ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಪುಣ್ಯಕೋಟಿ ಎಂಬ ಹುಲಿಯು.....

November 1, 2007 - 10:10pm — ಗಣೇಶ

ಪುಣ್ಯಕೋಟಿ ಕತೆ ಬರೆದ ಪುಣ್ಯಾತ್ಮನಿಗೆ ಕೋಟಿ ಪ್ರಣಾಮಗಳು.ಮಕ್ಕಳಿಗೆ ಕತೆ ಹೇಳಿ ಮಲಗಿಸುವ ಅಭ್ಯಾಸವಿರುವ ಎಲ್ಲಾ ತಂದೆ/ತಾಯಂದಿರ ಇಷ್ಟವಾದ ಕತೆಯಿದು. ಪತ್ರಿಕೆಗಳಲ್ಲಿ,ಮಕ್ಕಳ ಪುಟಗಳಲ್ಲಿರುವ ಕತೆಗಳನ್ನು ಮಕ್ಕಳು ಓದುತ್ತಾರೋ ಇಲ್ಲವೋ,ಈ ತಂದೆ/ತಾಯಿ ಖಂಡಿತ ಓದುವರು.ರಾತ್ರಿ ಅದೇ ಕತೆಗೆ ಉಪ್ಪು,ಖಾರ ಸೇರಿಸಿ ಮಕ್ಕಳಿಗೆ ಹೇಳುವರು.ಪಂಚತಂತ್ರ ಕತೆಗಳು,ರಾಜರ ಕತೆಗಳು,ರಾಮಾಯಣ,ಮಹಾಭಾರತದ ಪ್ರಸಂಗಗಳನ್ನು ಮಕ್ಕಳು ಬಹಳ ಆಸಕ್ತಿಯಿಂದ ಕೇಳುವರು.
ಕ್ರೈಂಡೈರೀನೋ,ಸ್ಟೋರೀನೋ,ಸುಡುಗಾಡುಗಳನ್ನು ತಂದೆಯೊಂದಿಗೆ ನೋಡಿ ಮಲಗುವ ಮಕ್ಕಳೂ ಇದ್ದಾರೆ.
ಪುಣ್ಯಕೋಟಿ ಕತೆಯನ್ನು ನಾನು ನನ್ನ ಮಗಳಿಗೆ ನೂರಾರು ಬಾರಿ ಹೇಳಿರಬಹುದು.ಪ್ರತೀ ಬಾರಿಯೂ ಅಷ್ಟೇ ಆಸಕ್ತಿಯಿಂದ ಕೇಳುತ್ತಿದ್ದಳು.ಪ್ರಥಮ ಬಾರಿಗೆ ಕತೆ ಹೇಳಿದಾಗ ಎಲ್ಲಾ ಹೇಳಿ "ಹುಲಿ ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟಿತು"ಎಂದು ಹೇಳಿ ಮಲಗಿಸಿದ್ದೆ.
ಆದರೆ ನಂತರದ ದಿನ ಅವಳಿಗೆ ಸಮಾಧಾನವಿರಲಿಲ್ಲ."ಯಾಕೆ ಹುಲಿ ಬೆಟ್ಟದಿಂದ ಹಾರಿತು? ಪುಣ್ಯಕೋಟಿ ಆಗ ಏನು ಮಾಡಿತು?.."ಇತ್ಯಾದಿ ಪ್ರಶ್ನೆ ಕೇಳುತ್ತಿದ್ದಳು. ಅವಳಿಗೆ ಪುಣ್ಯಕೋಟಿ,ಕರುವಿನ ಮೇಲೆ ಇದ್ದಷ್ಟೇ ಪ್ರೀತಿ'ಹುಲಿ' ಮೇಲೂ ಬರಲು ಸುರುವಾಯಿತು.ಆದ್ದರಿಂದ ಅದು ಸಾಯುವುದು ಅವಳಿಗೆ ಬೇಕಿರಲಿಲ್ಲ.
ಮಗಳಿಗೆ ಬೇಕಾಗಿ ಕತೆಯ ಮುಕ್ತಾಯವನ್ನು ಬದಲಾಯಿಸಿದೆ-
'ಪುಣ್ಯಕೋಟಿಯ ಸತ್ಯವನ್ನು ಮೆಚ್ಚಿ ಹುಲಿ-"ನಿನ್ನನ್ನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು" ಎಂದು ಹೇಳಿ...ಬೆಟ್ಟದಿಂದ ಇಳಿದು ದೂರ ಹೋಯಿತು'ಎಂದೆ...ಉಹೂಂ..ಮಗಳಿಗೆ ಸಮಾಧಾನವಾಗಲಿಲ್ಲ.ಇನ್ನಷ್ಟು ಪ್ರಶ್ನೆಗಳು..
ಮಾರನೆಯ ದಿನ ಪುನಃ ಕತೆಯ ಮುಕ್ತಾಯ ಬದಲಾಯಿಸಿದೆ-
'ನಿನ್ನನ್ನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು ಎಂದು ಹೇಳಿ ..."ಇನ್ನು ಮೇಲೆ ನಾನು ಯಾವ ಪ್ರಾಣಿಯನ್ನೂ ತಿನ್ನುವುದಿಲ್ಲ.ನಾನು ನೀನು ಗೆಳೆಯರಾಗಿರುವ ಎಂದಿತು.ಪುಣ್ಯಕೋಟಿ,ಕರು ಹುಲಿ ದಿನವೂ ಸಂಜೆ ಆಟವಾಡುತ್ತಿದ್ದವು'ಎಂದೆ. ಮಗಳಿಗಾದ ಖುಶಿ ಈಗಲೂ ನಾನು ಮರೆಯಲಾರೆ.
ದೇವೇಗೌಡರೂ ಸಹ ತನ್ನ ಮಕ್ಕಳಿಗಾಗಿ ಪುಣ್ಯಕೋಟಿ(ಕರ್ನಾಟಕ)ಕತೆಯನ್ನು ಹೇಗೇಗೋ ತೆಗೆದುಕೊಂಡು ಹೋಗುತ್ತಿದ್ದಾರೆ.ಹೇಗೆ ಮುಕ್ತಾಯವಾಗುವುದೋ?

~.~
  • ಗಣೇಶ ರವರ ಬ್ಲಾಗ್
  • Login or register to post comments
  • 497 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 2, 2007 - 9:24am — sindhu

ಉ: ಪುಣ್ಯಕೋಟಿ ಎಂಬ ಹುಲಿಯು.....

sindhu's picture

ಗಣೇಶ್,

ಕತೆ ಎಂದಿಗೂ ಮಕ್ಕಳನ್ನು ಮೋಡಿ ಮಾಡಿಯೇ ಮಾಡುತ್ತದೆ.ಮೊದಲ ಬಾರಿ ಇಷ್ಟವಾಗುವ ಹಾಗೆ ಹೇಳಿ ಬರಸೆಳೆಯಬೇಕಷ್ಟೇ! Laughing out loud
ಒಂದು ಹೊಸಬಗೆಯ ಪರ್ ಸ್ಪೆಕ್ಟಿವ್ ಕೊಟ್ಟಿದ್ದೀರಿ ಕತೆಯ ಮುಕ್ತಾಯವನ್ನ ಕರ್ನಾಟಕದ ರಾಜಕಾರಣಕ್ಕೆ ಹೋಲಿಸಿ..
ಆಸಕ್ತಿಕರವಾಗಿದೆ.

ಪುಣ್ಯಕೋಟಿ ಎಂಬುದು ಹುಲಿಯಲ್ಲ ಗೋವು.
ಚಂಡವ್ಯಾಘ್ರ ಅಂತ ಹುಲಿಯ ಹೆಸರು.

ಪ್ರೀತಿಯಿರಲಿ
ಸಿಂಧು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 2, 2007 - 11:43pm — ಗಣೇಶ

ಉ: ಪುಣ್ಯಕೋಟಿ ಎಂಬ ಹುಲಿಯು.....

ಗಣೇಶ's picture

ಸಿಂಧು,
ಚಂಡವ್ಯಾಘ್ರ ಎಂಬ ಭಯಂಕರ ಹುಲಿಯು ಕತೆಯ ಕೊನೆಯಲ್ಲಿ ಪುಣ್ಯಕೋಟಿಯಾಯಿತು.
ಪ್ರೀತಿಯೊಂದಿಗೆ
ಗಣೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2008 - 8:53pm — smurthygr

ಉ: ಪುಣ್ಯಕೋಟಿ ಎಂಬ ಹುಲಿಯು.....

smurthygr's picture

"ಇನ್ನು ಮೇಲೆ ನಾನು ಯಾವ ಪ್ರಾಣಿಯನ್ನೂ ತಿನ್ನುವುದಿಲ್ಲ"
ಹಾಗಾದರೆ ಹುಲಿಯ ಹೊಟ್ಟೆ ಪಾಡು? !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2008 - 11:20pm — ಗಣೇಶ

ಉ: ಪುಣ್ಯಕೋಟಿ ಎಂಬ ಹುಲಿಯು.....

ಗಣೇಶ's picture

smurthygr ಅವರಿಗೆ ಸಮಾಧಾನವಾಗಲಿಲ್ಲ.ಈಗ ಪುನಃ ಕತೆಯ ಮುಕ್ತಾಯ ಬದಲಾಯಿಸುವೆ. "ಇನ್ನು ಮೇಲೆ ನಾನು ನಿನ್ನನ್ನು ತಿನ್ನುವುದಿಲ್ಲ. ನಾನು ನೀನು ಗೆಳೆಯರಾಗಿರುವ" ಎಂದಿತು ಹುಲಿ.
ನನ್ನ ಮಗಳಿಗೆ ಮಾತ್ರವಲ್ಲ, murthyಯವರಿಗೂ ಹುಲಿ ಬಗ್ಗೆ ಪ್ರೀತಿ ಇದೆ.ಪುಣ್ಯಕೋಟಿ ಕತೆಯೇ ಅಂತಹದ್ದು.ಕತೆ ಬರೆದ ಪುಣ್ಯಾತ್ಮನಿಗೆ ವಂದಿಸುವೆನು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 5:49pm — veena

ಉ: ಪುಣ್ಯಕೋಟಿ ಎಂಬ ಹುಲಿಯು.....

veena's picture

veena

ಪುಣ್ಯಕೋಟಿಯ ಕತೆ ನನ್ನ ಮಗನಿಗೆ ಬಹಳ ಇಷ್ಟ. ಪ್ರತಿ ದಿವಸ ನಾನು ಎಷ್ಟು ಕತೆ ಹೇಳಿದರೂ ಕೊನೆಗೆ ಅವನಿಗೆ "ಹುಲಿ ಕತೆ" ಹೇಳು ಎಂದು ಪೀಡಿಸಿ ಕೇಳುತ್ತಾನೆ. ನನಗೇ ಹೇಳೀ, ಹೇಳಿ ಬೇಜಾರಾದ ದಿವಸ ಹುಲಿ ಇನ್ನೂ ಕಾಡಿಗೆ ಬಂದಿಲ್ಲ ಎಂದು ಹೇಳಿ ಜಾರಿ ಕೊಳ್ಳುತ್ತೇನೆ. ಮರುದಿವಸ ರಾತ್ರಿ ಅವನು ಹೇಳುವ ಮೊದಲ ಮಾತು ಅಮ್ಮಾ ಹುಲಿ ಕಾಡಿಂದ ಬಂತಂತೆ ಎಂದು. ಆಗ ನನಗೆ ನಗು ಬರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 10:23pm — Sunil Jayaprakash

ಉ: ಪುಣ್ಯಕೋಟಿ ಎಂಬ ಹುಲಿಯು.....

Sunil Jayaprakash's picture

ವೀಣಾ ಅವರೇ, ಈ ರೀತಿಯ ವೃತ್ತಾಂತಗಳನ್ನು ಕೇಳಕ್ಕೆ ಸಖತ್ತಾಗಿರತ್ತೆ. ಚಿಕ್ಕಮಕ್ಕಳು (ಚಿಕ್ಕವರೇನು, ನಮಗೂ ಕೂಡ) ಅವರಿಗೆ ಯಾವ ರೀತಿ ಕತೆ ಹೋಗಬೇಕು ಅಂತ ಇಷ್ಟವಿರುತ್ತೋ, ಆ ರೀತಿಯೇ ಮುಂದುವರಿಸಿಕೊಂಡು ಹೋಗಿಸಿಸಿಬಿಡುತ್ತಾರೆ.

ನನ್ನ ಕತೆ ಕೇಳಿ. ಈ ದಿನ ಒಂದು ಮದುವೆಗೆ ಹೋಗಿದ್ದೆ. ಸರಿ ತಿಂಡಿಯಾದಾಗಿನಿಂದ ಊಟದ ತನಕ ಏನು ಮಾಡೋದು. ಅಲ್ಲಿ ಈಗಷ್ಟೇ ೨ನೇ ಕ್ಲಾಸಿಗೆ ಸೇರಿರುವ ನನ್ನ ಕಸಿನ್ ಮಗನನ್ನು ನನ್ನ ಮನೆಗೆ ಕರೆದುಕೊಂಡು ಬಂದೆ. ಅವನಿಗೋ ಬಾಯಿ ಬಿಟ್ರೆ, ಬರೀ ಕನ್ನಡ ಹಾಡುಗಳೇ ಬರೋದು. ಅರಮನೆ ಹಾಡುಗಳ ವೀಡಿಯೋ ತೋರಿಸ್ತೀನಿ ಅಂತ ಯೂಟ್ಯೂಬ್ ಹಾಕ್ದೆ. ಅದಾದ ಮೇಲೆ ಸುಮ್ನೆ, "ನಮ್ಮ ಮನೆ ಹತ್ರ ೬ ಅಳಿಲುಗಳು ಯಾವಾಗ್ಲೂ ಆಟ ಆಡ್ತಾ ಇರತ್ತೆ" ಅಂದ್ನಪ್ಪ. ಯಪ್ಪಾ, ಇದನ್ನು ಹೇಳಿದ್ದೇ ತಡ, ತಿಂದ, ತಿಂದ, ಅದೇನ್ ತಲೆ ತಿಂದ ಅಂತೀರಿ. ಅಳಿಲುಗಳು ಏನು ತಿನ್ನತ್ತೆ, ಏನೇನು ಆಟ ಆಡತ್ತೆ. ಎಲ್ಲೆಲ್ಲಿ ಹೋಗತ್ತೆ. ರಿಸ್ಕ್ ಮ್ಯಾನೇಜಮೆಂಟ್ ಹೇಗೆ ಮಾಡತ್ತೆ ಎಲ್ಲ ವಿಚಾರಗಳ ವಿನಿಮಯವೂ ಆಯಿತು. ಒಳ್ಳೆ ಟೈಂಪಾಸ್. ನಾನು ಅವನಿಗೆ ಅಳಿಲುಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಪ್ರತಿಯಾಗಿ, ನನಗೆ ಅವನು ಇಂಗ್ಲೀಷ್ ಹೇಳಿಕೊಡ್ತಾನಂತೆ Smiling ಬರೋ ಭಾನುವಾರದಿಂದ ಟ್ಯೂಶನ್ ಶುರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 11:48pm — ಗಣೇಶ

ಉ: ಪುಣ್ಯಕೋಟಿ ಎಂಬ ಹುಲಿಯು.....

ಗಣೇಶ's picture

ಅಮ್ಮಾ..ಹುಲಿ ಕಾಡಿಂದ ಬಂತಂತೆ.. Smiling Smiling

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 21, 2008 - 8:38am — roopablrao

ಉ: ಪುಣ್ಯಕೋಟಿ ಎಂಬ ಹುಲಿಯು.....

roopablrao's picture

"ಅಮ್ಮಾ ಹುಲಿ ಪಾಪ ಅಲ್ಲವಾ?" ಇದು ನನ್ನ ಮಗಳು ಕೇಳೊ ಪ್ರಶ್ನೆ

ಅವಳಿಗೆ ಕರುವಾಗಲಿ ಹಸುವಾಗಲಿ ಮುಖ್ಯವಲ್ಲ

ಹುಲಿ ಒಳ್ಳೆ ಹುಲಿ ಅದನ್ನು ಮನೇಲಿ ಇಟ್ಕೊಡು ಸಾಕ್ತೀನಿ ಅಂತಾಳೆ
ಅವಳಿಗೆ ಪುಣ್ಯಕೋಟಿ ಹಾಡು ಹೇಳು ಅಂದರೆ

"ಅಂಬಕೋಟಿ ಎಂಬ ಅಂಬ ತನ್ನ ಪಾಪುನ ...................."
ಅಂತ ಶುರು ಮಾಡುತ್ತಾಳೆ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಣ್ಯಕೋಟಿ ದುಷ್ಟ ಆಕಳೇ ? ಹುಲಿಯು ಪಾಪದ ಪ್ರಾಣಿಯೇ ? ಮತ್ತೆ ನಾವೂ, ನೀವೂ ?
  • ಗೋವಿನ ಹಾಡು
  • 'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನ .
  • ವ್ಯಾಘ್ರನ ತ್ಯಾಗ
  • ಧರಣಿ ಮಂಡಲ ಮಧ್ಯದೊಳಗೆ... ಸಾಹಿತ್ಯ ಇದೆಯಾ?
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 40 ಅತಿಥಿಗಳು ಆನ್ಲೈನ್ ಇರುವರು.


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator