August 18, 2012 - 12:30pm
ಪ್ರಜಾರಾಜ್ಯವಾಳುವ
ದೊರೆಗಳ ಹೆಕ್ಕಿ ಹುಡುಕಿದೆ,
ಕಾಣಸಿಗಲಿಲ್ಲ ಅವ.
ಲೋಕವ ತಿದ್ದುವ ಮಾಧ್ಯಮಗಳ,
ವಾಹಿನಿಗಳ ತಿರುತಿರುಗಿಸಿ ಹುಡುಕಿದೆ,
ಕಾಣಸಿಗಲಿಲ್ಲ ಅವ.
ಜ್ಞಾನ ವಿಜ್ಞಾನ ಬೆಸೆದಿಹ,
ನಾಗರೀಕ ಬದುಕಿನ ಕೇರಿಗಳಲ್ಲೂ,
ಕಾಣಸಿಗಲಿಲ್ಲ ಅವ.
ಧರ್ಮವಿಚಾರದಿ ಮತಾಂಧತೆ ಬೆರೆಸಿ,
ಮಾನವೀಯತೆಯ ಮರೆತವರ ನಡುವೆಯೂ
ಕಾಣಸಿಗಲಿಲ್ಲ ಅವ.
ಹುಡುಕಿ ಹುಡುಕಿ ದಣಿದಿಹೆ ನಾನು,
ನೀವೆಲ್ಲಾದರೂ ಕಂಡಿರಾ ಅವನ..?
ಕೆಚ್ಚೆದೆಯ ಹೆಮ್ಮೆಯ ``ಭಾರತೀಯನ``.
ರಾಮೋ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಹುಡುಕಾಟ
ಒಳ್ಳೆಯ ಕವನ, ಬೇರೆಯವರಲ್ಲಿ ಅವನನ್ನು ಹುಡುಕುವ ಮೊದಲು ನಮ್ಮೊಳಗೆ (ಎಲ್ಲರು ) " ಭಾರತೀಯನ " ನ್ನು ಬೆಳಸಬೇಕು
ಧನ್ಯವಾದಗಳೊಂದಿಗೆ
...ಸತೀಶ್
ಉ: ಹುಡುಕಾಟ
+1, ಒಳ್ಳೆಯ ಕವನ ರಾಮೋ :)ಅವರೆ.
ಉ: ಹುಡುಕಾಟ
ದನ್ಯವಾದಗಳು ಶ್ರೀಧರ್ ಸಾರ್. :),
ರಾಮೋ.
ಉ: ಹುಡುಕಾಟ
>>ಬೇರೆಯವರಲ್ಲಿ ಅವನನ್ನು ಹುಡುಕುವ ಮೊದಲು ನಮ್ಮೊಳಗೆ (ಎಲ್ಲರು ) " ಭಾರತೀಯನ " ನ್ನು ಬೆಳಸಬೇಕು<<
ತಮ್ಮ ಮಾತು ಅಕ್ಷರಸಹ ನಿಜ. ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ಸತೀಶ್.
ರಾಮೋ.
ಉ: ಹುಡುಕಾಟ @ ರಾಮ ಮೋಹನ ಅವ್ರೇ
ಹುಡುಕಿ ಹುಡುಕಿ ದಣಿದಿಹೆ ನಾನು,
ನೀವೆಲ್ಲಾದರೂ ಕಂಡಿರಾ ಅವನ..?
ಕೆಚ್ಚೆದೆಯ ಹೆಮ್ಮೆಯ ``ಭಾರತೀಯನ``.
=====================
ನಾವೂ ಹುಡುಕುತ್ತಿರುವೆವು... ನಮ್ಮೊಳಗೆ ಇರ್ವ ಅವನ ನೋಡದೆ..!
ರಾಮ ಮೋಹನ ಅವ್ರೇ
ಯಾಕೋ ನಿಮ್ಮ ಬರಹ ನನಗೆ ಎಲ್ಲೆಲ್ಲೋ ಹುಡುಕಿದೆ ಇಲ್ಲದ ದೇವರ ಗುಡಿಯೊಳಗೆ, ನನ್ನೊಳಗೆ ಇರುವುದ ನೋಡದೆ ಅನ್ನೊದ ನೆನಪಿಸಿತು...
ನಿಮ್ಮ ಬರಹದಲ್ಲಿ ಹೇಳಿದ್ದು ಸತ್ಯ. ಈಗ್ಗೆ ಕೆಲ ದಿನಗಳಿಂದ ನಡೆಯುತ್ತಿರ್ವ ವಿದ್ಯಮಾನಗಳನ್ನು ನೋಡಿದರೆ -ನಮ್ಮ ದೇಶ ಆಳುವ ನಾಯಕರು, ಸಮಸ್ಯೆಗಳು, ಉದಾಸೀನ ನಾಗರೀಕರು, ಎಲ್ಲವೂ ನಮಗೆ ಭವಿಷ್ಯದ ಬಗ್ಗೆ ಭರವಸೆ ಇಲ್ಲದ ಹಾಗೆ ಮಾಡುತ್ತಿವೆ..
ಸಕಾಲಿಕ ಬರಹ...
ನಾವೆಲ್ಲಾ ಜಾಗೃತರಾಗಬೇಕು..
ಶುಭವಾಗಲಿ..
\|/
ಉ: ಹುಡುಕಾಟ @ ರಾಮ ಮೋಹನ ಅವ್ರೇ
+1
ಉ: ಹುಡುಕಾಟ
ಚೆನ್ನಾಗಿದೆ
ನಮ್ಮೊಳಗಿದ್ದಾನೆ ಅವ ಆದರೆ ಹೊರಬರಲು ಒದ್ದಾಡುತ್ತಿದ್ದಾನೆ!!
ಉ: ಹುಡುಕಾಟ
ಎಲ್ಲರ ಮನದಲ್ಲೂ ಇದ್ದಾನೆ. ಆದರೆ ಅವನನ್ನು ಹೊಳೆಯುವಂತೆ ಮಾಡಲು, ನಮ್ಮಲ್ಲಿನ ಸಾಮೂಹಿಕ ನಾಯಕತ್ವದಲ್ಲಿ ಅವ ಎದ್ದು ಕಾಣಬೇಕು. ಆಗ ಭಾರತ ಭವ್ಯವಾಗುತ್ತದೆ ಮತ್ತು ವಿಶ್ವದ `ಅಣ್ಣ` ಅನ್ನಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಪ್ರತಿಕ್ರಿಯಿಸಿದ ಸವಾ,ಚಿಕ್ಕು ಹಾಗೂ ನಂಜುಂಡರಿಗೂ ಧನ್ಯವಾದಗಳು.
ರಾಮೋ.