ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಭಾರತ ಮಾತ

ಭಾರತ ಮಾತ

ಭಾರತ ಮಾತ, ಭಾರತ ಮಾತ
ದೇಶ ಎಂಗೆ ಒಡಕಾಯ್ತು,
ಭಾರತ ಮಾತ, ಭಾರತ ಮಾತ
ಪಾಕಿಸ್ತಾನ ಎಂಗೆ ಬೇರೆ ಆಯ್ತು,

ಭಾರತ ಮಾತ, ಭಾರತ ಮಾತ
ಸ್ವಾತಂತ್ರಕ್ ಮುಂಚೆ ಒಂದೇ ಮತ,
ಭಾರತ ಮಾತ, ಭಾರತ ಮಾತ
ಅದೇಂಗ್ ನಾವೀತ ಹಿಂದೂ ಮತ, ಅವ್ರು ಮುಸ್ಲಿಂ ಅಂತ

ಭಾರತ ಮಾತ, ಭಾರತ ಮಾತ
ನಮ್ದು ಅವ್ರುದು ಒಂದೇ ರಕುತ,
ಭಾರತ ಮಾತ, ಭಾರತ ಮಾತ
ನೀನೆ ಹೇಳು ಉತ್ತರ,
ಎಂಗ್ ಸೆಣಸೋದು ಅವ್ರರತ್ರ

ಅರವಿಂದ್

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಭಾರತ ಮಾತ

mahesha's picture

ಅರವಿಂದ

’ಮಾತ’ ಎನ್ನುವ ಶಬ್ದ ಪ್ರಿಸಂ ನಿಘಂಟಲ್ಲಿ ದೊರೆಯಲಿಲ್ಲ.. ಇದು ಯಾವ ಆಡುನುಡಿಯ ರೂಪ ತಿಳಿಸಿರಿ.

೧. mother (ನಾ) 1) ತಾಯಿ, ಅಮ್ಮ, ಜನನಿ 2) ಉತ್ಪತ್ತಿಯ ಮೂಲ 3) ಕ್ರೈಸ್ತ, ಧಾರ್ಮಿಕ ಸ್ತ್ರೀ ಸಮುದಾಯದ-ಹಿರಿಯ ಮಾತೆ
ಇದು ಸಿಕ್ಕಿತು.

ಇನ್ನು ಸಂಸ್ಕೃತದ ಮಾತೃ,ಮಾತಾ, ಮತ್ತು ಮಾತಃ ಎಂಬ ಮೂರು ಬಳಕೆಗಳು ನೆನೆಪಾದವು, ಅಲ್ಲೂ ಮಾತ ಎಂಬ ಪದದ ಗುರುತಿಲ್ಲ ನನಗೆ.

ನನ್ನಿ
-ಮಹೇಶ

ನನ್ನ ಕವನಗಳು
http://maaysa.wordpr...

ಉ: ಭಾರತ ಮಾತ

ಅರವಿಂದ್'s picture

ಮಹೇಶ್

ಬಹುಶಃ ನೀವು ಹೇಳಿದ ಹಾಗೆ ಮಾತ ಇಲ್ಲ ಹೌದು, ಆದರೆ ನನ್ನ ಇಂಗಿತ ಇಲ್ಲಿ ಗ್ರಾಮೀಣ ಸೊಗಡಿನದು ಅಲ್ಲಿ ಮಾತೆ, ಮಾತಃ, ಮಾತಾ ಸರಿ.

ಇದೊಬ್ಬ ಗ್ರಾಮೀಣ ಭಾಷೆಯನ್ನು ಮಾತನಾಡುವ ಮುಗ್ಧ ಮನುಷ್ಯನ ಆಡು ಭಾಷೆಯ ಪರಿ ಅಷ್ಟೆ. ಆದರೂ ತಪ್ಪಾದರೆ ಖಂಡಿತ ಸರಿಪಡಿಸುತ್ತೇನೆ.

ಅರವಿಂದ್
http://aravindnimmav...
http://abhimanihudug...

ಉ: ಭಾರತ ಮಾತ

mahesha's picture

ತಪ್ಪಿಲ್ಲ..

ನೀವು ಹಳ್ಳಿವರಾದರೆ ನಮ್ಮ ಅಂದವಾದ ’ಅವ್ವ ಭಾರತ’ ’ಎಂದು ಕರೆಯಿರಿ.

ಅ ಆ ಇ ಈ ಕನ್ನಡದ ಅಕ್ಷರ ಮಾಲೆ
ಅಮ್ಮ ಎಂಬುದು ಕಂದ.. ಕರೆಯೋಲೆ..

ಅಮ್ಮ ಅನ್ನೋದೇ ಬಲು ಅತ್ಮೀಯವಾದ ಸುಂದರವಾದ ನಮ್ಮ ಪದ ಅಲ್ವೇ..

ನನ್ನಿ
-ಮಹೇಶ

ನನ್ನ ಕವನಗಳು
http://maaysa.wordpr...

ಉ: ಭಾರತ ಮಾತ

rasikathe's picture

-ರಸಿಕತೆ
ನಿಮ್ಮ ಅಳಲು ಚೆನ್ನಾಗಿ ಮೂಡಿ ಬಂದಿದೆ, ( ಇನ್ನೊಬ್ಬರು ಹೇಳಿದಂತೆ ನೀವು "ಮಾತಾ ಅಥವಾ ಮಾತೆ) ಉಪಯೋಗಿಸಬಹುದು. ಅವೆರಡೂ ಬೇಡದಿದ್ದರೆ, ನಿಮ್ಮ ಹಳ್ಳೀಯ ಭಾಷೆಯಂತೆ " ಮಾತಾಯಿ" ಅಂತ ಬಳೆಸಬಹುದು.

ಒಂದು ಜನಪದ ಗೀತೆಯಲ್ಲಿ ಹೀಗೆ ಕೇಳಿದ್ದೇನೆ. " ನಿನ್ನ ಮರೆಯಲಾರೆ ಮಾತಾಯಿ, (ನೇತಾಯಿ)"

ಮೀನಾ ಸುಬ್ಬರಾವ್.