ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ವ್ಯಾಯಾಮ್ ಹರಾಮ್ ಹೈ

October 3, 2007 - 5:01pm — ಗಣೇಶ

"ಬ್ರಾಹ್ಮೀಮುಹೂರ್ತದಲ್ಲಿ ಏಳುವುದು ಆರೋಗ್ಯಕ್ಕೆ ಒಳ್ಳೆಯದು." ಇದು ರಾಮನ ಕತೆಯಂತೆ ಕಟ್ಟುಮಾತು.ನಿದ್ರೆ ಬರದ ಮುನಿಗಳು ಬರೆದುದು. ಕಂಪ್ಯೂಟರ್,ಟಿ.ವಿ.ಇಲ್ಲದ ಆ ಕಾಲದಲ್ಲಿ ಜನ ಬೇಗನೆ ಮಲಗುತ್ತಿದ್ದರು.ಸಹಜವಾಗಿ ಬೇಗನೆ ಏಳುತ್ತಿದ್ದರು.ಎದ್ದ ಮೇಲೆ ಮಾಡಲು ಬೇರೇನೂ ಕೆಲಸವಿಲ್ಲ,ವ್ಯಾಯಾಮ,ಧ್ಯಾನ,ಪೂಜೆ ಇತ್ಯಾದಿ ಮಾಡುತ್ತಾ ಬೆಳಗಾಗುವುದನ್ನು ಕಾಯುತ್ತಿದ್ದರು.ಪ್ರಾಣಿಪಕ್ಷಿಗಳೂ ಸಹ ಬೇಗನೆ ಏಳುವುದು.ಈ ಕಾಲದವರು ಸೋಮಾರಿಗಳು ಸಮಯ ಏಳಾಗದೇ ಏಳುವುದಿಲ್ಲ ಎನ್ನುತ್ತಾರೆ. ಅವು ಸಂಜೆ ಆರರ ಒಳಗೆ ಗೂಡು ಸೇರಿ ಮಲಗಿರುತ್ತವೆ. ರಾತ್ರಿ ನಾವು ಎಚ್ಚರವಿರುವ ೪-೫ಗಂಟೆಯನ್ನು ಬೆಳಗಿನದಕ್ಕೆ ಸೇರಿಸಿ ನಾವು ಒಂದು ಗಂಟೆ ಬೇಗನೆ ಎದ್ದಹಾಗೆ.ಪ್ರಾಣಿಪಕ್ಷಿಗಳೂ ಸಹ ಬೆಳಗೆದ್ದು ತಮ್ಮ ಕೆಲಸ ಸುರುಮಾಡುವುದು ಹೊರತು ವ್ಯಾಯಾಮ ಮಾಡಲು ಹೊರಡುವುದಿಲ್ಲ. ಮನುಷ್ಯಪ್ರಾಣಿ ಮಾತ್ರ ವ್ಯಾಯಾಮದ ಕಟ್ಟುಪಾಡು ವಿಧಿಸಿಕೊಂಡಿದ್ದಾನೆ.ವ್ಯಾಯಾಮವೇ ಮಾಡದ ಪ್ರಾಣಿಗಳು ಅಡ್ಡಾದಿಡ್ಡಿ ಬೆಳೆದು ರೋಗಿಷ್ಠವಾಗಿದೆಯೇ? ಹೀಗೆ ಹೇಳಿದ ಕೂಡಲೇ ಕೆಲವರು ವಾದಿಸುವರು-ಅವು ನ್ಯಾಚುರಲ್ ಫ಼ುಡ್ ತಿನ್ನುವುದು. ಅದೇ ನ್ಯಾಚುರಲ್ನೇ ಕ್ಲೀನ್ ಆಗಿ ತೊಳೆದು,ಸ್ವಲ್ಪ ಉಪ್ಪು ಖಾರ ಸೇರಿಸಿ ಬೇಯಿಸಿ ತಿನ್ನುವುದರಿಂದ ಆರ್‍ಓಗ್ಯ ಹೇಗೆ ಕೆಡುವುದು?
ವ್ಯಾಯಾಮ ಮಾಡಿ ಖಾಯಿಲೆ ಬಾರದ ಒಬ್ಬನನ್ನು ತೋರಿಸಿ ವ್ಯಾಯಾಮ ಮಾಡದೇ ಆರೋಗ್ಯದಿಂದಿರುವ ಹತ್ತು ಮಂದಿಯನ್ನು ತೋರಿಸುವೆನು.
ಬಹಳಷ್ಟು ಜನ ರೋಗಿಗಳು,ಬೊಜ್ಜುಮೈಯವರು ಡಾಕ್ಟ್ರ ಆದೇಶದಂತೆ ವರ್ಷಾನುಗಟ್ಟಲೆ ಪಾರ್ಕ್ ಸುತ್ತುತ್ತಾರೆ.ಬೊಜ್ಜು ಇಳಿದದ್ದೂ ಇಲ್ಲಾ,ಡಾಕ್ಟ್ರ ಭೇಟಿ ಕಮ್ಮಿಯಾದ್ದೂ ಇಲ್ಲಾ,ಮಾತ್ರೆ ತಿನ್ನುವುದು ತಪ್ಪಲೂ ಇಲ್ಲಾ, ವ್ಯಾಯಾಮದಿಂದ ಏನು ಲಾಭವಾಯಿತು?
ಈ ಜಾಗಿಂಗ್ ಮಾಡುವುದು ಸುಲಭವಿದೆಯೇ? ರಸ್ತೆಯಲ್ಲಿ ನಾಯಿಗಳ ಕಾಟ.ರಸ್ತೆ ಮಧ್ಯದಲ್ಲಿ ಹೋದರೆ ವಾಹನಗಳ ಕಾಟ.ರಸ್ತೆ ಬದಿಯಲ್ಲಿ ಹೋದರೆ ನಾಯಿಯಿಂದಾದ ಗಲೀಜು ತುಳಿದು ಅರ್ಧಕ್ಕೆ ಜಾಗಿಂಗ್ ಕ್ಯಾನ್ಸಲ್. ಪಾರ್ಕ್ನಲ್ಲಿ ಹಳೇ ಪರಿಚಯಸ್ಥರ,ಹೊಸದಾಗಿ ಮಾತಿಗೆಳೆಯುವವರ ಕಾಟ.
ಮನೆಯಲ್ಲಿ ವ್ಯಾಯಾಮ ಮಾಡುವವರದ್ದು ಇನ್ನೊಂದು ರೀತಿಯ ತಾಪತ್ರಯ. ಲೈಟ್ ಹಾಕಿದರೆ ನಿದ್ರಿಸುವವರ ಕಿರಿಕಿರಿ,ಲೈಟ್ ಹಾಕದೇ ಮಾಡಿದರೆ ಮಂಚ,ಬಾಗಿಲು ತಾಗಿ ಏಟಾಗುವುದು.ಟ್ಯಾರೆಸ್ ಗೆ ಹೋಗಿ ಮಾಡುವವರಿಗೆ 'ಪಕ್ಕದ ಮನೆಯವಳು ಬಟ್ಟೆ ಒಗೆಯುವಾಗ ನಿಮ್ಮದೇನ್ರೀ ಟ್ಯಾರೇಸ್ ನಲ್ಲಿ ಸುತ್ತಾಟ ' ಎಂಬ ಮನೆಯಾಕೆಯ ಕೊಂಕು.ಎಲ್ಲಾ ರೀತಿಯಿಂದಲೂ ತೊಂದರೆ.ಅದಕ್ಕೇ ಎನೂ ಉಪಯೋಗವಿಲ್ಲದ ವ್ಯಾಯಾಮ ಮಾಡಬೇಡಿ.
ಈ ವ್ಯಾಯಾಮ ಮಾಡುವವರನ್ನು ಗುರುತಿಸುವುದು ಬಹಳಸುಲಭ.ರಸ್ತೆಯಿಡೀ ವ್ಯಾಪಿಸಿದೆ ಎಂಬಂತೆ ಎದೆ ಉಬ್ಬಿಸಿ (ಕಾಲು ಮಾತ್ರ ಕೋಳಿಕಾಲಿನಂತೆ ಇರುತ್ತದೆ)ನಡೆಯುವಾತ -'ಜಿಮ್'ಗೆ ಹೋಗುವಾತ.ಹಣೆಯಲ್ಲಿ ಕುಂಕುಮ,ಎಣ್ಣೆ ಹಚ್ಚಿದ ಉದ್ದ ಕೂದಲು,ಜುಬ್ಬಾಧಾರಿ-'ಯೋಗಪಟು'.ಇವೆಲ್ಲಾ ಒಂದು ತರಹ ಆರ್ಟಿಫಿಷಿಯಲ್ ಕಳೆ.ಒಳ್ಳೆ ನಿದ್ರೆ ಮಾಡಿ ಎದ್ದು ಕೆಲಸಕ್ಕೆ ಆಸಕ್ತಿಯಿಂದ ಹೊರಟ ನಮ್ಮಂತಹವರಂತೆ ಇರುವುದಿಲ್ಲ.
ಶಾರುಕ್ ಖಾನ್ ನೋಡಿ, ಚೆನ್ನಾಗಿದ್ದ.ಅವನನ್ನ ಸಲ್ಮಾನ್ ಖಾನ್ ತರಹ ಮಾಡಲು ಹೋಗಿ, ಮೊನ್ನೆ ೨೦-೨೦ಕ್ರಿಕೆಟ್ನ ದಿನ ಮೈಕೆಲ್ ಜಾಕ್ಸನ್ ನ ಅವಳಿಯಂತೆ ಕಾಣುತಿದ್ದ.ಶೇಖರ್ ಸುಮನ್ ಹಾಡು ಹೇಳಲು ಬೆಳೆಸಿದ ಬಾಡಿ ಇಷ್ಟವಾಯಿತಾ?ಅದೇ ಅದ್ನಾನ್ ಸಾಮಿ ಆ ದೊಡ್ಡದೇಹ ಹೊತ್ತುಕೊಂಡು "ಲಿಫ಼್ಟ್ ಕರಾದೇ" ಅಂದಾಗ ಎಷ್ಟು ಖುಶಿ.ಅದೇ ಈಗಿನ ಅದ್ನಾನ್ ಸಾಮಿ ಹಾಡು ಯಾವುದು ಹೇಳಿ ನೋಡೋಣ?
ಅದಕ್ಕೇ ಹೇಳುವುದು- ನೀವು ಹೇಗಿದ್ದೀರಾ ಹಾಗೇ ಇರಿ.ಸುಖವಾಗಿ ತಿಂದುಂಡು ನಿದ್ರಿಸಿ,ನಿಮ್ಮ ನಿಮ್ಮ ಕೆಲಸಮಾಡಿ, ಉಳಿದ ಸಮಯದಲ್ಲಿ ಸಮಾಜಕ್ಕೇನಾದರು ಉಪಯೋಗವಾಗುವಂತಹ ಕೆಲಸ ಮಾಡಿ.ವ್ಯಾಯಾಮಕ್ಕೆ ಸಮಯ ವೇಷ್ಟ್ ಮಾಡಬೇಡಿ.

~.~
  • ಗಣೇಶ ರವರ ಬ್ಲಾಗ್
  • Login or register to post comments
  • 468 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 3, 2007 - 5:47pm — shreekant.mishrikoti

ಉ: ವ್ಯಾಯಾಮ್ ಹರಾಮ್ ಹೈ

shreekant.mishrikoti's picture

ಒಳ್ಳೇ ವಿಚಾರ ಹೇಳಿದ್ರಿ . ನಾನು ಒಂದಿನ ವಾಕಿಂಗ್ ಹೋದ್ರೆ ಆರ್ತಿಂಗ್ಳು ಹೋಗೂದಿಲ್ಲ ;
ಈ ಲೇಖನ ಪ್ರಿಂಟ್ ಮಾಡ್ಕೊಂಡೇನಿ ; ಕಟ್ಟು ಹಾಕ್ಸಿ ಇಟ್ಕೋಳೋಣ ಅಂತ !
ಸೋಮಾರಿತನಕ್ಕೆ ಜಯವಾಗಲಿ !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 3, 2007 - 8:43pm — Ennares

ಉ: ವ್ಯಾಯಾಮ್ ಹರಾಮ್ ಹೈ

Ennares's picture

ಲೇಖನ ತುಂಬಾ ಚೆನ್ನಾಗಿದೆ.

ಆರಾಮ್ ಮಾಡುವವರಿಗಿರುವ ವಿಘ್ನಗಳನ್ನೆಲ್ಲ ಪರಿಹರಿಸಬಲ್ಲ ಗಣೇಶ್ ಕೂಡಾ ನೀವಾಗಿದ್ದಿದ್ದರೆ ಇನ್ನೂ ಎಷ್ಟು ಚೆನ್ನಾಗಿರ್ತಿತ್ತು! ವ್ಯಾಯಾಮ ಮಾಡ್ರೀ ಅಂತ ತಲೆ ತಿನ್ನೋ ನನ್ನ ಹೆಂಡ್ತೀಗೆ ನಿಮ್ಮ ಲೇಖನ ಓದಿ ಹೇಳಿ ನನ್ನ ಆರಾಮಿ ನಿಲುವನ್ನು ಸಮರ್ಥನೆ ಮಾಡಿಕೊಳ್ಳೋ ಯತ್ನದಲ್ಲಿ ಸಂಪದ ಸಮುದಾಯಕ್ಕೆಲ್ಲಾ ಸಹಸ್ರಾರ್ಚನೆಯಾಯ್ತು.

"ಆರಾಮ್ ಹೀ ರಾಮ್" ಅಂತ ಹೇಳೋಕ್‍ಹೋದ್ರೆ ನಮ್ಮನ್ನೆತ್ಕೊಂಡು " ರಾಮನಾಮ ಸತ್ಯ ಹೈ" ಅಂತ ಪಠಿಸುತ್ತ ಹರಿಶ್ಚಂದ್ರ ಘಾಟ್‍ ಕಡೆ ಜನ ಹೋಗೋದು ಖಚಿತ.

ಆದ್ರೇನಂತೆ, ಎಲ್ಲಾ ಒಳ್ಳೇ ಐಡಿಯಾಸ್ಗೂ ರೆಸಿಸ್ಟೆನ್ಸ್ ನ್ಯಾಚುರಲ್ ಅಲ್ವೇ! ಸಾಯೋಕೆ ಹೆದ್ರಿಕೋತಾರ್ಯೇ? ನೀವು ನಿಮ್ಮ ಒಳ್ಳೇ ಬೋಧನೆ ಮುಂದುವರಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 5, 2007 - 4:29pm — ಗಣೇಶ

ಉ: ವ್ಯಾಯಾಮ್ ಹರಾಮ್ ಹೈ

ಗಣೇಶ's picture

ಸಂಪದ ಸಮುದಾಯಕ್ಕೆಲ್ಲಾ(ನನಗೆ) ಸಹಸ್ರಾರ್ಚನೆ ಮಾಡಿದ ತಮ್ಮವರಿಗೆ ವಂದನೆ.
ನಾನು ಬೆವರುಸುರಿಸಿಕೊಂಡು ವ್ಯಾಯಾಮ ಮಾಡುತಿದ್ದಾಗ ಹಾಯಾಗಿ ಮಲಗಿದ್ದ ನನ್ನ ಪತ್ನಿ ಈಗಲೂ ಮದುವೆಗೆ ಮೊದಲು ಇದ್ದಂತೆ ಇರುವುದೇ ಈ ಲೇಖನ ಬರೆಯಲು ಪ್ರೇರಣೆ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 5, 2007 - 4:02pm — ಗಣೇಶ

ಉ: ವ್ಯಾಯಾಮ್ ಹರಾಮ್ ಹೈ

ಗಣೇಶ's picture

ನಿಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯಿತು.ಧನ್ಯ್ವವಾದಗಳು.ಒಂದು ದಳ ತುಳಸಿ ದೇವರಿಗೆ ಅರ್ಪಿಸಿ ,ಒಂದು ದಳ ತಿಂದರೆ ಯಾವುದೇ ಕಾಯಿಲೆ ಬರುವುದಿಲ್ಲವೆಂದು ಹಿರಿಯರು ಹೇಳುವರು.ತಾವು ಪ್ರತಿ ಮಾತು,ಪ್ರತಿಕ್ರಿಯೆಯಲ್ಲೂ ತುಳಸಿ ಅರ್ಪಿಸುವಿರಿ. ಆರೋಗ್ಯದ ಬಗ್ಗೆ ನಿಶ್ಚಿಂತರಾಗಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಂಜಾನೆದ್ದು ...
  • ಹೀಟ್ ಬಾಡಿ
  • ಗೆಳೆಯರೋ, ವೈರಿಗಳೋ..?
  • ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?
  • ಬದನೇಕಾಯಿ ಎಣಗಾಯಿ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator