ಈಗಿನಂತೆ 5 ಸದಸ್ಯರು ಮತ್ತು 80 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಡಾ ಎಚ್ ಎಸ ವಿ ಯವರ ಹೊಸ ಕಾದಂಬರಿ "ವೇದವತಿ ನದಿಯಲ್ಲ" ಬಿಡುಗಡೆ
gopinatha's picture
ಬೆಳ್ಳಾಲ ಗೋಪೀನಾಥ ರಾವ್
31
Dec
2011
ಲೇಖನ

ಡಾ ಎಚ್ ಎಸ ವಿ ಯವರ   ಹೊಸ ಕಾದಂಬರಿ "ವೇದವತಿ ನದಿಯಲ್ಲ"   ಬಿಡುಗಡೆ

ಸ್ಪಂದನ...

ಪ್ರತಿಕ್ರಿಯೆಗಳು: 0
ಹಿಟ್ಸ್ : 107
ನಾವಿಕರಿಗೆ ಕಣ್ಣು ನೀಡಿದ ಬೆಳಕು ಆತನ ಕಣ್ಣು ಕಳೆದಿತ್ತು!
uniquesupri's picture
ಸುಪ್ರೀತ್.ಕೆ.ಎಸ್
07
Nov
2009
ಪುಟ


ನೀವು ಬೈಕು ನಡೆಸುತ್ತಿದ್ದೀರಿ ಎಂದು ಭಾವಿಸಿ. ಹಾಡಹಗಲಲ್ಲಿ ಸೂರ್ಯನ ಬೆಳಕು ನಿಚ್ಚಳವಾಗಿದ್ದಾಗ ರಸ್ತೆಗಳು, ರಸ್ತೆಯ ತಿರುವುಗಳು, ರಸ್ತೆಯ ಮಧ್ಯದಲ್ಲಿರುವ ರಸ್ತೆ...

ಪ್ರತಿಕ್ರಿಯೆಗಳು: 0
ಹಿಟ್ಸ್ : 957
ವೃತ್ತಿ ಜೀವನದಲ್ಲಿ ಒಂದು ದಿನ ...
bhalle's picture
ಶ್ರೀನಾಥ್ ಭಲ್ಲೆ
02
Dec
2009
ಪುಟ

 

ಬೆಳಿಗ್ಗೆ ಅಲಾರಂ ಹೊಡೆದುಕೊಳ್ಳಲಾರಂಭಿಸಿತು. ಅದರ ತಲೆ ಮೇಲೆ ಕುಟ್ಟಿ ಸ್ವಲ್ಪ ಹೊತ್ತು ಹಾಗೇ ಮಿಸುಕಾಡಿ, ಏಳಲು ಮನಸ್ಸಿಲ್ಲದಿದ್ದರೂ ಕೊನೆಗೂ ಎದ್ದ ಪ್ರತಾಪ ಸಿಂಹ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,376
ಸರ್ವೋದಯ ಚೇತನ, ಸ್ವಾತಂತ್ರ್ಯ ಸೇನಾನಿ ಧಾರವಾಡದ ದಾಬಡೆ ಅಸ್ತಂಗತ.
harshavardhan v.sheelavant's picture
harshavardhan v. sheelavant
10
Aug
2010
ಪುಟ

...

ಪ್ರತಿಕ್ರಿಯೆಗಳು: 6
ಹಿಟ್ಸ್ : 746
ಮೊಬೈಲ್ ರಿಂಗ್‌ಟೋನ್
ಗಣೇಶ's picture
ಗಣೇಶ
25
Jun
2011
ಬ್ಲಾಗ್ ಬರಹ

ಅಲ್ಲಿ ನೋಡಲು ಮೋರಿ.. ಇಲ್ಲಿ ನೋಡಲು ಮೋರಿ.. ಎಲ್ಲಿ ನೋಡಿದರಲ್ಲಿ ಮೋರಿಯೇ ಮೋರಿ!

ಮೆಟ್ರ‍ೋ, ಚತುಷ್ಪಥ ರಸ್ತೆ, ಎಂದೆಲ್ಲಾ ಜಂಬ ಕೊಚ್ಚಿಕೊಳ್ಳುತ್ತಾರೆ. ಆದರೆ ನನಗೆ...

ಪ್ರತಿಕ್ರಿಯೆಗಳು: 31
ಹಿಟ್ಸ್ : 963
ಆ ಇನ್ನೊಬ್ಬ ಹೆಂಗಸು
uniquesupri's picture
ಸುಪ್ರೀತ್.ಕೆ.ಎಸ್
13
May
2010
ಪುಟ

( ಶೆರ್ ವುಡ್ ಆಂಡರ್ಸನ್ ರ `The other woman' ಕತೆಯ ಭಾವಾನುವಾದ)

``ನಾನು ನನ್ನ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,292
ಬಯಲಾಟದ ಬೆರಗು
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
04
Feb
2012
ಬ್ಲಾಗ್ ಬರಹ

 

ಹಿತವಾದ ಚಳಿ; ದಾರಿಯುದ್ದಕ್ಕೂ ಇಬ್ಬನಿ ಬಿದ್ದ ಗದ್ದೆ ಅಂಚಿನ ಹುಲ್ಲುಸಾಲು; ಅದರ ಮೇಲೆ ನಿಂತ ಹನಿಗಳಿಂದ ಕಾಲಿಗೆ ಥಂಡಿ ನೀರಿನ ಪ್ರಾಕ್ಷಾಳನ....
ಪ್ರತಿಕ್ರಿಯೆಗಳು: 13
ಹಿಟ್ಸ್ : 262
ಕೆ.ಎಸ್‌. ನಿಸಾರ್‌ ಅಹಮದ್‌ ಸಂದರ್ಶನ
suresh_k's picture
23
Dec
2006
ಪುಟ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನಿಮಗೆ ದೊರಕಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

-ನನ್ನ ಬದುಕಿನ ಅತ್ಯಂತ ಸಾರ್ಥಕ ಕ್ಷಣಗಳಲ್ಲಿ ಇದೂ ಒಂದು....

ಪ್ರತಿಕ್ರಿಯೆಗಳು: 1
ಹಿಟ್ಸ್ : 3,872
ಎಲ್ಲಿ ಹೋದರು ನನ್ನವರು ?
bhalle's picture
ಶ್ರೀನಾಥ್ ಭಲ್ಲೆ
10
Dec
2009
ಪುಟ

ಎಲ್ಲಿ ಹೋದರು ನನ್ನವರು ?


ನಮ್ಮದು ದೊಡ್ಡ ಕುಟುಂಬ. ಒಟ್ಟು ಸಂಸಾರ. ಹುಟ್ಟಿನಿಂದಲೂ ಒಟ್ಟಿಗೆ ಇದ್ದೇವೆ. ಆಟ, ಊಟ, ಏಳೋದೂ, ಬೀಳೋದೂ ಎಲ್ಲ ನಮ್ಮ ನಮ್ಮಲ್ಲೇ....

ಪ್ರತಿಕ್ರಿಯೆಗಳು: 36
ಹಿಟ್ಸ್ : 1,737
ಕರ್ನಾಟಕದ ಮುಕುಟಕ್ಕೆ ಪ್ರವಾಸ
rajeshnaik111's picture
13
Jul
2006
ಪುಟ
ಸುಮಾರು ಆರೇಳು ವರ್ಷಗಳಿಂದಲೂ ಗುಲ್ಬರ್ಗ ಹಾಗೂ ಬೀದರ್ ಸುತ್ತಾಡಿಬರಬೇಕೆಂಬುದು ನನ್ನ ಒಂದು ದೊಡ್ಡ ಆಸೆಯಾಗಿತ್ತು. ಗೆಳೆಯರ ಮದುವೆ ಪ್ರಯುಕ್ತ ಎರಡು ಸಲ ಗುಲ್ಬರ್ಗಕ್ಕೆ ತೆರಳಿದರೂ,...
ಪ್ರತಿಕ್ರಿಯೆಗಳು: 0
ಹಿಟ್ಸ್ : 2,532

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

೧೨-೦೨-೧೨ ‍ ವಾಕ್ಪಥ ವಾರ್ಷಿಕೋತ್ಸವ‌ ಒಂದು ವರದಿ.

೧೨-೦೨-೧೨ ‍ ವಾಕ್ಪಥ ವಾರ್ಷಿಕೋತ್ಸವ‌ ಒಂದು ವರದಿ.

೧೨-೦೨-೧೨ - ಒಂದು ವರದಿ.

ನೆನ್ನೆ ಅಂದರೆ ಭಾನುವಾರ ದಿನಾಂಕ ೧೨-೦೨-೧೨ ದಂದು ವಾಕ್ಪಥ ತನ್ನ ಹನ್ನೆರಡನೆ ಹೆಜ್ಜೆ ಅಂದರೆ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿತು. ಅದು ಸರಿ ಆದರೆ ಈ ದಿನಾಂಕದಲ್ಲಿ ಇರುವ ಅಂಕಿಗಳಿಗೂ ನೆನ್ನೆಯ ಗೋಷ್ಟಿಗೂ ತಳುಕು ಹಾಕಿಕೊಂಡಿರುವುದು ವಾಕ್ಪಥ ಗೋಷ್ಠಿ ಮುಗಿಸಿದ ಮೇಲೆ ನನ್ನ ಅರಿವಿಗೆ ಬಂತು. ಹೇಗೆ ಅಂದಿರಾ? ೧೨ನೆ ತಾರೀಖಿನಂದು ೨ ಗಂಟೆಗೆ ವಾಕ್ಪಥ ತನ್ನ ೧೨ನೆ ಹೆಜ್ಜೆಯನ್ನು ಇಟ್ಟಿತು.

ಮೊದಲಿಗೆ ವಾರ್ಷಿಕೋತ್ಸವದ ಅಂಗವಾಗಿ ಹಿರಿಯ ದಂಪತಿಗಳಾದ ಶ್ರೀಯುತ ಬೆಳ್ಳಾಲ ಗೋಪಿನಾಥರಾಯರು ಹಾಗೂ ಅವರ ಧರ್ಮಪತ್ನಿ ಕೇಕ್ ಕತ್ತರಿಸುವ ಮೂಲಕ ವಾಕ್ಪಥದ ವಾರ್ಷಿಕೋತ್ಸವಕ್ಕೆ ಚಾಲನೆ ದೊರಕಿತು. ಈ ಬಾರಿಯ ವಾರ್ಷಿಕೋತ್ಸವಕ್ಕೆ ಶ್ರೀಯುತ ಪಾರ್ಥಸಾರಥಿಯವರು ಹಾಗೂ ಶ್ರೀಯುತ ರಾಮ್ ಮೋಹನ್ ಅವರು ತಮ್ಮ ಕುಟುಂಬದೊಡನೆ ಬಂದದ್ದು ವಿಶೇಷ.

ಕೇಕ್ ಕತ್ತರಿಸಿದ ನಂತರ ಅಂದಿನ ಗೋಷ್ಟಿಯ ನಿರ್ವಾಹಕರಾದ ಶ್ರೀಯುತ ಸಚೇತನ್ ಭಟ್ ರವರು ಕಾರ್ಯಕ್ರಮದ ವಿವರವನ್ನು ತಿಳಿಸಿಕೊಟ್ಟರು.

ಮೊದಲ ಭಾಷಣಕಾರರು - ಶ್ರೀಯುತ ಹೊಳೆನರಸಿಪುರ ಮಂಜುನಾಥ ಅವರು

ಎರಡನೆಯ ಭಾಷಣಕಾರರು - ಶ್ರೀಯುತ ಪಾರ್ಥಸಾರಥಿಯವರು

ಮೊದಲ ಭಾಷಣದ ವಿಮರ್ಶೆ - ಶ್ರೀಯುತ ಬೆಳ್ಳಾಲ ಗೋಪಿನಾಥ ರಾಯರು

ಎರಡನೇ ಭಾಷಣದ ವಿಮರ್ಶೆ - ಶ್ರೀಯುತ ರಘು ಎಸ.ಪಿ ಅವರು

ಆಶುಭಾಷಣ ನಿರ್ವಹಣೆ - ಶ್ರೀಯುತ ರಾಮ್ ಮೋಹನ್ ಅವರು

ಸಮಯ ಪರಿಪಾಲನೆ - ಶ್ರೀಯುತ ಜಯಂತ್ ರಾಮಾಚಾರ್ ಅವರು

ಭಾಷಾ ಶುದ್ಧಿ - ಶ್ರೀಯುತ ಹರೀಶ್ ಆತ್ರೇಯ ಅವರು

ಮೊದಲ ಭಾಷಣ - ಶ್ರೀಯುತ ಹೊಳೆನರಸಿಪುರ ಮಂಜುನಾಥ

ವಿಷಯ - ಮರೆವು ಎಂಬ ಮಹಾಮಾಯೆ.

ಭಾಷಣ ಶುರು ಮಾಡಿದ ಮಂಜುನಾಥ ಅವರು ನೆರೆದಿದ್ದ ಸಭಿಕರಲ್ಲಿ ತಾವು ಆರಿಸಿಕೊಂಡಿರುವ ವಿಷಯದ ಬಗ್ಗೆ ಕೆಲ ಕಾಲ ಗೊಂದಲ ಮೂಡಿಸಿ ನಂತರ ತಮ್ಮ ವಿಷಯವನ್ನು ತಿಳಿಸಿಕೊಟ್ಟರು. ಮರೆವು ಎಂಬುದೊಂದು ನಿಜಕ್ಕೂ ಮಹಾಮಾಯೆ. ಇದಕ್ಕೆ ಆಂಗ್ಲದಲ್ಲಿ Algemer / Dementia ಎಂದು ಕರೆಯುತ್ತಾರೆ. ಸಹಜವಾಗಿ ಮುಂಚೆ ಇದು ವಯಸ್ಸಾದವರಲ್ಲಿ ಅಂದರೆ ಅರವತ್ತು ದಾಟಿದವರಿಗೆ ಇದು ಹೆಚ್ಚು ಕಾಡುತ್ತಿತ್ತು. ಆದರೆ ಈಗ ಇದೊಂದು ಸರ್ವೇ ಸಾಧಾರಣ ಆಗಿಬಿಟ್ಟಿದೆ. ಕೆಲವೊಮ್ಮೆ ಈ ಮರೆವು ಎಂಬುವುದು ವರವೂ ಆಗಬಹುದು ಕೆಲವೊಮ್ಮೆ ಶಾಪವೂ ಆಗಬಹುದು. ವರ ಹೇಗೆಂದರೆ ಮನುಷ್ಯ ತನ್ನ ಕಹಿ ನೆನಪುಗಳನ್ನು ಮರೆತು ನೆಮ್ಮದಿ ಇಂದ ಇರಬಹುದು. ಇದೆ ಮರೆವು ಶಾಪ ಹೇಗೆಂದರೆ ಮಕ್ಕಳು ಪರೀಕ್ಷೆಗೆ ಎಷ್ಟೆಲ್ಲಾ ತಯಾರಿ ನಡೆಸಿದ್ದರೂ ಪರೀಕ್ಷೆಯ ಸಮಯದಲ್ಲಿ ಓದಿದ್ದು ಮರೆತು ಹೋಗುವುದು. ಇನ್ನು ಮರೆವಿನಲ್ಲಿ ಮೂರು ವಿಧಗಳುಂಟು ಅವುಗಳಲ್ಲಿ ಅಲ್ಪ ಸ್ವರೂಪ, ಮಧ್ಯಮ ಸ್ವರೂಪ ಹಾಗೂ ಭೀಕರ ಸ್ವರೂಪ. ಇನ್ನು ಮರೆವಿಗೆ ಕಾರಣಗಳು ಅಧಿಕ ಮಾನಸಿಕ ಒತ್ತಡ, ರಕ್ತದೊತ್ತಡ, ಸಕ್ಕರೆ ಖಾಯಿಲೆಅತಿಯಾದ ಮದ್ಯಪಾನ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇಂತಿಷ್ಟು ಉತ್ತಮ ಮಾಹಿತಿಗಳನ್ನು ಹಾಸ್ಯಭರಿತವಾಗಿ ತಿಳಿಸಿಕೊಟ್ಟು ಮಂಜುನಾಥ ಅವರು ತಮ್ಮ ಭಾಷಣವನ್ನು ಮುಗಿಸಿದರು.

ಎರಡನೆಯ ಭಾಷಣ - ಶ್ರೀಯುತ ಪಾರ್ಥಸಾರಥಿ

ವಿಷಯ - ಸಂಘ ಸಂಸ್ಥೆಗಳು ಮತ್ತು ಸಮಾಜ.

ವಾಕ್ಪಥದ ವಾರ್ಷಿಕೋತ್ಸವದ ಸುಸಂಧರ್ಭದಲ್ಲಿ ತಾವು ಭಾಷಣ ಮಾಡುತ್ತಿರುವುದು ತಮಗೆ ಅತೀವ ಸಂತಸ ಉಂಟಾಗುತ್ತಿದೆ ಎಂದು ತಮ್ಮ ಸಂತಸ ಹಂಚಿಕೊಂಡು ಭಾಷಣ ಶುರು ಮಾಡಿದರು. ಸಂಘ ಸಂಸ್ಥೆಗಳ ಇತಿಹಾಸವನ್ನು ಕೆದಕಿದರೆ ನಾವು ಹೆಚ್ಚು ಕಡಿಮೆ ಬುದ್ಧನ ಕಾಲಕ್ಕೆ ಹೋಗಬೇಕಾಗುತ್ತದೆ. ಬುದ್ಧನು ತನ್ನ ಧರ್ಮದ ಪ್ರಚಾರಕ್ಕಾಗಿ ಎಲ್ಲೆಡೆ ಸಂಘಗಳನ್ನು ಶುರು ಮಾಡಿಕೊಂಡ. ಆತನ ಸಾಲುಗಳೇ ಹೇಳುವ ಹಾಗೆ "ಬುದ್ಧಂ ಶರಣಂ ಗಚ್ಚಾಮಿ, ಧರ್ಮಂ ಶರಣಂ ಗಚ್ಚಾಮಿ, ಸಂಘಂ ಶರಣಂ ಗಚ್ಚಾಮಿ".  ಕಾಲದಿಂದಲೂ ನಾವು ಈ ಸಂಘ ಸಂಸ್ಥೆಗಳನ್ನೂ ಕಾಣ ಬಹುದಾಗಿದೆ. ನಂತರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವಿಷಯಕ್ಕೆ ಬಂದರೆ ಮಹಾತ್ಮ ಗಾಂಧಿಜಿಸುಭಾಶ್ ಚಂದ್ರ ಭೋಸ್ ಎಲ್ಲರೂ ಾರತೀಯರನ್ನು ಒಗ್ಗೂಡಿಸಲು ಇಂಥಹ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ತ್ತೀಚಿನ ದಿನಗಳಲ್ಲಿ ನೋಡಿದರೆ ರಸ್ತೆಗೊಂದು ಗಲ್ಲಿಗೊಂದರಂತೆ ಸಂಘ ಸಂಸ್ಥೆಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಕೆಲವು ಏಕವ್ಯಕ್ತಿ ಆರಾಧಕ ಂಘಗಳಾಗಿದ್ದರೆಇನ್ನುಳಿದವು ಸಮಾಜ ಸೇವಾ ಸಂಘಗಳು ಇರುತ್ತವೆ. ಸಂಘ ಸಂಸ್ಥೆಗಳು ಸಮಾಜದ ಸದ್ಬಳಕೆಗಾಗಿ ಉಪಯೋಗವಾದರೆ ಒಳ್ಳೆಯದು ಎಂದು ತಮ್ಮ ಭಾಷಣ ಮುಗಿಸಿದರು. 

ಮೊದಲನೆಯ ಭಾಷಣದ ವಿಮರ್ಶೆ ಮಾಡಲು ಬಂದ ಬೆಳ್ಳಾಲ ಗೋಪಿನಾಥರಾಯರು ಮಂಜುನಾಥ್ ಅವರ ಕಂಚಿನ ಕಂಠವನ್ನು ಹೊಗಳುತ್ತಾ ಅವರು ಆರಿಸಿಕೊಂಡ ವಿಷಯ ವಿಶಿಷ್ಟವಾಗಿದ್ದು, ಭಾಷಣ ಉತ್ತಮ ಮಾಹಿತಿಯೊಂದಿಗೆ ಕೂಡಿತ್ತು ಂದು ತಿಳಿಸಿಕೊಟ್ಟರೆ. ಎರಡನೆಯ ಭಾಷಣದ ವಿಮರ್ಶೆ ಮಾಡಲು ಬಂದ ರಘು ಅವರು ಪಾರ್ಥಸಾರಥಿಯವರು ಆರಿಸಿಕೊಂಡ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುತ್ತಾರೆ ಆದರೆ ಪ್ರಸ್ತುತ ವಿಷಯದ ಬಗ್ಗೆ ಇನ್ನೂ ಸ್ವಲ್ಪ ತಿಳಿಸಬಹುದಿತ್ತು ಎಂದು ತಿಳಿಸಿಕೊಟ್ಟರು.

 ನಂತರ ಆಶುಭಾಷಣ ನಿರ್ವಹಿಸಿದ ರಾಮ್ ಮೋಹನ್ ಅವರು ಕೊಟ್ಟ ವಿಷಯ ಬದುಕು ಮತ್ತು ಕಲೆ.

ಈ ವಿಷಯವಾಗಿ ಮಾತನಾಡಲು ಬಂದ ಶ್ರೀಯುತ ರಘು ಎಸ.ಪಿ, ಶ್ರೀಯುತ ಹರೀಶ್ ಆತ್ರೇಯ ಹಾಗೂ ಶ್ರೀಯುತ ಬೆಳ್ಳಾಲ ಗೋಪಿನಾಥರಾಯರು ಮೂವರು ಹೆಚ್ಚು ಕಡಿಮೆ ಒಂದೇ ನಿಲುವನ್ನು ಹೊಂದಿದ್ದರು. ಬದಕು ಹಾಗೂ ಕಲೆ ಎರಡು ಬೇರೆ ಬೇರೆ ಆಗಿದ್ದು. ಕೆಲವರು ಬದುಕುವುದು ಒಂದು ಕಲೆ ಎನ್ನುತ್ತಾರೆ. ಕೆಲವರು ತಮ್ಮ ಬದುಕಿಗಾಗಿ ಕಲೆಯನ್ನು ಅವಲಂಬಿಸಿದ್ದರೆ ಮತ್ತು ಕೆಲವರು ಕಲೆಯನ್ನೇ ತಮ್ಮ ಬದುಕಾಗಿ ಸ್ವೀಕರಿಸಿದ್ದಾರೆ ಎಂಬ ನಿಲುವನ್ನು ಮಂಡಿಸಿದರು.

ನಂತರ ಜಯಂತ್ ಅವರು ಬಂದು ತಮ್ಮ ಬಳಿ ಇದ್ದ ಸಮಯದ ವರದಿಯನ್ನು ಕೊಟ್ಟರು.

ಮೊದಲ ಭಾಷಣ - ಮಂಜುನಾಥ್ - ೯ ನಿಮಿಷ ೫೬ ಸೆಕೆಂಡ್
ಎರಡನೆಯ ಭಾಷಣ - ಪಾರ್ಥಸಾರಥಿ - ೧೦ ನಿಮಿಷ ೫೯ ಸೆಕೆಂಡ್
ಆಶುಭಾಷಣ ೧ - ರಘು ಎಸ.ಪಿ - ೦೧ ನಿಮಿಷ ೪೧ ಸೆಕೆಂಡ್
ಆಶುಭಾಷಣ ೨  - ಗೋಪಿನಾಥರಾಯರು - ೦೧ ನಿಮಿಷ ೪೮ ಸೆಕೆಂಡ್
ಆಶುಭಾಷಣ ೩  - ಹರೀಶ್ ಆತ್ರೇಯ - ೦೨ ನಿಮಿಷಗಳು
ಮೊದಲ ಭಾಷಣದ ವಿಮರ್ಶೆ - ಗೋಪಿನಾಥರಾಯರು - ೦೧ ನಿಮಿಷ ೪೬ ಸೆಕೆಂಡ್
ಎರಡನೆಯ ಭಾಷಣದ ವಿಮರ್ಶೆ - ರಘು ಎಸ.ಪಿ - ೦೩ ನಿಮಿಷ ೦೭ ಸೆಕೆಂಡ್

ಅದಾದ ನಂತರ ಶ್ರೀಯುತ ಹರೀಶ್ ಆತ್ರೇಯ ಅವರು ಭಾಷಾ ಬಳಕೆಯಲ್ಲಿ ಪಾರ್ಥಸಾರಥಿಯವರು ಒಂದೇ ಒಂದು ಆಂಗ್ಲ ಪದವನ್ನು ಬಳಸದೆ ಭಾಷಣ ಮಾಡಿದ್ದು ಹಾಗೂ ಮಂಜುನಾಥ್ ಅವರು ಆರಿಸಿಕೊಂಡ ವಿಷಯ ಹೆಚ್ಚು ವಿಜ್ಞಾನಕ್ಕೆ ಸಂಭಂಧಿಸಿದ್ದರಿಂದ ಆಂಗ್ಲ ಪದಗಳು ಬಳಸುವುದು ಅನಿವಾರ್ಯವಾಗಿತ್ತು ಎಂದು ತಿಳಿಸಿಕೊಟ್ಟರು.

ನಂತರ ವಾರ್ಷಿಕೋತ್ಸವಕ್ಕೆ ವಿಶೇಷ ಆಹ್ವಾನಿತರಾಗಿ ಬಂದಿದ್ದ ಸಂಪದ ಸೃಷ್ಟಿಕರ್ತ ಶ್ರೀಯುತ ಹರಿಪ್ರಸಾದ್ ನಾಡಿಗರು ವಿಶೇಷ ಭಾಷಣವಾಗಿ ಸಂಪದ ನಡೆದು ಬಂದ ಹಾದಿಯನ್ನು ವಿವರಿಸಿದರು. ಏಳನೇ ವರ್ಷಕ್ಕೆ ಕಾಲಿಡುತ್ತಿರುವ ಸಂಪದದಲ್ಲಿ ೩೫೦೦೦ ಸಾವಿರಕ್ಕೂ ಹೆಚ್ಚು ಲೇಖನಗಳು, ೧೭೫೦೦೦ ಪ್ರತಿಕ್ರಿಯೆಗಳು ಇದೆ ಎಂದು ಕೇಳಿ ಅತೀವ ಆಶ್ಚರ್ಯ ಉಂಟಾಯಿತು. ಯಾವುದೇ ಫಲಾಪೇಕ್ಷೆಯಿಲ್ಲದೆ ಕನ್ನಡ ಸೇವೆಗಾಗಿ ಸಂಪದ ಎಂಬ ಸುಂದರ ತಾಣ ನಡೆಸುತ್ತಿರುವ ಹರಿಪ್ರಸಾದ್ ಹಾಗೂ ಅವರ ತಂಡಕ್ಕೆ ವಾಕ್ಪಥ ತಂಡದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ನಂತರ ಶ್ರೀಯುತ ಸಚೇತನ್ ಭಟ್ ಅವರು ಮಾತನಾಡಿ ವಾಕ್ಪಥದ ಹನ್ನೆರಡನೆ ಗೋಷ್ಠಿ ಅವರಿಗೆ ಸಂಪೂರ್ಣ ತೃಪ್ತಿ ಕೊಟ್ಟಿರುವುದಾಗಿ ತಿಳಿಸಿ ಅಧಿಕೃತ ಮುಕ್ತಾಯ ಹಾಡಿದರು

Average: 3.3 (3 votes)
73 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
venkatb83's picture
14
Feb
2012
10:17

ಉ: ೧೨-೦೨-೧೨ ‍ ವಾಕ್ಪಥ ವಾರ್ಷಿಕೋತ್ಸವ‌ ಒಂದು ವರದಿ.

ಜಯಂತ್ ಅವ್ರೆ

ವಾಕ್ ಪಥ ವಾರ್ಷಿಕೋತ್ಸವದ ಕುರಿತು ವಿಸ್ತೃತ ವರದಿಯನ್ನ ಬರಹದಲ್ಲಿ ತುಂಬಾ ಸರಳವಾಗಿ -ಸೊಗಸಾಗಿ ದಾಖಲಿಸಿದ್ದೀರ..

-----------------------------------------------------------------------------------------------------
>>>> ಪಾರ್ಥ ಸಾರಥಿ ಮತ್ತು ಮಂಜು ಅಣ್ಣ ಅವ್ರ ಭಾಷಣದ ವಿಶೇಷತೆಯನ್ನ ಹೇಳಿದ ಸಾಲುಗಳು ನನ್ನ ಗಮನ ಸೆಳೆದವು...

-----------------------------------------------------------------------------------------------------

ಈಗೀಗ ಆಂಗ್ಲ ಭಾಷೆ ದೈನಂದಿನ ಜೀವನದಲ್ಲಿ ಎಸ್ಟು ವ್ಯಾಪಕವಾಗಿ ಹಾಸುಹೊಕ್ಕಾಗಿದೆ ಅಂದ್ರೆ ಹೇಳಲೇ ಕಸ್ಟ!!
ಅಂಥಾದ್ದರಲಿ ಗುರುಗಳು(ಪಾರ್ಥ ಸಾರಥಿ ಆವ್ರು) ಒಂದೂ ಆಂಗ್ಲ ಪದ ಬಳಕೆ ಮಾಡದೇ ಭಾಷಣ ಮಾಡಿದರು ಅಂದರೆ ನಾ ಒಂದು ಒಳ್ಳೇ ಕಾರ್ಯಕ್ರಮ -ಭಾಷಣ ತಪ್ಪಿಸಿಕೊಂಡೆ ಅನ್ನಿಸುತ್ತಿದೆ...

>>>>>ಆ ದಿನ ನನಗೆ ಇನ್ನೊಂದೂ 'ವಿಶೇಷ' ಕಾರ್ಯಕ್ರಮ ಇತ್ತು ಮತ್ತು ನಾ 'ಅಲ್ಲಿರಲೇ'ಬೇಕಿತ್ತು!
ಹಾಗಾಗಿ........
ಆ ಬಗ್ಗೆ ಮುಂದೊಮ್ಮೆ ಬರೆಯುವೆ:))))

ಸಂಪದ ಕುರಿತು ನಾಡಿಗರು ಹೇಳಿದ ಮಾಹಿತಿ ನನಗೇನೂ ಅಚ್ಚರಿ ತರಿಸಿಲ್ಲ, ಸಂಪದದ ದೈನಂದಿನ ಲೇಖನ ಬರಹ-ಪ್ರತಿಕ್ರಿಯೆ ಗಮನಿಸಿದ ನನಗೆ ಎಂದೋ ಹಾಗೆ ಅನ್ನಿಸಿತ್ತು ...

ಒಂದು ಒಳ್ಳೆಯ ಕೆಲಸಕ್ಕೆ ಕನ್ನಡಿಗರ ಬೆಂಬಲ ಸದಾ ಇರುತ್ತೆ...

ಸಾಹಿತ್ಯ- ಸಂಸ್ಕೃತಿ ಉಳಿಸಿ ಬೆಳೆಸಿ ಮಾತು ನವ್ಯ ಬರಹಗಾರರನ್ನ ಪ್ರೋತ್ಸಾಹಿಸುವ ಸಂಪದ ಕ್ಕಾಗಿ ನಾಡಿಗ ದಂಪತಿಗಳು ಮತ್ತು ತಂಡ ಅವಿರತ ಶ್ರಮ ಪಡುತ್ತಿರುವುದು ನಮಗೆಲ್ಲ ಗೊತ್ತು ..
ನಿಮ್ಮ ವಾಕ್ ಪಥ ವಾರ್ಷಿಕೋತ್ಸವಕ್ಕೆ ನಾಡಿಗ ದಂಪತಿಗಳು ಆಗಮಿಸಿ ಶುಭ ಕೋರಿ -ಭಾಷಣ ಮಾಡಿದ್ದು ಕೇಳಿ- ಓದಿ ಖುಷಿ ಆಯ್ತು...

ನಾ ವಾಕ್ ಪಥದ ಕೆಲ ವೀಡಿಯೋ ಗಳನ್ನ ಯೂ ಟ್ಯೂಬ್ ನಲಿ ನೋಡಿರುವೆ..

>>>>>ವಾರ್ಷಿಕೋತ್ಸವದ ವೀಡಿಯೋ ಕೂಡ 'ಯೂ ಟ್ಯೂಬ್ನಲಿ' ಹಾಕಿ ಎನ್ನುವುದು ನನ್ನ ಮನವಿ....

.
ನಿಮ್ಮ ಪಾವನಿ ಸರಣಿ ಚೆನ್ನಾಗಿದೆ..
ಇನ್ನೂ ಪ್ರತಿಕ್ರಿಯಿಸಿಲ್ಲ...
ಆಮೇಲೆ ಒಂದೊಂದಾಗಿ ಪ್ರತಿಕ್ರಿಯಿಸುವೆ...
ವಂದನೆಗಳು....
ಶುಭ ದಿನ...

Jayanth Ramachar's picture
14
Feb
2012
10:16

ಉ: ೧೨-೦೨-೧೨ ‍ ವಾಕ್ಪಥ ವಾರ್ಷಿಕೋತ್ಸವ‌ ಒಂದು ವರದಿ.

<<>>>>>ಆ ದಿನ ನನಗೆ ಇನ್ನೊಂದೂ 'ವಿಶೇಷ' ಕಾರ್ಯಕ್ರಮ ಇತ್ತು ಮತ್ತು ನಾ 'ಅಲ್ಲಿರಲೇ'ಬೇಕಿತ್ತು!
ಹಾಗಾಗಿ........
ಆ ಬಗ್ಗೆ ಮುಂದೊಮ್ಮೆ ಬರೆಯುವೆ:))))>> ಮನದನ್ನೆಯನ್ನು ಅರಸಿಕೊ೦ಡು ಹೋಗಿದ್ದಿರ?
<<ನಿಮ್ಮ ಪಾವನಿ ಸರಣಿ ಚೆನ್ನಾಗಿದೆ..
ಇನ್ನೂ ಪ್ರತಿಕ್ರಿಯಿಸಿಲ್ಲ...
ಆಮೇಲೆ ಒಂದೊಂದಾಗಿ ಪ್ರತಿಕ್ರಿಯಿಸುವೆ.>> ನಿಧಾನವಾಗಿ ಪ್ರತಿಕ್ರಿಯಿಸಿ. ಇನ್ನು ಹಲವು ಕ೦ತುಗಳು ಇದೆ.

venkatb83's picture
15
Feb
2012
10:54

ಉ: ೧೨-೦೨-೧೨ ‍ ವಾಕ್ಪಥ ವಾರ್ಷಿಕೋತ್ಸವ‌ ಒಂದು ವರದಿ.

:()))

ಮುಂದೊಮ್ಮೆ 'ಅವರ' ಜೊತೆಗೂಡಿಯೇ ವಾಕ್ಪಥಕ್ಕೆ ಆಗಮಿಸುವೆ...!!
ನಿರೀಕ್ಷಿಸಿ...
ನಿರೀಕ್ಷಿಸಿ.......

manju787's picture
14
Feb
2012
11:16

ಉ: ೧೨-೦೨-೧೨ ‍ ವಾಕ್ಪಥ ವಾರ್ಷಿಕೋತ್ಸವ‌ ಒಂದು ವರದಿ.

ಸ೦ಕ್ಷಿಪ್ತ ಆದರೆ ಸು೦ದರ ವರದಿ ಜಯ೦ತ್. ವಿಶೇಷವಾಗಿದ್ದ "ಮಧುಮೇಹಿಗಳೊಡನೆ ವೈದ್ಯರ ನೇರ ಸ೦ವಾದ"ವನ್ನು ವರದಿಯಲ್ಲಿ ಮರೆತೇ ಬಿಟ್ಟಿದ್ದೀರಿ! ಇನ್ನೂ ಹೆಚ್ಚಿನ ಸ೦ಖ್ಯೆಯಲ್ಲಿ ಸ೦ಪದಿಗರು ಭಾಗವಹಿಸಿದ್ದಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು.

Jayanth Ramachar's picture
15
Feb
2012
8:03

ಉ: ೧೨-೦೨-೧೨ ‍ ವಾಕ್ಪಥ ವಾರ್ಷಿಕೋತ್ಸವ‌ ಒಂದು ವರದಿ.

ಮ೦ಜಣ್ಣ ಇದು ಬರೀ ವಾಕ್ಪಥ ಗೋಷ್ಟಿಯ ವರದಿ ಆದ್ದರಿ೦ದ ಅದನ್ನು ಇದರೊಡನೆ ಸೇರಿಸಲಿಲ್ಲ. :)

sm.sathyacharana's picture
16
Feb
2012
11:53

ಉ: ೧೨-೦೨-೧೨ ‍ ವಾಕ್ಪಥ ವಾರ್ಷಿಕೋತ್ಸವ‌ ಒಂದು ವರದಿ.

ಛೇ.. ಒಳ್ಳೆ ಕಾರ್ಯಕ್ರಮ ಮತ್ತೆ ಮಿಸ್ ಮಾಡಿಕೊಳ್ಳಬೇಕಾಗಿ ಬಂದದ್ದಕ್ಕೆ ಬೇಸರ, ತುಂಬಾ ಬೇಸರ ಆಯಿತು.
ಜಯಂತ್, ನಿಮ್ಮ ಈ ವರದಿ, ಸಂತಸ ತಂತೋ, ಬೇಸರ ತಂತೋ, ಹೋ, ಒಂತರಾ, ಮಿಶ್ರ ಭಾವನೆಗಳನ್ನ ಉಂಟುಮಾಡಿದೆ. ನನ್ನ ಹಿಂದಿನ ವಾಕ್ಪಥದ ಬಗೆಗಿನ ಬರಹವನ್ನ ಮತ್ತೆ ಜ್ಞಾಪಿಸಿತು. ನಾನು ಭಾಗವಹಿಸಿದ ವಾಕ್ಪಥ, ಪುಸ್ತಕ ಪರಿಷೆ ಇನ್ನೂ ಹಸಿ ಹಸಿರಾಗಿದೆ..!

ಪ್ರತಿ ಬಾರಿ ಯೋಚಿಸೋದೆ ಆಗಿದೆ. ಕಾರ್ಯ ಬಾಹುಳ್ಯ, ಸಂಪದೆಡೆಗೆ ಭೇಟಿಯನ್ನೂ ಕಡಿಮೆ ಮಾಡಿದೆ. ಬೇಸರವಿದೆ. ಆದಷ್ಟು ಬೇಗ ನಮ್ಮವರನ್ನ ಮತ್ತೆ ಸದಾ ಮಾತನಾಡಿಸುವಂತಾಗಲಿ ಎಂದುಕೊಳ್ಳುತ್ತಾ..

ನಿಮ್ಮೊಲವಿನ,
ಸತ್ಯ.. :)

Jayanth Ramachar's picture
17
Feb
2012
10:13

ಉ: ೧೨-೦೨-೧೨ ‍ ವಾಕ್ಪಥ ವಾರ್ಷಿಕೋತ್ಸವ‌ ಒಂದು ವರದಿ.

ಸತ್ಯ ಚರಣರೇ ಕೆಲವೊಮ್ಮೆ ಹಾಗೇ. ಕೆಲಸದ ಒತ್ತಡದಲ್ಲಿ ಎಲ್ಲೂ ಹೋಗಲು ಆಗುವುದಿಲ್ಲ. ಪರವಾಗಿಲ್ಲ ಬಿಡಿ ಮು೦ದಿನ ಬಾರಿ ಭೇಟಿ ಮಾಡೋಣ. ಆದರೆ ಒ೦ದು ವಿಷಯ ನೀವು ಪರ ಊರಿನಲ್ಲಿದ್ದು ವಾಕ್ಪಥಕ್ಕೆ ಬರಲು ಇಷ್ಟು ಕಾತುರರಾಗಿದ್ದೀರ ಅದೇ ಸ೦ತೋಷ. ಇಲ್ಲೆ ಇದ್ದೂ ಎಷ್ಟೋ ಜನ ಬರದೇ ಮಿಸ್ ಮಾಡ್ಕೋತಾ ಇದ್ದಾರೆ. ಅದು ಬೇಸರ.

Prabhu Murthy's picture
18
Feb
2012
8:12

ಉ: ೧೨-೦೨-೧೨ ‍ ವಾಕ್ಪಥ ವಾರ್ಷಿಕೋತ್ಸವ‌ ಒಂದು ವರದಿ.

+೧

ಜಯಂತ್ ಕ್ವಿಕ್ ವರದಿಗೆ ಅನೇಕ ಧನ್ಯವಾದಗಳು.

ಪ್ರಭು

Prabhu Murthy's picture
18
Feb
2012
8:14

ಉ: ೧೨-೦೨-೧೨ ‍ ವಾಕ್ಪಥ ವಾರ್ಷಿಕೋತ್ಸವ‌ ಒಂದು ವರದಿ.

"೧೨ನೆ ತಾರೀಖಿನಂದು ೨ ಗಂಟೆಗೆ ವಾಕ್ಪಥ ತನ್ನ ೧೨ನೆ ಹೆಜ್ಜೆಯನ್ನು ಇಟ್ಟಿತು"
ಸ್ವಾರಸ್ಯಕರವಾದ ಸಂಗತಿ. ನೀವು ಗಮನಕ್ಕೆ ತರದಿದ್ದರೆ ಇದರ ಪರಿವೇ ಇರುತ್ತಿರಲಿಲ್ಲ!

ಫ್ರಭು