ಮಕ್ಕಳನ್ನು ಪ್ರೀತಿಸುವವರು ನಿಜಕ್ಕೂ ಓದಲೇಬೇಕಾದ ವಿಷಯವಿದು.
ನಿನ್ನೆ ನನ್ನ ಹೆಂಡತಿಗೆ ಒಂದು ಈ ಮೇಲು ಬಂದಿತ್ತು. ಅವಳು ಅದನ್ನು ಓದಿ ನನಗೆ ಹೇಳಿದ್ದರೂ ಸಾಕಿತ್ತು. ಆದರೆ ಫಾರ್ವರ್ಡ್ ಮಾಡಿದ್ದಳು. ಓದಿದೆ, ನಂತರ ಅದನ್ನು ನೆನೆಸಿಕೊಂಡರೂ ಸಾಕು ಮನಸ್ಸಿಗೆ ಅತೀವ ಕಸಿವಿಸಿಯಾಗುವುದು.
ಆಸ್ಪತ್ರೆಯೊಂದರಲ್ಲಿ ಚಿಕ್ಕ ಪೋರನೋರ್ವ ಮೃತನಾದನಂತೆ. ಆಸ್ಪತ್ರೆಗೆ ದಾಖಲಾದ ಕಾರಣವೇನೆಂದರೆ ಮುಖದಲ್ಲಿ ನವೆಯಾಗುತ್ತಿತ್ತು. ಆದರೆ ತುರಿಸಿಕೊಂಡರೆ ನವೆಯಾಗುತ್ತಿದ್ದ ಭಾಗಕ್ಕೆ ಸಂವೇದನೆಗಳು ತಲುಪುತ್ತಿರಲಿಲ್ಲ. ಎಕ್ಸ್-ರೇ ಮಾಡಿಸಿದಾಗ ಜೀವಂತವಾಗಿದ್ದ ಇರುವೆಗಳು ಗುಂಪು ಗುಂಪಾಗಿ ಕಾಣಿಸಿವೆ! ಈ ಇರುವೆಗಳು ಅತ್ತಿತ್ತ ತಿರುಗುತ್ತಲೇ ಇದ್ದುದರಿಂದ ಡಾಕ್ಟರರಾದರೂ ಆಪರೇಷನ್ನನ್ನು ಹೇಗೆ ಮಾಡಿಯಾರು? ನರಳುತ್ತಿದ್ದ ತರಳನ ಜೀವವು ಮುಕ್ತಿಗೆ ಶರಣಾಗಿದೆ ![]()
ಸರ್ಜನ್ನರ ಅಭಿಪ್ರಾಯದ ಮೇರೆಗೆ, ಪ್ರಾಯಶಃ ಆ ಹುಡುಗ ಸಿಹಿತಿಂಡಿಯನ್ನು ತಿನ್ನುತ್ತಲೇ ನಿದ್ರೆ ಹೋಗಿದ್ದಾನೆ, ರಾತ್ರಿ ಇರುವೆಗಳು ಆ ಸಿಹಿಗೆ ಆಕರ್ಷಿತವಾಗಿ ಬಂದು ಕಿವಿಯ ಬಳಿಗೂ ಅಂಟಿಕೊಂಡಿದ್ದ ತಿನಿಸಿಗಾಗಿ ಬಂದು ಕಿವಿಯ ಮುಖಾಂತರ ಮೆದುಳಿಗೆ ಪ್ರವೇಶಿಸಿ ಅಲ್ಲಿಯೇ ತಮ್ಮ ಕಾರ್ಯವನ್ನು ಮುಂದುವರೆಸಿವೆ.
ತುರಿಸಿಕೊಳ್ಳಲೂ ಆಗದಂತಹ ಅಸಹಾಯಕತೆಗೆ ಸಿಲುಕಿದ ಬಾಲಕನಂತಹುದೇ ಸ್ಥಿತಿಯೊಂದು ತೈವಾನಿನ ಆಸ್ಪತ್ರೆಗೆ ದಾಖಲಾದ ದುರ್ದೈವಿಯೋರ್ವನಿಗೆ ಬಂದೊದಗಿ ಆತನೂ ಯಮಪಾಶಕ್ಕೆ ಸಿಲುಕಿದ ದಾರುಣ ಘಟನೆಯೂ ಸಹ ಈಮೇಲಿನಲ್ಲಿತ್ತು. ಮೇಲೆ ವಿವರಿಸಿದಂತಹುದೇ ಘಟನೆಯಲ್ಲಿ ಆತ ಮೃತನಾದ ನಂತರ ಆಟಾಪ್ಸಿಯಲ್ಲಿ ಗೊತ್ತಾಗಿದ್ದೇನೆಂದರೆ ಆತನ ಮೆದುಳನ್ನು ಇರುವೆಗಳು ಚೂರು ಚೂರೇ ತಿನ್ನುತ್ತಿದ್ದುದು...
ಮಕ್ಕಳು ಮಾತ್ರವಲ್ಲ ಯಾರೇ ಆಗಲಿ, ಮಲಗುವಾಗ ಕಿವಿಗೆ ಹತ್ತಿ ಇಟ್ಟುಕೊಳ್ಳುವುದು ಒಳ್ಳೆಯದು. (ಮೂಗಿನ ಹೊರಳೆಗಳಿಗೆ ಇಟ್ಟುಕೊಳ್ಳುವ ಪ್ರಯೋಗ ಬೇಡ
ಮಕ್ಕಳಿಗೆ ಸಿಹಿ ತಿನ್ನಿಸಿದ ನಂತರ ಒಂಚೂರು ಜಾಗ್ರತೆ ವಹಿಸಿಕೊಂಡರೆ ಇನ್ನೂ ಒಳ್ಳೆಯದು.
ಎನಗಿಂತ ಕಿರಿಯರಿಲ್ಲ.
ರಘುನಂದನ ಶರ್ಮ

- ರಘುನಂದನ ರವರ ಬ್ಲಾಗ್
- Login or register to post comments
- 583 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ಮಕ್ಕಳನ್ನು ಪ್ರೀತಿಸುವವರು ನಿಜಕ್ಕೂ ಓದಲೇಬೇಕಾದ ವಿಷಯವಿದು.
ಪ್ರೀತಿಯ ರಘುನಂದನರವರಿಗೆ ನಮಸ್ಕಾರಗಳು.
ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.
ಶಿವಣ್ಣ.
Re: ಮಕ್ಕಳನ್ನು ಪ್ರೀತಿಸುವವರು ನಿಜಕ್ಕೂ ಓದಲೇಬೇಕಾದ ವಿಷಯವಿದು.
ಶಿವಣ್ಣಾವ್ರಿಗೆ ನಮಸ್ಕಾರ. ಈ ವಿಚಾರದಿಂದ ಜನರು ಕೆಲವು ವ್ಯವಹಾರಗಳಲ್ಲಿ ಸೂಕ್ಷ್ಮಜ್ಞರಾಗಲಿ ಎಂಬುದೇ ನನ್ನ ಅಭಿಪ್ರಾಯ. ಆದ್ರೆ ನನ್ನ ಹೆಸರು ಗುರುನಂದನ ಅಲ್ಲ. ರಘುನಂದನ ಎಂದಿರಬೇಕಿತ್ತು.
ಎನಗಿಂತ ಕಿರಿಯರಿಲ್ಲ
Re: ಮಕ್ಕಳನ್ನು ಪ್ರೀತಿಸುವವರು ನಿಜಕ್ಕೂ ಓದಲೇಬೇಕಾದ ವಿಷಯವಿದು.
ಪ್ರೀತಿಯ ರಘುನಂದನರವರೇ,
ಹೆಸರಿನಲ್ಲಿ ಆದ ಪ್ರಮಾದಕ್ಕಾಗಿ ವಿಷಾದಿಸುತ್ತೇನೆ ಮತ್ತು ತಪ್ಪಿನ ಅರಿವಾಗಿ ಅದನ್ನು ಸರಿಪಡಿಸಿದ್ದೇನೆ.
ತಮ್ಮ ಮಾಹಿತಿಯಲ್ಲದೇ, ಬರವಣಿಗೆಯ ಶೈಲಿಯೂ ನನಗೆ ಬಹಳ ಇಷ್ಟವಾಯಿತು.
ನಿಮಗಿಂತ ಕಿರಿಯವ,ನಿಮ್ಮವನೇ,
ಶಿವಣ್ಣ.