬೇಸರಗೊಂಡು ಸಂಪದದಲ್ಲಿ ಈಗ ಕಾಣಿಸುತ್ತಿಲ್ಲ :(
ಕೇಳಿ ಪಾರ್ಥರ ಕತೆ-
"ಗಣೇಶರನ್ನಾ!" ಎಲ್ಲರೂ ಒಟ್ಟಿಗೆ ಕಿರುಚಿದರು..
ಸಪ್ತಗಿರಿವಾಸಿ : ಎಲ್ಲರ ನಿದ್ರೆ ಬಿಟ್ಟಿತ್ತಲ್ಲಾ :) ಸಮಾಧಾನ ಹೆದರಬೇಡಿ. ಅರೆ...ಗುರುಗಳೇ.. ಕಣ್ಣು ತೆರೆಯಿರಿ. ಗಣೇಶರು ಬರುವುದಿಲ್ಲ. ಸುಮ್ಮನೇ ಹೆದರಿಸಿದೆ ಅಷ್ಟೇ..
ಪಾರ್ಥಸಾರಥಿ : ನನ್ನನ್ನು ಮನೆಗೆ ಬಿಡೋ.. ನಾನು ಬರುವುದಿಲ್ಲ.
ಸ : ನನಗೆ ಡ್ರೈವಿಂಗ್ ಬರುವುದಿಲ್ಲ ಎಂಬ ಭಯವೋ? ನೀವೇ ಕಾರು ಬಿಡಿ.
ಪಾ : ಇಲ್ಲ. ನಾನು ಇನ್ನೊಬ್ಬರ ಕಾರು ಬಿಡುವುದಿಲ್ಲ.
ಸ : ಗುರುಗಳೇ, ಯಾವುದೇ ರೀತಿಯ ತೊಂದರೆಗಳಾಗದಂತೆ ಎಲ್ಲಾ ಜಾಗ್ರತೆ ವಹಿಸಿದ್ದೇನೆ. ನಮ್ಮದು ಒಂದೇ ದಿನದ ಟ್ರೆಕಿಂಗ್ ಆದರೂ ನಾಲ್ಕು ದಿವಸಗಳಿಗಾಗುವಷ್ಟು ಆಹಾರ ತಂದಿರುವೆ. ನಾವು ಎಲ್ಲೂ ದಾರಿ ತಪ್ಪದಂತೆ ಜಿ.ಪಿ.ಎಸ್ ಮೊಬೈಲ್ ಫೋನ್ ಇದೆ. (
http://sampada.net/%... )
ಗ್ಲಿಂಪ್ಸ್ ಮೂಲಕ ಸಕಲೇಶಪುರದಲ್ಲಿರುವ ನನ್ನ ಫ್ರೆಂಡ್ ಟ್ರಾಕ್ ಮಾಡಲು ಸಾಧ್ಯ.
ಬೆಂಕಿಪೊಟ್ಟಣದಿಂದ ಹಿಡಿದು ಲೈಫ್ ಜಾಕೆಟ್, ಫಸ್ಟ್ ಎಯ್ಡ್ ಬಾಕ್ಸ್, ಟಾರ್ಚ್, ಟೆಂಟ್ ಎಲ್ಲಾ ಇದೆ. ಇದನ್ನೆಲ್ಲಾ ನೀವು ಯಾರೂ ಹೊತ್ತುಕೊಂಡು ಹೋಗಬೇಕಿಲ್ಲ. ಅದಕ್ಕೂ ಎರಡು ಆಳುಗಳನ್ನು ಗೊತ್ತುಮಾಡಿರುವೆನು. ಗೈಡ್ ಮಾಡಲು ಅದೇ ರೈಲ್ವೇ ಹಳಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿ ರಿಟೈರ್ ಆಗಿರುವ ಗಾರ್ಡ್ ಒಬ್ಬ ಅಲ್ಲಿ ನಮ್ಮ ಜತೆಗೂಡುವರು...
ಚೇತನ್ : ಪಾಪ, ಸಪ್ತಗಿರಿವಾಸಿ ಇಷ್ಟೆಲ್ಲಾ ತಯಾರಿ ಮಾಡಿರುವನು. ಪ್ಲೀಸ್ ಹೋಗೋಣ..ಅಲ್ಲಿಯ ಸೀನರಿ ನೋಡಿದರೆ ನಿಮಗೂ ಹೊಸಕತೆ ಬರೆಯಲು ಹುರುಪು ಬರುವುದು.
ಪಾ : ಡಿಸ್ಕವರಿ ಚ್ಯಾನಲ್ ಹಾಕಿದರೆ ಮನೆಯಲ್ಲೇ ಅದಕ್ಕಿಂತ ಚೆನ್ನಾಗಿರುವ ಸೀನರಿ ನೋಡಬಹುದು. ಮನೆಗೆ ಹೋಗೋಣ.
ರಾ : ಪಾರ್ಥಸಾರಥಿಯವರೆ, ನೀವು ಹೇಳಿದ ಹಾಗೇ ಆಗಲಿ. ನಾವು ಹಿಂದೆ ಮನೆಗೆ ಹೋಗೋಣ.
*******************************
ತಿಂಬಟ್ ಸ್ವಾಮಿಗಳು : ಥತ್ ಬೋರಿಂಗ್ ಎಂಡ್ ಅಂದಿರಾ? ಕಣ್ಣುಗಳು ಮುಕ್ತಿಯೆಡೆಗೆ ನೆಟ್ಟಿರುವ ನಮ್ಮಂತಹ ಸ್ವಾಮಿಗಳ ಮಾತನ್ನು ನಂಬಿದರೆ ಜೀವನವೂ ಬೋರಿಂಗ್ ಎಂಡ್‌ಗೇ ತಲುಪುವುದು.
ಪರಮಾತ್ಮನನ್ನು ಸೇರುವುದೇ ಗುರಿ-ಎಲ್ಲಾ ಸುಖಸಂತೋಷಗಳೂ ಅಲ್ಲೇ ಸಿಗುವುದು ಎಂದು ಹೇಳಿ, ಇಲ್ಲಿನ ಸುಖ ಸಂತೋಷಗಳಿಗೆ ಕಲ್ಲು ಹಾಕುವರು. ಹುಟ್ಟಿದವರೆಲ್ಲಾ ಸಾಯುವುದು ಗ್ಯಾರಂಟಿ. ಹಗಲೂ ರಾತ್ರಿ ಪರಮಾತ್ಮನ ಧ್ಯಾನ ಮಾಡಿ ಮುಕ್ತಿಯೇ ಗುರಿ ಎಂದವರು ಸತ್ತನಂತರ ಪರಮಾತ್ಮನಲ್ಲಿ ಲೀನವಾಗುವರು ಎಂದು ಯಾವ ಗ್ಯಾರಂಟಿ.
ಪಾರ್ಥಸಾರಥಿಯವರ(ಸ್ವಾಮಿಗಳ), ಮನೆ (ಮುಕ್ತಿ) ಎಂಬ ರಾಗಕ್ಕೆ ರಾಮಮೋಹನರೂ ಜತೆ ಸೇರಿದ್ದರಿಂದ ಹುಡುಗರ ಟ್ರೆಕಿಂಗ್ ಆಸೆ ನೆರವೇರಲಿಲ್ಲ.
"ಜಗತ್ತೇ ನಶ್ವರ, ಮುಕ್ತಿಯೇ ಗುರಿ," ಎಂದಾಗ, " ಗುರುಗಳೇ/ಸ್ವಾಮೀಜಿ, ತಾವು ತಮ್ಮ ಗುರಿಯೆಡೆಗೆ ಹೋಗಿ. ನಾವು ಟ್ರೆಕಿಂಗ್‌ಗೆ ಹೋಗುವೆವು" ಎನ್ನಿ.
********************
ಇದು ತಿಂಬಟ್ ಸ್ವಾಮಿಗಳ ಉದ್ಗಾರ(೨).
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಇದೆಲ್ಲ ಅನ್ಯಾಯ
ನನಗೆ ಕಾರಿನಲ್ಲಿ ಕುಳಿತಿರುವ ಬಯದ ಹೊರತಾಗಿ ಟ್ರಕಿಂಗ್ ಬರಲು ಸಿದ್ದನಿದ್ದೆ
ನನ್ನ ಹೆಸರು ಬಳಸಿ ಟ್ರಕಿಂಗ್ ಕ್ಯಾನ್ಸಲ್ ಮಾಡಿದಿರಿ. ಇರಲಿ.
ಸಮ್ಮರ್ ಕ್ಯಾಂಪ್ ನಲ್ಲಿ ಅಂ.ಬಂ . ಅವರನ್ನು ನಾನು ಗೇಲಿ ಮಾಡಿದಕ್ಕೆ
ಅವರು ಇನ್ನು ನನ್ನ ಕೆಟ್ಟದಕ್ಕೆ ಗುರಿಮಾಡಲು ಬಿಡಲಿಲ್ಲ
ಎಲ್ಲ ವ್ಯಾಮೋಹವನ್ನು ತೊರೆದ ಸ್ವಾಮಿಗಳು ಅದೇನೊ ನನ್ನ ಬಗ್ಗೆ ಈ ರೀತಿ ಮನದಲ್ಲಿ (ದ್ವೇಶ) 'ಸಾದನೆ' ಇಟ್ಟುಕೊಳ್ಳುವುದು
ಸ್ವಾಮಿಗಳ ಲಕ್ಷಣವೆ. ಹೀಗೆ ಆದರೆ ನಾವು ಈ ಸ್ವಾಮಿಗಳ ಶಿಷ್ಯತ್ವವನ್ನು ತೊರೆದು ಹೊಸ ಗುರುಗಳ ಅನ್ವೇಷಣೆಯಲ್ಲಿ ತೊಡಗುವೆವು (...... ಬಿಡದಿಯ ನಿಮಿಷಾನಂದಸ್ವಾಮಿಗಳು ಆದೀತೆ ??? )

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಪಾರ್ಥಸಾರಥಿಗಳೆ,
<<(...... ಬಿಡದಿಯ ನಿಮಿಷಾನಂದಸ್ವಾಮಿಗಳು ಆದೀತೆ ??? )>>
ಹಾಗೆ ಮಾಡಿದರೆ ನಿಮ್ಮ ಜನುಮ ಸ್ಥಾನದಲ್ಲಿಯೇ ಉಳಿಯಬೇಕಾದೀತು! :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

> ಹಾಗೆ ಮಾಡಿದರೆ ನಿಮ್ಮ ಜನುಮ ಸ್ಥಾನದಲ್ಲಿಯೇ ಉಳಿಯಬೇಕಾದೀತು! :)

‍:))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಶಿಷ್ಯ ಶ್ರೀಧರ್,
ನಮ್ಮ ಪಟ್ಟ(ದ ಮೇಲೆ ಕಣ್ಣಿಟ್ಟಿರೊ)ಶಿಷ್ಯರಿಗೆ ಬುದ್ಧಿಮಾತು ಹೇಳಿದ್ದಕ್ಕೆ ನನ್ನಿ.
ನಿಮಿಷಾನಂದರೋ,ನಿತ್ಯಾನಂದರೋ..ನಮಗೆ ನಮ್ಮ ಶಿಷ್ಯರ "ಆನಂದ" ಮುಖ್ಯ.
************
ಪಶಿಪಾಸಾ,
>>>...ಬಿಡದಿಯ ನಿಮಿಷಾನಂದಸ್ವಾಮಿಗಳು ಆದೀತೆ ???
ನಿರಾಶರಾದ ಚೇತನ್,ಜಯಂತ್,ಸಪ್ತಗಿರಿವಾಸಿಯೊಂದಿಗೆ ಟ್ರೆಕಿಂಗ್ ಹೋಗಿ- ನಿಮಿಷ ನಿಮಿಷವೂ ಆನಂದ. :)
ರಾಮೋರಚಿತ ಅಂ.ಭಂ.ಸ್ವಾಮಿಗಳ ಭಜನೆ ಮಾಡಿ-ನಿತ್ಯ ಆನಂದ :)
-ತಿಂಬಟ್ ಸ್ವಾಮಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

:) :)

ಅಂತೂ ನಮಗೆ ಟ್ರೆಕ್ಕಿಂಗ್ ಕರ್ಕೊಂಡು ಹೋಗ್ತೀವಿ ಅಂಥಾ ಮೋಸ ಮಾಡಿದ್ರಿ.
ಸಗಿಯವ್ರು ಅಷ್ಟೆಲ್ಲ ವ್ಯವಸ್ಥೆ ಮಾಡಿದ್ರೂ ಹಿಂಗೆ ಮಾಡ್ಬಿಟ್ರು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

:( :(
ತುಮಕೂರಲ್ಲಿ ಬೆಟ್ಟ ಎಲ್ಲಾ ಹತ್ತಿ ಇಳಿದು ಬಂದವರು. ಈಗ್ಯಾಕೆ ಹಾಗೆ ಮಾಡಿದರು ಗೊತ್ತಾಗಲಿಲ್ಲ. ಟಿ.ವಿ.ಯಲ್ಲಿ ನಿತ್ಯನಿಮಿಷಾನಂದರನ್ನು ನೋಡಿದ ಪ್ರಭಾವವಿರಬಹುದು. :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

>>> ಸಪ್ತಗಿರಿವಾಸಿ ಬಹಳ ಬೇಸರಗೊಂಡು ಸಂಪದದಲ್ಲಿ ಈಗ ಕಾಣಿಸುತ್ತಿಲ್ಲ :( <<

ಗಣೇಶರೆ

ಇದಂತು ನನಗೆ ಅತೀವ ಅನುಮಾನ ಮೂಡಿಸಿದೆ ಗಣೇಶರೆ, ಏನೆ ಆದರು ಸಂಪದಕ್ಕೆ ಬೇಟಿ ನೀಡ ಪ್ರತಿಕ್ರಿಯೆ ನೀಡುತ್ತಿದ್ದ ಸಪ್ತಗಿರಿ ಯಾರಿಗು ಉತ್ತರ ಕೊಡುತ್ತಿಲ್ಲ, ಇದೇನೊ ಅರ್ಥವಾಗುತ್ತಿಲ್ಲ. ಅವರು ಮನೆ ಶಿಫ್ಟ್ ಮಾಡೀನಿ ಅಂದ ಹಾಗಿತ್ತು, ಅವರು ಒಂದು ವೇಳೆ ಮಲ್ಲೆಶ್ವರದಲ್ಲಿ ನೀವು ಬಿಟ್ಟು ಬಂದ ಮನೆಗೆ ಸೇರಿದರ ಅಂತ ಅನುಮಾನ. ಅದಕ್ಕೆ ಅವರು ನಿಮ್ಮಂತೆ ಘೋಶ ಧರಿಸಿದರ ಅಂತ ಇನ್ನೊಂದು ಅನುಮಾನ. ಅವರಾಗೆ ಬರುವವರೆಗು ಅನುಮಾನ ಪರಿಹಾರವಾಗಲ್ಲ ಬಿಡಿ :))

*** ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಪಾಪ..ಒಬ್ಬರೇ ಟ್ರೆಕಿಂಗ್ ಹೋದರೋ ಏನೋ!?
>>ಅವರು ಒಂದು ವೇಳೆ ಮಲ್ಲೆಶ್ವರದಲ್ಲಿ ನೀವು ಬಿಟ್ಟು ಬಂದ ಮನೆಗೆ ಸೇರಿದರ ಅಂತ ಅನುಮಾನ..
:) :)
-ರಾತ್ರಿಯ ಹನ್ನೆರಡು ಗಂಟೆಗಾದರೂ ಸಂಪದದಲ್ಲಿ ಕಾಣಿಸಬೇಕಿತ್ತಲ್ಲಾ?
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.