ಒಂದಿಷ್ಟು ಒಣ ತರಲೆ
1. ನೀನು ಬಸ್ಮೇಲೆ ಹತ್ತಿದ್ರೂ ಬಸ್ಸೇ ನಿನ್ನ ಮೇಲೆ ಹತ್ತಿದ್ರೂ ಟಿಕೇಟು ತೊಗೋಳೋನು ಮಾತ್ರ ನೀನೇ
2. ಟಿಕೇಟು ತೊಗೊಂಡು ಒಳಗ್ಹೋಗೋದು ಸಿನೆಮಾ ಥಿಯೇಟರು ಒಳಗ್ಹೋಗಿ ಟಿಕೇಟು ತೊಗೊಳೋದು ಆಪರೇಷನ್ ಥಿಯೇಟರು
3. ಸೆಲ್ ಫೋನಲ್ಲಿ ಬ್ಯಾಲೆನ್ಸಿಲ್ಲ ಅಂದ್ರೆ ಕಾಲ್ ಮಾಡಕ್ಕಾಗಲ್ಲ ಮನುಷ್ಯಂಗೆ ಕಾಲ್ ಇಲ್ಲ ಅಂದ್ರೆ ಬ್ಯಾಲೆನ್ಸ್ ಮಾಡಕ್ಕಾಗಲ್ಲ
4. ಟ್ರೇನು ಎಷ್ಟೇ ಜೋರಾಗಿ ಹೋದ್ರೂ ಕೊನೆ ಬೋಗಿ ಕೊನೇಗೇ ಬರೋದು
5. ಬಸ್ಸು ಹೋದ್ರೂ ಬಸ್ ಸ್ಟ್ಯಾಂಡ್ ಇದ್ದಲ್ಲೇ ಇರುತ್ತೆ ಆದ್ರೆ ಸೈಕಲ್ ಹೋದ್ರೆ ಸೈಕಲ್ ಸ್ಟ್ಯಾಂಡ್ ಜೊತೆಗೆ ಹೋಗತ್ತೆ
6. ನಾಯಿಗೆ ನಾಲ್ಕು ಕಾಲಿದ್ರೂ ಕಾಲ್ಮೇಲ್ಕಾಲ್ಹಾಕಿ ಕೂರಕ್ಕಾಗತ್ತಾ?
7. ಸೊಳ್ಳೆ ಕಚ್ಚಿದ್ರೆ ಆನೆಕಾಲು ಬರುತ್ತೆ ಆನೆ ಕಚ್ಚಿದ್ರೆ ಸೊಳ್ಳೆ ಕಾಲು ಬರುತ್ತಾ?
8. ಹತ್ತು ಇರುವೆ ಸೇರಿ ಒಂದು ಆನೇನ ಕಚ್ಬೌದು ಹತ್ತು ಆನೆ ಸೇರಿ ಒಂದು ಇರುವೇಗೆ ಕಚ್ಬೌದಾ?
9. ಕ್ರೀಮ್ ಬಿಸ್ಕಿಟ್ನಲ್ಲಿ ಕ್ರೀಮಿರುತ್ತೆ ಆದ್ರೆ ಬೆಣ್ಣೆ ಬಿಸ್ಕಿಟ್ನಲ್ಲಿ ಬೆಣ್ಣೆ ಇರುತ್ತಾ?
10. ಹಲ್ಲು ಪುಡಿ ಅಂದ್ರೆ ಪುಡಿಪುಡಿಯಾದ ಹಲ್ಲಾ?
(ನಾಡಿಗರೇ, ಇಂತಹ ತರ್ಲೆ ಎಂಟ್ರಿ ಮಾಡುವಾಗ ಕೊಡೋದಕ್ಕೆ ಸೂಕ್ತ ವರ್ಗ - Category - ಇಲ್ವಲ್ಲ... ಲಲಿತ ಪ್ರಬಂಧ/ಹಾಸ್ಯ ಅಂತೇನೋ ಇದೆ. ಆದ್ರೆ ಅದು ತರ್ಲೆನೇ ಆಗಿರ್ಬೇಕು ಅಂತೇನೂ ಇಲ್ವಲ್ಲ)

- ಪ್ರಶಾಂತ.ಪಂಡಿತ ರವರ ಬ್ಲಾಗ್
- Login or register to post comments
- 945 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಹಾಸ್ಯ
ಇದು ತರಲೆ ಅಂತ ಅನ್ನಿಸಿದ್ರೂ - ಹಾಸ್ಯ ಇರುವುದರಿಂದ ಹಾಸ್ಯ ಲೇಖನದಲ್ಲಿ ಸೇರಿಸಬಹುದು ಎಂಬುದು ನನ್ನ ಅನಿಸಿಕೆ.
ಇಂತಹದ್ದೇ ಕೆಲವನ್ನು ಡಾ| ಪವನಜ ಅವರು ಒಮ್ಮೆ ಬರೆದಿದ್ದರು.
ಬಸ್ಸು ಹರಿದು ನಾಲ್ಕು ಜನರ ಸಾವು - ಬಸ್ಸು ಹರಿಯಲು ಅದೇನು ಬಟ್ಟೆಯೇ?
ಅಂವ ಇಳೀಲಿಕ್ಕ್ ಹತ್ಯಾನ - ಅಲ್ಲಲೋ ಮಾರಾಯ ಇಳೀಲಿಕ್ಕೆ ಯಾಕ್ ಹತ್ಯಪಾ ಮತ್ತಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
Re: ಹಾಸ್ಯ
ಬಸ್ಸು ಹರಿದು ನಾಲ್ಕು ಜನರ ಸಾವು - ಬಸ್ಸು ಹರಿಯಲು ಅದೇನು ಬಟ್ಟೆಯೇ?
"ಸಾರಿಗೆ ಬಸ್ಸು ಬಿದ್ದು ಐದು ಸಾವು" ಕೂಡ ಅಂತಹದೇ ಒಂದು ಮೋಜಿನ ತಲೆಬರಹ. ಸಾರಿನ ಕೊಪ್ಪರಿಗೆಯಲ್ಲಿ ಬಸ್ಸು ಬೀಳುವುದು, ಹೈದರಾಬಾದ್‍ನ ಹುಸೇನ್‍ಸಾಗರದಲ್ಲಿ ಬಸ್ಸು ಬೀಳುವುದಕ್ಕಿಂತಲೂ ಘೋರವಾದ ಸಂಗತಿ!
"ಸಾರಿಗೆ ಬಸ್ಸು ಬಿದ್ದು ಟೊಮೆಟೊ ಚಟ್ನಿ"!
- ಶ್ರೀವತ್ಸ ಜೋಶಿ
ಸಾರಿಗೆ ಮತ್ತು ಸಾಂಬಾರಿಗೆ
ಕರ್ನಾಟಕ ಸಾರಿಗೆ ಎಂದು ಕರಾರಸಾಸಂಗಳ ಬಸ್ಸಿನಲ್ಲಿ ಬರೆದುದನ್ನು ಓದಿದಾಗೆಲ್ಲ ನನ್ನ ಮನಸ್ಸಿಗೆ ಹೊಳೆಯುವದು ಒಂದೇ "ಕರ್ನಾಟಕ ಸಾರಿಗೆ ಆದರೆ ತಮಿಳುನಾಡು ಸಾಂಬಾರಿಗೋ? ಹಾಗೆಯೇ ಕೇರಳ ಅವಿಲಿಗೆ, ಆಂಧ್ರ ಚಟ್ನಿಗೆ, ಮಹಾರಾಷ್ಟ್ರ ಕಿಚಿಡಿಗೆ, ಗುಜರಾತು ಡೋಕ್ಲಕ್ಕೆ, ಪಶ್ಚಿಮ ಬಂಗಾಳ ರಸಗುಲ್ಲಕ್ಕೆ ..."
ಸಿಗೋಣ,
ಪವನಜ
-----------
Vishva Kannada
Think globally, Act locally
ಪವನಜರೇ,
ಪವನಜರೇ,
.
ನಿಮ್ಮ "entry" ಓದಿದ ಮೇಲೆ ಹೊಟ್ಟೆ ಚುರುಗುಟ್ಟ್ತಾ ಇದೆ.
cafetariaಗೆ ಓಡುತಿದ್ದೇನೆ
Re: ಸಾರಿಗೆ ಮತ್ತು ಸಾಂಬಾರಿಗೆ
ಸಿಗೋಣ,
ಪವನಜ
-----------
ನಿಮ್ಮ "entry" ಓದಿದ ಮೇಲೆ ಹೊಟ್ಟೆ ಚುರುಗುಟ್ಟ್ತಾ ಇದೆ.
cafetariaಗೆ ಓಡುತಿದ್ದೇನೆ
.
ಹೌದು, ಆಗ "ಮಧ್ಯಪ್ರದೇಶದಲ್ಲಿ ಕೋಲಾಹಲ"ವಾಗುವುದು ಸಹಜವೇ!
ರಾಷ್ಟ್ರೀಯ ಭಾವೈಕ್ಯವನ್ನು ಇನ್ನೂ ಚೆನ್ನಾಗಿ ಪ್ರತಿಬಿಂಬಿಸಲು ಕೇಂದ್ರಾಡಳಿತ ಪ್ರದೇಶಗಳನ್ನೂ ಸೇರಿಸುವುದಾದರೆ,
ಸಾರು ಸಾಂಬಾರು - ಅಂಡಮಾನ್ ನಿಕೋಬಾರು!
- ಶ್ರೀವತ್ಸ ಜೋಶಿ