ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ವೇದ ಸುಳ್ಳಾದ್ರೂ ಗಾದೆ ಸುಳ್ಳಾಗಕಿಲ್ಲವಂತೆ !!!
ನಮ್ಮ ಬಹಳ ಹತ್ತಿರವಾಗಿರುವ ಕಾವ್ಯ ಸಂಪ್ರದಾಯವೆಂದರೆ ಗಾದೆಗಳು. ಇಂದಿಗೂ ಗಾದೆ ಹೇಳ್ತಾ ಮಾತಡೋದು ನಮ್ಮಲ್ಲಿ ಹಲವರಲ್ಲಿರುವ ಹವ್ಯಾಸ. ಈ ಮೇಲಿನ ತಲೆಬರಹವೂ ಕೂಡ ಒಂದು ಗಾದೆಯೇ!!! ಗಾದೆ ಮೇಲೆ ಗಾದೆ.
೧) ಅಂಬಲಿ ಕುಡಿಯವ್ನಗೆ ಮೀಸೆ ಹಿಡಿಯೋನೊಬ್ಬ
೨) ಮುಂಡೆ ಮಕ್ಕಳು ಮೂಗದಾರ ಇಲ್ದೇ ಇರೋ ಹೋರಿಯಂಗೆ
೩) ಎತ್ತು ಈಯಿತು ಅಂದ್ರೆ ಕೋಣ ಕೊಟ್ಟಿಗೆಗೆ ಕಟ್ಟು
೪) ಹಾಡ್ತಾ ಹಾಡ್ತಾ ರಾಗ ನರಳ್ತ ನರಳ್ತಾ ರೋಗ
೫) ಪಾಪಿ ಸಮುದ್ರಕ್ಕೋದರೂ ಮೊಣ್ಕಾಲುದ್ದ ನೀರು
೬) ಕಂಚಿನ ಗೋಪುರ ಕಾಗೆ ಎತ್ಕೊಂಡಗಕಾದ್ದ(ಎತ್ಕೊಂಡಗಾಕಿಲ್ಲ)
೭) ಈಚಲು ಮರದ ಕೆಳ್ಗೆ ಕೂತು ನೀರು ಕುಡುದ್ರು ಮಂದಿ ಕಣ್ಣಿಗೆ ಅದು ಹೆಂಡಾನೆ

- ವೈಭವ ರವರ ಬ್ಲಾಗ್
- Login or register to post comments
- 583 hits
- Email this blog





RSS:
ಪ್ರತಿಕ್ರಿಯೆಗಳು
"ಕಂಚಿನ ಗೋಪುರ ಕಾಗೆ ಎತ್ಕೊಂಡಗಕಾದ್ದ"
"ಕಂಚಿನ ಗೋಪುರ ಕಾಗೆ ಎತ್ಕೊಂಡಗಕಾದ್ದ"
ಯಾವೋರಲ್ಲಪ್ಪ ಕಂಚಿನ ಗೋಪ್ರ ಇರೋದು?
ಇದನ್ನು.. "ಕಂಚಿನ್ ಗಂಟೇನ ಕಾಗೆ ಕಿತ್ಕೊಂಡ ಓಗಕ್ಕಿಲ್ಲ"
======

Re: "ಕಂಚಿನ ಗೋಪುರ ಕಾಗೆ ಎತ್ಕೊಂಡಗಕಾದ್ದ"
ಇಲ್ಲ...ಕಂಚಿನ ಗೋಪ್ರಾನೆ
ಯಾಕೆಂದ್ರೆ ದಕ್ಷಿಣ ಭಾರತದ ದೇವಸ್ಥಾನಗಳ ತುತ್ತ ತುದಿಯಲ್ಲಿ ಕಂಚಿನ ಗೋಪ್ರಾ( ಕಳಸ) ಇರುತ್ತೆ. ಅದರ ಮೇಲೆ ಕಾಗೆ ಕೂತ್ಕತುದೆ. ಆದ್ರೆ ಅದ್ನ
ಎತ್ಕಂಡೋಗಕ್ಕೆ ಆಗಲ್ಲ... so ಅದ್ರ ಬಗ್ಗೆ ಸುಮ್ನೆ ಚಿಂತೆ ಬೇಡ....
ಇದರ ಅರ್ಥ 'ಬೇಡ್ದೆ ಇರೋದಕ್ಕೆಲ್ಲ ಚಿಂತ ಮಾಡ್ಬಾರದು ಅಂತ'
:)
Re: "ಕಂಚಿನ ಗೋಪುರ ಕಾಗೆ ಎತ್ಕೊಂಡಗಕಾದ್ದ"
ಓಹೋ ಹಂಗಾ...
ವೈಬವವಪ್ನೋರ್ಗೆ ನನ್ನಿ.....
"ಬೇಡವಾದ್ದೇ ಇರೋದನ್ನ ಚಿಂತೇ ಮಾಡೇ ಜಗತ್ತಲ್ಲಿ ಬೇಕಾದಷ್ಟು ಏನೇನೋ ನಡೆತಾ ಇರೋದು"
ಆ ಮಾತು ಒಪ್ಲೇಬೇಕು!!!

======