19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹಾಳು ಮದನನಿಗೊಂದು ಧಿಕ್ಕಾರ

July 13, 2012 - 10:21am
hamsanandi

ಎರಡು ಕನಸು, ಬಂಧನ ಮೊದಲಾದ ಕನ್ನಡ ಚಲನಚಿತ್ರಗಳನ್ನು ನೋಡಿ ಪಳಗಿರುವವರಿಗೆ,  ಪ್ರೇಮ ತ್ರಿಕೋನಗಳೇನು ಹೊಸದಲ್ಲ. ಆದರೆ, ಪ್ರೇಮ ಚೌಕ , ಪ್ರೇಮ ಪಂಚಕೋನಗಳನ್ನ ಕಂಡಿದ್ದೀರ?  ಇಲ್ಲಿದೆ ನೋಡಿ ಅಂತಹದ್ದೊಂದು ಪ್ರಸಂಗ:

 
ನಾನವಳ  ಬಿಡದೆಲೇ ನೆನೆಯುತಿರಲು
ಒಟ್ಟು ಕಡೆಗಣಿಸಿಹಳಲ್ಲ ನನ್ನನವಳು;
 
ಅವಳು ಬಯಸಿಹಳಲ್ಲ ಮತ್ತೊಬ್ಬ ನಲ್ಲನನು
ಆವನ ಮನ ಸೆಳೆದಾಕೆ  ಬೇರೊಬ್ಬಳು.
 
ಇತ್ತ ಕಡೆ ಚಡಪಡಿಸಿ ನನಗೋಸ್ಕರ
ಸುರುಟಿ ಹೋಗಿಹಳಲ್ಲ ಮತ್ತೋರ್ವಳು
 
ಹಾ ! ಇರಲಿ ಧಿಕ್ಕಾರ ಅವನಿಗೂ ಅವಳಿಗೂ
ಹಾಳು ಮದನಗು ಮತ್ತೆ ಇವಳಿಗೂ ನನಗೂ!
 
ಸಂಸ್ಕೃತ ಮೂಲ  (ಭರ್ತೃಹರಿಯ ನೀತಿಶತಕ -೨ ):
 
ಯಾಮ್ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ
ಸಾಪ್ಯನ್ಯಮಿಚ್ಛತಿ ಜನಂ ಸ ಜನೋಽನ್ಯಸಕ್ತಃ
ಅಸ್ಮತ್ಕೃತೇ ಚ ಪರಿಶುಷ್ಯತಿ  ಕಾಚಿದನ್ಯಾ
ಧಿಕ್ ತಾಮ್ ಚ ತಮ್ ಚ ಮದನಮ್ ಚ ಇಮಾಮ್ ಚ ಮಾಮ್ ಚ ||
 
ಹೊಸತಲೆಮಾರಿನ ನಿರ್ದೇಶಕರಾದ  ಯೋಗರಾಜ ಭಟ್ಟರು ತಮ್ಮ  "ಮನಸಾರೆ" ಚಲನಚಿತ್ರದಲ್ಲಿ ಬಹಳ ಹಳೆ ತಲೆಮಾರಿನ ಈ ಪದ್ಯವನ್ನು ನೇರವಾಗಿ ಭಟ್ಟಿ ಇಳಿಸಿ, ಆ ಚಿತ್ರದಲ್ಲೊಂದು ಪ್ರಸಂಗಗನ್ನು ಹೆಣೆದಿರುವುದು, ಆ ಚಿತ್ರವನ್ನೂ ನೋದಿದ್ದವರಿಗೆ ನೆನಪಾದರೂ ನೆನಪಾಗಬಹುದು!
 
-ಹಂಸಾನಂದಿ
 
ಕೊ: ಇದು ಭರ್ತೃಹರಿಯ ಜೀವನದಲ್ಲಿ ನಡೆದ ಘಟನೆಯೊಂದರಿಂದ ಬೇಸರಗೊಂಡಾಗ ಅವನು ಬರೆದನೆಂದು ಪ್ರತೀತಿ. ಆ ಕಥೆಯ ಬಗ್ಗೆ ಮತ್ತೊಮ್ಮೆ ಹೇಳಬೇಕು!
 
ಕೊ.ಕೊ: ಇದು ನೀತಿಶತಕದ ಕೆಲವು ಪ್ರತಿಗಳಲ್ಲಿ ಎರಡನೇ ಪದ್ಯವಾಗಿ ಕಂಡುಬರುತ್ತದೆ. ಆದರೆ ಎಲ್ಲ ಆವೃತ್ತಿಗಳಲ್ಲೂ ಇದು ಇಲ್ಲ. ಹಾಗಾಗಿ ಪ್ರಕ್ಷಿಪ್ತವೆಂದೂ ಪರಿಗಣಿಸಲಾಗಿದೆ.
 
ಕೊ.ಕೊ.ಕೊ: ಮೂರನೇ ಸಾಲಿನಲ್ಲಿ "ಪರಿಶುಷ್ಯತಿ" ಬದಲು "ಪರಿತುಷ್ಯತಿ" ಎಂಬ ಪಾಠಾಂತರವೂ ಇರುವಂತೆ ತೋರುತ್ತದೆ. ಅರ್ಥದಲ್ಲಿ ಬದಲಾವಣೆ ಇದ್ದರೂ  ಅದರಿಂದ ಪದ್ಯದ ಆಶಯದಲ್ಲಿ ಬಹಳ ಹೆಚ್ಚಿನ ಬದಲಾವಣೆ ಏನೂ ಆಗದು.
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

<<ಕೊ: ಇದು ಭರ್ತೃಹರಿಯ ಜೀವನದಲ್ಲಿ ನಡೆದ ಘಟನೆಯೊಂದರಿಂದ ಬೇಸರಗೊಂಡಾಗ ಅವನು ಬರೆದನೆಂದು ಪ್ರತೀತಿ. ಆ ಕಥೆಯ ಬಗ್ಗೆ ಮತ್ತೊಮ್ಮೆ ಹೇಳಬೇಕು!>>
ಆ ಘಟನೆಯ ನಂತರ ಮೊದಲು ಶ್ರುಂಗಾರ ಶತಕ ಬರೆಯುತ್ತಿದ್ದವನು ನಂತರ ವೈರಾಗ್ಯ ಮತ್ತು ನೀತಿ ಶತಕಗಳನ್ನು ಬರೆದನೆಂದು ಪ್ರತೀತಿ.
ಅದು ಏನೇ ಇರಲಿ, ನಿಮ್ಮ ಅನುವಾದ ಸೊಗಸಾಗಿ ಮೂಢಿಬಂದಿಗೆ. ಅಭಿನಂದನೆಗಳು ಹಂಸಾನಂದಿಯವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ಸೊಗಸಾಗಿದೆ ....
ಹಲವಾರು ಆಲೋಚನೆಗಳು ಮೂಡಿ ಬಂದವು
01. ಮನದಾಕೆ ಮತ್ತು ಮನೆಯಾಕೆ ಇಬ್ಬರನ್ನೂ ಸಂಭಾಳಿಸಲು ಗಂಡಿಗೆ ಎರಡೂ ಕೈ ನೀಡಿರುವನೋ ಭಗವಂತ? ಇರ‌ಲಿ, ಈ ಪ್ರಸ‌ಂಗ‌ ಓದಿದ‌ ಮೇಲೆ ಇದು ಎಲ್ಲರಿಗೂ ಅನ್ವಯಿಸುತ್ತದೆ ಅನ್ನಿಸಿತು

02. ಪೂರ್ಣ‌‌ ಪ್ರಸ‌ಂಗದಲ್ಲಿ circuit complete ಆಗ‌ಬೇಕೆಂದ‌ರೆ ಮ‌ತ್ತೊಬ್ಬ ಗ‌ಂಡು ಬೇಕಿದೆ

03. ಪ‌ರ‌ ಪುರುಷ‌ನು ಮ‌ನ‌ದ‌ಲ್ಲಿದ್ದು ಗ‌ಂಡ‌ನೊಡ‌ನೆ ಬಾಳ್ವೆ ಮಾಡಿಕೊಂಡಿದ್ದರೂ ಆಕೆ ಪ‌ರ‌ಪುರುಷ‌ನ‌ ಹೆಂಡ‌ತಿಯೇ ಎಂದು ಎಲ್ಲೋ ಓದಿದ್ದೆ. ನಾ ಓದಿದ‌ ಪ್ರಸ‌ಂಗ‌ "ಕ್ಱುಷ್ಹ್ಣನು ಅರ‌ವ‌ತ್ತು ಸಾವಿರ‌ ಪ‌ತ್ನಿಯ‌ರ‌ನ್ನು ಹೇಗೆ ಹೊಂದಿದ್ದ" ಎಂಬುವುದ‌ಕ್ಕೆ ವಿಷ್ಲೇಷಣೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ಶ್ರೀನಾಥ್ ಅವರೆ, ಭರ್ತೃಹರಿಯ ಬಗ್ಗೆ ಇರುವ ದಂತ ಕಥೆಯಲ್ಲಿ circuit complete ಕೂಡ ಆಗುತ್ತೆ :) ಆದರೆ ಪದ್ಯದಲ್ಲಿ ಆ ರೀತಿ ತೋರುತ್ತಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ಆಹಾ ! ಕಥೆಯನ್ನು ಹಂಚಿಕೊಂಡರೆ ಚೆನ್ನಿತ್ತು :‍)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by melkote simha on

ಚೆನ್ನಾಗಿದೆ ಹಂಸಾನಂದಿ, ಇದು ನೋಡಿ, 20 ವರ್ಷ ಹಳೆಯದು !

ನಾ ಯಾರ ಪ್ರೇಮಿಪೆನೊ ಅವಳಾದಳೈ ವಿಮುಖಿ
ಅವಳಿಚ್ಛೆ ಇನ್ನೋರ್ವ, ಅವನನ್ಯಳತ್ತ !
ಇವಳೆನ್ನ ಕಾಮಿಪಳು ಧಿಕ್ಕರಿಸು ಅವಳನ್ನ
ಅವನನ್ನ ಮದನನ್ನ ಇವಳನ್ನ ನನ್ನ !

ಸಿಂಹ ಮೇಲುಕೋಟೆ, 1992

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಸಿಂಹರವರೇ,
ನಿಮ್ಮ ಅನುವಾದ ಸಿಂಪ್ಲಿ ಸೂಪರ್ಬ್! ಪದ್ಯದ ಪೂರ್ಣ ಭಾವಾನುವಾದ ಅತ್ಯಂತ ಕಡಿಮೆ ಹಾಗು ಕರಾರುವಾಕ್ಕಾದ ಪದಗಳಲ್ಲಿ ಹಿಡಿದಿಟ್ಟಿದ್ದೀರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ಸೊಗಸಾಗಿದೆ ಸಿಂಹ ಅವರೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ananthesha nempu on

ಸಿಂಹರವರೇ
ಬಹಳ ಚೆನ್ನಾಗಿದೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.