ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಶ್ಯಾಮ ಕಶ್ಯಪ ರವರ ಬ್ಲಾಗ್

ಶ್ಯಾಮ ಕಶ್ಯಪ

ಸಾವಿರಾರು ಬ್ಲಾಗುಗಳ ನಡುವೆ ಮತ್ತೊಂದು 'different' ಬ್ಲಾಗ್.

ಪ್ರಭಾವಗಳು

March 5, 2006 - 2:37am — ಶ್ಯಾಮ ಕಶ್ಯಪ

ನಮ್ಮ ಕಾಲವನ್ನು (ಮತ್ತು ಅದರ ಸುತ್ತುಮುತ್ತ) ಬಿಟ್ಟು ಇತರ ಭೂತ ಭವಿಶ್ಯದ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸಲು ಎಷ್ಟು ಕಷ್ಟ ಅಲ್ವೇ.. ಹಿಂದಿನ ಕಾಲದ ಬಗ್ಗೆ ಈಗ ಪ್ರಚಲಿತದಲ್ಲಿರುವ ಯೋಚನಾಲಹರಿಗಳಿಗಿಂತ ಭಿನ್ನವಾಗಿ ಯೋಚಿಸಲು ಕಷ್ಟವೇ. ಆ ದಿನಗಳ ಬಗ್ಗೆ ಯಾವುದೇ ತರಹದ ನಿಖರ ಮಾಹಿತಿಗಳಿರದೇ ಇರುವುವೇ ಇದಕ್ಕೆ ಕಾರಣವಿರಬಹುದು.

ಈಗ, ಕನ್ನಡದಲ್ಲಿ ತರೀಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು ಹಾಡು ನೋಡಿ, ಅಥವ ರಾಜ್ ಕುಮಾರರ ಆಂಗ್ಲ ಹಾಡಿದೆಯಲ್ಲ, (if you come today, its too early, if you come tommorrow, its too late Smiling ) ಅದರಲ್ಲಿ ಆಗಿನ ಕಾಲದ ರಾಕ್ ಅಂಡ್ ರೋಲ್ ಪ್ರಭಾವಗಳಿರುವುದು ಸ್ಪಷ್ಟವಾಗಿದೆ. ತೊಂಬತ್ತರ ದಶಕದ ಕನ್ನಡ/ಹಿಂದಿಯ ಜನಪ್ರಿಯ ಹಾಡುಗಳಲ್ಲಿ ಆಗಿನ ಕಾಲದ ಪಾಶ್ಚಾತ್ಯ ಸಂಗೀತದ ಪ್ರಭಾವಗಳು ಎದ್ದು ಕಾಣುತ್ತವೆ. ಹಾಗೆಯೇ ಇಂದಿನ ಪಾಶ್ಚಾತ್ಯ ಸಂಗೀತದಲ್ಲಿ (ಮುಖ್ಯವಾಗಿ hip hop) oriental ಮತ್ತು ಭಾರತೀಯ ಸಂಗೀತದ ಪ್ರಭಾವಗಳು ಅಲ್ಲಿ ಇಲ್ಲಿ ನೋಡುತ್ತಿರುತ್ತೇವೆ. ಆದರೆ ಇದೇ ಯೋಚನಾಸರಣಿಯನ್ನು ಹತ್ತೊಂಬತ್ತನೆಯ ಶತಮಾನದ ಶಾಸ್ತ್ರೀಯ ಸಂಗೀತಕ್ಕೆ ಅಂದಿನ ಕಾಲದ jazz ಮತ್ತು westren classic ಸಂಗೀತಕ್ಕೆ ವಿಸ್ತರಿಸಿದರೆ, ಇದೇ ತೀಯರಿಯ ಕಾರಣಗೆರೆಗಳು ಮಂದವಾಗುತ್ತವೆ.

ಇನ್ನೂ ಹಿಂದಕ್ಕೆ ಹೋಗೋಣ. ದ್ವೈತದ ದೇವ-ದಾಸ ಸಂಬಂಧ ಆಗಿನ ಕಾಲದಲ್ಲಿ ಹೊಸದಾಗಿ ಬಂದ ಕ್ರಿಶ್ಚಿಯನ್/ಮುಸ್ಲಿಮ್ ಮತಗಳ ಪ್ರಭಾವವೇಕಾಗಿರಬಾರದು.. ನಾವು ಈಗಿನ ಕಾಲದಲ್ಲಿ ರಿಕಿ ಮಾರ್ಟಿನ್, ಬ್ಯಾಕ್ ಸ್ಟ್ರೀಟ್ ಬಾಯ್ಸ್ ಗಳಂತಹ ಸಂಗೀತಕಾರರನ್ನು ಹೇಗೆ fashionable ಅಂತ ಪರಿಗಣಿಸುತ್ತೇವೋ ಹಾಗೆಯೇ ಆಗಿನ ಕಾಲಕ್ಕೆ ಪಾದ್ರಿಗಳು ಸಂತರೂ ಆಗಿರಬಹುದಲ್ಲವೇ... (ಯಾಕೆ ಅಂದ್ರೆ ಇವರುಗಳು ಹೊಸ ಬದಲಾವಣೆಗಳನ್ನು ನಮ್ಮ ದೇಶಕ್ಕೆ ಇದೇ ತರಹ ಅಮದು ಮಾಡಿದವರು ತಾನೆ) ಅಂದರೆ, ಆಗಿನ ಕಾಲದ ನಮ್ಮ ದಾಸ ಪರಂಪರೆ, ಭಕ್ತಿ ಪಂಥ ಇವುಗಳು western imitations ಆಗಿರಬಹುದೇ? imitation ಅಲ್ಲದಿದ್ದರೂ ಪ್ರಭಾವಗಳಾದರೂ ಇದ್ದೀತು ಅಲ್ಲವೇ.. ನಮ್ಮ ದಾಸಪಂಥದ ಪ್ರಮುಖ ಹೆಸರುಗಳು ಆಧ್ಯಾತ್ಮಿಕ ಗುರುಗಳಲ್ಲದೇ ಜನಪ್ರಿಯ ಮಾಧ್ಯಮದಲ್ಲಿಯೂ ಬಹಳ ಹೆಸರು ಮಾಡಿದ್ದಾರು, ಇಂದಿನ ಪಾಶ್ಚಾತ್ಯ ಪ್ರಭಾವಿತ ಸಂಗೀತಗಾರರಂತೆ.. ಇದು ನಿಜವೋ ಸುಳ್ಳೋ?

ಪಾಶ್ಚಾತ್ಯಪ್ರಭಾವಿತ ಸಂಗೀತಗಾರರ ವಿರುದ್ಧ ಧೋರಣೆಯಂತೂ ನಮ್ಮಲ್ಲಿದ್ದೇ ಇದೆ. ಅಂದಿನ ಕಾಲದ ದಾಸಪ್ರಮುಖರಿಗೊದಗಿದ ತೊಂದರೆಗಳೂ ಇದೇ ತರಹದ್ದಾಗಿರಬಹುದಲ್ಲವೇ? ಇಂದು ದಾಸ್ಯಪಂಥವನ್ನು ಸಮಾಜದಲ್ಲಿ ಉನ್ನತಸ್ಥಾನ ಕೊಟ್ಟಮೇಲೆ, ಅವರಿಗೊದಗಿದ ತೊಂದರೆಗಳೆಂಥವು ಎಂಬುದನ್ನು ನಾವು ವಿಶ್ಲೇಷಿಸುತ್ತೇವೆ. ಆದರೆ ದಾಸ್ಯಪಂಥದ ಬೆಳವಣಿಗೆ ಆರೋಗ್ಯಕರವೋ ಅಲ್ಲವೋ ಎಂಬುದರಲ್ಲಿಯೆ ಭೇದ ಉಂಟಾದರೆ ಅವರಿಗೊದಗಿದ ತೊಂದರೆಗಳು ಕೇವಲ ಅಂದಿನ ಸಮಾಜದ ಕ್ಷುದ್ರ ಅಂಶಗಳಾಗದೆ, ಬದಲಾಗುತ್ತಿರುವ ಸಮಾಜವನ್ನು ಉಳಿಸಿಕೊಳ್ಳಲು ಮಾಡಲ್ಪಟ್ಟ ಪ್ರಯತ್ನಗಳು ಅಂತಲೂ ಕರೆಯಬಹುದೇ?

~.~
  • ಶ್ಯಾಮ ಕಶ್ಯಪ ರವರ ಬ್ಲಾಗ್
  • Login or register to post comments
  • 1012 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 5, 2006 - 5:56am — tvsrinivas41

ದಾಸಪಂಥ

tvsrinivas41's picture

ನಿಮ್ಮ ಚಿಂತನೆಗಳು ಇನ್ನೂ ಮುಂದುವರೆಯಲಿ. ದಾಸರು, ಸಂತರು ಆ ಕಾಲಕ್ಕೆ ಸಮಾಜಕ್ಕೆ ಒಳಿತಾಗುವಂತಹ ಚಿಂತನೆಗಳನ್ನೇ ಹಾಡುಗಳ ರೂಪದಲ್ಲಿ ಹೇಳಿದರು. ತಕ್ಷಣದಲ್ಲಿ ಯಾರೂ ಗ್ರಹಿಸಲಿಲ್ಲ. ಅವರ ಕಾಲ ಮುಗಿಯುವ ವೇಳೆಗೆ ಆ ಪದಗಳ ಅರ್ಥ ಅರಿವಾಗತೊಡಗಿತು. ಇಂದೂ ಹಾಗೆಯೇ? ಒಳ್ಳೆಯ ಮಾತುಗಳು ತಕ್ಷಣ ಯಾರಿಗೂ ಅರಿವಾಗುವುದಿಲ್ಲ.
ಶರೀಫ ಸಾಹೇಬರ ಈ ಪದಗಳನ್ನು ನೋಡಿ,

ಸೋರುತಿಹುದು ಮನೆಯ ಮಾಳಿಗೀ - ಹುಡುಕಿದಷ್ಟೂ ಅರ್ಥಗಳು ಸಿಗುವ ಸುಲಭ ಪದಗಳು.

ತುಕಾರಾಮ ವಿರಚಿತ ಈ ಹಾಡು ಕೇಳಿದ್ದೀರಾ?
ಪತಿವ್ರತೆ ಕುರುಡಳು ಇತರರ ಅಂದಕೆ
ಪತಿವ್ರತೆ ಕಿವುಡಳು ಇತರರ ಸ್ತುತಿಗೆ

ನಿಮ್ಮ ಚಿಂತನಾ ಸರಣಿಯನ್ನು ಮುಂದುವರೆಸಿ - ಬಹಳ ಚೆನ್ನಾಗಿದೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2006 - 4:39am — ಶ್ಯಾಮ ಕಶ್ಯಪ

ಕ್ಷಮಿಸಿ

ಶ್ಯಾಮ ಕಶ್ಯಪ's picture

ಕ್ಷಮಿಸಿ ಶ್ರೀನಿವಾಸರೆ,
ನನ್ನ ಬ್ಲಾಗ್ ಪುಟದಲ್ಲಿ ಹೇಳಿದ್ದನ್ನೇ ಇಲ್ಲೂ ಹೇಳುತ್ತಿದ್ದೇನೆ. (ಈ duplication ವಿಚಾರವಾಗಿ ಏನಾದರೂ ಮಾಡಲೇಬೇಕು Smiling )

ತುಕಾರಮರ ಪದಗಳು ಅರ್ಥಗರ್ಭಿತವಾಗಿವೆ. ಆದರೆ ನನಗೆ ಇದರಿಂದ ಹೆದರಿಕೆಯೂ ಆಗುತ್ತದೆ. ಏಕೆಂದರೆ ಇಂದಿನ ನಮ್ಮ ತತ್ವಗಳು, ಜೀವನಶೈಲಿ,ಯೋಚನಾವಿಧಿ ಇವ್ಯಾವುವು ಸುಸ್ಥಿರ (sustainable)ಬೆಳವಣಿಗೆಗೆ ಸೂಕ್ತವಲ್ಲ ಎಂದೇ ನನ್ನ ಅನಿಸಿಕೆ. ಆದರೆ ಚರಿತ್ರೆ ಇದಕ್ಕೆ ಬೇರೆಯೇ ವಿಶ್ಲೇಷಣೆ ಕೊಟ್ಟಿದೆ. ನಾವು ಈಗ ಯಾವುದರ ವಿರುದ್ಧ ಹೋರಾಡುತ್ತೇವೋ ಅದೇ ಮುಂದೆ ಸೂಕ್ತವಾದದ್ದು, ಕ್ರಾಂತಿಕಾರಿ ಬೆಳವಣಿಗೆಯೆಂದು ಕರೆಯಲ್ಪಟ್ಟಿದೆ. ಹಾಗಾದ್ರೆ,ಇಂದಿನ ಕಾಮೋದ್ವೇಗದ ಬದುಕು ಚರಿತ್ರೆಯ ಪುಟಗಳಲ್ಲಿ "ಸರಿಯಾದದ್ದು, ಒಳ್ಳೆಯ ಬೆಳವಣಿಗೆ"ಗಳೆಂದು ಬರೆಯಲ್ಪಡುತ್ತದೆಯೇ ?
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2006 - 8:35am — sinchanabhat

ಅನಿಸಿತು

sinchanabhat's picture

ನಿಮಗನಿಸಿರುವಂತೇ ನನಗೂ ಪ್ರಭಾವಗಳು ಅಲ್ಲಿಂದ ಇಲ್ಲಿಯವರೆಗೂ ಇದೆ ಅನಿಸಿತು.ಜ್ಞಾನ ಎಲ್ಲಡೆಯಿಂದ ಹರಿದು ಬರ ಬೇಕು,ಅದು ನಮ್ಮತನವನ್ನು ಬೆಳೆಸುವಂತಿರಬೇಕು.ಅದರ ಪ್ರಭಾವದಲಿ ನಾವು ಕಳೆದು ಹೋಗಬಾರದು.ಪಾಶ್ಚಾತ್ಯ ಸಂಸ್ಕ್ರುತಿ ಅಂಧಾನುಕರಣೆ ಯಾಗಿರುವಂತೆ,ನಾವು ಪಾಶ್ಚಾತ್ಯ ಸಂಗೀತದೆಡೆಗೂ ಪೂರ್ತಿಯಾಗಿ ವಾಲಿದರೆ ತಿಳಿಯಾದ ಬಾವ ಮರೆಯಾಗುತ್ತದೆ.ಪ್ರಭಾವಕ್ಕೊಳಗಾಗುವುದಕ್ಕಿಂತ ನಮ್ಮನ್ನು ನಾವು ತೆರೆದುಕೊಳ್ಳುವುದು ಒಳ್ಳೆಯದು.ದಾಸರೂ ಪಾಶ್ಚಾತ್ಯ ಪ್ರಭಾವಕ್ಕೇ ಒಳಗಾಗಿದ್ದರು ಎನ್ನಲಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2006 - 10:13pm — ಶ್ಯಾಮ ಕಶ್ಯಪ

ಸಮಾಜ ಹೇಗೆ

ಶ್ಯಾಮ ಕಶ್ಯಪ's picture

ಸಮಾಜ ಹೇಗೆ ವಿಕಾಸ ಹೊಂದುತ್ತದೆ, ಹೇಗೆ ವಿಕಾಸ ಹೊಂದಿತು ಎಂಬುದನ್ನು ವಿವರಿಸುವುದು ಕಷ್ಟವೇ.. ಹಾಗೆಯೇ ಇಂದಿನ ಅಂಧಾನುಕರಣೆ ನಾಳಿನ ಆದರಕ್ಕೆ ಪಾತ್ರವಾಗಬಹುದಲ್ಲವೇ.. ಹೀಗಾಗಲಿ/ಹೀಗಾಗಿರಬಹುದು ಎಂದು ನಾವು ಆಶಿಸಬಹುದು/ನಂಬಬಹುದು ಅಷ್ಟೆ. ನಮ್ಮ ಕೈಲೇನೂ ಇಲ್ಲ ಅಲ್ವ

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭರತೇಶ ವೈಭವದಲ್ಲಿ ಬೊಂಬೆಯಾಟ - ಕಲ್ಪು ೫
  • ನಾವೇಕೆ ಒಂದಾಗಬಾರದು
  • ಚರ್ಚಿಸಲೂ ನಮಗೆ ಪುರುಸೊತ್ತಿಲ್ಲ!
  • ಸಾಹಿತಿಗಳ ವೈಚಾರಿಕ ಜಗಳ
  • ಯೇಸುಕ್ರಿಸ್ತ ಎಂಬ ಉಚ್ಚಾರಣೆ
Syndicate content

ಲೇಖಕರು

ಶ್ಯಾಮ ಕಶ್ಯಪ's picture

ಪೂರ್ಣ ಹೆಸರು
ಶ್ಯಾಮ ಕಶ್ಯಪ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಆಟೋದ ಆಟೋಪ
  • ನನ್ನಜ್ಜನ ಬೆಚ್ಚಗಿನ ನೆನಪುಗಳು
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಗ್ಗೆ ಅರಹುತ್ತ
  • ಕನ್ನಡದ ನುಡಿದಾಟಿ ಎಂತದು?
  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 32 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator