ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › ಸಂಗನಗೌಡ ರವರ ಬ್ಲಾಗ್

ಕನ್ನಡ ಬೇಗರಣ ಕಟ್ಟಳೆ ೨ ( 'ಇಸು' ವಿನ ಬಳಕೆಯ ಬಗ್ಗೆ)

September 5, 2006 - 1:25pm — ಸಂಗನಗೌಡ

ಕನ್ನಡದಲ್ಲಿ 'ಇಸು' ವಿನ ಬಳಕೆ ಹೀಗಿದೆ, ನನಗೆ ಇದು ಮರೆತು ಹೋಗಿತ್ತು, ಮಹೇಶ್ ಬೋಗಾದಿ ನೆನಪು ಮಾಡಿದರು.

ಮಾಡು - ನಾನು ಮಾಡುವುದು.

ಮಾಡಿಸು - ಎರಡನೆಯವರು ಮಾಡುವಂತೆ ಮಾಡುವುದು.

ಮಾಡಿಸಿಸು - ಎರಡನೆಯವರು ಮೂರನೆಯವರಿಂದ ಮಾಡಿಸುವಂತೆ ಮಾಡುವುದು.

ಇದರಿಂದ ನಮಗೆ ಮೂರು ಹೆಸರುಪದಳು ಸಿಗುತ್ತವೆ. ಮಾಡುವಿಕೆ,ಮಾಡಿಸುವಿಕೆ,ಮಾಡಿಸಿಸುವಿಕೆ.

ಹಾಗೆಯೇ,

ಕೇಳು - ಮೊದಲ ಪುರುಸ ಕೇಳುವುದು. ಮಾದರಿ: ನಾನು ಗುರುಗಳನ್ನು ಕೇಳಿದೆನು

ಕೇಳಿಸು - ಎರಡನೆಯವರು ಕೇಳುವಂತೆ ಮಾಡುವುದು ;ನಾನು ರವಿಯ ಕಡೆಯಿಂದ ಗುರುಗಳನ್ನು ಕೇಳಿಸಿದೆನು

ಕೇಳಿಸಿಸು - ಎರಡನೆಯವರು ಮೂರನೆಯವರಿಂದ ಕೇಳಿಸುವಂತೆ ಮಾಡುವುದು. ;ನಾನು ರವಿಗೆ ಹೇಳಿ, ರಾಮನ ಕಡೆಯಿಂದ ಗುರುಗಳನ್ನು ಕೇಳಿಸಿಸಿದೆನು.

'ಪ್ರಶ್ನೆ' ಈ ಪದವು ಸಕ್ಕದದ 'ಪ್ರಶ್ನಾ' ದಿಂದ ಬಂದದ್ದು. ಇದಕ್ಕೆ ಇಸು ಸೇರಿಸಿ 'ಪ್ರಶ್ನಿಸು' ಮಾಡಿದ್ದೇವೆ.

ಕೇಳು - ಪ್ರಶ್ನೆ ಮಾಡು - ಪ್ರಶ್ನಿಸು

ಕೇಳಿಸು - ಪ್ರಶ್ನಿಸಿಸು.

ಕೇಳಿಸಿಸು - ?

ಕೇಳು ಎಂಬ ಪದವನ್ನು ಬಿಟ್ಟು ನಾವು 'ಪ್ರಶ್ನಿಸು' ಎಂದು ಬಳಕೆ ಮಾಡುತ್ತಾ ಹೋದರೆ, ಕೇಳಿಸಿಸು ಎಂಬ ಪದ ತನ್ನ ತಿಳಿವನ್ನು ಕಳೆದುಕೊಂಡು ಸಾಯುತ್ತದೆ. ಇದರಿಂದ ಸರಳವಾಗಿ ಹೇಳಬಹುದಾದನ್ನು ಕನ್ನಡದಲ್ಲಿ ಹೇಳಲು ಕಟಿಣವಾಗಿ ತೋರತೊಡಗುತ್ತದೆ.ಹೀಗೆಯೇ ಏಸೋ ಪದಗಳು ಕಳೆದೇ ಹೋಗಿವೆ. ಪದಗಳು ಕಳೆಯತೊಡಗಿದರೆ ನುಡಿಯೂ ಕಳೆಯತೊಡಗಿದಂತೆಯೇ.

ಸಕ್ಕದವು ತೇಟ್ ಈಗ ಇಂಗಲೀಸು ಸೇರಿಕೊಳ್ಳುತ್ತಿರುವಂತೆಯೇ ಆಗ ಬರಹದಲ್ಲಿ ಸೇರಿಕೊಂಡಿರುವುದು ತಿಳಿಯುತ್ತದೆ.

ಅಪ್ಪಿಕೊ - ಆಲಿಂಗನ ಮಾಡು - ಆಲಿಂಗಿಸು - ಹಗ್(hug) ಮಾಡು - ಹಗ್ಗಿಸು?

'ಪ್ರಯತ್ನಿಸು' ಎಂಬುದಕ್ಕಿಂತ 'try ಮಾಡು' ಎಂಬುದೇ ಬೇಗರಣಬದ್ದವಾಗಿದೆ. ಇಲ್ಲವೇ ಕನ್ನಡದಲ್ಲಿಯೇ ಹೇಳಬೇಕೆಂದವರು "ಆಗುತ್ತಾದಾ ನೋಡಬೇಕು' ಇಲ್ಲವೇ 'ಗುದ್ದಾಡಬೇಕು' ಹೀಗೆ ಸರಿಯಾಗಿ ಆಡುತ್ತಾರೆ. ಇನ್ನು ಮೇಲಾದರೂ ಕನ್ನಡದಲ್ಲಿ ಸರಿಯಾಗಿ ಬರೆಯುವ ಮನಸ್ಸು ಬರಹಗಾರರಲ್ಲಿ ಮೂಡೀತೆ? ( ಪೇಪರಿನೋರು, ಕಾದಂಬರಿಕಾರರು, ಬಲಾಗಿಗಳು, ಕತೆಗಾರರು, ಟಿ.ವಿ.ಗಳಲ್ಲಿ ಸುದ್ದಿ ಓದುವವರು, ಮತ್ತು ಸರಿಯಾದ ಕನ್ನಡವನ್ನು ಬಳಕೆಗೆ ತರಬೇಕೆಂಬ ಹಂಬಲ ಇರುವವರು, ಸಕಲ ಕನ್ನಡಿಗರನ್ನೂ,ನನ್ನನ್ನೂ ಸೇರಿಸಿಕೊಂಡು). 

~.~
  • ಸಂಗನಗೌಡ ರವರ ಬ್ಲಾಗ್
  • Login or register to post comments
  • 861 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 5, 2006 - 4:01pm — tksbhat

ಕೆಲವು ಪ್ರಶ್ನೆಗಳು

tksbhat's picture

ಈ ಲೇಖನ ಓದಿದ ಮೇಲೆ ಹುಟ್ಟಿದ ಕೆಲವು ಪ್ರಶ್ನೆಗಳನ್ನು ಇಲ್ಲಿ ಮುಂದಿಟ್ಟಿದ್ದೇನೆ. ಸಂಗನಗೌಡರು ಉತ್ತರಿಸುತ್ತಾರೆ ಎಂಬುದು ನನ್ನ ನಂಬುಗೆ.
1.ಬೇಗರಣ ಎಂಬ ಪದದ ವ್ಯುತ್ಪತ್ತಿ ಅಥವಾ ಅದರ ಮೂಲವನ್ನು ವಿವರಿಸುತ್ತೀರಾ
2.ಮಾಡಿಸಿಸು, ಕೇಳಿಸಿಸು ಎಂಬ ಪ್ರಯೋಗಗಳು ಎಲ್ಲಿವೆ. ಅಂದರೆ ಬರೆಹ/ಆಡು ಮಾತಿನಲ್ಲಿ ಎಲ್ಲಿ ಬಳಕೆಯಲ್ಲಿವೆ. ಇದ್ದರೆ ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಕೊಡಿ.
3. ಕನ್ನಡವನ್ನು ಸರಿಯಾಗಿ ಬರೆಯುವುದು ಅಂದರೇನು?
4. ಇದುವೇ ಸರಿಯಾದ ಕನ್ನಡ ಎಂಬುದನ್ನು ಸಂಸ್ಕೃತ, ಕನ್ನಡ ವ್ಯಾಕರಣ ನಿಯಮಗಳನ್ನು ತಿಳಿಯದ ಆದರೆ ಕನ್ನಡದಲ್ಲಿ ಮಾತನಾಡುತ್ತಾ, ಬರೆಯುತ್ತಾ ಇರುವ ನನ್ನಂಥವರು ತಿಳಿದುಕೊಳ್ಳುವುದು ಹೇಗೆ?
5. ಇದನ್ನೆಲ್ಲಾ ತಿಳಿದುಕೊಳ್ಳದೆ ಬರೆಯುವುದು ಇಲ್ಲವೇ ಮಾತನಾಡುವುದು ತಪ್ಪಾಗುತ್ತದೆಯೇ?
6. ತಪ್ಪು ಎಂದಾದರೆ ಕನ್ನಡವನ್ನು ಸರಿಪಡಿಸಿ ಉಳಿಸುವ ನಿಮ್ಮ ಕೆಲಸ ಕನ್ನಡವನ್ನು ಲ್ಯಾಬೊರೇಟರಿಯಲ್ಲಿ, ಮ್ಯೂಸಿಯಂನಲ್ಲಿ ಉಳಿಸುವ ಪ್ರಯತ್ನವಾಗುವುದಿಲ್ಲವೇ?
7. ಭಾಷೆಯನ್ನು ಶುದ್ಧವಾಗಿ ಉಳಿಸಬೇಕೆಂದು ನೀವು ಮಾಡುತ್ತಿರುವ ಪ್ರಯತ್ನಗಳು ಕೇವಲ ಅಭಿವ್ಯಕ್ತಿಯನ್ನು ಮುಖ್ಯವಾಗಿಟ್ಟುಕೊಂಡು ಭಾಷೆಯನ್ನು ಬಳಸುವವರನ್ನು ಬೆದರಿಸಲಾರದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 5, 2006 - 10:15pm — ಸಂಗನಗೌಡ

ಮರುಮಾತು

ಸಂಗನಗೌಡ's picture

ನೀವು ಬಹಳ ಒಳ್ಳೆಯ ಇಚಾರಗಳನ್ನೇ ಕೇಳಿದ್ದೀರಿ, ಅದಕ್ಕಾಗಿ ನಮನಗಳು. 

Quote:

1.ಬೇಗರಣ ಎಂಬ ಪದದ ವ್ಯುತ್ಪತ್ತಿ ಅಥವಾ ಅದರ ಮೂಲವನ್ನು ವಿವರಿಸುತ್ತೀರಾ

ಇದು 'ವ್ಯಾಕರಣ' ಎಂಬ ಸಕ್ಕದದ ಪದದಿಂದ ಬಂದದ್ದು. ಹೊರಗಿನ ಪದಗಳ ಬರುವಿಕೆಗೆ ನಾನು ಬೇಡವೇ ಬೇಡ ಎಂದು ಹೇಳುವುದಿಲ್ಲ, ಆದರೆ ಅವು ಕನ್ನಡ ಪದಗಳಾಗಿ ಬದಲಾಗದೇ, ಕಗ್ಗಲ್ಲಿನಂತೆ ಹಾಗೆಯೇ ಉಳಿಯುವುದು ಬೇಡ ಎನ್ನುತ್ತೇನೆ. ಹಿಂದೊಮ್ಮೆ ನಾನು 'ಬೆಂದಕಾಳೂರು' bangalore ಆದುದನ್ನು ಒಂದು ಮಾದರಿಯಾಗಿ ನೀಡಿದ್ದೇನೆ. 'ಳ' ಅಕ್ಕರವು ಇಂಗಲೀಸಿನಲ್ಲಿ ಇಲ್ಲದ್ದು, ಇಂಗಲೀಸಿಗೆ ಬೆಂಗಳೂರನ್ನು ತನ್ನ ಪದವಾಗಿಸಲು ಸಹಾಯ ಮಾಡಿತು.

Quote:

2.ಮಾಡಿಸಿಸು, ಕೇಳಿಸಿಸು ಎಂಬ ಪ್ರಯೋಗಗಳು ಎಲ್ಲಿವೆ. ಅಂದರೆ ಬರೆಹ/ಆಡು ಮಾತಿನಲ್ಲಿ ಎಲ್ಲಿ ಬಳಕೆಯಲ್ಲಿವೆ. ಇದ್ದರೆ ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಕೊಡಿ.

ನನಗೆ ತಿಳಿದಂತೆ ಹಳ್ಳಿಗರ ಬಾಯಲ್ಲಿ ಇವುಗಳ ಬಳಕೆ ಹಾಸು ಹೊಕ್ಕಾಗಿವೆ. ಆದರೆ ಕಲಿತುಕೊಂಡಿರುವ ಪಟ್ಟಣಿಗರಲ್ಲಿ ಕಡಿಮೆ. ಇಸುವಿನ ಈ ಬಗೆಯ ಬಳಕೆಯ ಬಹಳ ಮಾದರಿಗಳು ಸಿಗುತ್ತವೆ. ಇವುಗಳ ಬಗ್ಗೆ ನನಗೆ ತಿಳಿದಿತ್ತು ಆದರೆ ಹೊಳೆದಿರಲಿಲ್ಲ.

೧ ) ಕೊಡು, ಕೊಡಿಸು, ಕೊಡಿಸಿಸು

"ಅಪ್ಪ, ಅಪ್ಪ ನನಗೊಂದು ಬೊಂಬೆ ಕೊಡು"

"ಅಪ್ಪ, ಅಪ್ಪ ಜಾತರೆಯಲ್ಲಿ ನನಗೊಂದು ಬೊಂಬೆ ಕೊಡಿಸು"

"ಅಪ್ಪ, ಅಪ್ಪ ಮಾಮನಿಗೆ ಹೇಳಿ, ಜಾತರಿಯಲ್ಲಿ ನನಗೊಂದು ಬೊಂಬೆ ಕೊಡಿಸಿಸು"

೨) ಹೊಡಿ, ಹೊಡಿಸು, ಹೊಡಿಸಿಸು

ಮಾದರಿ :

ರಾಮು : ಏ! ನಿನ್ನ ಹೊಡೆಯುವೆನು.

ಸೋಮು : ನಿನಗೆ ಆಟೊಂದು ಬಲವಿಲ್ಲ.

ರಾಮು : ಹಾಗಾದರೆ ನಮ್ಮಣ್ಣನ ಕಡೆಯಿಂದ ಹೊಡೆಸುವೆನು.

ಸೋಮು : ನಿಮ್ಮಣ್ಣ ನಿನ್ನ ಮಾತು ಕೇಳಿಯಾನೆ?

ರಾಮು : ಅವನು ನಮ್ಮಪ್ಪನ ಮಾತನ್ನು ಕೇಳುತ್ತಾನೆ, ಅಪ್ಪನಿಂದ ಹೇಳಿಸಿ, ಹೊಡೆಸಿಸುವೆನು.

೩) ಕಳುಹು, ಕಳುಹಿಸು, ಕಳುಹಿಸಿಸು

ಸಂದೇಸದೊಂದಿಗೆ ಬಟನನ್ನು ಕಳುಹುವುದು.

ಬಟನ ಕೈಯಲ್ಲಿ ಓಲೆಯನ್ನು ಕಳುಹಿಸುವುದು.

ಮಂತರಿಗೆ ಹೇಳಿ ಓಲೆಯನು ಕಳುಹಿಸಿಸುವುದು.

ಇಲ್ಲಿ ಮಂತರಿ ಇನ್ನಾರ ಕೈಯಲ್ಲೋ ಅದನ್ನು ಕೊಟ್ಟು ಕಳಿಸುವನೆಂಬುದು ವೇದ್ದೆಯಾಗುವುದು.

೩) ಮಾಡು, ಮಾಡಿಸು, ಮಾಡಿಸಿಸು

ನಾನೊಂದು ಗೊಂಬೆ ಮಾಡಿದೆನು

ನಾನೊಂದು ಗೊಂಬೆ ಮಾಡಿಸಿ ತಂದೆನು

ನಮ್ಮಣ್ಣನಿಗೆ ಮಾಡಿಸಲು ಹೇಳಿ, ಈ ಗೊಂಬೆ ಮಾಡಿಸಿಸಿದೆನು.

೪) ಕುಣಿ, ಕುಣಿಸು, ಕುಣಿಸಿಸು ( ಕುಣಿಸುವಂತೆ ಮಾಡು)

ಕುಣಿಸು ಎಂಬುದು ಬಳಕೆಯಲ್ಲಿರುವುದಂತೂ ಎಲ್ಲರಿಗೂ ತಿಳಿದಿದೆ, ಕುಣಿ - ನರ್ತಿಸು ಆದರೆ, ಕುಣಿಸು - ನರ್ತಿಸಿಸು ಆಗುವುದು, ಆದರೆ ನರ್ತಿಸಿಸು ಬಗೆಯ ಬಳಕೆಯೂ ಇಲ್ಲ. ನರ್ತನ ಮಾಡಿಸು ಎಂದೇ ಬಳಕೆಯಲ್ಲಿದೆ. ಅಂದರೆ 'ಕುಣಿ'ಯ ಬದಲು ನರ್ತಿಸು ಎಂಬುದನ್ನೇ ಬಳಕೆ ಮಾಡುತ್ತ ಹೋದರೆ, ಬರೀ ಕುಣಿಸಿಸು ಅಲ್ಲ, ಕುಣಿ, ಕುಣಿಸು ಗಳೂ ಮರೆತೇ ಹೋಗುತ್ತವೆ. ಆಗ ಕುಣಿಸು, ಕುಣಿಸಿಸು ಎಂಬುದನ್ನು ಹೇಳಬೇಕಾದಾಗ, ನಮಗೆ ಹೇಗೇ ಹೇಳಬೇಕೆಂಬುದೇ ತಿಳಿಯದಾಗುತ್ತದೆ (ಏಕೆಂದರೆ ಪದವೇ ಮರೆತಿದೆಯಲ್ಲ!). ಇದರಿಂದಾಗಿ ಇಂಗಲೀಸಿನ ಪದಕ್ಕೆ ಮಾಡು ಸೇರಿಸಿ ಮಾತನಾಡುವ ಚಾಳಿ ಪಟ್ಟಣಿಗರಲ್ಲಿ ಹೆಚ್ಚಾಗಿ ಕಾಣುತ್ತದೆ. enjoy ಮಾಡಿದೆ, shopping ಮಾಡಿದೆ, win ಮಾಡಿ ಹೀಗೆ. ಮೊದಲನೆಯದಾಗಿ ಇದು ಹೆಚ್ಚುಗಾರಿಕೆ ತೋರಿಸಲು, ಎರಡನೆಯದಾಗಿ ಓದಿನಿಂದ ಕಲಿತದ್ದು.

ಇತ್ತೀಚಿನ ದಿನಗಳಲ್ಲಿ ಇಂಗಲೀಸಿನ ಪದಗಳಿಗೂ ಈ ಇಸು ಸೇರಿಕೊಳ್ಳುತ್ತಿದೆ. phone ಮಾಡು ಎನ್ನಲು "ಫೋನಾಯಿಸು". "ಕ್ಲಿಕ್ಕಿಸು", "ಟೈಪಿಸು" ಹೀಗೆ.

ಮೂರನೆ ಕೇಳಿಕೆ ;- 

Quote:

3. ಕನ್ನಡವನ್ನು ಸರಿಯಾಗಿ ಬರೆಯುವುದು ಅಂದರೇನು?

ಕನ್ನಡವನ್ನು ಕನ್ನಡದಂತೆಯೇ ಬರೆಯುವುದು ಎಂದು. "ತೆಗೆದುಕೊಂಡರು" ಅನ್ನುವದನ್ನು "ಸ್ವೀಕ 'ರಿಸಿ' ದರು" (ಸ್ವೀಕಾರ ಮಾಡಿದರು) ಎಂದು ಬರೆಯುವುದು ಬೇಡವೆಂದು, ಕಾರಣ:- ನಮ್ಮ ಪದಗಳು ಮರೆತು ಹೋಗಬಾರದೆಂದು.

ಸ್ವೀಕಾರ ಮಾಡಿಕೊಂಡರು ಇದು ಸ್ವೀಕರಿಸಿದರು ಆಗಿದೆ, recieve ಮಾಡಿಕೊಂಡರು ರಿಸೀವಿಸಿಕೊಂಡರು ಮಾಡಬಹುದೇ?

OLNರು ಒಂದು ಬರಹದಲ್ಲಿ ಕನ್ನಡದ ಬೇಗರಣ, ಕನ್ನಡದ ಎಲ್ಲ ಪದಗಳನ್ನೂ ಬಿಡಿಸಿ ಹೇಳುವಟ್ಟು ಬೆಳೆದೇ ಇಲ್ಲವೆಂದಿದ್ದಾರೆ, ಇದು ನಿಜವೇ, ಆದರೆ ಹಾಗೆ ಸರಿಯಾದ ಬೇಗರಣವನ್ನೆ ಬೆಳೆಸಿಕೊಳ್ಳದ ನುಡಿಗೆ ಏಳು ಉನ್ನತ ಮಟ್ಟದ ಮೆಡಲ್‍ಗಳು!

ಕೇಳಿಕೆ ೪;-

Quote:

ಇದುವೇ ಸರಿಯಾದ ಕನ್ನಡ ಎಂಬುದನ್ನು ಸಂಸ್ಕೃತ, ಕನ್ನಡ ವ್ಯಾಕರಣ ನಿಯಮಗಳನ್ನು ತಿಳಿಯದ ಆದರೆ ಕನ್ನಡದಲ್ಲಿ ಮಾತನಾಡುತ್ತಾ, ಬರೆಯುತ್ತಾ ಇರುವ ನನ್ನಂಥವರು ತಿಳಿದುಕೊಳ್ಳುವುದು ಹೇಗೆ?

ಹೇಗೆ ಎಂಬುದು ಮನಸ್ಸಿನಲ್ಲಿ ಒಮ್ಮೆ ಮೂಡಿದರೆ, ಉತ್ತರಗಳು ತಾನೇ ತಾನಾಗಿ ಸಿಗುತ್ತಾ ಹೋಗುವವು. ಮಾದರಿಗೆ ನಾನು ಸರಿ ಅಂದುಕೊಂಡಿರುವ ಮತ್ತು ಅಳವಡಿಸಿಕೊಂಡಿರುವ ಒತ್ತಕ್ಕರದ ಕಟ್ಟಳೆ ಯನ್ನೊಮ್ಮೆ ಜತುನ ಮಾಡಿ ನೋಡಿ, ಆಗ ಕನ್ನಡದ್ದೇ ಪದಗಳು ಸಿಗಬಹುದು ಇಲ್ಲವೇ ಹೊರಗಿನವು ಕನ್ನಡದ್ದವಾಗಬಹುದು. ಎರಡನೆಯದಾಗಿ ನಾಮಪದಕ್ಕೆ ಇಸುವನ್ನು ಸೇರಿಸಬಾರದು. 'ಕೇಳು' ಇದು ಕೆಲಸಪದ 'ಪ್ರಶ್ನೆ' ಇದು ಹೆಸರುಪದ. 'ಇಸು'ವನ್ನು ಕೆಲಸಪದಕ್ಕೆ ಅಟ್ಟೇ ಸೇರಿಸಬಹುದು.

ಕೇಳಿಕೆ ೫ ;-

Quote:

5. ಇದನ್ನೆಲ್ಲಾ ತಿಳಿದುಕೊಳ್ಳದೆ ಬರೆಯುವುದು ಇಲ್ಲವೇ ಮಾತನಾಡುವುದು ತಪ್ಪಾಗುತ್ತದೆಯೇ?

ಯಾವುದನ್ನೆಲ್ಲ? ತಿಳಿಯಲಿಲ್ಲ.

Quote:

6. ತಪ್ಪು ಎಂದಾದರೆ ಕನ್ನಡವನ್ನು ಸರಿಪಡಿಸಿ ಉಳಿಸುವ ನಿಮ್ಮ ಕೆಲಸ ಕನ್ನಡವನ್ನು ಲ್ಯಾಬೊರೇಟರಿಯಲ್ಲಿ, ಮ್ಯೂಸಿಯಂನಲ್ಲಿ ಉಳಿಸುವ ಪ್ರಯತ್ನವಾಗುವುದಿಲ್ಲವೇ?

ಹಾಗಿದ್ದಲ್ಲಿ ನಾನು ಇದನ್ನು ಚರುಚೆಗೆ ತರಲು ಜನ್ನುತ್ತಲೇ(ಪ್ರಯತ್ನ ಮಾಡು) ಇರಲಿಲ್ಲ. ಎಲ್ಲರೂ ಒಟ್ಟಾಗಿ ಸರಿಪಡಿಸಿಕೊಳ್ಳಬೇಕೆಂಬುದು ನನ್ನ ಬಯಕೆಯಾಗಿದೆ.

ಕೇಳಿಕೆ 7 ;-

Quote:

7. ಭಾಷೆಯನ್ನು ಶುದ್ಧವಾಗಿ ಉಳಿಸಬೇಕೆಂದು ನೀವು ಮಾಡುತ್ತಿರುವ ಪ್ರಯತ್ನಗಳು ಕೇವಲ ಅಭಿವ್ಯಕ್ತಿಯನ್ನು ಮುಖ್ಯವಾಗಿಟ್ಟುಕೊಂಡು ಭಾಷೆಯನ್ನು ಬಳಸುವವರನ್ನು ಬೆದರಿಸಲಾರದೆ.

ಏನೋ ಹೇಳಬೇಕಿರುವುದನ್ನು ಒಣ ಮಾತುಗಳಲ್ಲಿ/ಬರಹದಲ್ಲಿ ಹೇಳಿಕೊಂಡು ಹೋದರೆ ಜಗತ್ತಿನಲ್ಲಿ ಈಸೊಂದು ನುಡಿಗಳೇ ಇರುತ್ತಿರಲಿಲ್ಲ ಮತ್ತು ಬೇಕಿರಲಿಲ್ಲ. ಕನ್ನಡದಲ್ಲಿ ಮಾತನಾಡುವಾಗ ಎಸೋ ಇಸಯಗಳನ್ನು ಬಹಳ ಸೊಗಸಾಗಿ ಹೇಳುತ್ತೇವೆ. ಹೆಜ್ಜೆಗೊಂದರಂತೆ ನುಡಿಗಟ್ಟುಗಳನ್ನು ಬಳಸುತ್ತೇವೆ. ಅವು ಜೀವಂತಿಕೆಯಿಂದ ಕೂಡಿರುತ್ತವೆ. ಮಾದರಿಗೆ, ಬಹಳ 'ದುಃಖಿ' ಸಿದನು ಎಂಬುದನ್ನು ಕರುಳು ಕಿತ್ತು ಬರುವಂತೆ ಅತ್ತನು ಅನ್ನುತ್ತೇವೆ. ಹೀಗೆ ಬರೀ ವರದಿ ಒಪ್ಪಿಸುವುದು ಅಟ್ಟೇ ನುಡಿಯ ಕೆಲಸವಲ್ಲ. ಕೇವಲ 'ಅಭಿವ್ಯಕ್ತಿ'ಯೇ 'ಮುಖ್ಯ'ವಾದರೆ ಸರಳವಾದ ಇಂಗಲೀಸಿನಲ್ಲಿಯೇ ಬರೆಯಬಹುದಲ್ಲ?

ಉತ್ತರಗಳು ನಿಮಗೆ ಸರಿ ಅನಿಸಿದವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 20, 2006 - 10:22pm — ಸಂಗನಗೌಡ

ಬೆಳೆಸಿಸು ಪದದ ಬಳಕೆ

ಸಂಗನಗೌಡ's picture

ಸಿರಿ tksbhat, ನೀವು ಕೇಳಿದಂತೆ,

Quote:

2.ಮಾಡಿಸಿಸು, ಕೇಳಿಸಿಸು ಎಂಬ ಪ್ರಯೋಗಗಳು ಎಲ್ಲಿವೆ. ಅಂದರೆ ಬರೆಹ/ಆಡು ಮಾತಿನಲ್ಲಿ ಎಲ್ಲಿ ಬಳಕೆಯಲ್ಲಿವೆ. ಇದ್ದರೆ ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಕೊಡಿ.

ಇಂದಿನ ಅಂದರೆ ದಿನಾಂಕ ೨೦ ಸೆಪಟೆಂಬರ್ ೨೦೦೬, ಬುದವಾರದ ವಿಜಯಕರನಾಟಕ ಪತ್ತಿಗೆಯ ಕ್ರುಷಿ ವಿಜಯದ ಎರಡನೆ ಪುಟದಲ್ಲಿ 'ವೆಲವೆಟ್ ಬಳ್ಳಿ'ಯ ಬಗ್ಗೆ ಒಂದು ಬರಹ ಮೂಡಿ ಬಂದಿದೆ. ಅದರಲ್ಲಿ 'ಬೆಳೆಸಿಸು' ಎಂಬ ಪದದ ಬಳಕೆ ಇದೆ ದಯಮಾಡಿ ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2007 - 6:46pm — mahesha

ಉ: ಕನ್ನಡ ಬೇಗರಣ ಕಟ್ಟಳೆ ೨ ( 'ಇಸು' ವಿನ ಬಳಕೆಯ ಬಗ್ಗೆ)

mahesha's picture

'ಇಸು' ಬಗ್ಗೆ ಒಳ್ಳೆಯ ಉಂಕು.

ಚನ್ನಾಗಿದೆ.

ಬೇಗರಣ ಸೂಪರ್‍

ವ್ಯಾಧ => ಬೇಡ
ಕಾಕಾ => ಕಾಗೆ
ಪೋಲಿಕಾ => ಹೋಳಿಗೆ

ವ್ಯಾಕರಣ => ಬೇಗರಣ, ಸಕ್ಕತ್!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?
  • ಅಪ್ರೈಸಲ್
  • ಕನ್ನಡ ಬೇಗರಣ ಕಟ್ಟಳೆಗಳು
  • ಕನ್ನಡದಲ್ಲಿ ದೂರ
  • ಕನ್ನಡದಲ್ಲಿನ ಒತ್ತಕ್ಷರಗಳು - ಭಾಗ ಎರಡು (೨)
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಕೆಲಸ ಮಾಡಿಕೊಂಡಿದ್ದೇನೆ. ಓದು, ಆಗಾಗ ಹಾಡು ಬರೆಯುವದು, ಟ್ರೆಕಿಂಗ್, ಕೆಲವೊಮ್ಮೆ ಹಾಡುವದು, ಬ್ಲಾಗಿಂಗ್ ಇಸ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 62 ಅತಿಥಿಗಳು ಆನ್ಲೈನ್ ಇರುವರು.


ಸಾಕೋದನ್ ಅರಿತಾತ - ಸಾವಿರ ಜನಕ್ ತ್ರಾತ

— ಟಿ ಪಿ ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator