Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ಶ್ರೀನಿಧಿ ರವರ ಬ್ಲಾಗ್

ನನ್ನ ನುಡಿ, ನನ್ನ - ನಡಿಗೆ

ಹೆಚ್ಚೇನೂ ಇಲ್ಲ. ಬಹಳ ಯೋಚನೆ ಮಾಡಿ ಬರೆಯುವ ನನ್ನ ಕೆಲವು ಅನಿಸಿಕೆ-ಮಾತು-ಕವನ.

ಮರೆತ ಹಣ್ಣುಗಳು

April 2, 2006 - 12:05pm — ಶ್ರೀನಿಧಿ

"I want only strawberry, no apple" ಎಂದು ಇಲ್ಲಿ ಒಂದು ಮಗು ಅಳುತ್ತಿದ್ದಾಗ ನೆನಪಿಗೆ ಬಂದದ್ದು ನಾನು ತಿಂದ ಹಣ್ಣುಗಳಲ್ಲಿ ಎಂದಿಗೂ ಮರೆಯಲಾಗದಂಥದ್ದು, ಸ್ವಲ್ಪವಾದರೂ ಅಪರೂಪ ಎನ್ನುವವು.

೧೦ ವರ್ಷಗಳ ಹಿಂದೆ ನಾನು ಶಿವಮೊಗ್ಗದಲ್ಲಿದ್ದಾಗ ಪಕ್ಕದ ಮನೆಯಲ್ಲಿ ಅಪರೂಪದ "ರಾಮಫಲ" ಮರ ಇತ್ತು. ನಮಗೆ ದಿನಾ ಎಲ್ಲಾ ಅದರ ಸುತ್ತಲೇ ಆಟ. ರಾಮಫಲದ ಹಣ್ಣಿನ ರುಚಿ ಹೇಗೆ ತಿಳಿಸಲಿ?? ಆಗ ತಿಂದ ರಾಮಫಲ ಶಿವಮೊಗ್ಗ ಬಿಟ್ಟ ಮೇಲೆ ತಿಂದೇ ಇಲ್ಲ. ರಾಮಫಲ ಸೀತಾಫಲಕ್ಕಿಂತ ಸ್ವಲ್ಪ ದೊಡ್ಡದಿರುತ್ತದೆ. ಸ್ವಲ್ಪ ತರಿ ಜಾಸ್ತಿ. ರುಚಿ ವ್ಯತ್ಯಾಸ. ಹೆಚ್ಚಿಗೆ ನೆನೆಪು ಬರುತ್ತಿಲ್ಲ. ಹಿರಿಯರು ತಿಳಿಸಬೇಕು.

ನನ್ನ ಅಮ್ಮ ಯಾವಾಗಲೂ ನೆನೆಸಿಕೊಳ್ಳುವುದು ಪನ್ನೇರಳೆ ಹಣ್ಣು. ಆಗ ಅವರ ಮನೆಯಲ್ಲೇ ಪನ್ನೇರಳೆ ಮರ ಇತ್ತಂತೆ.(ನಾನು ಹುಟ್ಟುವ ವೇಳೆಗೆ ಕಡಿಸಿಬಿಟ್ಟಿದ್ದರು). ನಾನು ಈ ಹಣ್ಣನ್ನು ಎಲ್ಲೋ ಗಾಂಧೀಬಜಾರ್ ನಲ್ಲಿ ತಿಂದದ್ದು ನೆನಪು. ತಿಂದದ್ದು ೨ ಹಣ್ಣು. ಮೊದಲನೆಯ ಹಣ್ಣು ಒಗಚು ಎನ್ನಿಸಿದರೂ ಎರಡನೆಯ ಹಣ್ಣು ಚೆನ್ನಾಗಿದೆ ಅನ್ನಿಸಿತ್ತು. ನನ್ನ ಸೋದರಮಾವ ಮನೆಯಲ್ಲಿದ್ದ ಪನ್ನೇರಳೆ ಮರದಿಂದ ಹಣ್ಣು ಕಿತ್ತು ದಿನಾ ಇಡೀ ತಿಂದು ಮಾರನೇ ದಿನ ಮೂಗಿನವರೆಗೂ ಕಫ ತುಂಬಿತ್ತು ಎಂದು ಈಗಲೂ ನೆನಪಿಸಿಕೊಳ್ಳುತ್ತಾರೆ.

ಶಿವಮೊಗ್ಗದಲ್ಲಿ ನಾನು ಬಹಳ ಇಷ್ಟಪಟ್ಟ ಇನ್ನೊಂದು ಹಣ್ಣು "ಚಂದ್ರ ಹಲಸು". ಈ ಹಲಸಿನ ತೊಳೆ ಕೆಂಪು/ಕೇಸರಿ ಬಣ್ಣದಲ್ಲಿರುತ್ತದೆ. ರುಚಿ ಅದ್ಭುತ. ಗೆಳೆಯ ಶ್ರೀಶನಿಗೆ (ಶ್ರೀಶ ಕಾರಂತ) ನೆನಪಿರಬಹುದು. ಈ ಹಣ್ಣನ್ನೂ ನಾನು ಶಿವಮೊಗ್ಗ ಬಿಟ್ಟಮೇಲೆ ತಿಂದಿಲ್ಲ.

ಕೊನೆಯದಾಗಿ "ನಾಯಿ-ನೇರಳೆ" . ಈ ಮರ ನಮ್ಮ ಶಿವಮೊಗ್ಗ ಮನೆಯಲ್ಲೇ ಇತ್ತು. ಸಾಮಾನ್ಯವಾಗಿ ಸಿಗುವ ನೇರಳೆ ಹಣ್ಣಿಗಿಂತ ಚಿಕ್ಕದು. ಸ್ವಲ್ಪ ಹುಳಿ ಜಾಸ್ತಿ. ಚಿಕ್ಕವರಿದ್ದಾಗ ಈ ಹಣ್ಣು ತಿಂದು, ಬಾಯಿ-ಹಲ್ಲೆಲ್ಲಾ ನೀಲಿ ಮಾಡಿಕೊಂಡು ಬೈಸಿಕೊಳ್ಳುತ್ತಿದ್ದೆವು. ಬೆಂಗಳೂರಿಗೆ ಬಂದಮೇಲೆ ನೇರಳೆ ಹಣ್ಣು ಸೇರಿಗೆ ೧೦ರೂ....

Ornamental seperator
  • ಶ್ರೀನಿಧಿ ರವರ ಬ್ಲಾಗ್
  • Login or register to post comments
  • 1161 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 2, 2006 - 11:44pm — hpn

ಮರೆಯಲಾಗದ ಹಣ್ಣುಗಳು

hpn's picture

> "I want only strawberry, no apple" ಎಂದು ಇಲ್ಲಿ ಒಂದು ಮಗು ಅಳುತ್ತಿದ್ದಾಗ

ಮೊನ್ನೆ ಮೊನ್ನೆ ನಮ್ಮ ಮನೆಗೂ ಒಂದು ಡಬ್ಬ ತುಂಬ ಸ್ಟ್ರಾಬೆರಿ ತಂದಿದ್ರು. ಸಕತ್ ಹುಳಿ ಇದ್ವು ನೋಡ್ರೀಪ್ಪ. ನಮ್ಮಣ್ಣನ್ ಮಗ ಅದನ್ ತಿನ್ನೋಕೇ ಅಳ್ತಿದ್ದ. ಕೊನೆಗೆ ನಾನೇ ಹುಣಸೆಕಾಯಿ ತಿಂದಂತೆ ತಿಂದೆ!
(ಶಿವಮೊಗ್ಗದಲ್ಲಿ ನಮ್ ಸ್ನೇಹಿತ್ರು ಕೆಲೂರು ಮಧ್ಯಾಹ್ನ ಊಟಕ್ ಹೋದಾಗ ಕೋಟೆ ರಸ್ತೇಯಿಂದ ಹುಣಸೆ ಕಾಯಿ ಕಿತ್ಕೊಂಡ್ ಬರ್ತಿದ್ರು, ಆಗೆಲ್ಲ ಮಧ್ಯಾಹ್ನ ಕನ್ನಡ ಕ್ಲಾಸ್ನಲ್ಲಿ ಹುಳಿ ಹುಣಸೆ ಟೇಸ್ಟ್ ಮಾಡೋದೆ ಕೆಲಸ)

> ರಾಮಫಲದ ಹಣ್ಣಿನ ರುಚಿ ಹೇಗೆ ತಿಳಿಸಲಿ??

ಹೌದ್ರೀಪ್ಪ, ರಾಮ್ಫಲ ಬಾರೀ Differentಉ. ಒಂದ್ ಸಾರಿ ಯಾವುದೋ ಹಣ್ಣುಗಳ ಮೇಳದಲ್ಲಿ ತಿಂದಿದ್ದೆ. ಆಮೇಲೆ ನಮ್ ಮಾಮ ಊರಿಂದ ಹೊತ್ಕೊಂಡ್ ಬಂದಾಗ್ ಒಂದ್ ಸರ್ತಿ ತಿಂದಿದ್ವು ನೋಡ್ರಿ.

> ಪನ್ನೇರಳೆ ಹಣ್ಣು.

ತೇಜಸ್ವಿಯವರ ಮನೆ ಪಕ್ಕದಲ್ಲೊಂದ್ ಮರ ಇತ್ರೀ! ಅದೂ ಪನ್ನೇರಳೇನೆ ಅಂತ ನೆನಪು... ಮರದ ತುಂಬಾ ಹಣ್ಣುಗಳಿದ್ವು. ಮೊದಲ ಸರ್ತಿ ಪನ್ನೇರಳೆ ಮರ ನೋಡಿದ್ದು.

> ಶಿವಮೊಗ್ಗದಲ್ಲಿ ನಾನು ಬಹಳ ಇಷ್ಟಪಟ್ಟ ಇನ್ನೊಂದು ಹಣ್ಣು "ಚಂದ್ರ ಹಲಸು".

ಮಲ್ನಾಡ್ನಲ್ ಎಷ್ಟೊಂದ್ ಮಂದಿ ಬೆಳೀತಿದ್ರು ಇದನ್ನ. ನಾವೂ ಸಾಕಷ್ಟು ಚಂದ್ರ ಹಲಸುಗಳನ್ನ enjoy ಮಾಡಿದೀವಿ, ಶಿವಮೊಗ್ಗದಲ್ಲಿದ್ದಾಗ... ಇದನ್ನ ಓದುತ್ತಿರುವ ಯಾರಿಗಾದರೂ "ತಾಳ್ಯ" ಎಂಬ ಊರಿನ ಬಗ್ಗೆ ಗೊತ್ತುಂಟೋ? ಆ ಊರಿನಿಂದ ಬರೋ ಹಲಸು ಬಾಳ ಚೆನ್ನಾಗಿರತ್ತೆ!

> ಕೊನೆಯದಾಗಿ "ನಾಯಿ-ನೇರಳೆ" . ಈ ಮರ ನಮ್ಮ ಶಿವಮೊಗ್ಗ ಮನೆಯಲ್ಲೇ ಇತ್ತು

ಗಾಂಧಿ ಪಾರ್ಕ್ನಲ್ಲಿ ಒಂದ್ ಮರ ಇತ್ ನೋಡ್ರಿ, ಕಲ್ ಹೊಡ್ದು ಅಲ್ ನೇರಳೆ ಹೊಡೀತಿದ್ವು. ನಿಮ್ಗ್ ಜ್ಞಾಪಕ ಉಂಟಾ?

PS:ಮೇಲೆ ಬಳ್ಸಿರೋ non-standard ಕನ್ನಡಕ್ಕೆ ಕ್ಷಮೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
April 3, 2006 - 7:01am — ಶ್ರೀನಿಧಿ

Re: ಮರೆಯಲಾಗದ ಹಣ್ಣುಗಳು

ಶ್ರೀನಿಧಿ's picture

hpn wrote:
> ಶಿವಮೊಗ್ಗದಲ್ಲಿ ನಮ್ ಸ್ನೇಹಿತ್ರು ಕೆಲೂರು ಮಧ್ಯಾಹ್ನ ಊಟಕ್ ಹೋದಾಗ ಕೋಟೆ ರಸ್ತೇಯಿಂದ ಹುಣಸೆ ಕಾಯಿ ಕಿತ್ಕೊಂಡ್ ಬರ್ತಿದ್ರು, ಆಗೆಲ್ಲ ಮಧ್ಯಾಹ್ನ ಕನ್ನಡ ಕ್ಲಾಸ್ನಲ್ಲಿ ಹುಳಿ ಹುಣಸೆ ಟೇಸ್ಟ್ ಮಾಡೋದೆ ಕೆಲಸ.

ಹೌದ್ರಿ. ಆಗೆಲ್ಲಾ ಹುಣಸೆ ಮರಕ್ಕೆ ಕಲ್ಲು ಹೊಡ್ಯೋದೇ ನಮ್ಮ ಮುಖ್ಯ ಕಾರ್ಯಕ್ರಮ. ಆಗ ಬಿ.ಹೆಚ್ ರಸ್ತೆ ತುಂಬಾ ಹುಣಸೆ ಮರಗಳೆ..

hpn wrote:
>ಗಾಂಧಿ ಪಾರ್ಕ್ನಲ್ಲಿ ಒಂದ್ ಮರ ಇತ್ ನೋಡ್ರಿ, ಕಲ್ ಹೊಡ್ದು ಅಲ್ ನೇರಳೆ ಹೊಡೀತಿದ್ವು. ನಿಮ್ಗ್ ಜ್ಞಾಪಕ ಉಂಟಾ?

ನೆನಪಿದೆ.. ಊಟ ಆದ್ಮೇಲೆ ಅದು ಅರ್ಧ ಗಂಟೆ ಕೆಲಸ. ಸಿಕ್ಕೋದು ೪ ಹಣ್ಣಾದ್ರೂ ಕಲ್ಲು ಹೊಡೆಯೋದೆ ಮಜ. "hard earned" ಆದ್ರೂ "hardly earned". Smiling)

hpn wrote:
>PS:ಮೇಲೆ ಬಳ್ಸಿರೋ non-standard ಕನ್ನಡಕ್ಕೆ ಕ್ಷಮೆ.

Smiling). ಯಾವ standard ?? IEEE ಕನ್ನಡ standard ?? Smiling)

(ಯಾರಾದರೂ ಬೈಯ್ಯುವ ಮೊದಲು.. ತಮಾಷೆಗೆ ಹೇಳಿದ್ದು ಸ್ವಾಮಿ. ಬೆಳಗ್ಗಿನಿಂದ standards ಓದಿ ಓದಿ ಅದೇ ನೆನಪಿಗೆ ಬಂತು ಅಷ್ಟೆ)

ನಾಡಿಗರೇ, ವಿಕಿಪೀಡಿಯ ಕನ್ನಡ ಕೂಟದ podcast ಅಥವಾ recording ಇದೆಯಾ?? ಹೇಗೆ ನಡೆಯಿತು ಕೂಟ??

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • Email this ಪ್ರತಿಕ್ರಿಯೆ
April 3, 2006 - 11:12am — ಶ್ರೀಶಕಾರಂತ

ಧನ್ಯವಾದಗಳು ಶ್ರೀನಿಧಿ..

ಶ್ರೀಶಕಾರಂತ's picture

ಹಳೇ ಅಣ್ಣುಗಳ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಕ್ಕೆ ಧನ್ಯವಾದಗಳು....

ಪನ್ನೇರಲೆ, ರಾಮಫಲ ನನಗೂ ಇಷ್ಟ...

ನಾನು ಒಂದಿಷ್ಟು ಸೇರಿಸುವೆ...

೧. ಮುಳ್ಳು ಹಣ್ಣು (ಮಲೆನಾಡಿನವರಿಗೆ ಗೊತ್ತಿರುತ್ತೆ)
ಕಬಳೇ ಕಾಯಿಯ ತರ ಇರತ್ತೆ...ತರಿ ತರಿ(ಹಿಟ್ಟು ಹಿಟ್ಟು)..
ಸಮಾಧಾನಕರ ಸಿಹಿ...ಚೆನ್ನಾಗಿರತ್ತೆ...ಅಜ್ಜನಮನೆಯಲ್ಲಿ(ಹರಿಹರ ಪುರದ ಹತ್ತಿರ ಭಂಡಿಗಢಿ) ತಿಂದದ್ದು...
೨.ಕಾಕಿ ಹಣ್ಣು...
ಎಲ್ಲರಿಗೂ ಗೊತ್ತಿದೆ ಅಂತ ನನ್ನ ಭಾವನೆ...ಅಮ್ಮ ಸೊಪ್ಪಿನಿಂದ ತಂಬಳಿ ಮಾಡುತ್ತಿದ್ದಳು...ಅವಳು ಸೊಪ್ಪು ಕೀಳುವಾಗ ನಾವು ಸಣ್ಣ ಪೊಪ್ಪಾಯಿ ಬೀಜದಂತ ಹಣ್ಣನ್ನ ಕಿತ್ತು ತಿನ್ನು ತ್ತಿದ್ದೆವು..

೩ ಹೆಂಡದ ಹಣ್ಣು(ಇದು ನಾವು ಕರೆಯುತ್ತಿದ್ದ ಹೆಸರು)
ಮಂಗಳೂರಿನ ಸೀಮೆಯಲ್ಲಿ ಜಾಸ್ತಿ...ಬದನೆ ಕಾಯಿ ತರ ಇರುತ್ತದೆ..ಕಪ್ಪು ಬಣ್ಣ..ರೌಂಡಾಗಿರತ್ತೆ...ತಳ್ಳೋಗಾಡಿಯಲ್ಲಿ ತಂದು ಮಾರುತ್ತಿದ್ದರು ...ಶಿವಮೊಗ್ಗದಲ್ಲಿ...

೪.ಬೇಲದ ಹಣ್ಣು..
mari emaculate..ಎದುರಿಗೆ ಮಾರುತ್ತಿದ್ದರು..ನನಗೆ ಇಷ್ಟ ಇಲ್ಲ...ಆದರೂ ತಂಪಂತೆ(ಅಮ್ಮನ ಉವಾಚ)...ಪಾನಕ ಮಾಡಿ ಕುಡಿದರೆ...ಚೆನ್ನಾಗಿರತ್ತೆ...

೫.ಬೋರೆ ಹಣ್ಣು...
ಬಯಲು ಸೀಮೆಯ ಹಣ್ಣು...ನನಗೆ ಇಷ್ಟವಿಲ್ಲ..ಆದರೂ ಸುಮಾರು ಮಂದಿ ತಿನ್ನುತ್ತಿದ್ದರು ಶಿವಮೊಗ್ಗದಲ್ಲಿ...ಅಮಟೆಕಾಯಿಯ ಆಕರ...ಕೆಂಪು ಹಳದಿ...ಹಸಿರು ಮಿಶ್ರ ಬಣ್ಣ...ಸ್ವಲ್ಪ ಸಿಹಿ ಸ್ವಲ್ಪ ಒಗರು...

೬.ಚಂದ್ರ ಹಲಸು
ಆಗಲೇ ಹೆಳಿದಂತೆ ಬಹಳ ಚೆನ್ನಾಗಿರುತ್ತದೆ...
ಇದೂ ಹಲಸೇ ಆದರೆ...ಕೇಸರಿಬಣ್ಣದ್ದ್ಯು...ನೋಡಲೂ ಚೆನ್ನ ತಿನ್ನಲಂತೂ...(ಕೆಶವಮೂರ್ತಿ ಮಾಮನ ಮನೆಯಲ್ಲಿ ತಿಂದದ್ದು ಅಲ್ಲವೇ ಶ್ರೀನಿಧಿ)...ಬಲು ಚೆನ್ನ...
೭.ಚಂದ್ರ ಸೀಬೆ
ಎಲ್ಲರಿಗೂ ತಿಳಿದಿದೆ ಅಂತ ನನ್ನ ಭಾವನೆ...ಕೆಂಪು ಸೀಬೆ...ಬಣ್ಣದಿಂದಲೇ ಆಕರ್ಶಿಸುತ್ತೆ...ರುಚಿಯೂ ಚಂದ..

ಹೆಚ್ಚು ಶಿವಮೊಗ್ಗೆಯ ಕಥೆ ಹೇಳಿದ್ದಕ್ಕೆ ಬೇಜಾರಾಗಿದ್ದರೆ ಕ್ಶಮೆಯಿರಲಿ...

ಇನ್ನೂ ಗೊತ್ತಾದಂತೆ ಇನ್ನೂ ಹೆಚ್ಚು ಹಣ್ಣಿನ ವಿವರ ಕೊಡುವೆ...ನಿಮಗೆ ಗೊತ್ತಿದ್ದನ್ನೂ ತಿಳಿಸಿ...

  • Login or register to post comments
  • link
  • Email this ಪ್ರತಿಕ್ರಿಯೆ
April 3, 2006 - 12:07pm — Srimatha

ಪನ್ನೇರಳೆ!

Srimatha's picture

ಒಳ್ಳೇ nostalgia...ನೆನ್ನೆ ತಾನೇ ಅಮ್ಮ ನಿಮ್ಮ ಇ-ಕನ್ನಡ ಬಳಗದಲ್ಲಿ ಪನ್ನೇರಳೆ ಹಣ್ಣು ಯಾರಿಗಾದ್ರೂ ಗೊತ್ತಾ ಕೇಳು ಅಂತಿದ್ರು! ಆದ್ರೆ ಬೆಂಗ್ಳೂರಲ್ಲೇ ಹುಟ್ಟಿ ಬೆಳೆದ ನಮ್ಮಂಥಾ ಬಡಪಾಯಿಗಳ tasteನ ಸಾರಾ ಸಗಟಾಗಿ dismiss ಮಾಡಬೇಡಿಪಾ, ಇಲ್ಲೂ ಮಲ್ಲೇಶ್ವರದಲ್ಲಿ (ಬಹುಶಃ ಬಸವನಗುಡಿ ಕಡೆನೂ) ಸೀಸನ್ ಇದ್ದಾಗ ಪನ್ನೇರಳೆ ಸಿಗುತ್ತೆ. ನಮ್ಮಮ್ಮ ಅದನ್ನ ಅವರ ಬಾಲ್ಯದ ಸಿಹಿನೆನಪಿನ ಬುತ್ತಿ ಅನ್ನೋ ಥರ ನಮಗೆ ತಂದು ಕೊಟ್ಟು ರುಚಿ ಹಿಡ್ಸಿದಾರೆ:) ಬೇಲದ ಹಣ್ಣೂ ರಾಮನವಮಿ ಸಮಯದಲ್ಲಿ ಇಲ್ಲಿ ಸಿಗುತ್ತೆ. ನಮ್ಮನೇಲಿ ಬೇಲದ ಹಣ್ಣಿನ ಪಾನಕಕ್ಕೆ ಎಲ್ರೂ fans! ಚಂದ್ರಹಲಸು ಎಲ್ಲಾ ಅಮ್ಮ/ಅಜ್ಜಿ ಬಾಯಲ್ಲಿ ಕಥೆಯಾಗಿ ಕೇಳಿದ್ದಷ್ಟೆ ಅನ್ನಿ...

  • Login or register to post comments
  • link
  • Email this ಪ್ರತಿಕ್ರಿಯೆ
April 3, 2006 - 4:39pm — ಮಹೇಶ ಭೋಗಾದಿ

ಹಣ್ಣುಗಳು

ಮಹೇಶ ಭೋಗಾದಿ's picture

1) ಪನ್ನೀರಣ್ಣು

2) ಅಂಜೂರ

3)ಅತ್ತಿ ಹಣ್ಣು,

4)ಮಾವು(ರಸಪುರಿ, ಮಲಗೋಬ, ಬಾದಾಮಿ, ಗಿಳಿಮೂತಿ)

5)ಬಾಳೆ(ನಂಜನಗೂಡು ರಸಬಾಳೆ, ಎಲಕ್ಕಿ, ಪಚ್ಚಬಾಳೆ, ಶಲ್ಯ) 

6)ಕರಬೂಜ

7)ಜಮ್ನೇರಳೆ

10)ಕಾಡು ಬಾದಾಮಿ

11)ಗೇರು

12)ಚಕ್ಕೋತ

13)ಬಿಳಿದಾಳಿಂಬೆ

14) ಬೆಟ್ಟದ ನಲ್ಲಿ, ನಾಯಿನಲ್ಲಿ(ಇವು ಕಾಯಿಗಳು)

15) ಉತ್ತತ್ತಿ

16)ಹೆಪ್ಪು ನೇರಳೆ (ರೇಷ್ಮೆ ಹುಳಕ್ಕಾಗಿ ಬೆಳೆಯುವ ಗಿಡದಲ್ಲಿ, ಚಿಕ್ಕ, ಚಿಕ್ಕ ಹಣ್ಣುಗಳಿರುತ್ತವೆ)

17)ಸೀತಾ, ರಾಮ, ಲಕ್ಷ್ಮಣ ಫಲ

18)ಮರಸೇಬು

ಇಷ್ಟೆ ಸದ್ಯಕ್ಕೆ ನೆನಪಿನಲ್ಲಿರುವುವು.

  • Login or register to post comments
  • link
  • Email this ಪ್ರತಿಕ್ರಿಯೆ
April 3, 2006 - 8:00pm — srivathsajoshi

Re: ಹಣ್ಣುಗಳು

srivathsajoshi's picture

ಮಹೇಶ ಭೋಗಾದಿ wrote:
ಬೆಟ್ಟದ ನಲ್ಲಿ, ನಾಯಿನಲ್ಲಿ

ನಲ್ಲಿ? ಅಥವಾ 'ನೆಲ್ಲಿ'? ನನಗೆ ಗೊತ್ತಿರುವಂತೆ 'ನೆಲ್ಲಿ'.

ಬೆಟ್ಟದ ನಲ್ಲಿ = mountain tap. ಇನ್ನೊಂದನ್ನು ಭಾಷಾಂತರಿಸಲು ಹೋಗಬೇಡಿ Smiling

ಅಂದಹಾಗೆ 'ಟೊಮೆಟೊ' ಒಂದು ಹಣ್ಣು (ತರಕಾರಿ ಅಲ್ಲ) ಎಂಬ ವಿಷಯ ಗೊತ್ತೇ?

http://www.askoxford.com/asktheexperts/faq/aboutother/tomato?view=uk

ಇತಿ

- ಶ್ರೀವತ್ಸ ಜೋಶಿ

  • Login or register to post comments
  • link
  • Email this ಪ್ರತಿಕ್ರಿಯೆ
April 4, 2006 - 12:27am — ಶ್ರೀನಿಧಿ

Re: ಹಣ್ಣುಗಳು

ಶ್ರೀನಿಧಿ's picture

srivathsajoshi wrote:
ಇನ್ನೊಂದನ್ನು ಭಾಷಾಂತರಿಸಲು ಹೋಗಬೇಡಿ :-)

Smiling).. ನೇರ ಭಾಷಾಂತರದ ಅಪಾಯಗಳಿಗೆ ಒಳ್ಳೆ ಉದಾಹರಣೆ. Smiling)

srivathsajoshi wrote:
ಅಂದಹಾಗೆ 'ಟೊಮೆಟೊ' ಒಂದು ಹಣ್ಣು (ತರಕಾರಿ ಅಲ್ಲ) ಎಂಬ ವಿಷಯ ಗೊತ್ತೇ?

http://www.askoxford.com/asktheexperts/faq/aboutother/tomato?view=uk

ನಮ್ಮ ತರಕಾರಿಯವನು ಸರಿ ಹಾಗಾದ್ರೆ. ಯಾವಾಗ್ಲೂ ತರಕಾರಿ-ಟೊಮೇಟೊ ಹಣ್ಣೋ ಅಂತ ಬೇರೆ ಬೇರೆ ಮಾಡಿ ಕೂಗ್ತಾನೆ. Smiling

ಅಂದಹಾಗೆ ಅದು ಟೊಮೇಟೊನೊ ಅಥವಾ ಟೊಮ್ಯಾಟೊನೋ?? Smiling
ನಮ್ಮ ಗೆಳೆಯರಲ್ಲಿ ಯಾರೋ ಅದಕ್ಕೆ ತಮಟೆ ಹಣ್ಣು ಅಂತ ಕರೀತಿದ್ರು. ತಮಿಳಿನಲ್ಲಿ ತಕ್ಕಾಳಿ ಅಂತಲೂ ಇದೆ.

  • Login or register to post comments
  • link
  • Email this ಪ್ರತಿಕ್ರಿಯೆ
April 4, 2006 - 2:24am — hpn

ಟೊಮೇಟೊ

hpn's picture

> ಅಂದಹಾಗೆ ಅದು ಟೊಮೇಟೊನೊ ಅಥವಾ ಟೊಮ್ಯಾಟೊನೋ??

http://en.wikipedia.org/wiki/Tomato#Pronunciation ನೋಡಿ Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
April 4, 2006 - 3:41am — bhatpp

ಟೊಮೇಟೊ ಟೊಮಾಟೊ!

bhatpp's picture

ನಿಮ್ಮ ಕಾಮೆಂಟ್ ಓದಿದ ತಕ್ಷಣ ನನಗೆ ಗರ್ಶ್ವಿನ್ ನ ಕವನ (you like po-tay-to, I like po-tah-to; you say to-may-to, I say to-mah-to) ನೆನಪಾಯಿತು! ಅಂದ್ಹಾಗೆ ವೀಕೀಯ ಲಿಂಕ್ ನೋಡಿದೆ, ಅದರಲ್ಲಿ ಗರ್ಶ್ವಿನ್ ನ ಕವನವನ್ನು ಉಲ್ಲೇಖಿಸಿರುವುದನ್ನು ನೋಡಿ ಸಂತಸವಾಯಿತು!

  • Login or register to post comments
  • link
  • Email this ಪ್ರತಿಕ್ರಿಯೆ
April 4, 2006 - 9:25am — ಶ್ರೀಶಕಾರಂತ

ಕಂಚಿ ಬೇರೆ ಚಕ್ಕೋತ ಬೇರೆ

ಶ್ರೀಶಕಾರಂತ's picture

ಕಂಚಿ ಎಂದರೆ ಕಿತ್ತಲೆ ಮೋಸಂಬಿಯ ಗಾತ್ರದ್ದೆ...ಹುಳಿಯಲ್ಲ ಬಹಳ ಕಹಿ ಇರತ್ತೆ...ಅದರ ಉಪ್ಪಿನಕಾಯಿ..ಸಾರು ಮಾಡುತ್ತಾರೆ...ಮದುಮೇಹಿಗಳಿಗೆ ಒಳ್ಳೆಯ ಹಣ್ಣು...

ಚಕ್ಕೋತ ಸಣ್ಣ ಕರಬುಜದ ಗಾತ್ರದ್ದು...ತೊಳೆಯ ಎಸಳುಗಳು ಸ್ವಲ್ಪ ದಪ್ಪ...ಕೆಂಪಗೂ ಕೆಲವು ಇರುತ್ತದೆ...
ಸಿಹಿ ತುಂಬ ಇರುವುದಿಲ್ಲ....

  • Login or register to post comments
  • link
  • Email this ಪ್ರತಿಕ್ರಿಯೆ
April 4, 2006 - 9:40am — ಮಹೇಶ ಭೋಗಾದಿ

ಕಂಚಿ

ಮಹೇಶ ಭೋಗಾದಿ's picture

ಇದನ್ನೆ ನಾವು ಹೆರಳೆ ಕಾಯಿ ಅನ್ನುವುವೇನೊ?

ಹೆರಳೆ ಕಾಯಿ ಉಪ್ಪಿನ ಕಾಯಿ.

  • Login or register to post comments
  • link
  • Email this ಪ್ರತಿಕ್ರಿಯೆ
April 4, 2006 - 6:59pm — srivathsajoshi

ಸವಿಯಿರಿ ಬಗೆಬಗೆ ಹಣ್ಣುಗಳ...

srivathsajoshi's picture

ಹಣ್ಣುಗಳ ಕುರಿತು ಚರ್ಚೆ ನಡೆಯುತ್ತಿರುವಾಗ 'ಹಣ್ಣು ಮಾರುವವನ ಹಾಡು' ಪ್ರಸ್ತುತವೆನಿಸಬಹುದು. ನಮಗೆ ಪ್ರಾಥಮಿಕಶಾಲೆಯಲ್ಲಿ ಎರಡನೆ ತರಗತಿಯಲ್ಲಿ ಈ ಪದ್ಯ ಇತ್ತು. ಕಂಠಪಾಠ ಮಾಡಿದ್ದನ್ನು ಇಲ್ಲಿ ಟೈಪಿಸಿದ್ದೇನೆ.

- ಶ್ರೀವತ್ಸ ಜೋಶಿ
* * * * * * *

ಹಣ್ಣು ಮಾರುವವನ ಹಾಡು
---------------

ನಂಜನಗೂಡಿನ ರಸಬಾಳೆ
ತಂದಿಹೆ ಕೊಡಗಿನ ಕಿತ್ತೀಳೆ
ಬೀದರ ಜಿಲ್ಲೆಯ ಸೀಬೆಯ ಹಣ್ಣು
ಬೆಂಗಳೂರಿನ ಸೇಬಿನ ಹಣ್ಣು

ಕೊಳ್ಳಿರಿ ಹಿಗ್ಗನು ಹರಿಸುವವು
ಕಲ್ಲುಸಕ್ಕರೆಯ ಮರೆಸುವವು

ಕೊಳ್ಳಿರಿ ಮಧುಗಿರಿ ದಾಳಿಂಬೆ
ಬೆಳವಲ ಬಯಲಿನ ಸಿಹಿಲಿಂಬೆ
ಬೆಳಗಾವಿಯ ಸವಿ ಸಪೋಟ
ದೇವನಹಳ್ಳಿಯ ಚಕ್ಕೋತ

ನಾಲಿಗೆ ಬರವನು ಕಳೆಯುವವು
ದೇಹದ ಬಲವನು ಬೆಳೆಸುವವು

ಗಂಜಾಮ್ ಅಂಜೀರ್
ತುಮಕೂರ್ ಹಲಸು
ಧಾರವಾಡದ ಆಪೂಸು
ಮಲೆನಾಡಿನ ಅನಾನಸು

ಸವಿಯಿರಿ ಬಗೆಬಗೆ ಹಣ್ಣುಗಳ
ಕನ್ನಡ ನಾಡಿನ ಹಣ್ಣುಗಳ ||

* * * * * * * * *

  • Login or register to post comments
  • link
  • Email this ಪ್ರತಿಕ್ರಿಯೆ
April 5, 2006 - 8:58am — ಮಹೇಶ ಭೋಗಾದಿ

ಗಂಜಾಂ ಅಂಜೂರ

ಮಹೇಶ ಭೋಗಾದಿ's picture

ಮೊನ್ನೆ, ವಿಜಯ ಕರ್ನಾಟಕದಲ್ಲನ್ನಿಸುತ್ತದೆ, ಗಂಜಾಂ ಅಂಜೂರದ ಬಗ್ಗೆ ಒಂದು ಲೇಖನಪ್ರಕಟವಾಗಿತ್ತು.

"ಆಪೂಸು" ಇದು ಯಾವ ಹಣ್ಣು? ಎಂದು ಕೇಳೆ ಇಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
April 7, 2006 - 3:48pm — shreekant.mishrikoti

ಉ: "ಆಪೂಸು" ಇದು ಯಾವ ಹಣ್ಣು?

shreekant.mishrikoti's picture

ಆಲ್ಫೊನ್ಸೊ ಮಾವಿನ ತಳಿಗೆ ಮಹಾರಾಷ್ಟ್ರದಲ್ಲಿ ಮತ್ತು ಉತ್ತರ ಕರ್ನಾಟಕದಲ್ಲಿ ಆಪೂಸು ಎನ್ನುತ್ತಾರೆ.

  • Login or register to post comments
  • link
  • Email this ಪ್ರತಿಕ್ರಿಯೆ
April 4, 2006 - 8:38am — ಮಹೇಶ ಭೋಗಾದಿ

ನೆಲ್ಲಿ

ಮಹೇಶ ಭೋಗಾದಿ's picture

ಧನ್ಯವಾದ ಜೋಶಿಗಳೆ,

ಅದು ನೆಲ್ಲಿಯೆ, ನಲ್ಲಿಯೆಂದು ನಾನು ತಪ್ಪನ್ನೆ ಬರೆದೆನು. 

ನಾವು ನಲ್ಲಿಕಾಯಿ ಅಂಥ ಹೇಳುವ ತಪ್ಪು ಅಭ್ಯಾಸವಿಟ್ಟುಕೊಂಡಿದ್ದೇವೆ. 

 

 

  • Login or register to post comments
  • link
  • Email this ಪ್ರತಿಕ್ರಿಯೆ
April 3, 2006 - 3:49pm — ಪ್ರಶಾಂತ.ಪಂಡಿತ

ನನ್ನ ಲಿಸ್ಟು

ಪ್ರಶಾಂತ.ಪಂಡಿತ's picture

1. ಜಾಂಬಳಿ (ಜಂಬಳೆ) ಹಣ್ಣು - ಬಿಳಿ/ನಸು ಗುಲಾಬಿ ಮಿಶ್ರಿತ ಬಣ್ಣ. ಸ್ವಲ್ಪ ಒಗರು, ಸ್ವಲ್ಪ ಸಿಹಿ.

2. ಕಂಚಿ - ದೊಡ್ಡ ಮೋಸಂಬಿ ಎನ್ನಬಹುದು. ನಸು ಗುಲಾಬಿ ಬಣ್ಣದ ದೊಡ್ಡ ತೊಳೆಗಳು, ಹುಳಿ/ಸಿಹಿ ರುಚಿ, very unique.

3. ಮುರುಗಲ ಹಣ್ಣು (ಕೊಂಕಣಿಯಲ್ಲಿ ಕೋಕಂ) - ಕೆಂಪು ಅಥವಾ ಬಿಳಿ ಬಣ್ಣದ ದಪ್ಪ ಸಿಪ್ಪೆ (ಇದರಿಂದಲೇ squash ಮಾಡುವುದು), ಭಯಂಕರ ಹುಳಿ ಸ್ವಲ್ಪ ಸಿಹಿ ರುಚಿ.

ಸಧ್ಯಕ್ಕೆ ಇಷ್ಟೇ ನೆನಪಾಗ್ತಿದೆ

  • Login or register to post comments
  • link
  • Email this ಪ್ರತಿಕ್ರಿಯೆ
April 3, 2006 - 4:16pm — hpn

Re: ನನ್ನ ಲಿಸ್ಟು

hpn's picture

ಪ್ರಶಾಂತ.ಪಂಡಿತ wrote:
2. ಕಂಚಿ - ದೊಡ್ಡ ಮೋಸಂಬಿ ಎನ್ನಬಹುದು. ನಸು ಗುಲಾಬಿ ಬಣ್ಣದ ದೊಡ್ಡ ತೊಳೆಗಳು, ಹುಳಿ/ಸಿಹಿ ರುಚಿ, very unique.

ಚಕ್ಕೋತ?

  • Login or register to post comments
  • link
  • Email this ಪ್ರತಿಕ್ರಿಯೆ
April 3, 2006 - 4:22pm — hpn

Re: ಮರೆಯಲಾಗದ ಹಣ್ಣುಗಳು

hpn's picture

ಶ್ರೀನಿಧಿ wrote:
ನಾಡಿಗರೇ, ವಿಕಿಪೀಡಿಯ ಕನ್ನಡ ಕೂಟದ podcast ಅಥವಾ recording ಇದೆಯಾ?? ಹೇಗೆ ನಡೆಯಿತು ಕೂಟ??

ನಾವು ಅಂದುಕೊಂಡದ್ದಕ್ಕಿಂತ ಹೆಚ್ಚು ಜನ ಭಾಗವಹಿಸಿದರು, ಒಟ್ಟಾರೆ ಚೆನ್ನಾಗಿತ್ತು. ರೆಕಾರ್ಡಿಂಗ್ ಸದ್ಯದಲ್ಲೇ ಹಾಕ್ತೀವಿ.

ಇದರ ಬಗ್ಗೆ "Kannada Wikipedia Event - a retrospect" ಅಂತ ಒಂದು ಲೇಖನ ನನ್ನ ಬ್ಲಾಗ್ ನಲ್ಲಿ ಇವತ್ತು ರಾತ್ರಿ ಹಾಕ್ತೀನಿ, ನೋಡಿ Smiling

  • Login or register to post comments
  • link
  • Email this ಪ್ರತಿಕ್ರಿಯೆ
April 3, 2006 - 8:17pm — srivathsajoshi

ಮರೆತ ಮತ್ತು ಮರೆಯಲಾಗದ

srivathsajoshi's picture

'ಮರೆತ ಹಣ್ಣುಗಳು' - ಇದು ಲೇಖನದ ಶೀರ್ಷಿಕೆ. ಅದರಲ್ಲಿ ಹಣ್ಣುಗಳ ಪಟ್ಟಿ.

'ಮರೆಯಲಾಗದ ಹಣ್ಣುಗಳು' - ಇದು ಆ ಲೇಖನಕ್ಕೆ ಪ್ರತಿಕ್ರಿಯೆಯೊಂದರೆ ತಲೆಬರಹ. ಅದರಲ್ಲೊಂದಿಷ್ಟು ಹಣ್ಣುಗಳ ಪಟ್ಟಿ.

ಈಗ ಹೇಳಿ. 'ಮರೆತ ಹಣ್ಣುಗಳು' ಮತ್ತು 'ಮರೆಯಲಾಗದ ಹಣ್ಣುಗಳು' - mutually exclusive ಅಲ್ಲವೇ?

Smiling

- ಶ್ರೀವತ್ಸ ಜೋಶಿ

  • Login or register to post comments
  • link
  • Email this ಪ್ರತಿಕ್ರಿಯೆ
April 3, 2006 - 8:53pm — hpn

ಉ: ಮರೆತ ಮತ್ತು ಮರೆಯಲಾಗದ

hpn's picture

> mutually exclusive ಅಲ್ಲವೇ?

ಹೌದು Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
April 4, 2006 - 12:16am — ಶ್ರೀನಿಧಿ

Re: ಮರೆತ ಮತ್ತು ಮರೆಯಲಾಗದ

ಶ್ರೀನಿಧಿ's picture

srivathsajoshi wrote:

ಈಗ ಹೇಳಿ. 'ಮರೆತ ಹಣ್ಣುಗಳು' ಮತ್ತು 'ಮರೆಯಲಾಗದ ಹಣ್ಣುಗಳು' - mutually exclusive ಅಲ್ಲವೇ?

ಮರೆತ ಹಣ್ಣುಗಳು ನೆನಪಿಗೆ ಬಂದಾಗ ಮರೆಯಲಾರದ ಹಣ್ಣುಗಳಾಗುತ್ತವೆ ಅಲ್ಲವೇ?? Smiling

ನಿಜ ಹೇಳಬೇಕೆಂದರೆ ನಾನು ಶೀರ್ಷಿಕೆ ಕೊಡುವಾಗ ತಪ್ಪು ಮಾಡಿದ್ದೇನೆ. ಆದರೂ ಪರ್ವಾಗಿಲ್ಲ. ಹ ಬದಲು ಹೆ ಮಾಡಿದ್ದರೆ ಬಹಳ ಕಷ್ಟ ಆಗುತ್ತಿತ್ತು Smiling)

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಣ್ಣುಗಳು
  • ನಾವು ಶಾಲೆಗೆ ಹೋಗುವ
  • ಮಲೆನಾಡಿನ ಬ್ಯಾಸಿಗಿ ದಿನಚರಿ......!
  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
  • ಬದುಕು ಪಯಣ
Syndicate content

ಲೇಖಕರು

ಶ್ರೀನಿಧಿ's picture

ಪೂರ್ಣ ಹೆಸರು
ಶ್ರೀನಿಧಿ ನರಸಿಂಹಾಚಾರ್

ಪರಿಚಯ

ಹುಟ್ಟಿದ್ದು ಬೆಂಗಳೂರಾದರೂ ಬಾಲ್ಯದ 13 ವರ್ಷಗಳನ್ನು ಶಿವಮೊಗ್ಗದಲ್ಲಿ ಕಳೆದೆ. ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಮತ್ತೆ ಬೆಂಗಳೂರು, ನಂತರ ಅಲ್ಲೇ ಕೆಲಸ. ಎಂ. ಎಸ್ ಕ್ಲೆಂಸನ್, ಯು.ಎಸ್.ಏ ಯಲ್ಲಿ ಮುಗಿಸಿ ಸದ್ಯಕ್ಕೆ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೇನೆ.

ಹವ್ಯಾಸ- ಓದು, ಕರ್ನಾಟಕ ಶಾಸ್ತ್ರೀಯ ಸಂಗೀತ, ತತ್ವಶಾಸ್ತ್ರ, ಕ್ರಿಕೆಟ್, ಟಿ.ಟಿ,ಕನ್ನಡ ಚಲನಚಿತ್ರ(ತುಂಬಾ ವೀಕು).
ನೆಚ್ಚಿನ ಲೇಖಕರು/ಕವಿಗಳು - ತಾರಾಸು, ಭೈರಪ್ಪ, ಸತ್ಯಕಾಮ, ಮಾಸ್ತಿ, ಬೇಂದ್ರೆ, ಗೊರೂರು, ರಾಶಿ, ಅ.ರಾ. ಮಿತ್ರ, ನಯಸೇನ, ಇನ್ನೊ ಅನೇಕ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಯಾವನು ಎಲರಣುಗ ?
    May 12, 2008 - 8:30pm
  • kannadakanda
    ಉ: ಸರಿ
    May 12, 2008 - 8:24pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:15pm
  • kannadakanda
    ಉ: ಇವುಗಳ ತಿಳಿವು/ಅರ್ತ ಏನು?
    May 12, 2008 - 8:12pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:12pm
  • raghava
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:10pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:03pm
  • agilenag
    ಉ: ಏಕಾಕ್ಷರೀ
    May 12, 2008 - 8:01pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 7:26pm
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 6:16pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 17 ಅತಿಥಿಗಳು ಆನ್ಲೈನ್ ಇರುವರು.

"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"

— ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator