ದೇವನ "ಹಳ್ಳಿ"ಯಲ್ಲಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವಾದ ಕೂಡಲೇ ಆಸುಪಾಸಿನ ಹಳ್ಳಿಗಳು ಸಿಟಿ/ಲೇಔಟ್/ಸ್ಯಾಟಲೈಟ್ ಟೌನ್೧,೨,೩,...ಗಳಾದವು. ಕೆಲವಕ್ಕೆ ಒಳ್ಳೆಯ ಹೆಸರು "..... ನಗರ, ...." :) ಸಿಕ್ಕಿದರೆ, ಇನ್ನೂ ಕೆಲವು ಮಂಚಪ್ಪನ ಹಳ್ಳಿ, ತರಬನ ಹಳ್ಳಿ, ಚನ್ನಹಳ್ಳಿ...ಇತ್ಯಾದಿ ಇತ್ಯಾದಿ ಹೆಸರು ಬದಲಾವಣೆಗೆ ಕಾಯುತ್ತಿವೆ.
ಇದ್ದಬದ್ದ ಹಳ್ಳಕೊಳ್ಳ ಜಮೀನುಗಳನ್ನೆಲ್ಲಾ ಮುಚ್ಚಿ ಸೈಟು ರೋಡು ಮಾಡುತ್ತಲೇ ಇರುವರು.
ಬೇರೆ ಏರಿಯಾದಲ್ಲಿ ಹಳೇ ಮನೆ ಒಡೆದು ಹಾಕಿದರೆ, ಅದರ ಇಟ್ಟಿಗೆ, ಕಲ್ಲು, ಮಣ್ಣುರಾಶಿಗಳನ್ನೆಲ್ಲಾ ಇಲ್ಲಿಗೆ ತಂದು ಹಾಕಿ, ತಗ್ಗುಗಳನ್ನೆಲ್ಲಾ ನೆಲ"ಸಮ" ಮಾಡುತ್ತಿರುವರು.
ಕಳೆದ ರವಿವಾರ ಯಲಹಂಕ ಸಮೀಪದ ಹಳ್ಳಿಗೆ ಹೋಗಿದ್ದೆ. ಹೆಸರು "ದೊಡ್ಡಬೆಟ್ಟಹಳ್ಳಿ" ಸುತ್ತಮುತ್ತ ಎಲ್ಲಿ ನೋಡಿದರೂ ಬೆಟ್ಟ ಕಾಣಿಸಲಿಲ್ಲ. ಅಲ್ಲಿದ್ದ ಹಳ್ಳಿಯವನ ಪ್ರಕಾರ-ಚಿತ್ರದಲ್ಲಿ ಕಾಣಿಸುತ್ತಿರುವ ಕೊಳದ ಪಕ್ಕದ ಕಲ್ಲು ಬಹಳ ಎತ್ತರವಿತ್ತಂತೆ. ಅಲ್ಲಿಂದ ಯಲಹಂಕ ಸುತ್ತಮುತ್ತಲಿನ ಪ್ರದೇಶ ಕಾಣಿಸುತ್ತಿತ್ತಂತೆ. ಸಮೀಪ ಹೋಗಿ ನೋಡಿದಾಗ ಕಲ್ಲು ಕ್ವಾರಿ ಕೆಲಸ ಎಡೆಬಿಡದೆ ನಡೆಯುತ್ತಿರುವುದು ಕಾಣಿಸಿತು. ಜೂನ್ ತಿಂಗಳಾದರೂ ನೀರು ಕೊಳದಲ್ಲಿ ತುಂಬಿ ಸ್ವಚ್ಛವಾಗಿ ಕಾಣಿಸಿತು. (ಕತ್ತಲಾದದ್ದರಿಂದ ಚಿತ್ರ ಚೆನ್ನಾಗಿ ಬಂದಿಲ್ಲ). ಇನ್ನು ಮುಂದೆ ಈ ಕೊಳ ನೋಡಲು ಸಿಗುವುದೋ ಇಲ್ಲವೋ.. 

****************
ಪುತ್ತೂರು ಸಮೀಪದ ಒಂದು ಹಳ್ಳಿಯ ದೇವಸ್ಥಾನದ ಪಕ್ಕದಲ್ಲಿರುವ ಕೊಳ-


****************
ಸುರ್ಯ(ಧರ್ಮಸ್ಥಳ ಸಮೀಪ)ದ ದೇವಸ್ಥಾನ ಹಾಗೂ ಕೊಳದ ಚಿತ್ರ-



ಕೊನೆಯ ಚಿತ್ರ- ಸುರ್ಯ ದೇವಸ್ಥಾನದ ಹಿಂಬದಿ, ತೆಂಗಿನ ಗಿಡಗಳ ಹಿಂಬದಿ ದೊಡ್ಡ ಕಲ್ಲೇ-ಗಡಾಯಿಕಲ್ಲು(ಜಮಲಾಬಾದ್ ಕೋಟೆ). ಬೆಂಗಳೂರು ಸಮೀಪವಿರುತ್ತಿದ್ದರೆ ಸ್ಟೋನ್ ಕ್ವರಿಗೆ ಗುರಿಯಾಗುತ್ತಿತ್ತೇನೋ..
-ಗಣೇಶ.









ಪ್ರತಿಕ್ರಿಯೆಗಳು
ಉ: ಹಳ್ಳಿಯಾದರೇನು ಸಿವಾ..
ಹಳ್ಳಿಯಾದರೇನು ಸಿವಾ..
ಡಿಳ್ಳಿಯಾದರೇನು ಸಿವಾ...
ಜನರೆಲ್ಲಾ ರಿಯಲ್ ಎಸ್ಟೇಟ್ ಕಡೆಗೇ....ಸಿವಾ!
ಪ್ರಕ್ರುತಿಯನ್ನ ಬೇಕಾದರೆ ನ್ಯಾಷನಲ್ ಜಿಯೋಗ್ರಫಿಕ್ ಚ್ಯಾನೆಲ್ಲಿನಲ್ಲಿ ನೋಡಿ ಎಂಜಾಯ್ ಮಾಡ್ಬೋದು ಅಲ್ವಾ ಸಿವಾ....ಅಲ್ಲಲ್ಲಾ ಅವರ ಮಗ ಗಣೇಶ್...ಜಿ.
ಉ: ಹಳ್ಳಿಯಾದರೇನು ಸಿವಾ..
:) :)
>>ಜನರೆಲ್ಲಾ ರಿಯಲ್ ಎಸ್ಟೇಟ್ ಕಡೆಗೇ....ಸಿವಾ!
-ಯಾರನ್ನು ನೋಡಿ..ಬರೀ ಸೈಟು ಬಗ್ಗೆ ಮಾತು.. ಅದಕ್ಕಾಗಿ ಹೊಡೆದಾಟ..ಕೋರ್ಟ್ ಅಲೆದಾಟ.
ಕೈಲಾಸ ಎಲ್ಲಾದರೂ ಬೆಂಗಳೂರ ಬಳಿಯಿರುತ್ತಿದ್ದರೆ ಏನಾಗುತ್ತಿತ್ತು ಸಿವಾ..:)
-ಗಣೇಶ.
ಉ: ಹಳ್ಳಿಯಾದರೇನು ಸಿವಾ..
ಕಳಕಳಿ ಚೆನ್ನಾಗಿದೆ. ಆದರೆ ಆಳುವವರು ಕೊಳಕಳಿಯವರು!!
ಉ: ಹಳ್ಳಿಯಾದರೇನು ಸಿವಾ..
>>ಆದರೆ ಆಳುವವರು ಕೊಳಕಳಿಯವರು!!
+೧
ಕವಿನಾಗರಾಜರಿಗೆ, ಶ್ರೀಧರ್‌ಜಿಗೆ ನನ್ನಿ.
-ಗಣೇಶ.
ಉ: ಹಳ್ಳಿಯಾದರೇನು ಸಿವಾ..
>> ಕತ್ತಲಾದದ್ದರಿಂದ ಚಿತ್ರ ಚೆನ್ನಾಗಿ ಬಂದಿಲ್ಲ. ಇನ್ನು ಮುಂದೆ ಈ ಕೊಳ ನೋಡಲು ಸಿಗುವುದೋ ಇಲ್ಲವೋ.. << ಹೌದು ಗಣೇಶ್ ಜಿ ಪೂರ್ತಿ ಕತ್ತಲಾದರೆ ಕ್ಯಾಮೆರಾ ಕಣ್ಣಲ್ಲಿ ಕೊಳ ನೋಡಲು ಸಿಗುವುದಿಲ್ಲ
ಅಂತು ತಮ್ಮ ಸಾಹಸಕ್ಕೆ ಮೆಚ್ಚಬೇಕು. ಬೆಂಗಳೂರಿಗರು ಕಾಣದ್ದನ್ನ, ಗಣೇಶ್ ಜಿ ಕಂಡ್ರು ಅನ್ನೊ ಹಾಗೆ ಹೊಸ ಜಾಗಗಳ ಜೊತೆ ಮಾಹಿತಿ ಕೊಡುತ್ತೀರ.
ದನ್ಯವಾದಗಳು.
ರಾಮಮೋಹನ
ಉ: ಹಳ್ಳಿಯಾದರೇನು ಸಿವಾ..
ರಾಮಮೋಹನರೆ,
>>>ಪೂರ್ತಿ ಕತ್ತಲಾದರೆ ಕ್ಯಾಮೆರಾ ಕಣ್ಣಲ್ಲಿ ಕೊಳ ನೋಡಲು ಸಿಗುವುದಿಲ್ಲ
:) :)
ಕಲ್ಲಿನ ಮೇಲೆ ಹೋಗಿ ನೋಡೋಣ ಅಂತಿದ್ದೆ. ಕತ್ತಲಾದುದರಿಂದ, ಜನಸಂಚಾರ ಜಾಸ್ತಿ ಇಲ್ಲದ್ದರಿಂದ ಹಿಂದೆ ಬಂದೆ. ಇನ್ನೊಮ್ಮೆ ಹೋದರೆ ಪ್ರಯತ್ನಿಸುವೆ.
ನನ್ನಿ.
-ಗಣೇಶ.
ಉ: ಹಳ್ಳಿಯಾದರೇನು ಸಿವಾ..:ಖಳರೆಲ್ಲ ...ಕೊಳವನ್ನು ..???
ಗಣೇಶ್ ಅಣ್ಣ- ಖಳರೆಲ್ಲ ಸೇರಿ ಕೊಳವನ್ನು ಬತ್ತಿಸಿದರಲ್ಲ...!!..
ದುರಾಸೆ -ಮಣ್ಣು ನೀರು ವಾಯು ಎಲ್ಲವನ್ನು ......ದೆ....
ಹಳ್ಳಿಯಾದರೆನೂ ಶಿವ (ಶೀರ್ಷಿಕೆ ನೋಡಿ ನೀವು ಹಳ್ಳಿಯಲ್ಲಿ ವಾಸ್ತವ್ಯ ಬದಲಿಸಿದ್ದರ ಬಗ್ಗೆ ಬರೆದದ್ದು ಅಂದುಕೊಂಡಿದ್ದೆ...!!)
ಹಳ್ಳಿಯಾದರೇನು ಶಿವ
ದಿಲ್ಲ್ಯಾದರೆನೂ ಶಿವ
----------------------------------
ಮಣ್ಣಾದರೆನು ಶಿವಾ
ನೀರಾದರೇನು ಶಿವ
ಕಲ್ಲಾದರೇನು ಶಿವ
ಎಲ್ಲವೂ ನಂಗೆ ಬೇಕು ಶಿವ...:((((
-----------------------------------
ಒಳ್ಳೆಯ ಕಳಕಳಿಯ ಬರಹ(ಹಿಂದೊಮ್ಮೆ ಹೊಗೆ ಸೂಸುವ- ಹೊಗೆಯ ಮೂಲ..!).. ಕತ್ತಲಲ್ಲಿ ತೆಗೆದರೂ ಚಿತ್ರ ಚೆನ್ನಾಗಿದೆ.... ನೀರಿನ ಮಹತ್ವ ಗೊತ್ತಾಗಲು ಒಂದು ವಾರ ಬೆಂಗಳೂರಿಗೆ ನೀರೆ ಸಿಗಬಾರದು...:((
ಶುಭವಾಗಲಿ....
\|/
ಉ: ಹಳ್ಳಿಯಾದರೇನು ಸಿವಾ..:ಖಳರೆಲ್ಲ ...ಕೊಳವನ್ನು ..???
ಏನು ಸಿವಾ?
ಇಷ್ಟು ದಿನ ಎಲ್ಲಿ ಹೋಗಿದ್ದಿ ಸಿವಾ?
ನಿಮ್ಮ ಗುರುಗಳು-ನನ್ನ ಸಿಸ್ಯಾ ಎಲ್ಲಿ ಎಂದು ನನ್ನ ಜೀವ ತಿನ್ತಿದ್ದಾರೆ ಸಿವಾ..
-ಗಣೇಶ.
ಪ್ರತಿಕ್ರಿಯೆಗೆ ಧನ್ಯವಾದಗಳು.
>>ನೀರಿನ ಮಹತ್ವ ಗೊತ್ತಾಗಲು ಒಂದು ವಾರ ಬೆಂಗಳೂರಿಗೆ ನೀರೆ ಸಿಗಬಾರದು...:((
ಏನೇ ಆಗಲಿ. ನೀರಿಗೆ ತೊಂದರೆ ಬರುವುದು ಬೇಡ. :)
>>ಶೀರ್ಷಿಕೆ ನೋಡಿ ನೀವು ಹಳ್ಳಿಯಲ್ಲಿ ವಾಸ್ತವ್ಯ ಬದಲಿಸಿದ್ದರ ಬಗ್ಗೆ ಬರೆದದ್ದು ಅಂದುಕೊಂಡಿದ್ದೆ...!!)
-ಲಿಫ್ಟ್ ಕರಾದೆ..ಬರೀಬೇಕು..ಇನ್ನೂ ಕೆಲವಿದೆ. ಟೈಮೇ ಸಿಗುತ್ತಿಲ್ಲ.
-ಗಣೇಶ.
ಉ: ಹಳ್ಳಿಯಾದರೇನು ಸಿವಾ..:ರಜೆ ...!!
ಅಣ್ನ ಬರೆದರೆ ....ವು
ಅಣ್ನ ನನ್ನ ಕೆಲ್ಸದ ಬದಲಾವಣೆ ನಿಮಿತ್ತ ರಜೆ ತೆಗೆದುಕೊನ್ಡಿದ್ದೆ(ಸಮ್ಪದದಲ್ಲಿ).. ಇನ್ನು ಮುನ್ದೆ ಸಕ್ರಿಯನಾಗಿರುವೆ...
ಆ ಬಗ್ಗೆ ಗುರುಗಳಿಗು ಫೆಸ್ಬುಕ್ನಲ್ಲಿ ಹೇಳಿರುವೆ...!!
\|/