ಈಗಿನಂತೆ 5 ಸದಸ್ಯರು ಮತ್ತು 81 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಕುಹೂ, ಕುಹೂ ಕೋಗಿಲೆ ಮತ್ತು ಮೆದುಳಿಲ್ಲದ ಮೀನು
abdul's picture
ಅಬ್ದುಲ್ ಲತೀಫ್ ಸಯ್ಯದ್
29
Dec
2011
ಬ್ಲಾಗ್ ಬರಹ

ಕಾಂಗೋ ದೇಶದ ನಿತ್ಯಹರಿದ್ವರ್ಣ (rain forest) ಕಾಡಿನಲ್ಲಿ ಕುಹೂ ಕುಹೂ ಎಂದು ಹಾಡುತ್ತಾ ತಿಂದುಂಡು...

ಪ್ರತಿಕ್ರಿಯೆಗಳು: 3
ಹಿಟ್ಸ್ : 117
ಷುಗರ್ ವಾಸಿಯಾಗಬೇಕೇ - ಸಂಪರ್ಕಿಸಿ
komal kumar1231's picture
komal
11
Jul
2010
ಬ್ಲಾಗ್ ಬರಹ

ಪಕ್ಕದ ಹಳ್ಳಿಯ ಪಟೇಲ ಧಿಡೀರ್ ಡಾಕ್ಟರ್ ಆಗಿದ್ದ. ಎಲ್ಲಾ ಆಹ್ವಾನ ಪತ್ರಿಕೆಗಳಲ್ಲೂ ಡಾ.ಪಟೇಲ ಅಂತಾ ಇರೋದು. ಪೇಪರ್ನಾಗೆಲ್ಲಾ ಪೇಮಸ್. ಇವರ ಅಜ್ಜನ ಕಾಲದಾಗೆ ನಾಟಿ ಔಷಧಿ ಕೊಡ್ತಾ...

ಪ್ರತಿಕ್ರಿಯೆಗಳು: 8
ಹಿಟ್ಸ್ : 1,063
'ಅಶ್ರು ತರ್ಪಣ,' 'ನೆತ್ತರು ತರ್ಪಣ,'ವಾಗದಿರಲಿ ! ತಪ್ಪುಗಳಿಂದ ಎಚ್ಚೆತ್ತುಕೊಳ್ಳೋಣ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
14
Apr
2006
ಪುಟ

'ಅಶ್ರು ತರ್ಪಣ,' 'ನೆತ್ತರು ತರ್ಪಣ,'ವಾಗದಿರಲಿ ! ತಪ್ಪುಗಳಿಂದ ಎಚ್ಚೆತ್ತುಕೊಳ್ಳೋಣ ! ಸಾವು ಆಕಸ್ಮಿಕ ಹಾಗು ಅನಿವಾರ್ಯ ಕೂಡ:

ರಾಜ್ ಅವರು ಮರಣ ಹೊಂದಿದ ಘಳಿಗೆಯಲ್ಲಿ...

ಪ್ರತಿಕ್ರಿಯೆಗಳು: 0
ಹಿಟ್ಸ್ : 1,424
ನಮ್ಮ ಮೆಟ್ರೋ
bhaashapriya's picture
bhaashapriya CS
29
Nov
2010
ಲೇಖನ

ಚಿತ್ರ :Clickindia

ಬಹಳಾ ವರ್ಷಗಳಾಗಿತ್ತು...

ಪ್ರತಿಕ್ರಿಯೆಗಳು: 8
ಹಿಟ್ಸ್ : 976
ಮೂರು ಗುಡ್ಡಗಳಲ್ಲಿ ಬಾಲ್ಯದ ದಿನಗಳು
addoor's picture
ಅಡ್ಡೂರು ಕೃಷ್ಣ ರಾವ್
24
Jul
2011
ಲೇಖನ

೧೯೬೦ರ ದಶಕದಲ್ಲಿ ಮಂಗಳೂರಿನಲ್ಲಿ ಪ್ರಾಥಮಿಕ ಶಾಲೆಯ ದಿನಗಳಲ್ಲಿ ನಾನೂ ತಮ್ಮನೂ ಕಾಯುತ್ತಿದ್ದದ್ದು ಬೇಸಿಗೆಯ ರಜಾ ದಿನಗಳಿಗಾಗಿ. ಶಾಲಾ ಪರೀಕ್ಷೆಗಳು ಮುಗಿದ ದಿನ ಸಂಜೆಯೇ...

ಪ್ರತಿಕ್ರಿಯೆಗಳು: 6
ಹಿಟ್ಸ್ : 517
ಭೀಮೇಶ್ವರದ ತುಪ್ಪದ ಕೊಡ
devaru.rbhat's picture
ದೇವರು ಆರ್ ಭಟ್
18
Jan
2011
ಲೇಖನ

ಭೀಮೇಶ್ವರದ ತುಪ್ಪದ ಕೊಡ :
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮರಗುಡಿ ಸೀಮಾ ವ್ಯಾಪ್ತಿಯ,...

ಪ್ರತಿಕ್ರಿಯೆಗಳು: 2
ಹಿಟ್ಸ್ : 784
ಮುಕೇಶ್, ಹಿಂದೀ ಚಲನಚಿತ್ರರಂಗದ ಹಿನ್ನೆಲೆ ಗಾಯಕ - ಒಂದು ಕಿರುಪರಿಚಯ
Iynanda Prabhukumar's picture
ಐನಂಡ ಪ್ರಭುಕುಮಾರ್
27
Aug
2011
ಲೇಖನ

ಇಂದಿಗೆ ಹಿಂದೀ ಚಲನಚಿತ್ರ ಜಗತ್ತಿನ ಹಿನ್ನೆಲೆ ಗಾಯಕಶ್ರೇಷ್ಠರಲ್ಲೊಬ್ಬರಾದ...

ಪ್ರತಿಕ್ರಿಯೆಗಳು: 17
ಹಿಟ್ಸ್ : 265
ಸಚಿನ್ ರಮೇಶ್ ತೆಂಡೂಲ್ಕರ್
Jayanth Ramachar's picture
ಜಯಂತ್ ರಾಮಾಚಾರ್
20
Dec
2010
ಲೇಖನ

ಸಚಿನ್ ರಮೇಶ್ ತೆಂಡೂಲ್ಕರ್, ಬಹುಷಃ ಈ ಹೆಸರನ್ನು ಕೇಳದೆ ಇರುವವರು ಯಾರೂ ಇರುವುದಿಲ್ಲ. ಈ ಹೆಸರೇ ಕ್ರಿಕೆಟ್ ಪ್ರೇಮಿಗಳಲ್ಲಿ ಒಂದು ರೀತಿಯ ರೋಮಾಂಚನ ಉಂಟು ಮಾಡುವುದು. ೧೯೮೯ ರಲ್ಲಿ...

ಪ್ರತಿಕ್ರಿಯೆಗಳು: 8
ಹಿಟ್ಸ್ : 877
ಗಣಪತಿ ವಿಸರ್ಜನೆ ನಾಳೆ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
05
Sep
2006
ಪುಟ
"ಗಣಪತಿ ಬಂದ, ಕಾಯ್ಕಡುಬು ತಿಂದ", ಎಂದು ಸಡಗರಿಸುವ ಹೊತ್ತಿಗೆ, ಆಗಲೇ ವಿಘ್ನೇಶ್ವರನಿಗೆ ವಿದಾಯ ಸಲ್ಲಿಸುವ ಸಮಯ ಹತ್ತಿರವಾಗುತ್ತಿದೆ ! ನಾವು ಈಗ ಹೇಳಬೇಕಾದದ್ದು ಮುಂದಿನ ವರ್ಷ ಬೇಗ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,356
ಸವಿ ಸವಿ ರಂಜಲ ಹಣ್ಣು
devaru.rbhat's picture
ದೇವರು ಆರ್ ಭಟ್
05
Feb
2011
ಬ್ಲಾಗ್ ಬರಹ

ರಂಜಲ ಹಣ್ಣು:
ರಂಜಲು ಮರ ಎಂದರೆ ನಾವು ಚಿಕ್ಕವರಿದ್ದಾಗ ಇದು ಕೋಯ್ದ ನಂತರ ಬಾಗು ಬರುವ ಮರ, ಸೀಳು ಬರುವ ಮರ ಆದ್ದರಿಂದ ಇದು ಕೆತ್ತನೆಗಳಿಗೆ ಯೋಗ್ಯವಲ್ಲ ಎಂಬ ಕಳಂಕ...

ಪ್ರತಿಕ್ರಿಯೆಗಳು: 2
ಹಿಟ್ಸ್ : 573

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಹೊಸ ವರ್ಷದ ಹೊಸ್ತಿಲಲ್ಲೊಂದು ಹೊಸ ವರ್ಣ

ಹೊಸ ವರ್ಷದ ಹೊಸ್ತಿಲಲ್ಲೊಂದು ಹೊಸ ವರ್ಣ

ಎಲ್ಲ ಸಂಪದಿಗರಿಗೂ ೨೦೧೨ ಸಂತಸದಿಂದ ಕೂಡಿರಲಿ ಎಂಬ ಹಾರೈಕೆಗಳಿಂದಲೇ ಮೊದಲು ಮಾಡುವೆ. ಅದು ಹೇಗೋ ಕಳೆದ ವರ್ಷದ ಮೊದಲ ಬರಹವೂ ’ಬುರುಡೆ ಇಲ್ಲದ ವೀಣೆ’ ಎಂಬ ಸಂಗೀತವಾದ್ಯವೊಂದರ ಬಗ್ಗೆ ಬರೆದ ಪದ್ಯವೇ ಆಗಿತ್ತು. ಇರಲಿ, ಎಲ್ಲರ ಬಾಳಿನಲ್ಲೂ ಸಂಗೀತ ಹಾಸುಹೊಕ್ಕಾಗಿದ್ದರೆ, ಸಂತೋಷ ನೆಮ್ಮದಿಗಳು ಹೆಚ್ಚುತ್ತವೆ ಅನ್ನುವುದು ನನ್ನ ಎಣಿಕೆ.

ವರ್ಣ ಎಂದರೆ ಕರ್ನಾಟಕ ಸಂಗೀತದ ಒಂದು ರಚನಾ ಪ್ರಕಾರ. ಎಲ್ಲರಿಗೂ ಗೊತ್ತಿರುವಂತೆ ವರ್ಣ ಎಂದರೆ ಬಣ್ಣ ಎನ್ನುವುದು ಸಾಮಾನ್ಯಾರ್ಥ. ಆದರೆ ಸಂಗೀತದಲ್ಲಿ ಇದು ಹೇಗೆ ಒಂದು ಹಾಡುವ ರಚನೆಯಾಯಿತು? ಬಹುಶಃ ಒಂದು ರಾಗದ ಬಗೆ ಬಗೆಯ ಬಣ್ಣಗಳನ್ನ ತೋರಿಸೋದರಿಂದಲೇ ಈ   ಹೆಸರು ಬಂದಿರಬೇಕೆಂದು ತೋರುತ್ತೆ.  ಒಂದು ರಾಗದ ಬೇರೆ ಬೇರೆ ಸ್ವರೂಪಗಳನ್ನು ತೋರಿಸುವುದು, ಅದು ಒಳಗೊಳ್ಳುವ  ಬಗೆ ಬಗೆ ವಿನ್ಯಾಸಗಳನ್ನು ತೋರಿಸುವುದು ವರ್ಣಗಳ ಒಂದು ಗುರಿ ಎನ್ನಬಹುದು.

ಈ ರಚನಾಪ್ರಕಾರ ತುಂಬಾ ಹಳೆಯದ್ದೇನಲ್ಲ. ಕರ್ನಾಟಕ ಸಂಗೀತದಲ್ಲಿ ೧೮ ನೇ ಶತಮಾನದಲ್ಲಿ ಹುಟ್ಟಿಕೊಂಡದ್ದು.ರಾಗಭಾವ ವನ್ನು ಹೊಮ್ಮಿಸುವುದು, ಮತ್ತು ತಾನದ ಶೈಲಿಯನ್ನು ಅನುಕರಿಸುವ ತಾನವರ್ಣಗಳು, ಮತ್ತೆ ನೃತ್ಯಗಳಿಗೆ ಹೇಳಿ ಮಾಡಿಸಿದಂತಹ ಪದವರ್ಣಗಳು ಎಂಬ ಎರಡು ರೀತಿಯ ವರ್ಣಗಳು ಚಾಲ್ತಿಯಲ್ಲಿವೆ.  

 

ಮೊದಮೊದಲು ವರ್ಣಗಳನ್ನು ರಚಿಸಿದವರಲ್ಲಿ ನಮ್ಮ ವೀಣೆ ಶೇಷಣ್ಣನವರ ಮನೆತನದ ಪೂರ್ವಜರಾದ ಪಚ್ಚಮಿರಿಯಂ ಆದಿಪ್ಪಯ್ಯ ಪ್ರಮುಖರು. ಅವರ ಭೈರವಿ ರಾಗದ ವಿರಿಬೋಣಿ ಎಂಬ ವರ್ಣ ಇಂದಿಗೂ ಅತೀ ಪ್ರಸಿದ್ಧ ವರ್ಣವೆಂದರೆ ತಪ್ಪಿಲ್ಲ. ಹೆಚ್ಚಿನ ವರ್ಣಗಳಲ್ಲಿ ಸಾಹಿತ್ಯ ನಾಯಕಿ-ನಾಯಕೀ ಭಾವದಲ್ಲಿರುವುದೇ ಹೆಚ್ಚು. ನಾಯಕ ಆ ಕಾಲದ ಯಾರಾದರೂ  ಅರಸನಾಗಿರಬಹುದು, ಇಲ್ಲವೇ,  ಯಾರಾದರೂ  ದೇವರನ್ನೇ ತನ್ನ ಜೊತೆಗಾರನೆಂದು ಭಾವಿಸಿರುವ ನಾಯಕಿಯೂ ಇರಬಹುದು. ಹೆಚ್ಚಿನ ವರ್ಣಗಳು ತೆಲುಗು ಭಾಷೆಯಲ್ಲಿವೆ.

೧೮-೧೯ನೇ ಶತಮಾನಗಳಲ್ಲಿ ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್, ಪೂಚ್ಚಿ ಶ್ರೀನಿವಾಸ ಅಯ್ಯಂಗಾರ್, ಸ್ವಾತಿ ತಿರುನಾಳ್ ಮೊದಲಾದವರು ಉತ್ತಮ ತಾನವರ್ಣವರನ್ನು ರಚಿಸಿದವರಲ್ಲಿ ಪ್ರಮುಖರು. ಮತ್ತೆ ಇಪ್ಪತ್ತನೇ  ಶತಮಾನದಲ್ಲಿ ಲಾಲ್ಗುಡಿ ಜಯರಾಮನ್  ಮತ್ತೆ ಬಾಲಮುರಳಿಕೃಷ್ಣ ಅವರು ಬಹಳ ಒಳ್ಳೆಯ ವರ್ಣಗಳನ್ನು ರಚಿಸಿದ್ದಾರೆ. 

ಇಷ್ಟೆಲ್ಲ ಯಾಕೆ ಹೇಳ್ತಾ  ಇದ್ದೀನಿ ಅಂದರೆ, ಕಳೆದ ಒಂದೆರಡು ವರ್ಷಗಳಿಂದ ನಾನೂ ಒಂದು ಮೂರು-ನಾಲ್ಕು ವರ್ಣಗಳನ್ನು ರಚಿಸುವ ಪ್ರಯತ್ನ ಮಾಡಿದ್ದೇನೆ. ಅದರಲ್ಲಿ ಈಚಿನದ್ದೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಇದರ ಸಾಹಿತ್ಯದ ಸಾಲುಗಳನ್ನು ನಾನು ಪುರಂದರ ದಾಸರ ಪದವೊಂದರಿಂದ ತೆಗೆದುಕೊಂಡಿದ್ದೇನೆ. ಆದರೆ ಅಲ್ಲಿ ಬದಲಾವಣೆಗಳನ್ನು ತಂದು, ವರ್ಣದ ಧಾಟಿಗೆ ಹೊಂದಿಸುವ ಪ್ರಯತ್ನ ಮಾಡಿದ್ದೇನೆ. ಮತ್ತೆ ಇದನ್ನು ನಾಲ್ಕು-ಕಲ್ಯಾಣಿ ರಾಗಗಳ ರಾಗಮಾಲಿಕಾ ವರ್ಣವಾಗಿ ಅಳವಡಿಸಿದ್ದೇನೆ.

ಇದರ ಸಾಹಿತ್ಯ ಹೀಗಿದೆ. ಮೊದಲೇ  ಹೇಳಿದಂತೆ, ಈ ಸಾಲುಗಳು ಪುರಂದರ ದಾಸರ ತಂಗಾಳಿ ವಶವಲ್ಲವೇ  ಎನ್ನುವ ಪದದಿಂದ ಪ್ರೇರಿತವಾಗಿವೆ. ಪುರಂದರ ವಿಠಲನನ್ನೇ ಸೇರ ಹಂಬಲಿಸ್ಸಿದ ನಾಯಕಿ, ಅವನೇಕೆ ಬಾರನೋ  ಎಂದು ತನ್ನಳನಲ್ಲು ತನ್ನ ಸಖಿಯಲ್ಲಿ ತೋಡಿಕೊಳ್ಳುತ್ತಿದ್ದಾಳೆ.

ಅಂಗಳದಿ ಬೆಳದಿಂಗಳು ತುಂಬಿದೆ  ಬಂಗಾರ ಭಾರ   ಒಡಲಿಗೆ  || ಪಲ್ಲವಿ||
ತಂಗದಿರನ ಕಿರಣ ಕಂದಿಸಿತೆನ್ನ   ತಂಗಾಳಿಯಲಿ ನಾ ನಿಲಲಾರೆನೇ || ಅನುಪಲ್ಲವಿ||
ಪುರಂದರ ವಿಠಲ ಬಾರನೇಕೇ ? ||ಚರಣ||

ಈ  ವರ್ಣದ ಪಲ್ಲವಿ ಕಲ್ಯಾಣಿ ರಾಗದಲ್ಲೂ,  ಅನುಪಲ್ಲವಿ ಹಮೀರ್ ಕಲ್ಯಾಣಿ ರಾಗದಲ್ಲೂ, ಚಿಟ್ಟೆ ಸ್ವರವು ಮೋಹನ ಕಲ್ಯಾಣಿ ರಾಗದಲ್ಲೂ ಮತ್ತೆ ಚರಣ ಯಮನ್ ಕಲ್ಯಾಣಿ ರಾಗದಲ್ಲೂ ಇವೆ.  ಚರಣದ ನಂತರ ಬರುವ ಎತ್ತುಗಡೆ  ಸ್ವರಗಳು ಇವೇ ನಾಲ್ಕು ರಾಗದಲ್ಲಿ ಹಿಮ್ಮುಖವಾಗಿ ಇವೆ.

ಆಸಕ್ತಿಯಿರುವ ಸಂಪದಿಗರು, ಈ ಕೊಂಡಿಯಲ್ಲಿ ಚಿಟಕಿಸಿದರೆ, ವರ್ಣದ ಉತ್ತರಾಂಗವನ್ನು (ಚರಣ ಮತ್ತು ಎತ್ತುಗಡೆ ಸ್ವರಗಳನ್ನು ಕೇಳಬಹುದು). ಇದರ ಮೆಟ್ಟನ್ನು ನೋಡಬೇಕಾದರೆ ಇಲ್ಲಿ ಚಿಟಕಿಸಿ.

ನಿಮ್ಮೆಲ್ಲರ ಬಾಳೂ ಬರುವ ವರ್ಷದಲ್ಲಿ ವರ್ಣರಂಜಿತವಾಗಿರಲಿ, ನೆಮ್ಮದಿಯಿಂದ ತುಂಬಿರಲಿ ಎಂಬ ಹಾರೈಕೆಗಳೊಡನೆ,

-ಹಂಸಾನಂದಿ

Average: 4.5 (2 votes)
108 ಹಿಟ್ಸ್