August 22, 2011 - 10:17pm
ಆ ಶಿಶಿರದ ರಾತ್ರಿ,
ಮೂಡುತ್ತಿತ್ತು ಬೆಳ್ಳಿಗಿಂಡಿ ಹೊಳೆಹೊಳೆದು,
ಕರೆಯುತ್ತಾ ಸುತ್ತಲು ತಾರೆ ಚಕೋರಿಗಳನ್ನು,
ನಡುನಡುವೆ ಏರುತ್ತಿತ್ತು ತಡೆತಡೆದು...
ಪಚ್ಚೆಹಸಿರು ಎಲೆಗಳ ಮಧ್ಯೆ ಮೊಗತೂರಿ
ಕಣ್ಣಿಟ್ಟು ನೋಡುತ್ತಿದ್ದಾನೆ ನೆಲಕ್ಕೆ,
ಇಳಿದಿಳಿದು ಕಾಲ್ತೊಟ್ಟು ಹರಿದಾಡುತ್ತಿದ್ದಾನೆ
ತಳಕ್ಕೆ, ಆ ಮರದ ಬುಡಕ್ಕೆ...
ಹಾಲು ಬೆಳಕು ಇಳಿಯಿತು ಭೂಗರ್ಭದೊಳಗೆ,
ತಂಪು ಮೈ ಒಳಒಳಗೆ ಬಿಸಿಯಾಯಿತು ಸ್ಪರ್ಶಕ್ಕೆ,
ಅಂಗುಲ, ಅಡಿ, ಇಡಿಇಡಿಯಾಗಿ ಆವರಿಸಿತು ಮೈತುಂಬ,
ಬುವಿಯಾಗಿತ್ತು ಪ್ರತಿಚಂದ್ರ ಆ ಕ್ಷೀರಸ್ನಾನಕ್ಕೆ...
ಗ್ರಹತಾರೆಗಳೆಲ್ಲವು ಭಣಗುಡುತ್ತಿದ್ದವು ತಂತಮ್ಮ ಕಾಂತಿಕಳೆದು,
ರೋಹಿಣಿ ಮಾತ್ರ ಮಿನಿಗುತ್ತಿದ್ದಳು ಶಶಿಯ ಕೈ ಹಿಡಿದು,
ಈ ತಿಂಗಳ ರಾತ್ರಿ ತಮ್ಮದೆಂದು, ಸಿಂಗರಿಸಿಕೊಂಡಿದ್ದಳವಳು ಬೀಗಿ,
ಹೌದು, ಮೆರೆಯುತ್ತಿದ್ದ ಕಾಮ ಅವರಿಬ್ಬರ ಕಣ್ಗಳಲ್ಲಿ ಕುಣಿದು...
ಯೋಚಿಸುತ್ತಿದ್ದೆ, ಪ್ರತಿ ತಿಂಗಳ ರಾತ್ರಿಯ ಈ ಬೆಳಕಿನ ಧಾರೆಯ ಗುಟ್ಟು...
ಬುವಿಯ ಸಾಗರದ ಕನ್ನಡಿಯಲಿ ತನ್ನ
ಪೂರ್ಣಬಿಂಬವ ಕಂಡು ನಕ್ಕು ಬಿಡುವ ಶಶಿ -
ರೋಹಿಣಿ ಅಂದಳು, ಅಂದು ಹುಣ್ಣಿಮೆಯಿತ್ತು...
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಹುಣ್ಣಿಮೆ...
ಪ್ರಸನ್ನ ಅವರೇ ಉತ್ತಮವಾದ ಕವನ
ಉ: ಹುಣ್ಣಿಮೆ...
+1
ಉ: ಹುಣ್ಣಿಮೆ...
ಧನ್ಯವಾದಗಳು...
ಉ: ಹುಣ್ಣಿಮೆ...
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಜಯ೦ತ್..