೨೫ ವರ್ಷಗಳ ಕೊರವಂಜಿ-ಕನ್ನಡ ಹಾಸ್ಯಪತ್ರಿಕೆ ಸೀಡೀ ರೂಪದಲ್ಲಿ

೨೫ ವರ್ಷಗಳ ಕೊರವಂಜಿ-ಕನ್ನಡ ಹಾಸ್ಯಪತ್ರಿಕೆ ಸೀಡೀ ರೂಪದಲ್ಲಿ

ಕಳೆದ ವರ್ಷ ಯಾವಾಗಲೋ ಬೆಂಗಳೂರಿಗೆ ಹೋಗಿದ್ದಾಗ  ಜಯನಗರದ ಟೋಟಲ್ ಕನ್ನಡ ಡಾಟ್ ಕಾಂ ನ ಮಳಿಗೆಯಲ್ಲಿ  ಕನ್ನಡದ ಸುಪ್ರಸಿದ್ದ ಹಾಸ್ಯ ಪತ್ರಿಕೆಗಳಾದ  'ಕೊರವಂಜಿ' ಮತ್ತು 'ಅಪರಂಜಿ' ( http://aparanjimag.in )  ನ ಹಳೆಯ  ಸಂಚಿಕೆಗಳ ಸಂಗ್ರಹಗಳನ್ನು = ಇವು ‌C ‌D ರೂಪದಲ್ಲಿವೆ -  ಕೊಂಡುಕೊಂಡಿದ್ದೆ .  ಅಂತೂ ಇಂತೂ ಕೊರವಂಜಿಯ ಎಲ್ಲಾ ಸಂಚಿಕೆಗಳನ್ನೂ ಅಂದರೆ ೧೯೪೨-೧೯೬೭ ರ ವರೆಗಿನ ಎಲ್ಲಾ ೧೨೦೦೦ ಪುಟಗಳನ್ನು ತಿರುವಿ ಹಾಕಿದೆ.  

ಇಲ್ಲಿ  ಸುಪ್ರಸಿದ್ಧ ವ್ಯಂಗ್ಯ ಚಿತ್ರಕಾರರಾದ ಕನ್ನಡಿಗ ಆರ್ ಕೆ ಲಕ್ಷ್ಮಣರ  ಆರಂಭಿಕ ವ್ಯಂಗ್ಯ ಚಿತ್ರಗಳಿವೆ. ರಾ.ಶಿ, ಕೇ.ಫ ಮುಂತಾದವರ ಉತ್ತಮ ಹಾಸ್ಯ ಬರಹಗಳಿವೆ. ಬೆಸ್ಟ್ ಆಫ್ ರಾ.ಶಿ, ಬೆಸ್ಟ್ ಆಫ್ ಕೇ.ಫ ಮುಂತಾದ ಪುಸ್ತಕಗಳು ಈಗಾಗಲೇ ಪೇಟೆಯಲ್ಲಿದ್ದು  ನನ್ನ ಸಂಗ್ರಹದಲ್ಲಿ ಇರುವವಾದರೂ  ಅಲ್ಲಿ ಇಲ್ಲದ ಕೆಲವು ಬರಹಗಳು ಇಲ್ಲಿ ಸಿಕ್ಕವು.   ಸುಪ್ರಸಿದ್ಧ ಕವಿತೆಗಳ ಅಣಕ ರೂಪಗಳು, ಹಳೆಯ ಗಾದೆಗಳ ಇಂದಿನ ರೂಪಗಳು ಹಾಗೂ ಕೊರವೇಶ್ವರ ವಚನಗಳು ಇಲ್ಲಿವೆ.   ನವೀನ ಗಾದೆಗಳನ್ನು  ವಿಷಯಕ್ಕೆ ತಕ್ಕಂತೆ ಸಂಗ್ರಹಿಸಲಾಗಿದೆ.  ಪುರಾಣ ಕತೆಗಳನ್ನು ಹಾಸ್ಯಮಯವಾಗಿ ಬಿಂಬಿಸಿದ ಕೆಲವು ಅದ್ಭುತ ಬರಹಗಳು ಇವೆ.  ಕೊರವೇಶ್ವರ ವಚನಗಳನ್ನೂ ಪ್ರಸ್ತುತ ಸಂಗತಿಗಳ ಅನುಸಾರವಾಗಿ ವಚನಗಳ ಶೈಲಿಯಲ್ಲಿ ಬರೆದಿದ್ದಾರೆ. ವಚನಗಳ  ಧಾರ್ಮಿಕ ಆಧ್ಯಾತ್ಮಿಕ ಹಿನ್ನೆಲೆ ಇಲ್ಲದೆ ಅವುಗಳ ಶೈಲಿಯನ್ನು ಭಾಷೆಯನ್ನು ಇಲ್ಲಿ  ಆನಂದಿಸಬಹುದು.  ೧೯೪೨- ೧೯೬೭ ರ ಬದಲಾವಣೆಗಳನ್ನು - ಅಂದರೆ ಸ್ವಾತಂತ್ರ್ಯ ಹೋರಾಟ , ಎರಡನೆಯ ಮಹಾಯುದ್ಧ , ಕಾಳಸಂತೆ , ಅಭಾವ , ಸ್ವಾತಂತ್ರ್ಯ , ಪ್ರಜಾಸತ್ತೆ , ಕಾಶ್ಮೀರ ಸಮಸ್ಯೆ,   ಮೈಸೂರು ರಾಜ್ಯ ರಚನೆ ಮುಂತಾದ ಬದಲಾವಣೆಗಳನ್ನು  ಈ ಸಂಚಿಕೆಗಳ ಬರಹಗಳ ಮೂಲಕ ಗಮನಿಸುವುದು ಆಸಕ್ತಿಯ ವಿಷಯ .

ಸುಮಾರು ೨೦೦ ರೂಪಾಯಿ ಇರಬಹುದು ಈ ಸೀಡೀಗಳಿಗೆ .  ಅಪರಂಜಿ ಸೀಡಿಯು ೧೯೮೪-೨೦೦೭ ರವರೆಗಿನ  ಸಂಚಿಕೆಗಳನ್ನು ಹೊಂದಿದೆ. ಅವನ್ನು ಸದ್ಯ ಓದುತ್ತಿದ್ದೇನೆ, ಮುಗಿದ ನಂತರ ಆ ಬಗ್ಗೆ ಬರೆಯುತ್ತೇನೆ.

Rating
No votes yet