ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಕನ್ನಡ - ಇಂಗ್ಲಿಷ್ ಭಾಷಾ ಕಲಿಕೆಯ ವಿಸ್ಮಯ-ವಿಚಾರ

January 4, 2007 - 3:10pm — ವೈಭವ

ಇತ್ತೀಚಿನ ಕನ್ನಡ-ಇಂಗ್ಲಿಷ್ ಕಲಿಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೆ ನನ್ನ ತಲೆಯಲ್ಲಿ ಎರಡು ಭಾಷೆಗಳ ಕಲಿಕೆಯ ಬಗ್ಗೆ ಕೆಲವು ವಿಚಾರಗಳು ಹಾದು ಹೋದವು. ಹುಟ್ಟಿದ ಕೆಲವು ದಿನಗಳ ನಂತರ ಮಗುವು ತನ್ನಿಂತಾನೆ ಉಚ್ಚಾರ ಮಾಡುವ ಮೊದಲ ಅಕ್ಷರ "ಅ" ಹಾಗು ಕನ್ನಡದ ಅಕ್ಷರಮಾಲೆಯಲ್ಲಿರುವ ಮೊದಲ ಅಕ್ಷರ ಕೂಡ "ಅ" ಮತ್ತು "ಆ". ಇದರಿಂದ ಕನ್ನಡ ಭಾಷೆ ಮಗುವಿಗೆ ತುಂಬ ಸ್ವಾಭಾವಿಕವಾಗಿದೆ. ವಿದ್ಯಾಭ್ಯಾಸ ಪ್ರಾರಂಭವಾದ ಮೇಲೆ ಮಕ್ಕಳು ಮೊದಲು ಸ್ವರಾಕ್ಷರಗಳ ಉಚ್ಚಾರ ಕಲಿಯುವುದರಿಂದ ಹಾಗು ಅವುಗಳ ಉಚ್ಚಾರ ಸರಳ- ಸುಲಭವಾಗಿರುವುದರಿಂದ, ಕನ್ನಡ ಮೊದಲು ಕಲಿಯಲು ಬಹಳ ಅನುಕೂಲಕರ ಹಾಗು ಮಕ್ಕಳ ಕಲಿಕೆಯ ಕ್ರಮಕ್ಕೆ ಪೂರಕ. * ಮಕ್ಕಳು ಕನ್ನಡದಲ್ಲಿ ಮೊದಲು ಸ್ವರಾಕ್ಷಾರಗಳನ್ನು ಕಲಿಯುವುದು ನಂತರ ವ್ಯಂಜನ ತದನಂತರ ಅವರ್ಗೀಯ ವ್ಯಂಜನ, ಹಾಗಾಗಿ ಕಲಿಯುವ ಅಕ್ಷರಗಳ ಈ ಸರಣಿ ಸರಳ ಹಾಗು ಸುಲಭ ಉಚ್ಚಾರಣೆಯಿಂದ ಮೊದಲ್ಗೊಂಡು ಕಷ್ಟ ಉಚ್ಚಾರವಾಗುತ್ತ ಹೋಗುತ್ತದೆ. * ಮೊದಲು ಸುಲಭ ಉಚ್ಚಾರ ಮಾಡಬಹುದಾದ ಸ್ವರಗಳು( ಅ, ಆ, ಇ, ಈ, ಉ, ಊ, ಋ, ೠ, ಎ, ಏ, ಐ, ಒ, ಓ, ಔ, ಅಂ, ಅಃ). ನಂತರ ಕಷ್ಟವಾದಂತಹ 'ಕ' ವರ್ಗ, 'ಚ' ವರ್ಗ, 'ಟ' ವರ್ಗ, 'ತ' ವರ್ಗ, 'ಪ' ವರ್ಗ ನಂತರ ಅವರ್ಗೀಯ ವ್ಯಂಜನ( ಯ, ರ, ಲ, ವ, ಶ, ಸ, ಹ, ಳ) * ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಿದರೆ ಒಂದು ವರ್ಗದ ಅಕ್ಷರಗಳ ಉಚ್ಚಾರದ ಅಂತರ ಬಹಳ ಕಡಿಮೆ ಇದೆ. ಉದಾ: 'ಕ' ಮತ್ತು 'ಖ' ಎರಡು 'ಕ' ವರ್ಗಕ್ಕೆ ಸೇರಿವೆ. ಆದರೆ ಇವುಗಳ ಉಚ್ಚಾರದಲ್ಲಿರುವ ಅಂತರ ಕೇವಲ ಉಸಿರಿಗೆ ಒತ್ತು ಕೊಡುವುದು. * 'ಕ' ವರ್ಗದ ಅಕ್ಷರಗಳು ಉಚ್ಚಾರಣೆಯ ದೃಷ್ಟಿಯಿಂದ 'ಚ' ವರ್ಗಕ್ಕಿಂತ ಸುಲಭವಾಗಿವೆ. * ಙ, ಞ - ಈ ಅಕ್ಷರಗಳ ಉಚ್ಚಾರಣೆ ಕಠಿಣವಾಗಿದೆಯಾದರೂ ಇವು ಮೊದಲು ಕಲಿಯುವ ಪದಗಳಲ್ಲಿ ಬರುವುದಿಲ್ಲ( ಉದಾ: ಅರಸ, ಆಡು, ಇಲಿ, ಈಶ)

ಆದರೆ ಇಂಗ್ಲೀಷ್ ನಲ್ಲಿ ಮೊದಲು ಕಲಿಯುವ ಅಕ್ಷರಗಳ ಬಗ್ಗೆ ಗಮನಿಸೋಣ ಎ, ಬಿ, ಸಿ, ಡಿ, ಇ, ಎಫ್, ಜಿ, ಹೆಚ್, ಐ, ಜೆ, ಕೆ, ಎಲ್, ಎಮ್, ಎನ್, ಒ, ಪಿ, ಕ್ಯು, ಆರ್, ಎಸ್, ಟಿ, ಯು, ವಿ, ಡಬ್ಲು, ಎಕ್ಸ್, ವೈ, ಜೆಡ್.

ಈ ಅಕ್ಷರಗಳ ಸರಣಿಯಲ್ಲಿ ಬರುವ ಅಕ್ಶರಗಳ ಉಚ್ಚಾರಣೆ ಒಂದಕ್ಕಿಂತ ಒಂದು ಭಿನ್ನವಾಗಿವೆ. ಉದಾ: ಬಿ ಮತ್ತು ಸಿ ಅಕ್ಕ-ಪಕ್ಕದ ಪದಗಳು ಮತ್ತು ಇಂಗ್ಲೀಷ್ ನಲ್ಲಿ ಕಲಿಯುವ ೨ ಮತ್ತು ೩ ನೇ ಅಕ್ಷರ , 'ಬಿ' ಯನ್ನು ಉಚ್ಚರಿಸಲು ತುಟಿಗಳನ್ನು ಉಪಯೋಗಿಸಬೇಕು ಆದರೆ 'ಸಿ' ಯನ್ನು ಉಚ್ಚರಿಸಲು ನಾಲಿಗೆಯನ್ನು, ಆದರೆ ಕನ್ನಡದಲ್ಲಿರುವ ೨ ಮತ್ತು ೩ನೇ ಅಕ್ಷರಗಳು ಆ, ಇ ಇವೆರಡು ಗಂಟಲಿಂದಲೆ(ಅಥವಾ ಧ್ವನಿಪೆಟ್ಟಿಗೆ) ಉಚ್ಚಾರವಾಗುವ ಅಕ್ಶರಗಳು. ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಗಂಟಲಿನಿಂದ ಉಚ್ಚರಿಸುವ ಅಕ್ಷರಗಳನ್ನು ಮೊದಲು ಮತ್ತು ವೇಗವಾಗಿ ಕಲಿಯುತ್ತಾರೆ. ಮಕ್ಕಳು ನಾಲಿಗೆ ಅಥವಾ ತುಟಿಗಳಿಂದ ಬರುವ ಅಕ್ಷರಗಳನ್ನು( ಉದಾ: ಚ, ರ, ಶ) ನಿಧಾನವಾಗಿ ಕಲಿಯುತ್ತಾರೆ, ಹೀಗಾಗಿ ಇಂಗ್ಲೀಷ ಅಕ್ಷರಗಳ ಸರಣಿ ಮಕ್ಕಳ ಕಲಿಕೆಯ ದೃಷ್ಟಿಯಿಂದ ಸ್ವಾಭಾವಿಕ ಮತ್ತು ಪೂರಕವಾಗಿಲ್ಲ.

ಕನ್ನಡದಲ್ಲಿ ಕಲಿಕಾ ಕ್ರಮ ಹೀಗಿದೆ :-೧) ಅಕ್ಷರಮಾಲೆಗಳ ಉಚ್ಚಾರ ಮತ್ತು ಬರವಣಿಗೆ೨) ಕಾಗುಣಿತ ಉಚ್ಚಾರ ಮತ್ತು ಬರವಣಿಗೆ೩) ಅಕ್ಷರಗಳ ಜೋಡಣೆ ಅಥವ ಪದಗಳ ಉಚ್ಚಾರ ಮತ್ತು ಬರವಣಿಗೆ

ಇಂಗ್ಲೀಷ ಕಲಿಕಾ ಕ್ರಮ ಹೀಗಿದೆ : -೧) ಅಕ್ಷರಮಾಲೆಗಳ ಉಚ್ಚಾರ ಮತ್ತು ಬರವಣಿಗೆ೨) ಅಕ್ಷರಗಳ ಜೋಡಣೆ ಅಥವ ಪದಗಳ ಉಚ್ಚಾರ ಮತ್ತು ಬರವಣಿಗೆ

ಇಲ್ಲಿ ನಾವು ಗಮನಿಸಬೇಕಾದುದೇನೆಂದರೆ ಇಂಗ್ಲೀಷಿನಲ್ಲಿ "ಕಾಗುಣಿತ"ವೆಂಬ ಕಲಿಕಾ ಕ್ರಮವೇ ಇಲ್ಲ. ಇದು ಇಂಗ್ಲೀಷ ಕಲಿಕೆಯ ಕ್ರಮದಲ್ಲಿರುವ ಮುಖ್ಯವಾದ ಋಣಾತ್ಮಕ ಅಂಶ. ಪದಗಳ ಜೋಡಣೆ ಗಮನಿಸಿದರೆ ಸಿ ಯು ಟಿ -> ಕಟ್ ಆಗುತ್ತದೆ. ಪಿ ಯು ಟಿ -> ಪುಟ್ ಆಗುತ್ತದೆ. ಹಾಗಾಗಿ ಪದಗಳ ಜೋಡಣೆಯಲ್ಲಿ ಯಾವುದೆ (ಕಾಗುಣಿತದ) ನಿಯಮಗಳ ಪಾಲನೆಯಿಲ್ಲ ಅಂದರೆ ಯಾವುದೆ ವೈಙ್ನಾನಿಕವಾದ ವ್ಯವಸ್ಥೆಯಿಲ್ಲ. ಆದ್ದರಿಂದ ಇಂಗ್ಲೀಷ ಚಿಕ್ಕ ಮಕ್ಕಳ ಕಲಿಕೆಗೆ ಯೋಗ್ಯವಾದ ಭಾಷೆಯಾಗಿಲ್ಲ. ಕನ್ನಡ ತಕ್ಕಮಟ್ಟಿಗೆ ಕಲಿತ ನಂತರ ಇಂಗ್ಲೀಷ್ ಕಲಿಯುವುದು ಬಹಳ ಸೂಕ್ತವಾಗಿದೆ.

ನನ್ನ ವೈಯಕ್ತಿಕ ಬ್ಲಾಗ್ ಗಳಿಗೆ ಈ ಲಿಂಕನ್ನು ಸಂದರ್ಶಿಸಿ : http://ybhava.blogspot.com/

~.~
  • ವೈಭವ ರವರ ಬ್ಲಾಗ್
  • Login or register to post comments
  • 504 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಲುವ ಕನ್ನಡ ಕಸ್ತೂರಿ
  • MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ .....
  • ಹುಟ್ಟು-ಸಾವು.
  • ಕವನ *ಪ್ರಿಯಗೆಳತಿಗೆ*
  • ಒಂಥರಾ ಪ್ರೀತಿ...
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator