ಈಗಿನಂತೆ 8 ಸದಸ್ಯರು ಮತ್ತು 63 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಬೈಲುದಾರಿ
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
29
Mar
2011
ಬ್ಲಾಗ್ ಬರಹ

ನಸುಕಿನ ಚುಮು ಚುಮು ಬಿಸಿಲಿನಲ್ಲಿ ಆ ದಾರಿಯಲ್ಲಿ ನಡೆದರೆ ಅಕ್ಷರಶ: ವಜ್ರ ಮುತ್ತುಗಳನ್ನು ದಾರಿಯುದ್ದಕ್ಕೂ ಕಾಣಬಹುದು! ಇರುಳೆಲ್ಲ ಬಿದ್ದ ಇಬ್ಬನಿಯು ದಾರಿಯ ಇಕ್ಕೆಲಗಳಲ್ಲೂ...

ಪ್ರತಿಕ್ರಿಯೆಗಳು: 20
ಹಿಟ್ಸ್ : 597
ಒಂದು ಹಳೆಯ ಕತೆಯನ್ನು ಹಿಡಿದು...
modmani's picture
ಮೊದ್ಮಣಿ
22
Mar
2012
ಬ್ಲಾಗ್ ಬರಹ

ಬಹಳ ಹಿಂದೆ ಹೊಯ್ಸಳರ ಕಾಲದ ಕತೆಯಂತೆ ಇದು. ಎಲ್ಲಿ ಓದಿದ್ದೋ, ಕೇಳಿದ್ದೋ ಸರಿಯಾಗಿ ನೆನಪಿಲ್ಲ. ಆದರೆ ಕತೆ ಮಾತ್ರ ಮರೆಯುವಂತಹುದಲ್ಲ. ನೀವು ಅದನ್ನು ಕೇಳುವಿರಾ..?
...

ಪ್ರತಿಕ್ರಿಯೆಗಳು: 12
ಹಿಟ್ಸ್ : 420
ಮೈಕ್ರೋ ಕ್ರೆಡಿಟ್ ನಿಂದ ಮೈಕ್ರೋ ಬ್ಯಾಂಕಿಂಗ್ ಕಡೆಗೆ
anoopkittur's picture
18
Nov
2005
ಪುಟ

ಇತ್ತೀಚೆನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಸ್ವ ಸಹಾಯ ಗುಂಪುಗಳನ್ನು ಸಂಘಟಿಸಿ ಗ್ರಾಮೀಣ ಜನರನ್ನು ಅದರಲ್ಲೂ ಮಹಿಳೆಯರನ್ನು ಮೈಕ್ರೋ ಕ್ರೆಡಿಟ್ ಚಟುವಟಿಕೆಗಳಲ್ಲಿ ತೊಡಗಿಸುವ...

ಪ್ರತಿಕ್ರಿಯೆಗಳು: 0
ಹಿಟ್ಸ್ : 1,916
ನನ್ನ peer-group
krvinutha's picture
ವಿನುತಾ ಕುಂಸಿ ರಾಜಾರಾವ್
26
Jun
2011
ಬ್ಲಾಗ್ ಬರಹ
        ಮ...
ಪ್ರತಿಕ್ರಿಯೆಗಳು: 18
ಹಿಟ್ಸ್ : 714
ದೊರೆಸಾನಿಪಾಳ್ಯದಲ್ಲಿ ಬೇಲಿ ನೆಗೆದು ಅರಣ್ಯ ಕಾಪಾಡಿದ ದಿ.ಡಿ.ದೇವರಾಜ್ ಅರಸ್
Siva's picture
sadasiva
21
Aug
2011
ಲೇಖನ

ಮಾನ್ಯ ಡಿ.ದೇವರಾಜ್ ಅರಸ್ ಅಂದಿನ ಮುಖ್ಯ ಮಂತ್ರಿಗಳು ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು. ಅವರನ್ನು ಮಾಜಿ ಅನ್ನಬಹುದು ಆದರೆ ದಿವಂಗತ ಅನ್ನಲು ನನ್ನ ಮನಸ್ಸು ಒಪ್ಪುವುದಿಲ್ಲ. ಜನ...

ಪ್ರತಿಕ್ರಿಯೆಗಳು: 6
ಹಿಟ್ಸ್ : 336
ಹಾವುಗಳ ಪ್ರಕರಣ
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
03
May
2011
ಬ್ಲಾಗ್ ಬರಹ

ನಮ್ಮ ಹಳ್ಳಿಮನೆಯಲ್ಲಿ ಹಾವುಗಳೆಂದರೆ, ಒಂದು ರೀತಿ ಕರೆಯದೇ ಅನಿಯಮಿತವಾಗಿಬರುವ ಅತಿಥಿಗಳೇ ಸರಿ. ಮನೆಯೊಳಗೆ ಬೆಕ್ಕುಗಳು, ಮನೆ ಮುಂದೆ ನಾಯಿ ಇದ್ದಂತೆ, ಹಾವುಗಳೂ ಮನೆಯ ಫಾಸಲೆಯ...

ಪ್ರತಿಕ್ರಿಯೆಗಳು: 6
ಹಿಟ್ಸ್ : 539
ಮೊಬೈಲೇ ಪ್ರವೇಶ ಪತ್ರ!
ASHOKKUMAR's picture
03
Dec
2006
ಪುಟ
ಮೊಬೈಲೇ ಪ್ರವೇಶ ಪತ್ರ! ಮೊಬೈಲ್‌ನ ಬಳಕೆಯನ್ನು ದೂರವಾಣಿ ಕರೆಗೇ ಸೀಮಿತಗೊಳಿಸದೆ, ಅದರ ಉಪಯುಕ್ತತೆಯನ್ನು ವಿಸ್ತರಿಸಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಮೊಬೈಲ್ ಸೇವೆ ಒದಗಿಸುವ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,639
ವಿಸ್ಮಯ ಚಿಂತನ ಮಿಲನ - 4
shashikannada's picture
ಶಶಿಕುಮಾರ್
22
Sep
2011
ಬ್ಲಾಗ್ ಬರಹ

ಕರ್ನಾಟಕದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿರುವ ಮೈಸೂರಿನ ವಿಸ್ಮಯ ಪ್ರಕಾಶನವು ಕಳೆದ ಮೂರು ತಿಂಗಳುಗಳ ಹಿಂದೆ ಅಂದರೆ ಜೂನ್ ನಲ್ಲಿ "ಚಿಂತನ ಮಿಲನ"...

ಪ್ರತಿಕ್ರಿಯೆಗಳು: 1
ಹಿಟ್ಸ್ : 220
ಚಿಂತನೆ :- ಕಾಫಿಯಿಂದ ಸಂಸ್ಕೃತಿವರೆಗು
partha1059's picture
ಪಾರ್ಥಸಾರಥಿ
10
May
2011
ಬ್ಲಾಗ್ ಬರಹ

    ಹೀಗೆ ಸುಮ್ಮನೆ ಕುಳಿತ್ತಿದ್ದೆ, ಸ್ವಲ್ಪ ಕಾಫಿ ಬೇಕೆನಿಸಿತು. ನಾನೇ ಏಕೆ ಮಾಡಬಾರದು ಅನ್ನಿಸಿ ಅಡಿಗೆಮನೆಯೊಳಗೆ ಹೋದೆ,...

ಪ್ರತಿಕ್ರಿಯೆಗಳು: 6
ಹಿಟ್ಸ್ : 427
'ಉಡುಪಿ' - ಕೃಷ್ಣನ ನೆಲೆವೀಡು, ಹೋಟೆಲ್ ಉದ್ಯಮಿಗಳ, ಜಾಣ-ಜಾಣೆಯರ ತವರುಮನೆ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
16
Feb
2010
ಪುಟ

...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,584

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಕರ್ನಾಟದ ಏಕೀಕರಣ ಅಂದರೆ ಸುಮ್ಮನೆಯೆ??

ಕರ್ನಾಟದ ಏಕೀಕರಣ ಅಂದರೆ ಸುಮ್ಮನೆಯೆ??

ಬಹಳಷ್ಟೂ ನಮ್ಮ ಕನ್ನಡಿಗರಿಗೆ ಗೊತ್ತಿಲ್ಲ ಕರ್ನಾಟದ ಏಕೀಕರಣ ಅಂದರೆ ಏನು, ಅನೇಕ ಕಡೆ ಸುವರ್ಣ ಸಂಭ್ರಮ ಆಗುತ್ತಿದೆ, ಗಲ್ಲಿ ಗಲ್ಲಿಗಳಲ್ಲಿ ಸಮಾರಂಭ ನಡೆಯುತ್ತಿದೆ. ಅದೇ ಹಾಡು-ಕುಣಿತ ಮತ್ತು ಕೆಲವು ರಾಜಕೀಯ ನಾಯಕರ ಮತ್ತು ಉಟ್ಟು ಹೋರಾಟಗಾರಾರ ಕಿವಿಗೆ ಅಪ್ಪಳಿಸುವ ಭಾಷಣಗಳು. ಆದರೆ ಇದಕ್ಕೆ ನಿಜಕ್ಕೂ ಹೋರಾಡಿದ, ಭಗೀರಥ ಪ್ರಯತ್ನವನ್ನು ಮಾಡಿದ ಶ್ರೀ ಆಲೂರರ ಸಾಧನೆ ನಮ್ಮ ಇಂದಿನ ಜನಾಂಗಕ್ಕೆ ತಿಳಿಯದಿರುವುದು ದುಃಖದ ಸಂಗತಿ. ಉದ್ದಗಲಕ್ಕೂ ಹಂಚಿಹೋಗಿದ್ದ ನಮ್ಮ ರಾಜ್ಯವನ್ನು ಒಂದು ಮಾಡಿದ ಸಾಧನೆ ಕಡಿಮೆಯೇ, ಯಾಕೆ ನಾವು ಇವರನ್ನು ಸ್ಮರಿಸುತ್ತಿಲ್ಲ, ಯಾಕೆ ನಮ್ಮ ಶಿಕ್ಷಣದಲ್ಲಿ ಇವರ ಪಾಠವಿಲ್ಲ ?? ಎಲ್ಲೆಲ್ಲಿ ತೇಪೆಗಳಾಗಿದ್ದವು ಅಂತ ನಮ್ಮ ಜನಕ್ಕೆ ಗೊತ್ತೆ ?? ೧) ಬೆಂಗಳೂರು ಗ್ರಾಮಂತರ,ಮಂಡ್ಯ,ಕೋಲಾರ,ತುಮಕೂರು..ಮೈಸೂರುಗಳನ್ನು ಒಳಗೊಂಡ ಮೈಸೂರು ಅರಸರ ಪ್ರಾಂತ್ಯ. ೨) ಬ್ರಿಟಿಷ್ ಆಡಳಿತದಲ್ಲಿ ಇದ್ದ ಬೆಂಗಳೂರು( ಕಂಟೋನ್ಮೆಂಟ್) ೩) ಬ್ರಿಟಿಷ್ ಆಡಳಿತ ಆದರೆ ಮುಂಬೈ ಪ್ರೆಸಿಡೆನ್ಸಿದಲ್ಲಿ ಇದ್ದ ಬೆಳಗಾವಿ , ಉತ್ತರ ಕನ್ನಡ,ಧಾರವಾಡ ಮತ್ತು ವಿಜಾಪುರ. ಉತ್ತರ ಮತ್ತು ದಕ್ಶಿಣ ಸೊಲ್ಲಾಪುರ ಮತ್ತು ಮಂಗಳವಾಡೆ. ೪) ಬ್ರಿಟಿಷ್ ಮದ್ರಾಸ್ ಪ್ರಾಂತ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ,ಕಾಸರಗೋಡು,ಬಳ್ಳಾರಿ, ಪೆನೆಗೊಂಡ,ನೀಲಗಿರಿ,ಕೊಳ್ಳೆಗಾಲ,ಹಿಂದೂಪುರ,ಕಲ್ಯಾಣದುರ್ಗ,ಪೆನಗೋಂಡ,ಹೊಸೂರು,ಮಡಕಶಿರಾ ಮತ್ತು ತಾಳವಾಡಿ. ೫) ಕೊಡಗು ೬) ಹೈದಾರಬಾದ್ ಸಂಸ್ಥಾನಕ್ಕೆ ಸೇರಿದ ಬೀದರ್,ರಾಯಚೂರು ಮತ್ತು ಗುಲ್ಬರ್ಗ ೭) ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ ಷಾಪುರ,ಶಿರಹಟ್ಟಿ,ದೊಡ್ದವಾಡ. ೮) ಮೀರಜ್ ಸಂಸ್ಥಾನಕ್ಕೆ ಸೇರಿದ ಲಕ್ಶ್ಮೇಶ್ವರ ೯) ಕಿರಿಯ ಮೀರಜ್ ಸಂಸ್ಥಾನಕ್ಕೆ ಸೇರಿದ ಗುಡಗೇರಿ ೧೦) ಹಿರಿಯ ಕುರುಂದ್ ನಾಡ್ ೧೧) ವಡಗಾಂವ್ ೧೨) ಔಂದ್ ಸಂಸ್ಥಾನಕ್ಕೆ ಸೇರಿದ ವಿಜಾಪುರದ ಗುಣದಾಳು ೧೩) ರಾಮದುರ್ಗ ಸಂಸ್ಥಾನ ೧೪) ಜಮಖಂಡಿ ಸಂಸ್ಥಾನಕ್ಕೆ ಸೇರಿದ ಕುಂದಗೋಳ,ಚಿಪ್ಪಲಕಟ್ಟಿ ೧೫) ಮುಧೋಳ ಸಂಸ್ಥಾನಕ್ಕೆ ಸೇರಿದ ಮುಧೊಳ್ ೧೬) ಸೊಂಡುರು ಸಂಸ್ಥಾನಕ್ಕೆ ಸೇರಿದ ಸೊಂಡುರು ೧೭) ಜತ್ ಸಂಸ್ಥಾನಕ್ಕೆ ಸೇರಿದ ಜತ್ ಜಿಲ್ಲೆ ೧೮) ಸವಣೂರು ಸಂಸ್ಥಾನಕ್ಕೆ ಸೇರಿದ ಸವಣೂರು ಜಿಲ್ಲೆ ೧೯) ಅಕ್ಕಲಕೋಟೆಯ ಸಂಸ್ಥಾನಕ್ಕೆ ಸೇರಿದ ಅಕ್ಕಲಕೋಟೆ ಜಿಲ್ಲೆ ಹೀಗೆ ಅನೇಕರ ಕೈಗಳಲ್ಲಿ ಹಂಚಿಹೊಗಿದ್ದ ಕರುನಾಡನ್ನು ಒಂದು ಮಾಡಿದ್ದು ನಿಜಕ್ಕೂ ಮಾಯೆಯೆ ಸರಿ, ಕನ್ನಡಿಗರ ಹಿತ ರಕ್ಸಿಸುವ ಒಂದು ರಾಜ್ಯವಿರಲಿಲ್ಲ, ನಮ್ಮ ಜನರನ್ನು ಆಳುವ ಪ್ರಭುಗಳು ಇತರ ಭಾಷಿಕರಾಗಿದ್ದು, ನಾವು ಅನಾಥಪ್ರಜ್ನೆ ಅನುಭವಿಸುತ್ತ ಇದ್ದೆವೂ. ಏಕೀಕರಣಕ್ಕೆ ಅಡ್ದಿ ಆತಂಕಗಳು ಬರಲಿಲ್ಲ್ವವೇ ?? ಬಂಡಾಯದ ಧ್ವನಿ ಕೇಳಿಬಂದವೂ, ಆದರೂ ದೃತಿಗೆಡದೆ ಕನ್ನಡದ ಹಿತಕ್ಕೆ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯದ ಆ ಚೇತನ ನಮ್ಮ ಇಂದಿನ ಪೀಳಿಗೆಗೆ ಮಾದರಿ. ಇವರನ್ನು ನೆನೆಯದೆ ನಾವು ಒಬ್ಬ ಸಿನೆಮಾ ನಟನನ್ನು ಇಲ್ಲ ಬೇರೆಯವರನ್ನು ನೆನೆದು ಅವರಿಗೆ ಸನ್ಮಾನ ಮಾಡುವುದು ಎಷ್ಟರ ಮಟ್ಟಿಗೆ ಸರಿ ?? ಆಗಿನ ಕನ್ನಡದ ಸ್ಥಿತಿ ಹೇಗಿತ್ತು ಗೊತ್ತಾ ?? " ಅಕ್ಕ ತಂಗಿಯರೆಲ್ಲಾ ಮುಂದುಮುಂದಾಗಿರಲು ನಮ್ಮ ತಾಯಿಯೊಬ್ಬಳೆ ಸೊರಗಿರುವಳಲ್ಲ? ಅಮ್ಮನನ್ನು ಕೈಬಿಡದೆ ಇನ್ನು ಮೆರಸುವೆವೆ? ಹಿರಿಯ ಹೆಸರನು ತಿರುಗಿ ಗಳಸಿಕೊಳ್ಳುವವೆ ? ಸರಿಯವರ ತಲೆಮಟ್ಟಿ ಮುಂದೆ ನಿಲ್ಲುವವೆ ? ನೆಮ್ಮದಿಯ ಬೆಳಕಿನಲಿ ನಾವು ಬಾಳುವೆವೆ ??" ಅಂತ ತೀ.ನಂ.ಶ್ರೀ ಬರೆದಿದ್ದರು. ಇದನ್ನು ಡಾ|| ಸೂರ್ಯನಾಥ ಕಾಮತ್ ಅವರ ಏಕೀಕರಣದ ಪುಸ್ತಕ ಓದುವಾಗ ನನಗೆ ಅನಿಸಿದ್ದು. ನೀವು ತಪ್ಪದೇ ಓದಿ.............
No votes yet
1802 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
shreekant.mishrikoti's picture
07
Jan
2006
2:22

ಕರ್ನಾಟಕ ಏಕೀಕರಣ - ಶ್ರೀ ಆಲೂರು ವೆಂಕಟರಾಯರುಕರ್ನಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರು ಅವರ ನನ್ನ ಜೀವನ ಸ್ಮೃತಿಗಳು ಕೂಡ ಎಲ್ಲ ಕನ್ನಡಿಗರು ಓದಲೇಬೇಕಾದ ಪುಸ್ತಕ - ಈ ಆತ್ಮಚರಿತ್ರೆಯಿಂದ ಕರ್ನಾಟಕದ ಏಕೀಕರಣಕ್ಕೆ ಅವರು ಏಕೆ , ಮತ್ತು ಹೇಗೆ ದುಡಿದರು ಎಂಬುದು ಅರಿವಾಗುತ್ತದೆ. ಮತ್ತು ಇನ್ನೊಂದು ಒಳ್ಳೆಯ ಪುಸ್ತಕ ಎಂದರೆ ಶ್ರೀ ರಾ. ಯ. ಧಾರವಾಡಕರ ಅವರು ಬರೆದು ಕರ್ನಾಟಕ ವಿಶ್ವವಿದ್ಯಾನಿಲಯ ಪ್ರಕಟಿಸಿದ ಪುಸ್ತಕ . ಬಹುಶ: ಅದರ ಹೆಸರು -ಹೊಸಗನ್ನಡದ ನವೋದಯ - ಎಂದೇನೋ ಇರಬೇಕು . - ವಿಜಯನಗರ ಸಾಮ್ರಾಜ್ಯದ ಪತನಾನಂತರ , ಕನ್ನಡಕ್ಕೆ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಒದಗಿದ ದುಸ್ಥಿತಿ , ಮತ್ತು ಕನ್ನಡಕ್ಕೆ ಅಪಾರ ಸೇವೆ ಸಲ್ಲಿಸಿದ ನಮ್ಮ ಮತ್ತು ವಿದೇಶೀ ಮಹನೀಯರ ಬಗ್ಗೆ ತುಂಬ ವಿವರಗಳಿವೆ.
mahesha's picture
05
Apr
2007
3:11

ಕರ್ನಾಟದ ಏಕೀಕರಣವಾಯಿತೇ ಹೊರತು ಒಗ್ಗೂಡಲಿಲ್ಲ!!ಕರ್ನಾಟದ ಏಕೀಕರಣವಾಯಿತೇ ಹೊರತು ಒಗ್ಗೂಡಲಿಲ್ಲ!! :D ====== :)