ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ದಿ ಬೆಸ್ಟ್ ಆಫ್ 'ಸಂಪದ' › ಲಲಿತ ಪ್ರಬಂಧ, ಹಾಸ್ಯ

ಮೂರು ಕೋತಿಗಳ ಬಾಲ ಹಿಡಿದು

July 3, 2006 - 12:00am — suchara

ನಾನು ಕಳೆದವಾರದಲ್ಲಿ ಮೂರು ದಿನಗಳವರೆಗೆ ಒಂದು ತರಹ ಗಾಂಧಿ ತತ್ವ ಪಾಲಿಸಿದೆ.
ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ ಹಾಗೂ ಕೆಟ್ಟದ್ದನ್ನು ಹೇಳಬೇಡ - ಎಂಬುದನ್ನು ತೋರಿಸಿಕೊಡುವ ಮೂರು ಕೋತಿಗಳ ಚಿತ್ರ ನಿಮಗೆಲ್ಲ ಚಿರಪರಿಚಿತ.

ಈಗ ನನ್ನ ಕಥೆ ಕೇಳಿ. ನಾನು ವಿದೇಶಕ್ಕೆ ಹೊರಟಿರುವುದರಿಂದ ಸಂಪೂರ್ಣವಾಗಿ ದೈಹಿಕ ಪರೀಕ್ಷೆ ಮಾಡಿಸ ಬೇಕೆಂದು ನಿರ್ಧರಿಸಿದೆ. ಇತರ ಪರೀಕ್ಷೆಗಳೆಲ್ಲ ಆದಮೇಲೆ ನನ್ನ ಗಮನ ಕಣ್ಣು ಕಿವಿ ಬಾಯಿಗಳ ಮೇಲೆ ಹರಿಯಿತು.

ಸರಿ, ನನ್ನ ಜೀವನದಲ್ಲಿ ಪ್ರಥಮಬಾರಿಗೆ ದಂತವೈದ್ಯರೊಬ್ಬರ ಬಳಿ ಹೋಗಿ ಹಲ್ಲುಗಿಂಜಿದೆ. ಅವರು ತಮ್ಮ ಬಾಯಿಗೊಂದು ಅಡ್ದಬಟ್ಟೆ ಕಟ್ಟಿಕೊಂಡು ನನ್ನ ದಂತಪಂಕ್ತಿಯನ್ನು ಪರೀಕ್ಷಿಸಿದರು. ಮೊದಲು ನಿಮ್ಮ ಹಲ್ಲಿನ ಕಲೆಗಳೆಲ್ಲವನ್ನು ತೆಗೆಯೋಣವೆಂದರು. ವೈದ್ಯರ ಅಣತಿಯಂತೆ ಲಲನಾಮಣಿಯೊಬ್ಬಳು ಆಯುಧಪಾಣಿಯಾಗಿ ನನ್ನ ಹಲ್ಲುಗಳನ್ನು ಸಾಣೆಹಿಡಿಯತೊಡಗಿದಳು. ಪ್ರಥಮ ಚುಂಬನೆ ದಂತಭಗ್ನಂ ಎಂದರೆ ಇದೇ ಇರಬೇಕು ಎಂದುಕೊಂಡೆ. ನಂತರ ವೈದ್ಯರು ಬಂದು ನನ್ನು ಹಲ್ಲಿನ ಹುಳುಕುಗಳನ್ನೆಲ್ಲ ಸಿಮೆಂಟಿನಿಂದ (ಸೀಮೆ ಅಂಟು?) ಮುಚ್ಚಿಹಾಕಿದರು. ನನಗೋ ಒಳಗೊಳಗೆ ನಗು. ಕಾರಣ ಮಿ.ಬೀನ್ ಸೀರಿಯಲ್ ನಲ್ಲಿ ದಂತವೈದ್ಯರ ಕಾಲಿಗೆ ಬೀನ್ ಅನಸ್ತೇಶಿಯಾ ಚುಚ್ಚಿಬಿಡುವ ನೆನಪು ಬಂದುಬಿಟ್ಟಿತ್ತು. ಸರಿ ಹಾಗೂ ಹೀಗೂ ಹೊರಗೆ ಬಂದಾಗ ಗೊತ್ತಾಯಿತು, ದಂತವೈದ್ಯರು ಕೀಳುವುದು ಹಲ್ಲಲ್ಲಾ, ಹಣ ಎಂದು ! ಧನ್-ತಾ ವೈದ್ಯರು !

ನನ್ನ ಮುಂದಿನ ಬೇಟಿ ಕಿವಿಯ ವೈದ್ಯರ ಬಳಿ. ನನ್ನ ಎರಡೂ ಕಿವಿಗಳಲ್ಲೂ ಮೇಣ ತುಂಬಿಕೊಂಡ ಕಾರಣ ಬಹಳ ನವೆಯಾಗಿ ರಣವಾಗಿತ್ತು. ಅವರು ಅದಕ್ಕೊಂದು ಕರ್ಣಾಮೃತ ಕೊಟ್ಟು ಮೂರುದಿನಗಳು ಹಾಕಿಕೊಂಡು ನಂತರ ಬರಲು ಹೇಳಿದರು. ತಿರುಗಿ ಹೋದಾಗ ಪಿಚಕಾರಿಯಿಂದ ನೀರುಬಿಟ್ಟು ಮೇಣತೆಗೆದು ನನ್ನನ್ನು ಸುಕರ್ಣನನ್ನಾಗಿಸಿದರು.

ನಂತರ ನಾನು ಹೋಗಿದ್ದು ಕಣ್ಣಿನ ವೈದ್ಯರಬಳಿ. ಸಧ್ಯಕ್ಕೆ ನನ್ನ ಕಣ್ಣಿನ ಶಕ್ತಿಯಲ್ಲಿ, ಅಲ್ಲಾ, ನನ್ನ ಕಣ್ಣಿನ ನಿಶ್ಯಕ್ತಿಯಲ್ಲಿ ಹೆಚ್ಚಿನ ಬದಲಾವಣೆ ಏನೂ ಇರಲಿಲ್ಲ. ಆದರೆ ನನ್ನ ಕನ್ನಡಕದ ಮೇಲಾಗಿದ್ದ ಗೀಚುಗಳು (ಶುದ್ಧ ಕನ್ನಡದ ಸ್ಕ್ರ್ಯಾಚುಗಳು) ನನ್ನ ದೃಷ್ಟಿಯನ್ನೇ ಮಂದಮಾಡಿದ್ದವು. ಹೊಸ ಸುಲೋಚನ ಧರಿಸಿದೊಡನೆಯೇ ಮತ್ತೆ ತಿಳಿಯಾದ ಪ್ರಪಂಚ ಕಾಣಿಸತೊಡಗಿತು.

ಹೀಗಿತ್ತು ನನ್ನ ಒಳ್ಳೆಯದನ್ನು ಕೇಳುವ, ಒಳ್ಳೆಯದನ್ನು ಕಾಣುವ, ಒಳ್ಳೆಯದನ್ನು ಆಡುವ-ಅಗೆಯುವ ಹಾಗೆಯೇ ಕೆಟ್ಟದ್ದನ್ನು ಬಿಸಾಡುವ (use & throw ?) ಅನುಭವ.

- ಸುಚರ
----------------------
ಬ್ಲಾಗುವ ನಾಯಿ ಕಚ್ಚುವುದಿಲ್ಲ

‹ ನಾಲ್ಕನೆಯ ದೀಪಾವಳಿಮೇಲಿನ ಪುಟಕ್ಕೆವಸಂತಾಗಮನ ›
~.~
  • suchara ರವರ ಬ್ಲಾಗ್
  • Printer-friendly version
  • Login or register to post comments
  • 1157 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 3, 2006 - 6:33am — benaka

ದಂತಭಗ್ನಂ

benaka's picture

ಸುಚರರೆ,
ಲೇಖನ ಚೆನ್ನಾಗಿದೆ; ಹೀಗೆಯೇ ಬ್ಲಾಗುತ್ತಿರಿ!
ನಿಮ್ಮ ಸುನೇತ್ರ - ಸುಕರ್ಣ - ಸುದಂತಗಳು ವಿದೇಶದಲ್ಲೂ ಸುಸ್ಥಿತಿಯಲ್ಲಿರಲೆಂದು ಆಶಿಸುತ್ತೇನೆ.
ಅದಿರಲಿ, ಪ್ರಥಮ ಚುಂಬನೇ ದಂತಭಗ್ನಂ ಎಂದಿರಲ್ಲಾ, ಲಲನಾಮಣಿಯೊಂದಿಗೇನು ಮಾಡಿದಿರಿ ಸ್ವಾಮೀ?!

ನಿಮ್ಮವ

 

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2006 - 10:13am — suchara

ಉ:ದಂತಭಗ್ನಂ

suchara's picture

ಸ್ವಾಮಿ ಏಕದಂತರೆ,

ದಂತಭಗ್ನವಾಗಿದ್ದರಿಂದ ನಿಮಗೆ ಸದಾ ಚುಂಬನದಚಿಂತೆಯೇ ?
ಕೆಟ್ಟದ್ದನ್ನು ಹೇಳಬೇಡಿ - ಯೋಚಿಸಬೇಡಿ.
ಜೊತೆಗೆ ಇನ್ನೊಂದು ಹೇಳಲು ಮರೆತಿದ್ದೆ. ಪಕ್ಕದಲ್ಲೆ ನನ್ನ ಅರ್ಧಾಂಗಿಯೂ ಇದ್ದಳು. ಅವಳ ಹಲ್ಲುಗಳನ್ನೂ ಕೀಳುಸುತ್ತಿದ್ದೆ !

-ಸುಚರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2006 - 8:11am — ಶ್ರೀನಿಧಿ

ಮುಕ್ಕೋತಿ

ಶ್ರೀನಿಧಿ's picture

ನೀವೇನೋ ಕೋತಿ ಬಾಲ ಹಿಡಿದು ಅಂತ ತಪ್ಪಿಸಿಕೊಂಡ್ರಿ ಸ್ವಾಮಿ. ಆದರೆ ಗಾಂಧಿಯವರ ಕೋತಿಗಳು ಬರೀ ಸಾಂಕೇತಿಕ ಎನ್ನುತ್ತಾ ಮುಸುಕಿನ ಗುದ್ದು ಕೊಡಲು ನೋಡುತ್ತಿದ್ದೀರೋ ಹೇಗೆ??

ಆ ಮೂರು ಕೋತಿಗಳು ಯಾರಿರಬಹುದು? ನಿಮಗಿಂತ ಮುಂದೆ ಪರದೇಶಿಗಳಾದ ನಿಮ್ಮ ಗೆಳೆಯರೋ ಅಥವಾ ನಿಮ್ಮ ವೈದ್ಯರನ್ನೇ ವಾನರ ಜಾತಿಗೆ ಸೇರಿರುತ್ತಿದ್ದೀರಾ??
ವೈದ್ಯೋ ನಾರಯಣೊ ಹರಿಃ - ಹರಿ ಎಂದರೆ ವಾನರ ಎಂದೂ ಆಗುತ್ತದೆ ಎಂಬ ದುರಾಲೋಚನೆಯೋ??

ಏನೇ ಆದರೂ ಸುಕರ್ಣರಾಗಿದ್ದುದು ನಿಮಗೆ ಸ್ವಲ್ಪ ತೊಂದರೆ. ವಿಮಾನದಲ್ಲಿ ನಿಮ್ಮ ಕಿವಿ ತುಂಬುವವರು ಬಹಳ ಸಿಗುತ್ತಾರೆ. ವಿಕರ್ಣರಾಗಿದ್ದರೆ "ಜಾಣ ಕಿವುಡು" ಅಭಿನಯಿಸುವುದು ಸುಲಭ ಅಲ್ಲವೇ??

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2006 - 10:15am — suchara

ಉ:ಮುಕ್ಕೋತಿ

suchara's picture

ನಿಮ್ಮ ಕಲ್ಪನೆಗಳಿಗೆ ನೀವೇ ಜವಾಬ್ದಾರರು Eye-wink
-ಸುಚರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2006 - 11:30am — shreekant.mishrikoti

ಮೂರು ಕೋತಿಗಳು

shreekant.mishrikoti's picture

ನಿಮ್ಮ ಬರಹ ಚೆನ್ನಾಗಿದೆ ; ಮತ್ತೆ , ಮತ್ತೆ ( ಅಂದರೆ ಎರಡು ಬಾರಿ ) ಓದಿದೆ . ನಿಮ್ಮ ಶೈಲಿಯೂ ಚೆನ್ನಾಗಿದೆ. ನಿಮ್ಮಿಂದ ಇನ್ನಷ್ಟು ಬರಹ ಎದುರು ನೋಡುವೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2006 - 1:59pm — benaka

'ಏಕದಂತ ಕ್ಲಿನಿಕ್'

benaka's picture

ಸುಚರರೇ,
ಓಹೋ! ದಂ-ಪತಿ ದಂತ ಭಂಗ ಕಾರ್ಯಕ್ರಮವೋ! ಒಳ್ಳೆಯದು.
ಈ ಹಲ್ಮುರುಕ ಬೆನಕನ ಮೇಲೆ ಕೋಪಿಸಿಕೊಳ್ಳಬೇಡಿ ಸ್ವಾಮೀ; ಇವನಿಗೆ ಚುಂಬನವಿಲ್ಲದೇ ದಂತಭಗ್ನಂ ಆಗಿಬಿಟ್ಟಿದೆ!
ಇವನ ಹೆಸರಿನಲ್ಲಿ ಚಿಕಿತ್ಸಾಲಯದ ಫಲಕ ಹಾಕಲು ವೈದ್ಯರೇ ಹೆದರುತ್ತಾರೆ. 'ಏಕದಂತ ಕ್ಲಿನಿಕ್' ಎಂಬ ಹೆಸರು ನೋಡಿಯೇ ಜನ ಹೆದರಿ ಓಡುತ್ತಾರೆ!
ನೋಡಿ, ಹಲ್ಲಿನ ವೈದ್ಯರಿಗೂ ಸಾಹಿತ್ಯಾಸಕ್ತಿ: 'ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ....' ಕೊರೆವುದೇ ಜೀವನ; ಏನಂತೀರಿ?

ನಿಮ್ಮ

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಾಂಧಿಯ ಮಂಗಗಳು
  • ನನ್ನ ಲ್ಯಾಂಡಲೈನ್(landline) ಮತ್ತು ಮೊಬೈಲ್(mobile)
  • ಕುಂದಾಪುರದ ಕಡಲು
  • ಸಿಂ ಗನ್ನಡಂ ಗೆಲ್ಗೆ
  • ನಿದ್ದೆಯಿಂದ ಆದ ನನ್ನ ಅನುಭವಗಳು
Syndicate content

ಲೇಖಕರು

suchara's picture

ಪರಿಚಯ

ನಾನು ನಾನೇ ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:54pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:52pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:51pm
  • csomsekraiah
    ಉ: ಕೊಲಂಬಿಯ ಪಟ್ಟಣದ ಸಂತೆ !
    September 8, 2008 - 7:28pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 157 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator