ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಅಲ್ಲಮನ ವಚನವನ್ನು ಬಿಡಿಸಿ

April 6, 2007 - 5:50am — ವೈಭವ

ಈ ವಚನ ಅರ್ಥ ಮಾಡಿಕೊಳ್ಳಲು ತಿಪ್ಪರ ಲಾಗ ಹಾಕ್ತಾ ಇದ್ದೀನಿ. ಆದರೆ ಇನ್ನು ಸರಿಯಾಗಿ ಅರ್ಥ ಆಗಿಲ್ಲ. ದಯವಿಟ್ಟು ಬಲ್ಲವರು ದನಿಗೂಡಿಸಿ

ವಚನವನ್ನು ವಿಚಾರ ಮಂಟಪದಿಂದ ಪಡೆದೆ :-

" ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆ

ಅಚ್ಚಿ(ಚ್ಚು?)ಗ ವಾಯಿತ್ತವ್ವಾ, ನಮ್ಮ ನಲ್ಲಂಗೆ

ಕಿಚ್ಚನೆ ಹೊತ್ತುಕೊಂಡು

ಅಚ್ಚನೆಯಾಡಲು

ಅಚ್ಚುಗವಾಯಿತ್ತವ್ವಾ..ನಮ್ಮ ನಲ್ಲಂಗೆ!

ಅಚ್ಚನೆಯ ಗಳಿಹವನಿಳುಹಿದರೆ

ಬಳಿಕ ನಿಶ್ಚಿಂತವಾಯಿತ್ತು, ಗುಹೇಶ್ವರ !!"

ಇಷ್ಟೆ ಅರ್ಥ ಆಗಿದ್ದು ನನಗೆ:-

ನಿಚ್ಚ - ನಿಜ (?)

ಅಚ್ಚುಗ - ಮೋಹ

ಕಿಚ್ಚು - ಬೆಂಕಿ

ಬೆಂಕಿ ಹೊತ್ತುಕೊಂಡು ಅಚ್ಚನೆ(?) ಆಡಲು ಅಚ್ಚುಗ(ಮೋಹ) ಯಾಕೆ ಆಗುತ್ತೆ? Sad

ಯಾಕೆ ನಿಶ್ಚಿಂತೆಯಾಯ್ತು ? Sad

~.~
  • ವೈಭವ ರವರ ಬ್ಲಾಗ್
  • Login or register to post comments
  • 615 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 6, 2007 - 6:08pm — olnswamy

Re: ಅಲ್ಲಮನ ವಚನವನ್ನು ಬಿಡಿಸಿ

olnswamy's picture

ಅಲ್ಲಮನ ವಚನವನ್ನು ಮತ್ತೆ ಚಿಂತಿಸಲು ಅವಕಾಶಮಾಡಿಕೊಟ್ಟದ್ದಕ್ಕೆ ನಿಮಗೆ ಕೃತಜ್ಞ.
ಸ್ವಾರ್ಥದ ಲಾಭದ ಕಾಮನೆಯೂ ಇಲ್ಲದೆ, ಭಯವೂ ಇಲ್ಲದೆ ಬದುಕುವ ರೀತಿಯ ಅಚ್ಚರಿಯನ್ನು ಈ ವಚನ ಹೇಳುತ್ತದೆ ಅನ್ನುವುದು ನನ್ನ ತಿಳಿವಳಿಕೆ. ಅದನ್ನು ಸ್ಪಷ್ಟಮಾಡುವುದಕ್ಕೆ ಗಂಡು ಹೆಣ್ಣಿನ ರೂಪಕದ ಬಳಕೆಯಾಗಿದೆ. ದೇವರು ಗಂಡು, ಭಕ್ತ ಹೆಣ್ಣು. ಒತ್ತೆ ಅನ್ನುವ ಮಾತು ವೇಶ್ಯೆಯೊಬ್ಬಳು ತಾನು ಸುಖ ನೀಡಿದ್ದಕ್ಕೆ ವಿಟನಿಂದ ಪಡೆಯುವ ಹಣ ಅನ್ನುವ ಅರ್ಥದಲ್ಲಿ ವಚನಕಾರರು ಅನೇಕ ಕಡೆಗಳಲ್ಲಿ ಬಳಸಿರುವುದುಂಟು. ದೇವರ ಆರಾಧನೆ ಹಾಗೆ ದುಡ್ಡಿನ ಲಾಭಕ್ಕೆ ಮಾಡುವಂಥ ಸಂಬಂಧವಾದರೆ ದೇವರಿಗೆ ಅಚ್ಚರಿಯಾದೀತು. ಎಲ್. ಬಸವಾರಜು ಅವರು ಮುಂದಿನ ಸಾಲುಗಳನ್ನು ತಲೆಯ ಮೇಲೆ ಬೆಂಕಿ ಹೊತ್ತು ಮಾಡುವಂಥ ಭಯಂಕರ ಪೂಜೆ ಎಂದು ವಿವರಿಸುತ್ತಾರೆ. ದೇವರನ್ನು ಅಂಜಿಸಿ ವರ ಪಡೆಯುವಂಥ ಪೂಜೆಯೂ ಸರಿಯಾದುದಲ್ಲ. ಗಳಿಹ ಎಂದರೆ ಸುಳ್ಳು, ವಂಚನೆ. ಮನಸ್ಸಿನಿಂದ ಸುಳ್ಳು ವಂಚನೆಗಳನ್ನು ಇಳಿಸಿಕೊಂಡಾಗ ನಿಶ್ಚಿಂತೆ ಆಗುತ್ತದೆ. ದೇವರನ್ನು ಬೇರೆಯಾವ ಅಪೇಕ್ಷೆಯೂ ಇಲ್ಲದೆ, ಭಯವೂ ಇಲ್ಲದೆ ನಿಶ್ಚಿಂತ ನಿರಾಳ ಮನಸ್ಸಿನಿಂದ ಬಯಸುವುದು ಸರಿಯಾದ ಆಶ್ಚರ್ಯಕರವೂ ಆದ ದಾರಿ.
ಇನ್ನು ಸುಮಾರು ಮುನ್ನೂರು ವರ್ಷಗಳ ಹಿಂದೆ ಇದ್ದ ಕಲ್ಲುಮಠದ ಪ್ರಭುದೇವರು ಕೊನೆಯ ಸಾಲುಗಳಲ್ಲಿ ಬರುವ ಬೆಂಕಿಯನ್ನು ಜ್ಞಾನಾಗ್ನಿ ಎಂದು ವಿವರಿಸಿರುವುದುಂಟು. ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿನ ಬೆಂಕಿಯನ್ನು ಮೈಮನಸ್ಸುಗಳಲ್ಲಿ ಹೊತ್ತು ಕೊಂಡೇ ದೇವರೊಡನೆ ಸಂಬಂಧ ಇಟ್ಟುಕೊಳ್ಳುವುದು ಅನ್ನುವುದು ಅವರ ವಿವರಣೆ. ಅರಿವು ಬೆಂಕಿಯಂತೆಯೇ ಅಲ್ಲವೇ!
ನಿಶ್ಚಿಂತ ಅನ್ನುವ ಮಾತು ನನಗೆ ಬಹಳ ಮುಖ್ಯವಾಗಿ ಕಾಣುತ್ತದೆ. ದೇವರು ಮನುಷ್ಯ ಬಿಡಿ, ನಮ್ಮ ಎಲ್ಲ ಸಂಬಂಧಗಳೂ ನಿಶ್ಚಿಂತ ಸಂಬಂಧಗಳೇ ಆದಾಗ ಅದರಂಥ ಆಶ್ಚರ್ಯ, ಅದರಂಥ ಸುಖ ಯಾವುದು ಇದ್ದೀತು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 7, 2007 - 2:33am — ವೈಭವ

Re: ಅಲ್ಲಮನ ವಚನವನ್ನು ಬಿಡಿಸಿ

ವೈಭವ's picture

ಒಎಲ್ ಎನ್ ಸ್ವಾಮಿಯವರೆ,

ಕಷ್ಟವಾದ ವಚನವನ್ನು ಬಿಡಿಸಿದ್ದೀರ...ತಮಗೆ ನನ್ನಿಗಳು. ನನ್ನನ್ನು ಈ ಪ್ರಶ್ನೆಗಳು ಕಾಡಿದ್ದುಂಟು. ನಾವು ದೇವರನ್ನು ಏಕೆ ಪೂಜಿಸಬೇಕು?.. ನಾವು ದೇವರಲ್ಲಿ ಏಕೆ ಬೇಡ್ಕೊಬೇಕು?...ನಾವು ದೇವರ ಜತೆ ಯಾವ ಸಂಬಂಧ ಇಟ್ಕೊಬೇಕು?...ಇವುಗಳಿಗೆಲ್ಲ ಉತ್ತರ ಸಿಕ್ಕಿತು...

ದಯವಿಟ್ಟು ಅರ್ಥೈಸುವಿಕೆ ಇರುವ ವಚನಗಳ ಪುಸ್ತಕಗಳು ಯಾವುದಾದರೂ ಇದ್ದರೆ ತಿಳಿಸಿ.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 7, 2007 - 8:38am — olnswamy

Re: ಅಲ್ಲಮನ ವಚನವನ್ನು ಬಿಡಿಸಿ: ನೆರವಾಗುವ ಪುಸ್ತಕಗಳು

olnswamy's picture

ವಚನಗಳನ್ನೇ ಗಮನಕೊಟ್ಟು ಮನಸ್ಸಿಗೆ ಇಳಿಯುವಂತೆ ಓದಿಕೊಳ್ಳುವುದೊಂದೇ ದಾರಿ. ನಮ್ಮ ಮನಸ್ಸಿಗೆ ವಚನಗಳ ಓದಿನಿಂದ ಆಗುವ ಅನುಭವವೇ ಮುಖ್ಯ. ಆದರೂ ನಿಮಗೆ ನೆರವಾಗುವಂಥ ಕೆಲವು ಪುಸ್ತಕಗಳು, ಅಲ್ಲಮನನ್ನು ಕುರಿತು, ತಕ್ಷಣಕ್ಕೆ ನೆನಪಿಗೆ ಬಂದವು ಇವು:
೧. ಪ್ರಭುದೇವರ ಷಟ್ಸ್ಥಲದ ವಚನಗಳು, (ಸಹಸ್ಪಂದನ ವ್ಯಾಖ್ಯಾನ ಸಹಿತ), ಡಾ. ಎಲ್. ಬಸವರಾಜು, ಪ್ರಕಟಣೆಯ ವರ್ಷ ೨೦೦೫, ಪ್ರಕಾಶಕರು, ಜೆ.ಎಸ್.ಎಸ್. ಗ್ರಂಥಮಾಲೆ, ಮೈಸೂರು.
೨. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಅಲ್ಲಮನ ಬಗ್ಗೆ ಬಂದಿರುವ ಪ್ರಮುಖ ಲೇಖನಗಳ ಸಂಕಲನ ಹೊರತಂದಿದೆ. ಅದೂ ನೋಡಬಹುದು.
೩. ಇಂದಿನ ಹೆಜ್ಜೆ, ಅಕ್ಷರ ಪ್ರಕಾಶನ, ಇದರಲ್ಲಿ ಅಲ್ಲಮನ ವಿಚಾರಗಳ ಚಿಂತನೆ ಇದೆ.
೩. ವಚನ ಸಾವಿರ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೨ನೆಯ ಶತಮಾನದ ೯೯ ವಚನಕಾರರ ೧೦೬೮ ವಚನಗಳು, ಮತ್ತು ತಕ್ಕಮಟ್ಟಿಗೆ ದೀರ್ಘವಾದ ಪ್ರಸ್ತಾವನೆ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 7, 2007 - 12:28pm — sharathchandra

Re: ಬೆಡಗಿನ ವಚನಗಳಿಗೊಂದು ಪುಸ್ತಕ

sharathchandra's picture
  • ಅಲ್ಲಮನ ಬೆಡಗಿನ ವಚನಗಳಿಗೊಂದು ಅತ್ತ್ಯುತ್ತಮ ಪುಸ್ತಕವಿದೆ.ನೋಡಿ:       ಅಲ್ಲಮಪ್ರಭುದೇವರ  ಟೀಕಿನ ವಚನಗಳು.(ಸಂ)ಡಾ.ಶ್ರೀ ಇಮ್ಮಡಿ ಶಿವಬಸವಸ್ವಾಮಿಗಳು.ಶಿವರಾತ್ರೀಶ್ವರ ಪ್ರಕಾಶನ.ಮಹಿಸೂರು.                               
  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಚನ + ಟಿಪ್ಪಣಿ
  • ದೇವರಿಗೊಂದು ಮನವಿ
  • ಜಾನಪದಶೈಲಿಯ ಗೀತೆ
  • ಆಶಯ ಗೆಳೆಯ/ಗೆಳತಿ ಯರಿಗೆ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶರಣರ ಸಾವನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
  • ಕುಮಾರವ್ಯಾಸ ಭಾರತ
  • ಬನವಾಸಿ ಆಸುಪಾಸಿನ ಕನ್ನಡ
  • ಬಾರೋ ಸಾಧನಕೇರಿಗೆ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 58 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator