20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ

June 18, 2012 - 9:34am
makara

   
    ಇತ್ತೀಚೆಗೆ ಸಂಪದದಲ್ಲಿ ಪ್ರಕಟವಾದ ಆಸು ಹೆಗ್ಡೆಯವರ ಅಪ್ಪಯ್ಯ ಹೇಳಿದ ಕತೆ - ೧೧ (ಈ ಕೊಂಡಿಯನ್ನು ನೋಡಿ : http://sampada.net/b... ) ಓದುತ್ತಿರಬೇಕಾದರೆ ನೆನಪಾದದ್ದೇ ಮಿತ್ರನೊಬ್ಬನಿಂದ ಕೇಳಿದ್ದ ಇನ್ನೊಬ್ಬ ಸ್ವಾಮೀಜಿಯ ಸ್ವಾರಸ್ಯಕರವಾದ ಈ ಕೆಳಗಿನ ಕಥೆ.
   
    ಒಂದು ಊರಿಗೆ ಸ್ವಾಮಿಗಳೊಬ್ಬರು ಭೇಟಿ ಇತ್ತರಂತೆ, ಎರಡು ದಿನ ಕಳೆದರೂ ಇವರಿಗೆ ಅನ್ನ ನೀರು ಕೊಡುವುದಿರಲಿ ಅವರನ್ನು ಮಾತನಾಡಿಸುವ ಗೋಜಿಗೇ ಆ ಊರಿನವರ್ಯಾರೂ ಹೋಗಲಿಲ್ಲವಂತೆ. ಆಗ ಆ ಸ್ವಾಮಿಗಳು, ಈ ಊರಿನಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಲಿ, ಈ ಊರಿನವರಾರಿಗೂ ರೋಗ-ರುಜಿನಗಳು ಭಾದಿಸದೇ ಇರಲಿ ಎಂದು ಆಶೀರ್ವದಿಸಿ ಮುಂದಿನ ಊರಿಗೆ ಹೊರಟರಂತೆ. ಮುಂದೆ ಸಿಕ್ಕ ಊರಿನ ಜನ ಇವರನ್ನು ಚೆನ್ನಾಗಿ ಮಾತನಾಡಿಸಿ ಗೌರವಿಸಿದ್ದೇ ಅಲ್ಲದೆ ಒಳ್ಳೇ ಊಟ-ಉಪಚಾರಗಳನ್ನೂ ಒದಗಿಸಿ ತಮ್ಮ ಊರಿನಲ್ಲಿ ಇನ್ನೂ ನಾಲ್ಕಾರು ದಿವಸ ಇದ್ದು ಹೋಗುವಂತೆ ಬೇಡಿಕೊಂಡರಂತೆ. ಆಗ ಈ ಸ್ವಾಮಿಗಳು, ಆ ಊರಿನವರಿಗೆ ಒಂದು ಶಾಪ ಹಾಕಿ ಹೊರಟರಂತೆ, ಅದೇನೆಂದರೆ, "ಈ ಊರಿನಲ್ಲಿ ಸರಿಯಾಗಿ ಮಳೆ-ಬೆಳೆಯಾಗದೆ ಬರ ಬಿದ್ದು ಹೋಗಲಿ ಮತ್ತು ಈ ಊರಿನ ಜನ ಜಡ್ಡು-ಜಾಪತ್ರೆಗಳಿಂದ ತೊಳಲಾಡುವಂತಾಗಲಿ". ಇದನ್ನೆಲ್ಲಾ ಗಮನಿಸುತ್ತಿದ್ದ ಅವರ ಶಿಷ್ಯನೊಬ್ಬ ಗುರುಗಳ ಈ ವಿಚಿತ್ರ ವರ್ತನೆಗೆ ಕಾರಣವೇನೆಂದು ಕೇಳಿದ? ಆಗ ಗುರುಗಳು, "ಮೊದಲನೇ ಊರಿನವರು ಬಹಳ ಕೆಟ್ಟ ಜನ, ಅವರು ಎಲ್ಲಿಗೇ ಹೋದರೂ ಕೆಟ್ಟದ್ದನ್ನೇ ತಮ್ಮೊಂದಿಗೆ ಒಯ್ಯುತ್ತಾರೆ ಹಾಗಾಗಿ ಅವರು ಎಲ್ಲಿಗೂ ಹೋಗದೆ ಇದ್ದ ಊರಲ್ಲೇ ಇರಬೇಕೆಂದರೆ ಅವರ ಊರಿನಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಬೇಕು. ಅದೇ ಇನ್ನೊಂದೂರಿನ ಜನ ಮಳೆ-ಬೆಳೆಯಾಗದೇ, ರೋಗ-ರುಜಿನಗಳಿಗೆ ತುತ್ತಾದರೆ ಅವರು ಬೇರೆ-ಬೇರೆ ಊರುಗಳಿಗೆ ಹೋಗುತ್ತಾರೆ; ಹಾಗೆ ಬೇರೆ ಬೇರೆ ಕಡೆ ಹೋದ ಆ ಎರಡನೇ ಊರಿನ ಜನ ಅಲ್ಲೆಲ್ಲಾ ಒಳ್ಳೆಯ ತನವನ್ನು ಪಸರಿಸುತ್ತಾರೆ" ಎಂದರಂತೆ.
  

      (ಯಾರಾದರೂ ನಮಗೆ ಇನ್ನು ಮುಂದೆ ಶಾಪ ಹಾಕಿದರೆ ಬೇಸರಿಸುವುದು ಬೇಡ ಬಹುಶಃ ಅವರು ನಮ್ಮ ಒಳ್ಳೆಯತನವನ್ನು ನೋಡಿ ಅವರು ಹಾಗೆ ಹೇಳಿದ್ದಾರೆಂದು ಕೊಂಡರೆ ಆಯಿತಲ್ಲವೆ. )

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Prakash Narasimhaiya on

ಆದದೆಲ್ಲ ಒಳಿತೆ ಆಯಿತು, ಆಗೋದೆಲ್ಲ ಒಳ್ಳೆಯದಕ್ಕಾಗಿ ಎಂಬ ಮಾತು ಇಲ್ಲಿ ಪ್ರಸ್ತುತ. ಕಥೆ ಚಿಕ್ಕದಾದರೇನು? ನೀತಿ ದೊಡ್ಡದು.
ಪ್ರಕಾಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ನಿಮ್ಮ ಅನಿಸಿಕೆಗೆ ಧನ್ಯವಾದಗಳು ಪ್ರಕಾಶ್ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಚಿಕ್ಕುರವರೆ,
ಇದು ಒಳ್ಳೆಯ ಶಾಪವಲ್ಲ; ಒಳ್ಳೆಯವರಿಗೆ ಶಾಪ ಅಲ್ಲವೇ :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

>> (ಯಾರಾದರೂ ನಮಗೆ ಇನ್ನು ಮುಂದೆ ಶಾಪ ಹಾಕಿದರೆ ಬೇಸರಿಸುವುದು ಬೇಡ ಬಹುಶಃ ಅವರು ನಮ್ಮ ಒಳ್ಳೆಯತನವನ್ನು ನೋಡಿ ಅವರು ಹಾಗೆ ಹೇಳಿದ್ದಾರೆಂದು ಕೊಂಡರೆ ಆಯಿತಲ್ಲವೆ. )<< ...ಇದು ಸಾಧ್ಯವಾದಲ್ಲಿ ಮನಸ್ಸು ನಮ್ಮ (ಬುದ್ದಿಯ) ಹಿಡಿತಕ್ಕೆ ಬಂದಂತೆ ಆದರೆ ಇದಕ್ಕೆ ಅಭ್ಯಾಸ ಬೇಕು ಅಲ್ಲವೆ?
ಒಳ್ಳೆಯ ನೀತಿಯುಕ್ತ ಕಥೆ ಶ್ರೀಧರ್ ರವರೇ
....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by veena wadki on

ನೀತಿ ಕಥೆ ಚೆನ್ನಾಗಿದೆ..........ಅಭಿನಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ನಿಮ್ಮ ಮಾತು ನಿಜ ಸತೀಶ್, ಎಲ್ಲದಕ್ಕೂ ಅಭ್ಯಾಸ ಬೇಕು. ಬರಹ ನಿಮಗೆ ಇಷ್ಟವಾಗಿದ್ದು ನನಗೂ ಸಂತಸ ತಂದಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ಮೊದಲನೇ ಊರಿನವರು ಬಹಳ ಕೆಟ್ಟ ಜನ, ಅವರು ಎಲ್ಲಿಗೇ ಹೋದರೂ ಕೆಟ್ಟದ್ದನ್ನೇ ತಮ್ಮೊಂದಿಗೆ ಒಯ್ಯುತ್ತಾರೆ ಹಾಗಾಗಿ ಅವರು ಎಲ್ಲಿಗೂ ಹೋಗದೆ ಇದ್ದ ಊರಲ್ಲೇ ಇರಬೇಕೆಂದರೆ ಅವರ ಊರಿನಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಬೇಕು. ಅದೇ ಇನ್ನೊಂದೂರಿನ ಜನ ಮಳೆ-ಬೆಳೆಯಾಗದೇ, ರೋಗ-ರುಜಿನಗಳಿಗೆ ತುತ್ತಾದರೆ ಅವರು ಬೇರೆ-ಬೇರೆ ಊರುಗಳಿಗೆ ಹೋಗುತ್ತಾರೆ; ಹಾಗೆ ಬೇರೆ ಬೇರೆ ಕಡೆ ಹೋದ ಆ ಎರಡನೇ ಊರಿನ ಜನ ಅಲ್ಲೆಲ್ಲಾ ಒಳ್ಳೆಯ ತನವನ್ನು ಪಸರಿಸುತ್ತಾರೆ"

====================================================

ಶ್ರೀಧರ್ ಜೀ-

ಬರಹ ಮತ್ತು ಅದರ ತಿರುಳು ಸಖತ್...

ಶಾಪದ ಹಿನ್ನೆಲೆ ಮತ್ತು ವಿವರಣೆ ಸತ್ಯವೂ ಸರಳವೂ ಆಗಿದೆ...

ಉತ್ತಮ ಬರಹಕ್ಕಾಗಿ

ನನ್ನಿ

ಶುಭವಾಗಲಿ...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಸಪ್ತಗಿರಿಯವರೆ,
ಅಲ್ಲಲ್ಲಿ ಕಂಡ ಮತ್ತು ಕೇಳಿದ ಒಳ್ಳೆಯದು ಮತ್ತು ಸ್ವಾರಸ್ಯಕರವಾದದ್ದನ್ನು ಸ್ಪಂಜಿನಂತೆ ಹೀರಿ ಸಂಪದದಲ್ಲಿ ಹಿಂಡಿ ಬರಿದು ಮಾಡುವುದು ನನ್ನ ಕಾಯಕವಷ್ಟೇ. ಆದ್ದರಿಂದ ಅದರ ಕ್ರೆಡಿಟ್ ಮೂಲ ಲೇಖಕರಿಗೇ ಸಲ್ಲುತ್ತದೆ. ನಿಮ್ಮ ನಿರಂತರ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.