ನಿತ್ಯ ನೂತನದಿ ಹೊಳೆ
ಕೆರೆಯಾಗದಿರು ಜೇವನದಿ
ಮರೆಯಾಗದಿರು ಹೊಸತನದಿ
ನಿಂತ ನೀರದು ಕೊಳೆಯೆ ಹರಿವ ನೀರಿದು ಹೊಳೆಯೆ
ನಿತ್ಯ ನೂತನದಿ ಹೊಳೆ ಪಂಡಿತಪುತ್ರ||
--ಪ್ರತಿ ನಿತ್ಯವೂ ಹೊಸದನ್ನು ಕಲಿಯಬೇಕು...ಕಲಿಯುವಿಕೆಗೆ ಸಾವಿಲ್ಲ ... ನಿಂನ್ತ ನೀರಾಗದೆ ನಿತ್ಯ ಹೊಸ ತನವನ್ನು ಕಾಣಬೇಕೆಂಬುದೇ ಇದರ ಅರ್ಥ ...

- ಶ್ರೀಶಕಾರಂತ ರವರ ಬ್ಲಾಗ್
- Login or register to post comments
- 814 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಹೊಸತು.
ಇದು ಕುವೆಂಪುರವರ "ಓ ನನ್ನ ಚೇತನ ಆಗು ನೀ ಅನಿಕೇತನ" ಗೀತೆಯ ಸಂದೇಶದ ಸಾರದಂತಿದೆ. ಆದರೆ ಯಾವುದು ಸರಿ?
ಹೊಸದನ್ನು ಅಥವಾ ಹೊಸತನ್ನು ?
ಹೊಸತನ್ನು ಸರಿ...
shree karantha
ಬೇಂದ್ರೆಯವರ 'ಯುಗಾದಿ'
ಬೇಂದ್ರೆಯವರ 'ಯುಗಾದಿ' ಕವನವೂ ಇದೇ ಸಂದೇಶವನ್ನು (ನಿತ್ಯ ನೂತನ) ಸಾರುತ್ತದೆ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸವರುಷಕೆ ಹೊಸಹರುಷವ ಹೊಸತು ಹೊಸತು ತರುತಿದೆ
..
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಕೂಡಲೆ ಹೊಸ ಜನ್ಮ
ನಮಗೆ ಏಕೆ ಬಾರದು? ..
- ಅಂಬಿಕಾತನಯದತ್ತ