ಮಹಾಭಾರತ
ಸಂಪದದಲ್ಲಿ ನನ್ನ ಮೊದಲನೇ ಬ್ಲಾಗ್ ಪ್ರಯತ್ನ .. ಇದಕ್ಕೆ ಪ್ರೇರಣೆ ನಾನು ಕಳೆದ ವಾರ ಟೀವಿಯಲ್ಲಿ ನೋಡಿದ ಬಿ.ಆರ್ ಚೋಪ್ರಾರವೆರ "ಮಹಾಭಾರತ್"
ಮಹಾಭಾರತದಲ್ಲಿ ಇಲ್ಲದೇ ಇರುವಂತಹ ಕಥೆಯೇ ಇಲ್ಲವಂತೆ ! ನಾನು ಈವರೆಗೆ ಈ ಕೃತಿಯನ್ನು ಬೇರೆ ಬೇರೆ ಮಾಧ್ಯಮದ ಮೂಲಕ ನೋಡಿದ್ದೇನೆ/ ಓದಿದ್ದೇನೆ... ಎಷ್ಡು ಸಲ ಓದಿದರೂ /ನೋಡಿದರೂ ಇದು ನನಗೆ ಸಾಕೆನ್ನಿಸುವುದಿಲ್ಲ
ಹ್ಹೆಹೆ .. ಸಂಪದ ನನಗೆ ತಿಳಿಯದಂತೆ ಈ ಎಂಟ್ರಿಯನ್ನು ಸೇವ್ ಮಾಡಿದಂತಿದೆ....ಇರಲಿ..ನಾನು ಬರೆಯಲು ಹೊರಟಿದ್ದು ಬೇರೆ ಏನೋ..
ನಿಮ್ಮಲ್ಲಿ ಯಾರಾದ್ರು ಕುಮಾರವ್ಯಾಸನ ಗದುಗಿನ ಭಾರತ ಓದಿರುವ ಹಾಗಿದ್ದಲ್ಲಿ ಮತ್ತು ಅವನು ರಾಮಾಯಣದ ಬದಲು ತಾನು ಏಕೆ ಮಹಾಭಾರತ ಬರೆಯಲು ನಿರ್ಧರಿಸಿದೆ ಎಂದು ವರ್ಣಿಸಿರುವ ಸಾಲುಗಳು ನೆನಪಿದ್ದಲ್ಲಿ ನನಗೆ ಹೇಳುವಿರಾ ?
ಬರೀ ಒಂದು ಸಾಲು ನೆನಪಿಗೆ ಬರುತ್ತಿದೆ "....... ತಿಂತಿಣಿವ ...ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ....
"
ಅಂದ ಹಾಗೆ,ನಾನು ಚೋಪ್ರಾರವೆರ "ಮಹಾಭಾರತ್" ನೋಡಿದ್ದು ಡಿವಿಡಿಯಲ್ಲಿ...
ವಿ.ಸೂ : ನನ್ನ ಮೊದಲನೇ ಬ್ಲಾಗನಲ್ಲಿ ಕನ್ನಡ ತಪ್ಪು ತಪ್ಪಾಗಿ ಕಂಡರೆ ಕ್ಷಮೆಯಿರಲಿ ...

- ಸ್ಮಿತಾ ರವರ ಬ್ಲಾಗ್
- Login or register to post comments
- 1217 hits
- Email this blog





RSS:
ಪ್ರತಿಕ್ರಿಯೆಗಳು
ಬಿ ಆರ್
ಬಿ ಆರ್ ಚೋಪ್ರ ಅವರ ಮಹಾಭಾರತ ಮತ್ತೆ ಪ್ರಸಾರ ಆಗ್ತಾ ಇದೆಯಾ?
ಯಾವ ಚಾನೆಲ್ & time? ಹಳೆಯ ಸೀರಿಯಲ್ ಪುನರಾವರ್ತನೆಯಾ?
ತಿಣಿಕಿದನು ಫಣಿರಾಯ ಪದ್ಯ ಇಲ್ಲಿದೆ
ತಿಣಿಕಿದನು ಫಣಿರಾಯ ರಾಮಾ
ಯಣದ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ
(ಕರ್ಣಾಟಕ ಭಾರತ ಕಥಾಮಂಜರಿ, ಪೀಠಿಕಾಸಂಧಿ, ಪದ್ಯ ೧೭.)
ದೋಷಶೋಧನೆ ಎಂದಲ್ಲ,
ಆದರೆ "ಕವಿಗಳ" ಬಿಟ್ಟು ಹೋಗಿದೆ
ರಾಮಾಯಣದ ಕವಿಗಳ ಭಾರದಲಿ
ಎಂದಿರಬೇಕು.
ಗದುಗಿನ
ಗದುಗಿನ ಭಾರತದ ಸರಳತೆಯೆಂದರೆ ಮೊದಲನೇ ಸಾಲು ಬಾಯಿಗೆ ಬಂದರೆ ಉಳಿದದ್ದು ತಾನಗೇ ನೆನಪಾಗುತ್ತದೆ ....
ನಿಮ್ಮಿಬ್ಬರಿಗೂ ಧನ್ಯವಾದಗಳು
-- ಸ್ಮಿತಾ
ಅರ್ಥ ಬಿಡಿಸಿ ಹೇಳಿ
ಸ್ವಾಮಿಯವರೇ, ಕೊಂಚ ಅರ್ಥ ಬಿಡಿಸಿ ಹೇಳಿದರೆ ಉಪಕಾರವಾಗುವುದು.
ವಂದನೆಗಳೊಂದಿಗೆ,
ವಿ.ವಿ.
ನನ್ನ ಬ್ಲಾಗ್ ಮಜಾವಾಣಿ