ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

February 1, 2007 - 12:33pm — ವೈಭವ

ಇತ್ತೀಚಿನ ನನ್ನ ಪ್ರವಾಸಗಳಿಂದ ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ. ನಮಗೆ ಅಣೆಕಟ್ಟುಗಳಿಂದಾಗುವ ಪ್ರಯೋಜನಗಳ ಬಗ್ಗೆ ಗೊತ್ತಿದೆ. ಆದರೆ ಅದರಿಂದ ಪರಿಸರ ಹಾಗು ಅಣೆಕಟ್ಟಿನ ಆಯಕಟ್ಟು ಪ್ರದೇಶದ ಜನರ ಜೀವನದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಬಹುಶಃ ನಮಗೆ ಅಷ್ಟು ಅರಿವಿಲ್ಲವೇನು ಅಂತನ್ನಿಸುತ್ತದೆ. ಈ ಜಲಾಶಯಗಳ ಹಿಂಭಾಗದಲ್ಲಿ ಕಾಡಿದ್ದರೆ ಅಲ್ಲಿರುವ ಹಸಿರು ನೀರಿನಿಂದ ಆವೃತವಾಗಿ ಬದುಕಲು ಆಗದೆ, ಸಾಯಲು ಆಗದೆ ನರಳುತ್ತಿದೆಯೇನೊ ಅಂತನ್ನಿಸುತ್ತದೆ(ನೀವು ಈ ಚಿತ್ರ ನೋಡಿದರೆ ಗೊತ್ತಾಗುತ್ತದೆ). ಕಾಡು ಪ್ರಾಣಿಗಳ ಜೀವನಕ್ಕೆ ಇದರಿಂದ ವ್ಯತಿರಿಕ್ತ ಪರಿಣಾಮಗಳಾಗುತ್ತದೆ. ಒಟ್ಟಿನಲ್ಲಿ ಪರಿಸರದಲ್ಲಿ ಅಸಮತೋಲನವುಂಟಾಗುತ್ತದೆ.

ಇದರಿಂದಾಗುವ ದೀರ್ಘಾವಧಿ ಪರಿಣಾಮಗಳ ಸ್ವರೂಪ ಏನೆಂದು ನನಗೆ ಗೊತ್ತಿಲ್ಲದಿದ್ದರೂ ಅದು ಒಟ್ಟಿನಲ್ಲಿ ಒಳ್ಳೆಯದಲ್ಲ ಎಂದು ಮಾತ್ರ ಹೇಳಬಲ್ಲೆ. ಇನ್ನು ಅಲ್ಲಿನ ಕೆಲವು ಹಳ್ಳಿಗಳು ಮುಳುಗುತ್ತವೆ. ಇನ್ನು ಕೆಲವು ಅತಂತ್ರ ಸ್ಥಿತಿ ತಲುಪಿ, ಹೊರ ಜಗತ್ತಿನ ಎಲ್ಲ ಸಂಪರ್ಕಗಳನ್ನು ಕಡಿದು ಕೊಳ್ಳಬೇಕಾಗುತ್ತದೆ. ಯಾರು ಆ ಹಳ್ಳಿಗಳ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಗೋಜಿಗೆ ಹೋಗುವುದಿಲ್ಲ. ( ಉದಾ: ದೇವಕಾರ(ಕದ್ರಾ ಹಿನ್ನೀರಿನಲ್ಲಿರುವ ಹಳ್ಳಿ), ಲಿಂಗನಮಕ್ಕಿ ಜಲಾಶಯದ ಹತ್ತಿರ ಇರುವ ಹಳ್ಳಿಗಳು...ಇಲ್ಲಿನ ಜನರು ಪಕ್ಕದಲ್ಲೆ ಉತ್ಪಾದನೆಯಾದರೂ ಇನ್ನು ವಿದ್ಯುತ್ ಮುಖ ನೋಡಿಲ್ಲ)

ನಮ್ಮ ಪರಿಸರವನ್ನು ನಾವು ಮುಂದಿನ ಪೀಳಿಗೆಗೆ ಒಳ್ಳೆ ಸ್ಥಿತಿಯಲ್ಲಿ ನೀಡುವುದು ನಮ್ಮ ಜವಾಬ್ದಾರಿಯಲ್ಲವೆ ? ಪ್ರಗತಿಗೆ ವಿದ್ಯುತ್ ಬೇಕು ..ಆದರೆ ಪ್ರಗತಿಯ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆ ಬೇಡ ಅಲ್ಲವೆ? ನಾವು ಪರಿಸರಕ್ಕೆ ಹಾನಿ ಮಾಡದೆ ವಿದ್ಯ್ಯುತ್ ಉತ್ಪಾದಿಸಲು ಹಲವು ತಂತ್ರಙ್ನಾನಗಳಿವೆ (ಸೌರ,ಗಾಳಿ) ಆದರೂ ಅದನ್ನು ನಾವು ಕಾರ್ಯಗತ ಮಾಡುವುದರಲ್ಲಿ ಹಿಂದೆ ಇದ್ದೇವೆ..ಅಲ್ಲವೆ?

~.~
  • ವೈಭವ ರವರ ಬ್ಲಾಗ್
  • Login or register to post comments
  • 791 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 1, 2007 - 2:31pm — hpn

ಉ: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

hpn's picture

ಇದು ಬಹಳ ಒಳ್ಳೆಯ ಪ್ರಶ್ನೆ.

ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ "ದ್ವೀಪ" ಚಿತ್ರ ಇದೇ ವಿಷಯದ ಸುತ್ತ ಇತ್ತು - ಅಣೆಕಟ್ಟಿನ ಆಯಕಟ್ಟು ಪ್ರದೇಶದ ಜನ ಜೀವನ, ತಲ್ಲಣಗಳನ್ನು ಚೆನ್ನಾಗಿ ಚಿತ್ರಿಸಿದ್ದಾರೆ. (ನಾ. ಡಿಸೋಜರ ಕಾದಂಬರಿಯನ್ನಾಧರಿಸಿದ ಚಿತ್ರ ಅದು)

ಕೆಳಗಿನವನ್ನು ನೋಡಿ:
* 'Dams damage environment' - BBC.
* Environmental, Social and Economic Impacts of Dams
* Dams - ವಿಕಿಪೀಡಿಯ ಪುಟ
* "Environmental impacts of Dams

(ಭಾಷೆಯನ್ನು ಬಳಸುವುದನ್ನು ಬಿಟ್ಟು "ಭಾಷೆ ಹೇಗಿರಬೇಕು" ಎನ್ನುವ ಗೊಡವಿನಲ್ಲಿ ಮುಳುಗಿಹೋಗಿರುವ ನಾವುಗಳು ಇಂತಹ ವಿಷಯಗಳ ಚರ್ಚೆ ಬಗ್ಗೆ ಗಮನ ಹರಿಸಿದರೆ ಸಂಪದದಂತಹ ಸಮುದಾಯವನ್ನು ಮುಂದುವರೆಸಿಕೊಂಡು ಹೋಗಲು ಪಡುತ್ತಿರುವ ಪ್ರಯಾಸಗಳು ಸಾರ್ಥಕವಾದಂತೆ)

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 1, 2007 - 3:16pm — ವೈಭವ

ಉ:ಉ: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

ವೈಭವ's picture

ಹೌದು , "ದ್ವೀಪ" ಒಂದು ಕಾದಂಬರಿ ಅಥವ ಚಲನಚಿತ್ರವಲ್ಲ ...ಆ ಕತೆ ನಿಜವಾಗಿರುವ ಸಾಧ್ಯತೆ ೧೦೦% ರಷ್ಟು.  ನಾವು ಈ ದೆಸೆಯಲ್ಲಿ ಏನು ಮಾಡದೇ ಹೋದರೂ ಪರವಾಗಿಲ್ಲ, ಕೊನೆ ಪಕ್ಷ ಜಾಗೃತಿ ಮೂಡಿಸುವ ಕೆಲಸವಾದರೂ ಮಾಡಬೇಕು ...ಇದರಿಂದಾಗುವ ಡುಷ್ಪರಿಣಾಮಗಳ ಬಗ್ಗೆ "ನುಡಿಮುತ್ತಿನ" ಮಾದರಿಯಲ್ಲಿ ಸಂಪದದಲ್ಲಿ ಕೆಲವು ಹನಿಗವನಗಳನ್ನು ಪೇರಿಸಿದರೆ ನಾವು ಈ ನಿಟ್ಟಿನಲ್ಲಿ "ಅಳಿಲು ಸೇವೆ" ಮಾಡಿದಂತಾಗುತ್ತದೆ.

ಈ ವಾರದ "ತರಂಗ" ದಲ್ಲಿ  "ವಿದ್ಯುತ್, ವಿದ್ಯುತ್" ಒಂದು ವಿಸ್ತಾರ ಲೇಖನ ಪ್ರಕಟವಾಗಿದೆ. ದಯವಿಟ್ಟು ಓದಿ.

-ಜೈ ಕರ್ನಾಟಕ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 1, 2007 - 6:58pm — rajeshnaik111

Re: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

rajeshnaik111's picture

ಈ ಪ್ರಶ್ನೆಗೆ ಉತ್ತರ ಹೌದು. ಉತ್ತರ ಕನ್ನಡ ಜಿಲ್ಲೆಯವನೇ ಆದ ನಾನು ಆಣೆಕಟ್ಟುಗಳಿಂದ ಉಂಟಾದ ಪರಿಸರ ನಾಶ, ಪ್ರಾಣಿ ಮತ್ತು ಪಕ್ಷಿ ಸಂಕುಲಗಳ ನಾಶ, ಮುಳುಗಡೆ ಪ್ರದೇಶಗಳ ಜನರು ಪಡುವ ಪಾಡು, ಪರಿಹಾರಕ್ಕಾಗಿ ಅಂಗಲಾಚುವ ಪರಿಸ್ಥಿತಿ, ಸೂಕ್ತ ಪರಿಹಾರ ದೊರಕದೇ ಇರುವುದು, ತಮ್ಮ ಪೂರ್ವಜರ ಕಾಲದಿಂದಲೂ ವಾಸವಿದ್ದ ಮನೆಯನ್ನು, ಹೊಲವನ್ನು, ಗದ್ದೆ ಇತ್ಯಾದಿಗಳನ್ನು ಬಿಟ್ಟು ಬರುವುದು, ಇವೆಲ್ಲವನ್ನು ಸಮೀಪದಿಂದ ನೋಡಿ ತಿಳಿದು ಬಲ್ಲೆ.

೨೦೦೦ನೇ ಇಸವಿಯಲ್ಲಿ ಸಾತೊಡ್ಡಿ ಜಲಪಾತಕ್ಕೆ ತೆರಳುತ್ತಿದ್ದೆವು. ವಿಪರೀತ ಹಸಿವಾದಾಗ ಸಾತೊಡ್ಡಿಗೆ ತೆರಳಿ ಯಾರದಾದರೂ ಮನೆಯಲ್ಲಿ ಏನಾದರೂ ಕೇಳಿ ತಿನ್ನೋಣವೆಂದು ಎಲ್ಲೂ ನಿಲ್ಲದೆ ಸಾತೊಡ್ಡಿ ತಲುಪಿದರೆ ಅಲ್ಲೇನಿದೆ..... ಮುಳುಗಿಹೋದ ತೋಟ, ಅರ್ಧ ಮುಳುಗಿದ ಮನೆಗಳು, ಕಡಿಯದೆ ಹಾಗೆ ಬಿಟ್ಟು ಹೋದ ಕಲ್ಪವೃಕ್ಷಗಳಂತೂ ಎಲ್ಲಿ ತಮ್ಮ ಒಡೆಯರು ಹಿಂತಿರುಗಿ ಬಂದರೇನೋ ಎಂಬಂತೆ ನಮ್ಮನ್ನು ದಿಟ್ಟಿಸುತ್ತಿರುವಂತೆ ಭಾಸವಾಗುತ್ತಿತ್ತು. ಸಾತೊಡ್ಡಿ ಜಲಪಾತವಂತೂ ನೇರವಾಗಿ ಕೊಡಸಳ್ಳಿ ಹಿನ್ನೀರಿಗೆ ಧುಮುಕುತ್ತದೆ.

ಲಿಂಗನಮಕ್ಕಿ ಜಲಾಶಯದಿಂದ ರಾಜ್ಯಕ್ಕೆ ದೊರಕಿರುವಷ್ಟು ಫಲ ಬೇರಾವ ಆಣೆಕಟ್ಟಿನಿಂದಲೂ ದೊರಕಿರಲಿಕ್ಕಿಲ್ಲ. ಅಲ್ಲಿ ವಿಶ್ವೇಶ್ವರಯ್ಯನವರ ದೂರದೃಷ್ಟಿ ಕೆಲಸ ಮಾಡಿತ್ತು. ಆದರೆ ಜಮೀನು ಕಳಕೊಂಡವರಿಗೆ ಸರಕಾರ ಸರಿಯಾದ ಪರಿಹಾರವನ್ನು ನೀಡದೆ ಕಾಡಿದ್ದು ಮಾತ್ರ ನಾಚಿಕೆಗೇಡು. ನಾಲ್ಕು ದಶಕಗಳಾದರೂ ಇಂದಿಗೂ ಲಿಂಗನಮಕ್ಕಿ ನಿರಾಶ್ರಿತರು ಸರಿಯಾದ ನೆಲೆಯಿಲ್ಲದೆ ಅಲ್ಲಲ್ಲಿ ಹಿನ್ನೀರ ದಡಗುಂಟ ನೆಲೆಯಾಗಿರುವುದನ್ನು ಕಾರ್ಗಲ್, ಕೋಗಾರ್, ತುಮರಿ, ಸಿಗಂದೂರು, ತಾಳಗುಪ್ಪ ಸುತ್ತ ಮುತ್ತ ಸುತ್ತಾಡಿದರೆ ಕಂಡುಬರುವುದು.

ಕಾಳಿ ನದಿಗೆ ೪ ಮತ್ತು ಅದರ ಉಪನದಿಗಳಾದ ಕಾನೇರಿ ಮತ್ತು ತಟ್ಟಿಹಳ್ಳ ನದಿಗಳಿಗೆ ಒಂದೊಂದು ಆಣೆಕಟ್ಟುಗಳನ್ನು ಕಟ್ಟಲಾಗಿದೆ. ಈ ೬ ಆಣೆಕಟ್ಟುಗಳಿಂದ ಉಂಟಾದ ನಾಶವನ್ನು 'ಸರ್ವನಾಶ'ವೆಂದೇ ಹೇಳಬೇಕು. ಜನಜೀವನದ ಮೇಲಂತೂ ಈ ಆಣೆಕಟ್ಟುಗಳ ಪರಿಣಾಮ ವಿಪರೀತ. ಉದಾಹರಣೆಗೆ ಈಗಿರುವ ಕದ್ರಾ ಕೊಂಪೆಯಂತೆ ಕಾಣುತ್ತದೆ. ಹಳೇ ಕದ್ರಾ ಈಗ ಹೊಸ ಕದ್ರಾದ ಪಕ್ಕದಲ್ಲೇ ಕಾಣುವ ಆಣೆಕಟ್ಟಿನ ಹಿಂದೆ ತಾನು ಇರಲೇ ಇಲ್ಲವೆನೋ ಎಂಬಂತೆ ಮುಳುಗಿಹೋಗಿ ಚಿರನಿದ್ರೆಯಲ್ಲಿದೆ. ಸಣ್ಣ ಜಾಗವೊಂದರಲ್ಲಿ ಒಂದಷ್ಟು ಜನರನ್ನು ರಾಶಿ ಹಾಕಿ 'ಇಲ್ಲೇ ಜೀವನ ಮಾಡ್ರಿ' ಎಂಬಂತಿದೆ ಈಗಿನ ಕದ್ರಾ. ಈ ೬ ಆಣೆಕಟ್ಟುಗಳಲ್ಲಿ ಒಂದರಿಂದಾದರೂ ಸರಿಯಾದ ಉಪಯೋಗವಿದೆಯೇ? ಅದೂ ಇಲ್ಲ. ಸೂಪಾ ಆಣೆಕಟ್ಟು ಬಹು ದೊಡ್ಡ ಬ್ಲಂಡರ್. ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳೇ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ. ಸರಿಯಾದ ದೂರದೃಷ್ಟಿ ಇದ್ದಿದ್ದರೆ ಸೂಪಾ ಆಣೆಕಟ್ಟಿನ ನಿರ್ಮಾಣದ ಅವಶ್ಯಕತೇನೇ ಇರಲಿಲ್ಲ. ಬೇಕಾಬಿಟ್ಟಿ ಆಣೆಕಟ್ಟುಗಳನ್ನು ಕಟ್ಟಿದರೂ ನೀರನ್ನು ಸಮರ್ಪಕವಾಗಿ ಉಪಯೋಗಿಸಿ ವಿದ್ಯುತ್ ಉತ್ಪಾದಿಸಲು ವಿಫಲವಾಗಿದೆ ಕ.ವಿ.ಮ. ತೊಂದರೆಗೀಡಾದ್ದು ಜಮೀನು ಕಳಕೊಂಡವರು ಮತ್ತು ಪರಿಸರ.

ಕಬಿನಿಗೆ ಕಟ್ಟಿದ ಆಣೆಕಟ್ಟಿನಿಂದ ರೈತರ ಜಮೀನಿಗೆ ಕಾಲಕಾಲಕ್ಕೆ ನೀರು ಸಿಕ್ಕಿರಬಹುದು. ಇಲ್ಲಿರುವ ಕಾಡು ವನ್ಯಜೀವಿಗಳ ಗೂಡು. ಅದರ ಮೇಲೆಯೇ ಕೊಡಲಿ ಬೀಳಿಸಿದಂತೆ ಕಬಿನಿ ಆಣೆಕಟ್ಟು. ಅಲ್ಲಲ್ಲಿ ಕೃತಕ ನಡುಗುಡ್ಡೆಗಳನ್ನು ಸೃಷ್ಟಿಸಿದ ಹಿನ್ನೀರು ಕಾಡುಪ್ರಾಣಿಗಳನ್ನು ಗೊಂದಲಕ್ಕೆ ಸಿಲುಕಿಸಿದ್ದು ದೊಡ್ಡ ಸುದ್ದಿಯಾಗಿತ್ತು.

ವಿದ್ಯುತ್ ಉತ್ಪಾದನೆ ಎಂಬ ಸೋಗಿನಲ್ಲಿ ಆಣೆಕಟ್ಟು ನಿರ್ಮಿಸಿ ಹಣ ದೋಚುವುದು ಎಲ್ಲಾ ಸರಕಾರಗಳ ಮುಖ್ಯ ಉದ್ದೇಶ. ನಗರದ ಸಮೀಪ ಇವೆ ಚಕ್ರಾ ಮತ್ತು ಸಾವೆಹಕ್ಲು ಆಣೆಕಟ್ಟುಗಳು. ಸಂಪೂರ್ಣ ನಿರ್ಜನ ಪ್ರದೇಶ. ನಿಶ್ಯಬ್ದ. ನನ್ನನ್ನು ಬಿಟ್ಟರೆ ಬೇರೊಂದು ಜೀವಿ ಅಲ್ಲಿರಲಿಲ್ಲ. ಆ ಮೌನ ಹೆದರಿಕೆ ಉಂಟುಮಾಡುತ್ತಿತ್ತು. ಎರಡೂ ಆಣೆಕಟ್ಟುಗಳಲ್ಲಿ ಕಣ್ಣು ಕಾಣುವಷ್ಟು ದೂರ ನೀರಿನ ರಾಶಿ. ವಿದ್ಯುತ್ ಉತ್ಪಾದನೆಗಾಗಿ ಈ ೨ ಆಣೆಕಟ್ಟುಗಳನ್ನು ಕಟ್ಟಲಾಗಿತ್ತು. ಈಗ ವಿದ್ಯುತ್ ಉತ್ಪಾದನೆಯೂ ಇಲ್ಲ, ಮತ್ತೇನೂ ಇಲ್ಲ, ಅಲ್ಲಿ ಯಾವ ಸಿಬ್ಬಂದಿಯೂ ಇಲ್ಲ. ಎರಡೂ ಆಣೆಕಟ್ಟುಗಳ ನೀರನ್ನು ಲಿಂಗನಮಕ್ಕಿಗೆ ದಿಕ್ಕು ಬದಲಾಯಿಸಿ ಹರಿಬಿಡಲಾಗುತ್ತಿದೆ. ಪ್ರಾಜೆಕ್ಟ್ ಫೈಲ್ ಆಯಿತು. ಹಣ ಮಾಡಿಕೊಂಡವರು ಮಾಡಿಕೊಂಡರು. ಕಾಡಿನ ನಾಶ, ಜನರ ಜೀವನ ಅಸ್ತವ್ಯಸ್ತ, ದಿಕ್ಕುತಪ್ಪಿ ನಾಶವಾದ ಕಾಡುಪ್ರಾಣಿಗಳು... ಎಲ್ಲಾ ಕಡೆ ಇದೇ ಹಣೆಬರಹ.

ನಾಲ್ಕೈದು ವರ್ಷಗಳ ಹಿಂದೆ ಹೊನ್ನಾವರದಿಂದ ಜೋಗಕ್ಕೆ ತೆರಳುವಾಗ ಒಂದು ಕಡೆ ರಸ್ತೆ ಬಂದ್ ಮಾಡಲಾಗಿತ್ತು. ಮುಂದಿನ ವರ್ಷ ಆ ರಸ್ತೆ ಶರಾವತಿ ಟೇಲರೀಸ್ ಆಣೆಕಟ್ಟಿನ ನೀರಿನಲ್ಲಿ ಮುಳುಗುವುದರಿಂದ ಪರ್ಯಾಯ ರಸ್ತೆಯ ತಯಾರಿ ಮಾಡಲಾಗುತ್ತಿತ್ತು. ಮುಳುಗಲಿದ್ದ ರಸ್ತೆಯಲ್ಲಿ ಒಂದು ಕೊನೆಯ ಬಾರಿಗೆ ನನ್ನ ಯಮಾಹ ಓಡಿಸಿದೆ. ಆ ನಾಲ್ಕು ಕಿಮಿ ಗಳ ಸವಾರಿ ಮರೆಯಲಸಾಧ್ಯ. ಹತ್ತಾರು ತ್ಯಜಿಸಿದ ಮನೆಗಳು, ಬಾಳೆ ತೋಟಗಳು ಎಲ್ಲಾ ರಸ್ತೆ ಬದಿಯಲ್ಲೇ ಇದ್ದವು. ೨ ವರ್ಷಗಳ ಬಳಿಕ ಅದೇ ದಾರಿಯಲ್ಲಿ ತೆರಳಿದಾಗ ಹಳೆ ರಸ್ತೆ ಕವಲೊಡೆಯುವ ಜಾಗದಲ್ಲಿ ವಾಹನ ನಿಲ್ಲಿಸಿ ಸ್ವಲ್ಪ ದೂರ ನಡೆದರೆ ರಸ್ತೆಯೇ ಮಾಯ. ನೀರು ಪ್ರತ್ಯಕ್ಷ. ೨ ವರ್ಷದ ಹಿಂದಿನ ಆ ೪ ಕಿಮಿ ಸವಾರಿ ಮತ್ತೆ ಮತ್ತೆ ನೆನಪು ಬರುತ್ತಿತ್ತು. ಈಗ ಬೇಕೆಂದರೂ ಮತ್ತೆಲ್ಲಿ ಸಾಧ್ಯ ಆ ಸವಾರಿ ಮಾಡಲು. ನನಗೇ ಇಷ್ಟು ವ್ಯಥೆ ಉಂಟಾಗಬೇಕೆಂದರೆ ಇನ್ನು ನೆಲ ಹೊಲ ಮನೆ ಕಳಕೊಂಡವರಿಗೆ....

ದೂರದೃಷ್ಟಿ, ಸರಿಯಾದ ಉದ್ದೇಶ ಮತ್ತು ಆಯಕಟ್ಟಿನ ಸ್ಥಳ ಈ ೩ ಇಲ್ಲದೆ ಆಣೆಕಟ್ಟು ನಿರ್ಮಿಸಿದರೆ, ಅದರಿಂದ ಕೆಡುಕುಗಳೇ ಹೆಚ್ಚು.

..... ಅಂದಹಾಗೆ..... ಟಿಪ್ಪಣಿ ಸ್ವಲ್ಪ ಉದ್ದವಾಯಿತು. ಕ್ಷಮೆಯಿರಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 1, 2007 - 8:04pm — ವೈಭವ

Re: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

ವೈಭವ's picture

ರಾಜೇಶ್ ರವರೆ,

   ನಿಮ್ಮ ಟಿಪ್ಪಣಿ ಸುದೀರ್ಘ ವಾಗಿದ್ದರೂ ವಿಚಾರ ಮಾಡುವ ಅಂಶಗಳು ಬಹಳಷ್ಟಿವೆ.. ಅದನ್ನು ಓದುತ್ತಿದ್ದಾಗ ಕರುಳು ಚುರ್ ಅಂತು. ಮತ್ತಷ್ಟು ಪ್ರಶ್ನೆಗಳು ಉದ್ಭವವಾದವು.

೧) ನಾವು ಅಣೆಕಟ್ಟುಗಳನ್ನು ಕಟ್ಟುವಾಗ ದೂರದೃಷ್ಟಿಯಿಂದ ಕೆಲಸ ಮಾಡುತ್ತೇವೆ? ಅಣೆಕಟ್ಟು ಕಟ್ಟುವಾಗ ಗಮನದಲ್ಲಿಡಬೇಕಾದ ಅಂಶಗಳನ್ನು ಪಾಲಿಸಲೇಬೇಕಾದ ಕಾನೂನುಗಳಿವಿಯೆ? ಇದ್ದರೆ ಆ ಕಾನೂನುಗಳನ್ನು ಪಾಲಿಸಬೇಕಾದ ಸರ್ಕಾರವೇ ಅವನ್ನು ಉಲ್ಲಂಘಿಸುತ್ತಿವಿಯೆ?

೨) ನಾವು ನಮ್ಮ ಅಣೆಕಟ್ಟುಗಳ ಪ್ರತಿಶತಃ ಬಳಕೆ( ಅಂದರೆ ಅಣೆಕಟ್ಟಿನಿಂದ ಪಡೆದ ಉಪಯೋಗಗಳು v/s ನಿರೀಕ್ಷಿಸಿದ್ದ ಉಪಯೋಗಗಳು)  ತುಂಬ ಕಡಿಮೆ ಇರಬೇಕು....ಇದು ತಲೆ ತಗ್ಗಿಸುವ ಸಂಗತಿ.

ಹಾಗಾದರೆ ನಾವೇನು ಮಾಡಬಹುದು ಎಂದು ನಾನೆ ಪ್ರಶ್ನೆ ಹಾಕಿಕೊಂಡಾಗ  ನಾವು ಕೂಡಲೆ ವಿದ್ಯುತ್ ಉತ್ಪಾದನೆಗೆ ಅಣೆಕಟ್ಟು ಕಟ್ಟುವುದನ್ನು ನಿಲ್ಲಿಸಬೇಕು. ಹೆಚ್ಚು ಹೆಚ್ಚು ಗಾಳಿ ಮತ್ತು ಸೂರ್ಯನಿಂದ ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ಅನುವುಗೊಳ್ಳಬೇಕು

hp ನಾಡಿಗರೇ,

 ಸಂಪದದಿಂದ ನಾವು ಒಂದು ಜನಮತವನ್ನು ಹುಟ್ಟು ಹಾಕಿ ಇದನ್ನು ಹೆಚ್ಚು ಹೆಚ್ಚು ಜನರ ಸಮ್ಮತಿಯನ್ನು ಸಂಗ್ರಹಿಸಿ ಜಾಗೃತಿಯನ್ನು ಮೂಡಿಸಬಹುದಲ್ಲವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 1, 2007 - 10:26pm — hpn

ಉ: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

hpn's picture

ಆಗಬಹುದು. ನನ್ನಿಂದ ಸಾಧ್ಯವಾಗುವುದೆಲ್ಲವನ್ನೂ ನಾನು ವ್ಯವಸ್ಥೆ ಮಾಡಬಲ್ಲೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 2, 2007 - 6:13pm — prapancha

Re: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

prapancha's picture

ನಾಯಕರೆ/ವೈಬವರೆ,
ನಮಸ್ಕಾರ.
ನಾನು ಕೂಡ ಸುಮಾರು ೧೯೯೯ ನೇ ಇಸವಿಯಿ೦ದ ಶರವಾತಿ ಕಣಿವೆಯಲ್ಲಿ ಚಾರಣ ಮಾಡುತ್ತಿದ್ದೇನೆ. ಅಲ್ಲಿಯ ಅರಣ್ಯ ನಾಶದ ಕಥೆಯನ್ನ ಹೇಳಲಿಕ್ಕೆ ದುಖ್ಖವಾಗುತ್ತದೆ. ಮೊದಲು ಅಣೆಕಟ್ಟಿನಿ೦ದ ನಾಶವಾದ ಕಾಡು ಇ೦ದು ಮರಗಳ್ಳರ, ದುರಾಸೆ ಮನುಶ್ಯರು ಸ್ವ೦ತ ತೋಟಗಳ ವಿಸ್ತಾರ ಮಾಡುತ್ತಿರುವದರಿ೦ದ ಎ೦ತ ಹಸಿರು ಅರಣ್ಯ ಇ೦ದು ನಾಶಗೊಳ್ಳುತ್ತಿದೆ. ಇ೦ದು ಪಶ್ಚಿಮ ಘಟ್ಟದಲ್ಲಿ ಎಲ್ಲಿ ನೋಡಿದರೂ ಡಾ೦ಬರು ರಸ್ತೆ!.
ನನಗನ್ನಿಸಿದ ಹಾಗೆ ದೊಡ್ಡ ಅಣೆಕಟ್ಟುಗಳು ನಮ್ಮ ವಿದ್ಯುತ್ ಮತ್ತು ನೀರಾವರಿ ಸಮಸ್ಯೆಗಳಿಗೆ ತಾತ್ಕಾಲಿಕ ಉತ್ತರ ಅಷ್ಟೆ. ದೂರದೃಷ್ಟಿಯಿ೦ದ ಯೋಚಿಸಿದರೆ ವಿದ್ಯುತ್ ಗಾಗಿ ನಾವು ಪರ್ಯಾಯ ಮಾರ್ಗಗಳನ್ನ ಸ೦ಶೋದಿಸಬೇಕಾಗುತ್ತದೆ ಉದಾ:- ಶೌರ ಶಕ್ತಿ, ಗಾಳಿ ಯ೦ತ್ರ ಮೊದಲಾದವು. ಇನ್ನು ನೀರಾವರಿಗಾಗಿ ಸಣ್ಣ ನೀರಾವರಿಗೆ ಒತ್ತು ಕೊಡ ಬೇಕಾಗುತ್ತದೆ ಉದಾ:- ಮಳೆ ನೀರು ಸ೦ಗ್ರಹಣೆ, ಈಗಾಗಲೆ ಇರುವ ಕೆರೆಗಳನ್ನ ಊಳೆತ್ತಿ ಸುಸ್ತಿತಿಯಲ್ಲಿಡುವುದು, ಹೊಸ ಕೆರೆ/ಕಟ್ಟೆ ಗಳನ್ನ ಕಟ್ಟುವುದು ಮು೦ತಾದವು.
ಈ ನಿಟ್ಟಿನಲ್ಲಿ ಪ್ರಪ೦ಚಾದ್ಯ೦ತ ಸರ್ಕಾರಗಳು ಎಚ್ಚೆತ್ತುಗೊ೦ಡು ಕೆಲಸ ಮಾಡಬೇಕಾಗಿದೆ, ಇಲ್ಲದೆ ಹೋದರೆ ತ್ಸುನಾಮಿ ತರಹ ಪ್ರಕೃತಿ ವೈಚಿತ್ರಗಳಿ೦ದ ಮನುಷ್ಯರು ಸಾಯುವುದನ್ನ ನಮ್ಮ ಕಣ್ಣುಗಳಿ೦ದ ನೋಡ ಬೇಕಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 3, 2007 - 2:27am — rajeshnaik111

Re: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

rajeshnaik111's picture

ಸಂಪತ್ ರವರೆ,

ನೀವು ಸೂಚಿಸಿರುವ ಪರ್ಯಾಯ ವಿಧಾನಗಳಲ್ಲಿ ನಮ್ಮನ್ನು ಆಳುವವರಿಗೆ ಆಸಕ್ತಿ ಇದ್ದರೆ ತಾನೆ? ಅವುಗಳಿಗೆ ಹೆಚ್ಚಿನ ಹಣ ಖರ್ಚು ಆಗುವುದಿಲ್ಲ ಮತ್ತು ಈ ವಿಧಾನಗಳಿಂದ ವನ್ಯ ಸಂಪತ್ತಿನ ಲೂಟಿ ಅಸಾಧ್ಯ. ಒಂದು ಆಣೆಕಟ್ಟು ಕಟ್ಟುವಾಗ ಎಷ್ಗ್ಟು ಕಾಡು ಹೋಗುತ್ತೆ ಎಂಬುದು ಟಿಂಬರ್ ಮಾಫಿಯಾಗೆ ಮುಖ್ಯ. ಈಗ ನೋಡಿ ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಗಳು ಬರಪೀಡಿತ. ನೀವು ಸೂಚಿಸಿದಂತೆ ಕೆರೆಗಳ ಹೂಳೆತ್ತುವುದು, ಸಣ್ಣ ಕಟ್ಟೆಗಳನ್ನು ಕಟ್ಟಿ ಬಿದ್ದ ಅಲ್ಪ ಸ್ವಲ್ಪ ಮಳೆಯನ್ನು ಸಂಗ್ರಹಿಸುವುದು ಮತ್ತು ಇದರೊಂದಿಗೆ ನೀರು ಇಂಗಿಸುವ ವಿಧಾನವನ್ನೂ ಅನುಸರಿಸಿದರೆ ೩-೪ ವರ್ಷಗಳಲ್ಲಿ ನೀರಿಲ್ಲದ ಸ್ಥಳಗಳಲ್ಲಿ ಅತರ್ಜಲದ ಪ್ರಮಾಣ ವೃದ್ಧಿಯಾಗಿ ನೀರು ಸಂಗ್ರಹಣೆಯಾಗುತ್ತದೆ. ಬರ ಮತ್ತೆ ಸಮೀಪ ಬರುವುದಿಲ್ಲ. ಆದರೆ ಅಷ್ಟು  ತಿಳುವಳಿಕೆ ಎಲ್ಲಿದೆ ದೊರೆಗಳಿಗೆ? ಪಶ್ಚಿಮ ಘಟ್ಟಗಳಿಂದ ಇಳಿದು ಬರುವ ೯ ಗುಡ್ಡಗಾಡು ನದಿಗಳಿಂದ ಉಂಟಾಗುವ ನೇತ್ರಾವತಿಗೆ ಆಣೆಕಟ್ಟು ಕಟ್ಟಿ ನೀರನ್ನು ಕಾಲುವೆ ಮೂಲಕ ಚಿತ್ರದುರ್ಗ, ತುಮಕೂರು ಮತ್ತು ಕೋಲಾರಗಳಿಗೆ ಹಾಯಿಸುವ ಯೋಜನೆ ಬರಲಿದೆ. ಕರ್ನಾಟಕದಲ್ಲಿರುವ ಪಶ್ಚಿಮ ಘಟ್ಟ ಶ್ರೇಣಿಯ ಸರ್ವನಾಶಕ್ಕೆ ಇದೊಂದು ಯೋಜನೆ ಸಾಕು. ಪರಿಸರ, ಕಾಡು, ವನ್ಯ ಜೀವಿಗಳು ಇವುಗಳ ರಕ್ಷಣೆ ಯಾವುದೇ ಸರಕಾರದ ಅಜೆಂಡಾದಲ್ಲಿರುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 5, 2007 - 11:06am — prapancha

Re: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

prapancha's picture

ಪ್ರೀತಿಯ ರಾಜೆಶ್ ರವರೆ,

ಉತ್ತರಕ್ಕೆ ದನ್ಯವಾದಗಳು,

ನಮ್ಮ ಸರ್ಕಾರಗಳಿಗೆ ಪ್ರಕೃತಿ ನಾಶದ ಪಲಿತಾ೦ಶದ ಬಗ್ಗೆ ಅರಿವಿಲ್ಲ ಅಷ್ಟೆ. ಇವತ್ತು ನಮ್ಮ ಈ ಎಲ್ಲ ಸಮಸ್ಯೆಗಳಿಗೆ ನಮ್ಮ ಅವಿವೇಕಿ ರಾಜಕಾರಣಿಗಳೇ ಕಾರಣ. ಯಾವುದಾದರು ದೊಡ್ಡ ಪ್ರಮಾಣದ ಕಾರ್ಖಾನೆ ಅಥವ ಅಣೆಕಟ್ಟುಗಳ ಯೋಜನೆ ಬ೦ದಾಗ ನಾವು ಮೊದಲು ಯೋಚಿಸಬೇಕಾದ ಅ೦ಶ ಪ್ರಕೃತಿಯ ಮೇಲಾಗಬಹುದಾದ ದುಶ್ಪರಿಣಾಮ. ಆದರೆ ಯಾವುದಾದರು ಈ ರೀತಿಯ ಯೋಜನೆಗಳು ಬ೦ದಾಗ ರಾಜಕಾರಣಿಗಳು ಯೋಚಿಸುವುದು ಅವರಿಗೆ ಬರಬಹುದಾದ ಹಣದ ಪಾಲು!!.
ಪರಿಸರ ಹಾನಿಯನ್ನ ತಡೆಗಟ್ಟಬೇಕಾದರೆ ಈ ಕೆಲವು ಯೊಜನೆಗಳಿಗೆ ಪ್ರಾಮುಕ್ಯತೆಯನ್ನ ಕೊಡಬೇಕು.
* ಪ್ರಾರ೦ಬಕ್ಕೆ ಸಣ್ಣಪ್ರಮಾಣದ ವಾಹನಗಳಿಗೆ(ರಿಕ್ಷಾ, ದ್ವಿಚಕ್ರ ವಾಹನ, ಸಣ್ಣ ಕಾರು) ಸೌರ ಶಕ್ತಿಯಿ೦ದ ಚಾಲನೆ ಮಾಡುವ ಹಾಗೆ ಸ೦ಶೊದಿಸುವುದು. ಆವಾಗಲೆ ಕೆಲವು ಕ೦ಪನಿಗಳು ಕಾರ್ಯನಿರತವಾಗಿರುವುದರಿ೦ದ ಅವರಿಗೆ ಸರ್ಕಾರದಿ೦ದ ಹಣ ಸಹಾಯ ಮಾಡುವುದು.
* ಮಳೆ ನೀರು ಸ೦ಗ್ರಹಣೆಯನ್ನ ಹೆಚ್ಚಾಗಿಸುವುದು. ಹೊಸ ಕೆರೆ/ಕಟ್ಟೆಗಳನ್ನ ಕಟ್ಟುವುದು ಮತ್ತು ಇರುವ ಕೆರೆಗಳನ್ನ ಹೊಳೆತ್ತಿ ಸುಸ್ತಿತಿಯಲ್ಲಿಡುವುದು. ಹಾಗೆ ನೋಡಿದರೆ ನಮ್ಮ ಪೂರ್ವಜರು ಯಾವುದೆ ದೊಡ್ಡ ಪ್ರಮಾಣದ ಅಣೇಕಟ್ಟುಗಳಿಲ್ಲದೆ ವ್ಯವಸಾಯ ಮಾಡಲಿಲ್ಲವೆ ಮತ್ತು ನೆಮ್ಮದಿಯಿ೦ದ ಬದುಕಿರಲಿಲ್ಲವೆ?.
* ನಗರ ಪ್ರದೇಶಗಳಲ್ಲಿ ಕೈಗಾರೀಕರಣ ಸರ್ವಾ೦ಗೀಣ(ಹೊಲಿಸ್ಟಿಕ್) ಆಗಿರಬೇಕು. ಅ೦ದರೆ ಯಾವೆದೆ ಕೈಗಾರಿಕೆಗೆ ಅನುಮತಿ ಕೊಡುವ ಮುನ್ನ ಈ ಕೈಗಾರಿಕೆಯಿ೦ದ ಆಗುವ ಪ್ರಕೃತಿ ನಾಶದ ವಿಮರ್ಶೆ ಮಾಡಿ ಅದಕ್ಕೆ ತಕ್ಕನಾಗಿ ಅರಣ್ಯ ಬೆಳಸಿ ಇದರ ದುಶ್ಪರಿಣಾಮಗಳನ್ನ ಶೂನ್ಯಗೊಳಿಸುವುದು ಮತ್ತು ಕಾರ್ಕಾನೆಗಳನ್ನ ಆದಷ್ಟು ವಿವಿದ ಪ್ರದೇಶಗಳಿಗೆ ಹರಡುವುದು.
ಹೀಗೇ ಬೇಕಾದಷ್ಟು ಕ್ರಮಗಳಿವೆ ಆದರೆ ನಮ್ಮ ರಾಜಕಾರಣಿಗಳಿಗೆ ಯೋಚಿಸಲು ಸಮಯವಿದೆಯೆ? ಒಟ್ಟಿನಲ್ಲಿ ನಮ್ಮ ಮು೦ದಿನ ತಲೆಮಾರಿನ ಜನ/ಜಾನುವಾರುಗಳನ್ನ ಆ ದೇವರೆ ರಕ್ಷಿಸಬೇಕು.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 5, 2007 - 4:03pm — hpn

ಉ: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

hpn's picture

ರಾಜಕಾರಣಿಗಳಿಗೆ ಎಷ್ಟು ಬೈದರೂ ಕೊನೆಗೆ ಜವಾಬ್ದಾರಿ ನಮ್ಮದೇ.

ಸೌರ ಶಕ್ತಿ ಬಳಸುವ ಪ್ರಯತ್ನಗಳು ಈಗಾಗಲೇ ಅಧಿಕೃತವಾಗಿಯೋ, ಅನಧಿಕೃತವಾಗಿಯೋ ನಡೆಯುತ್ತಲಂತೂ ಇದೆ Smiling

ನಾವುಗಳು ಮಾಡಬಹುದಾದ ಕೆಲಸಗಳು ಸಾಕಷ್ಟಿವೆ - ಚಾರಣಗಳಿಗೆ ಮಾಡಿಕೊಂಡ ಗುಂಪುಗಳಂತೆ ಈ ರೀತಿಯ ವಿಷಯಗಳಿಗೆ ಸರಿಯಾದ ಬೆಳಕು ಚೆಲ್ಲುವ ಕೆಲಸ - ವಿರೋಧ ವ್ಯಕ್ತಪಡಿಸುವ ಕೆಲಸಗಳಿಗೆ ಜೊತೆಗೂಡಬಹುದು. ತಿಂಗಳಿಗೊಮ್ಮೆಯಾದರೂ ಎಲ್ಲರೂ ಕುಳಿತು ಮಾತನಾಡಿ "ಈ ಕುರಿತು ನಾವುಗಳು ಏನು ಮಾಡಬಹುದು?" ಎಂದು ಆಲೋಚಿಸಿದಲ್ಲಿ ಮೊದಲ ಹೆಜ್ಜೆ ಇಟ್ಟಂತೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 5, 2007 - 4:18pm — ವೈಭವ

Re: ಉ: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

ವೈಭವ's picture

ರಾಜಕಾರಣಿಗಳಿಗೆ ಎಷ್ಟು ಬೈದರೂ ಕೊನೆಗೆ ಜವಾಬ್ದಾರಿ ನಮ್ಮದೇ.

....ಹೌದು. ನಾವು assumed responsibility ತಕೊಳ್ದೆ ಬರೀ ರಾಜಕಾರಿಣಿಗಳನ್ನು ಬಯ್ಯುವುದರಲ್ಲಿ ಅರ್ಥವಿಲ್ಲ.

ಆದರೆ ನಾವು ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದರ ಬಗ್ಗೆ ಮೊದಲು ಚರ್ಚಿಸಬೇಕಾಗುತ್ತದೆ.

ತಿಂಗಳಿಗೊಮ್ಮೆಯಾದರೂ ಎಲ್ಲರೂ ಕುಳಿತು ಮಾತನಾಡಿ "ಈ ಕುರಿತು ನಾವುಗಳು ಏನು ಮಾಡಬಹುದು?" ಎಂದು ಆಲೋಚಿಸಿದಲ್ಲಿ ಮೊದಲ ಹೆಜ್ಜೆ ಇಟ್ಟಂತೆ..... ಇದು ಒಳ್ಳೆಯ ಸಲಹೆ.... ಹೀಗೆ ಮಾಡಬಹುದು. ನಾನು ಸಿದ್ಧ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 5, 2007 - 7:30pm — prapancha

Re: ಉ: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

prapancha's picture

ಪ್ರೀತಿಯ ಪ್ರಕೃತಿ ಪ್ರಿಯರೆ,
ತಮ್ಮ ಅನಿಸಿಕೆಗೆ ನನ್ನ ಸಹಮತವಿದೆ. ಆದರೆ ನಾವು ಯಾವ ವಿದದಲ್ಲಿ ಹೋರಾಟ ಮಾಡಬಹುದು ಎ೦ಬುದನ್ನ ಸ್ವಲ್ಪ ತಿಳಿಯಪಡಿಸಿ. ಇಲ್ಲಿ ಎಷ್ಟು ಹೊಡೆದಾಡಿದರೂ ಪ್ರಯೊಜನವಾಗುವುದಿಲ್ಲ. ಕನ್ನಡದಲ್ಲಿ ಒ೦ದು ಗಾದೆಯಿದೆ ನೋಡಿ "ಪುಸ್ತಕದ ಬದನೇಕಾಯಿ ಊಟಕ್ಕೆ ಬರುತ್ಯೇ?"Smile ಎ೦ದ ಹಾಗೆ ಆಗುತ್ತದೆ. ನಾನು ಕೆಲ ವರ್ಷಗಳ ಹಿ೦ದೆ ರ್‍ಒಟರಾಕ್ಟ್ ಕ್ಲಬ್ ಎ೦ಬ ಸ೦ಸ್ಥೆಯ ಮುಖೇಣ ಬೆ೦ಗಳೂರಿನ ಸುತ್ತಲಿರುವ ಸರ್ಕಾರಿ ಶಾಲೆಗಳಲ್ಲಿ ಗಿಡ ನೆಡುವ ಕಾಯಕ ಮಾಡಿದೆ, ಅದರ ಪಲಿತಾ೦ಶ ನೀವು ಬನ್ನೆರುಗಟ್ಟ ರಸ್ತೆಯಲ್ಲಿರುವ ಗೊಟ್ಟಿಗೆರೆ ಶಾಲೆಯ ಅವರಣದಲ್ಲಿ ಬೆಳೆದು ಹಸಿರಾಗಿ ಕ೦ಗೊಳಿಸುತ್ತಿರುವ ಸಸ್ಯ ರಾಶಿಯೇ ಸಾಕ್ಶಿ. ಇದು ಒ೦ದು ಅಲ್ಪ ಪ್ರಮಾಣದ ಪ್ರಯತ್ನ Cool. ಹೀಗೇ ನಾವು ವಿವಿದ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಬಹುದು. ಯೋಚಿಸಿ ಮತ್ತು ಸಲೆಹೆ ನೀಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 5, 2007 - 9:07pm — hpn

ಉ: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

hpn's picture

ಶಾಲೆಯಲ್ಲಿದ್ದಾಗ ನಾನೂ ರೋಟರ್ಯಾಕ್ಟ್ ಕ್ಲಬ್ ನಲ್ಲಿದ್ದೆ Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 6, 2007 - 10:10am — prapancha

Re: ಉ: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

prapancha's picture

ತು೦ಬಾ ಸ೦ತೋಷ ಎಚ್ ಪಿ ಎನ್ ಅವರೆ.Smile.

ಜೂನ್ ತಿ೦ಗಳ ೬ ನೇ ತಾರೀಖು ವಿಶ್ವ ಪರಿಸರ ದಿನ. ಮೊದಲಿನಿ೦ದಲೂ ನಾವು ಈ ದಿನ ಗಿಡ ನೆಡವ ಕಾರ್ಯವನ್ನ ಮಾಡುತ್ತ ಬ೦ದಿದ್ದೇವೆ, ಆದ್ದರಿ೦ದ ಈ ವರ್ಷದ ಪರಿಸರ ದಿನವನ್ನ, ಎಲ್ಲ ಸ೦ಪದ ಬಳಗದವರಿಗೆಲ್ಲ ಸಹಮತವಿದ್ದರೆ, ಈ ದಿನವನ್ನ ಗಿಡ ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸ ಬಹುದು. ಎನ೦ತೀರ ಸಾರ್.
ನಾವು ಶಾಲೆಗಳನ್ನ ವಿವಿದ ದೃಷ್ಟಿ ಕೋನದಿ೦ದ ಆಯ್ಕೆ ಮಾಡಿಕೋ೦ಡಿದ್ದೆವು. ಒ೦ದು ಪರಿಸರ ಸ೦ರಕ್ಷಣೆ ಎರಡು ಶಾಲೆಯ ಆವರಣದಲ್ಲಿ ಗಿಡ/ಮರಗಳಿದ್ದರೆ ಮಕ್ಕಳ ಓದಿಗೆ ಪೂರಕವಾಗಿರುತ್ತದೆ ಹಾಗೂ ನಾವು ವಿವಿದ ಹಣ್ಣಿನ ಗಿಡ ಸಹ ನೆಡ ಬಹುದು ಇವು ಮಕ್ಕಳನ್ನ ಶಾಲೆಗೆ ಆಕರ್ಶಿಸುತ್ತವೆ. ನಾವು ಪ್ರತಿ ಸಲ ಸರ್ಕಾರಿ ಶಾಲೆಗಳನ್ನ ಅಯ್ಕೆ ಮಾಡುತ್ತಿದ್ದೆವು, ಈಗಲೂ ಸರ್ಕಾರಿ ಶಾಲೆಗಳನ್ನ ಆಯ್ಕೆ ಮಾಡಿಕೊಳ್ಳಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 11, 2007 - 6:00pm — ವೈಭವ

Re: ಉ: ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

ವೈಭವ's picture

ಇಂದಿನ ವಿ.ಕ.ದಲ್ಲಿ  ( ೧೧/೦೨/೨೦೦೭) - ಗುಂಡ್ಯ ಜಲ ವಿಡ್ಯುತ್ ಗೆ ಮತ್ತೆ ಚಾಲನೆ  (ಪುಟ ೨). ಬಗ್ಗೆ ಲೇಖನವಿದೆ.

ಈ ಯೋಜನೆಯ ಬಗ್ಗೆ 'ಒಳ್ಳೆಯ ಅಂಶ"ಗಳು ಹೆಚ್ಚಿವೆ ?! (ಆದರೂ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಪ್ರದೇಶದಲ್ಲಿ ೬೪% ಕಾಡು ಇದೆ!!). ಆದರೆ ಯಾವ ರೀತಿ ಜಾರಿಗೆ ಬರುತ್ತದೆಯೆ ಕಾದು ನೋಡಬೇಕು (??)

-ಜೈ ಕರ್ನಾಟಕ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೊನೆಯ ಮಾತು
  • ಕಲ್ಲು-ಕೋಟೆಗಳ ನಡುವಲ್ಲೊಂದು ಕಣಿವೆ
  • ಪರಿಸರ ಪ್ರೇಮಿ
  • ನಾವು ಮಾಡಿದವರು ನಮಗೆ (ಎಡರೊತ್ತಿನಲ್ಲಿ) ಆಗಲ್ಲ - ತಿಳಿವು/ನೀತಿ
  • ನಾ ಸುತ್ತಿದ ಹಳ್ಳಿಗಳು
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
  • ನಾನು ಯಾವ ಕಾಲದಲ್ಲಿ ಇದ್ದೇನೆ...!?
  • ಓದಿದ್ದು ಕೇಳಿದ್ದು ನೋಡಿದ್ದು-50 ವಿಮರ್ಶೆಯ ಬಗ್ಗೆ ವಿಮರ್ಶೆ:"ಪ್ರಕರಣ"ಕ್ಕೆ ತೆರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:12pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 399 ಅತಿಥಿಗಳು ಆನ್ಲೈನ್ ಇರುವರು.


ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator