October 10, 2011 - 12:00pm
" ಗಝಲ್ ಕಿಂಗ್" ಎಂದು ಪ್ರಖ್ಯಾತರಾಗಿದ್ದ ಹಾಗೂ ಇಂದು ಮುಂಜಾನೆ ನಿಧನರಾದ ಜಗಜೀತ್ ಸಿಂಗ ಅವರ ದಿವ್ಯಾತ್ಮಕ್ಕೆ, ಆ ದೇವರು ಮುಕ್ತಿಯನ್ನು ದಯಪಾಲಿಸಲಿ!
ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ
ಅದ್ಯಾವ ನೋವ ಮರೆಮಾಚುತಿರುವೆ
ಮಂಜಾದ ಕಣ್ಣು ತುಟಿಯಲ್ಲಿ ನಗುವು
ಏನಿಹುದು ಏನ ನೀ ತೋರುತ್ತಿರುವೆ
ಅದ್ಯಾವ ನೋವ ಮರೆಮಾಚುತಿರುವೆ
ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ
ವಿಷವಾಗಿ ನಿನ್ನನ್ನೇ ಮುಗಿಸಬಹುದು
ಕಣ್ಣೀರ ನೀನು ಏಕೆ ಕುಡಿಯುತ್ತಿರುವೆ
ಕಾಲವೇ ಮಾಗಿಸಿಹ ಘಾಯಗಳನೆಲ್ಲಾ
ಇಂದ್ಯಾಕೆ ನೀನು ಹಸಿಗೊಳಿಸುತಿರುವೆ
ಅದ್ಯಾವ ನೋವ ಮರೆಮಾಚುತಿರುವೆ
ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ
ಸರಣಿ:
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ?
ಆತ್ಮೀಯ ಆಸುರವರೆ
ಕವನದ ಭಾವ ಚೆನ್ನಾಗಿದೆ
ಜಗಜೀತ್ ಸಿಂಗ ರವರನ್ನು ನೆನೆದು ಈ ಕವನ ಬರೆದಿರುವಿರಿ
ಇದು 'ನೀನು' ಅನ್ನುವಾಗ ಯಾರನ್ನು ಕುರಿತು ಸ0ಭೋಧನೆ ಅನ್ನುವ ಚಿಕ್ಕ ಅನುಮಾನ ನನಗೆ
ನಗಬೇಡಿ
ಒಮ್ಮೆ ಭಾವಾನುವಾದವಿರಬಹುದ ಎ0ದುಕೊ0ಡೆ
ಪಾರ್ಥಸಾರಥಿ
ಉ: ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ?
>>ಒಮ್ಮೆ ಭಾವಾನುವಾದವಿರಬಹುದ ಎ0ದುಕೊ0ಡೆ
ಹೌದು ಪಾರ್ಥಸಾರಥಿಯವರೆ,
"ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ" ಅಂದು ಓದಿದಾಗಲೇ -"ತುಮ್ ಇತ್ನೆ ಜ್ಯೋಂ(ಕ್ಯೋಂ?) ಮುಸ್ಕುರಾರಹೇಹೋ" ಹಾಡು ನೆನಪಾಗುವುದು. ಜಗಜಿತ್‌ರ ಸೂಪರ್ ಹಿಟ್ ಹಾಡು.
ಆಸು ಹೆಗ್ಡೆಯವರೆ,
ಭಾವಾನುವಾದನೂ ಚೆನ್ನಾಗಿದೆ.ಅದ್ಯಾವ ನೋವ ಮರೆಮಾಚುತಿರುವೆ- ಕ್ಯಾ ಗಮ್ ಹೆ ಜಿಸ್‌ಕೊ ಚುಪಾ ರಹೇ ಹೋ.. ಮತ್ತೆ ಊಂ ಉಂ..ರಾಗ ಮಾತ್ರ ಹಾಡು ಬರೊಲ್ಲ..:)
ಭಾವಾನುವಾದ ಮಾಡುವಾಗ ಹಾಡನ್ನು ಮೊದಲೇ ಕೊಡಬೇಡಿ. ನಮಗೇ ಊಹಿಸಲು ಬಿಡಿ. :)
ಹಾಡಿನಿಂದ ಜಗವನ್ನೇ ಗೆದ್ದ ಜಗಜಿತ್‌ರಿಗೆ ನನ್ನದೂ ನಮನಗಳು.
-ಗಣೇಶ.
ಉ: ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ?
ಅಸು ಸರ್ ಕವನ ಚೆನ್ನಾಗಿದೆ, ಗಜಲ್ ಕಿ0ಗ್ ಆತ್ಮಕ್ಕೆ ಶಾ0ತಿ ಸಿಗಲಿ.
ಉ: ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ?
ಕಲಾವಿಧರ ದೊಡ್ಡತನವೆ0ದರೇ ಇದೇ. ತಮ್ಮೊಳಗೆ ದು:ಖವನ್ನು ನು0ಗಿಕೊ0ಡು ಇತರರಿಗೆ ಸ0ತೋಷ ಕೊಡೋದು. ಅದರ ಭಾವಾಭಿವ್ಯಕ್ತವನ್ನು ಬಹಳ ಚೆನ್ನಾಗಿ ಭಾವಾನುವಾದದ ಮೂಲಕ ತಿಳಿಸಿಕೊಟ್ಟಿದ್ದೀರ ಆಸುರವರೆ.
ಉ: ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ?
ಸು0ದರ ಭಾವಾನುವಾದ, ಅಗಲಿದ ಕಲಾವಿದರಿಗೆ ಭಾವಪೂರ್ಣ ಶೃದ್ಧಾ೦ಜಲಿ .