ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

ಕೆಲಸ ಅನ್ನೋದು ಒಂಥರಾ ಮರೀಚಿಕೆ ಇದ್ದ ಹಾಗೆ ಅನ್ಸುತ್ತೆ. ಒಂದ್ಕಡೆ ಕೆಲಸ ಸಿಕ್ತು ಆರಾಮಾವಾಗಿ ಇರೋಣ ಅಂತಿದ್ದ ಹಾಗೆ ಕೆಲಸ ಕಟ್ ಮಾಡಿದರು
ಟೆಕ್ಕಿಗಳಿಗಾದ್ರೆ ದುಡ್ಡು ಕೂಡು ಹಾಕ್ಕೊಂಡು ಇರೋದ್ರಿಂದ ಏನೂ ತೊಂದರೆ ಇಲ್ಲ. ಆದ್ರೆ ತೊಂದ್ರೆ ಆಗೋದೆಲ್ಲಾ ನಮ್ಮಂಥ ಆಫ್ ವರ್ಕರ್ಸ್‌ಗೆ . ಕೆಲಸ ಕಟ್ ಮಾಡ್ಬೇಕು ಅಂದ ತಕ್ಷಣ ಈ ಬಾಸ್‌ಗಳಿಗೆ ನೆನಪು ಬರೋದೆ ನಾವುಗಳು . ಅರ್ಧಂಬರ್ದ ಎಜುಕೇಶನ ಮಾಡಿರೋರು , ಹಾಗೆ ನನ್ನನ್ನ ಹಿಂದಿದ್ದ ಕೆಲಸದಿಂದ ತೆಗೆದುಬಿಟ್ರು
ನಂಗೆ ಬರೋದು ಕಂಪ್ಯೂಟರ್ ಮತ್ತೆ ಲೆಕ್ಕ . ಅನುಭವಾ ಇನ್ನೆಷ್ಟು ಇದ್ದೀತು . ಇಪ್ಪತ್ತೂ ಕಳೆಯದ ಡಿಗ್ರಿ ಆಗದ ನನ್ನಂತೋರ ಪಾಡು ತುಂಬಾ ಬೇಜಾರು
ಎಲ್ಲಿ ಇಂಟರ್‌ವ್ಯೂಗೆ ಹೋದ್ರೂ ಯಾಕೆ ಡಿಗ್ರಿ ಮಾಡಿಲ್ಲ, ಇನ್ನೊಂದು ವರ್ಷ ಅನುಭವ ಇರ್ಬೇಕಾಗಿತ್ತು. ಬರೀ ಇದೇ ಮಾತು . ಕೆಲವರಂತೂ ಇದೇ ಚಾನ್ಸ್ ಅಂತ
ತೀರ ಕಡಿಮೆ ಸಂಬಳ ಕೊಡ್ತೀವಿ ಅಂತಾರೆ. ಈ ಬೆಂಗಳೂರಲ್ಲಿ ಒಬ್ಬಳ ಸಂಬಳದಲ್ಲೇ ಮನೆ ಸಾಗಬೇಕು . ಬಾಡಿಗೇ ಇದೆಲ್ಲಾ ಹೇಗೆ ಸಾಧ್ಯಾ ಒಂದು ತಿಂಗಳು
ಸಕ್ಕತ್ ತೊಂದ್ರೆ ಆಯ್ತು. ಪ್ರಪಂಚ ನಾನಂದುಕೊಂಡ ಹಾಗೆ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೆನೂ ಇದೆ ಅಂತ ಅನ್ನಿಸಿದ್ಬಿಡ್ತು. ತೀರ ದೊಡ್ಡ ದೊಡ್ಡ ಕಂಅಪೆನೀಲಿ ಕ್ವಾಲಿಫಿಕೇಷನ್ ಕೇಳ್ತಾರೆ.
ಚಿಕ್ಕ ಕಂಪನೀ ಆದ್ರೆ ಸಂಬಳ ಕಡಿಮೆ. ಪ್ರೊಪ್ರೈಟರಿ ಕಂಪೆನೀಲಿ ಕೆಲವೆಡೆ ಕಣ್ಣು ಮೈಮೇಲೆಲ್ಲಾ ಇರುತ್ತೆ. ಮೈ ತುಂಬಾ ಉಟ್ಟಿರೋ ಉಡುಪೂ ಕೂಡ ಅವರ ಕಣ್ಣಿಗೆ ಪಾರದರ್ಶ್ಗಕವಾಗಿರುತ್ತೇನೋ.
ಮೊದಲ ಸಲ ನಂಗೆ ಇಷ್ಟೊಂದು ತೊಂದರೆ ಆಗಿರಲಿಲ್ಲ. ತುಂಬಾ ಬೇಗ ಸಿಕ್ತು. ಈ ಸಲ ಮಾತ್ರ ತುಂಬಾ ಆಟ ಆಡಿಸ್ತು. ನಾನು ಮೊದಲಿಂದಲೂ ತುಂಬಾ ಜಾಲಿ ಟೈಪ್ ಹುಡುಗಿ
ಈಗೀಗ ತುಂಬಾ ಗಂಭೀರ ಆಗ್ಬಿಡೋಣ ಅನ್ನಿಸುತ್ತೆ. ಆದರೆ ಆಗಲ್ಲ
ಹಂಗೂ ಕೆಲಸ ಸಿಕ್ತು . ಇಲ್ಲಿ ಚೆನ್ನಾಗಿದೆ ಮನೆಯಿಂದ ತುಂಬಾ ದೂರ ಇದ್ರೂ ಒಂಥರಾ ಚೆನ್ನಾಗಿದೆ. ಇಲ್ಲೇ ಹೀಗೆ ಒಬ್ಬರ ಕಣ್ಣು ನನ್ಕಣ್ಣ ಜೊತೆ ಬೆರೀತಿದೆ
ಮುಂದೆ ಏನಾಗುತ್ತೋ ಗೊತ್ತಿಲ್ಲ. ಅದರ ಬಗ್ಗೆ ಮುಂದೆ ಸಮಯ ಆದರೆ ಬರೀತೀನಿ.

Your rating: None Average: 4.5 (2 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

shreekant.mishrikoti's picture

ಸದ್ಯ, ಕೆಲ್ಸ ಸಿಕ್ತಲ್ಲ !

ಉ: ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

ವನಜಾ's picture

ಅದಕ್ಕೆ ಬದುಕಿದೆ

ಉ: ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

Shamala's picture

ಕೆಲಸದ ಜೊತೆ ’ಎರಡು ಕಣ್ಣುಗಳೂ ಸಿಕ್ಕಂತಿವೆ’..........!:-)

ಶ್ಯಾಮಲ

ಉ: ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

ವನಜಾ's picture

ಕಣ್ಣೇನೋ ಸಿಕ್ಕಿದೆ. ಆ ಕಣ್ಣಿನ ಮಾತಿನರ್ಥ ಗೊತ್ತಾಗಿಲ್ಲ ಇನ್ನೂ

ಉ: ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

Shamala's picture

’ನಿನ್ನ ಕಣ್ಣ ಕನ್ನಡಿಯಲ್ಲಿ.... ಕಂಡೆ ನನ್ನ ರೂಪಾ...’ ಅಂತ ಹಾಡ್ತಾಯಿರಿ, ಎಲ್ಲಾ ಅರ್ಥ ತಾನಾಗೇ ಆಗತ್ತೆ.

ಶ್ಯಾಮಲ

ಉ: ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

anil.ramesh's picture

ಸ್ವಯಂವರ ಚಿತ್ರದ ಹಾಡನ್ನು ನೆನಪಿಸಿದ್ದಕ್ಕೆ ತುಂಬಾ ಧನ್ಯವಾದ.

ಹಾಡಿನ ಪೂರ್ತಿ ಸಾಹಿತ್ಯ ಇಲ್ಲಿದೆ.

ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ

ನಿನ್ನ ತುಂಟ ಹೂನಗೆಯಲ್ಲಿ, ಏನೊ ಏನೊ ಭಾವ
ನಗೆಯು ತಂದ ಮೋಡಿಯಲ್ಲಿ, ನಲಿಯಿತೆನ್ನ ಜೀವ
ನಿನ್ನ ತುಂಟ ಹೂನಗೆಯಲ್ಲಿ

ಬಾನ ಹಕ್ಕಿ ಹಾಡೊ ವೇಳೆ
ಉದಯ ರವಿಯು ಮೂಡುವ ವೇಳೆ
ನೀನು ಬರುವ ದಾರಿಯಲ್ಲಿ ಹೃದಯ ಹಾಸಿ ನಿಲ್ಲುವೆ

ಮರದ ನೆರಳ ತಂಪಿನಲ್ಲಿ
ನಿನ್ನ ಮಡಿಲ ಹಾಸಿಗೆಯಲ್ಲಿ
ತಲೆಯನಿಟ್ಟು ಮಲಗಿರುವಾಗ, ಸ್ವರ್ಗ ಅಲ್ಲೆ ಕಾಣುವೆ

ನನ್ನ ಮನವ ಆಳ ಬಂದ ನನ್ನವನೆ ಚೆನ್ನಿಗನೆ

ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ
ನಿನ್ನ ಕಣ್ಣ ಕನ್ನಡಿಯಲ್ಲಿ

ಹಸಿರು ಎಲೆಯ ಸೀರೆ ಧರಿಸಿ
ಹೂವ ತಿಲಕ ಹಣೆಯಲಿ ಇರಿಸಿ
ಒಲಿದು ಬಂದ ವನದೇವತೆಯೊ,
ಸೊಬಗು ಏನ ಹೇಳಲಿ

ಹೂವ ಸಂಗ ಕೂಡಿಯಾಡಿ
ಕಂಪು ಕದ್ದು ಮೆಲ್ಲನೆ ಓಡಿ
ತೂಗಿ ಬಂದ ಗಾಳಿಯಂತೆ ಬಂದೆ ನನ್ನ ಬಾಳಲಿ

ನಿನ್ನ ಚೆಲುವ ನೋಡಿ ನೋಡಿ, ಮೈ ಮರೆತೆ ಮನ ಸೋತೆ

-ಅನಿಲ್

ಉ: ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

thesalimath's picture

ಎರಡೂ ಇರುತ್ತೆ. ಯಾವುದರ ಮೇಲೆ ನಡಿತಿರಿ ಅನ್ನೋದರ ಮೇಲೆ ಎಲ್ಲ ನಿಂತಿದೆ.

ಉ: ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

ವನಜಾ's picture

ಹೂವಿನ ಹಾಸಿಗೆಯಡಿ ಹೇಸಿಗೆ ಇದ್ರೆ ಹೆಂಗೆ ಗೊತ್ತಾಗುತ್ತೆ?

ಉ: ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

thesalimath's picture

ಅನುಭವ, ಸೂಕ್ಷ್ಮಗಳ ಅರಿವು. ಹೇಸಿಗೆ ಒಂದು ಸಾರಿಯಾದ್ರು ತುಳಿತಿವಿ. ಆದರೆ ಮತ್ತೆ ತುಳಿಯದೇ ಇರೋಹಂಗೆ ಮಾಡೋದು ನಮ್ಮ ಅರಿವು!!!

ಉ: ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

manjunath s reddy's picture

ಹೇಸಿಗೆ ಅನ್ನೋದನ್ನ ಹಾಗೆ ಕೆಲವು ದಿನ ಬಿಟ್ಟರೆ ಗೊಬ್ಬರ ಆಗುತ್ತೆ... ಅದು ಭೂಮಿಗೆ ಮತ್ತಷ್ಟು ಫಲವತ್ತತೆಯನ್ನು ಕೊಟ್ಟು ಪ್ರಕ್ರುತಿಗೆ ವರವಾಗಿ ಸಸ್ಯ ಸಂಪತ್ತನ್ನು ಹುಲುಸಾಗಿ ಬೆಳೆಸುತ್ತದೆ... ಅದರಿಂದ ಹೇಸಿಗೆ ಇದ್ರೇನೆ ಭೂಮಿಗೆ ಒಳ್ಳೇದು.. :)

ಉ: ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

ವನಜಾ's picture

ಇರ್ಬೊದು ಇನ್ನೂ ಅನುಭವ ಸಾಲ್ದು ನೋಡಿ
ಮುಂದೆ ಅಭ್ಯಾಸ ಆಗ್ಬೋದು

ಉ: ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

ಮಾಯ್ಸ೨'s picture

ನಿಮ್ಮ ಮಾತುಗಳನ್ನು ನೋಡಿ, ನನಗೆ ನನ್ನ ಮದುವೆಯ ಮುನ್ನದ ಒಂಟಿ ಬದುಕು ನೆನೆಪಾಯ್ತು....

ಆದ್ರೆ ಎದೆಗಾರಿಕೆ ಇದ್ರೆ ಏನನ್ನು ಬೇಕಾದ್ರೂ ಎದುರಿಸಬೋದು ಎಂದು ನನಗೆ ಬದುಕು ಕಲಿಸಿಕೊಟ್ಟಿದೆ...

ನಿಮಗೆ ದುಡ್ಡು ಮಾಡಬೇಕು ಎಂಬ ಬಯಕೆ ಇದ್ರೆ ಅದರ ಬಗ್ಗೆಯೇ ೨೪ಗಂಟೆ ಉನ್ನಿಸಿ/ಯೋಚಿಸಿ ನೀವು ದುಡ್ಡ ಮಾಡುವಿರಿ.. ಇಲ್ಲಿ ಬೇಕಾಗಿರೋದು ’ಬಯಕೆ’

ಒಂದು ಕೆಟ್ಟ ಮಾದರಿ ಕೊಡುವೆ.
ನಿಮಗೆ ಯಾರನ್ನಾದರೂ ಹೊಡೀಬೇಕು ಅಂತ ಇದ್ರೆ, ನಿಮಗೆ ಅವರನ್ನು ಹೊಡೆಯ ಬಯಕೆ ಎಶ್ಟರ ಮಟ್ಟಿಗೆ ಇರುತ್ತೋ ಅಶ್ಟರ ಮಟ್ಟಿಗೆ ನೀವು ಅದಕ್ಕೆ ಅಣಿಯಾಗ್ತೀರಿ :)

ಉ: ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

ವನಜಾ's picture

ನೀವು ಹೇಳೋದು ದಿಟ
ನಂಗೆ ಯಾವಾಗ್ಲೂ ಕುಶಿಯಾಗಿರೋ ಆಸೆ ಅದಕ್ಕೆ ಆದಾಗೆಲ್ಲಾ ಸಂತೋಶವಾಗೇ ಇರೋ ಪ್ರಯತ್ನ ಮಾಡ್ತೀನಿ .ಅದಕ್ಕೆ ಬೇಜಾರನ್ನೋದು ನನ್ನ ನೋಡಿ ಓಡಿ ಹೋಗುತ್ತೆ