ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ವಿಶ್ವನಾಥ ರವರ ಬ್ಲಾಗ್

ದಾರಿ ತಪ್ಪಿದ ಮಕ್ಕಳು!

June 7, 2006 - 11:18am — ವಿಶ್ವನಾಥ

ನಿಮಗೆ ನೆನಪಿರಬಹುದು, 1997ರಲ್ಲಿ ಕರ್ನಾಟಕದಲ್ಲಿ ಅಂದಿನ ಜೆ.ಎಚ್. ಪಟೇಲ್ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದ ಬಿ.ಟಿ ಲಲಿತಾನಾಯಕ್ ಅವರ ಪುತ್ರ ವಿಶ್ವಜಿತ್, ಮದ್ಯದ ಅಮಲಿನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮದ್ಯಾಭಿಷೇಕ ಮಾಡಿದ್ದು. ಈ ಘಟನೆ ಇಡೀ ರಾಜ್ಯಾದ್ಯಂತ ಭಾರಿ ಕೋಲಾಹಲವನ್ನೇ ಎಬ್ಬಿಸಿತ್ತು. ತಾಯಿ ಲಲಿತಾ ನಾಯಕ್ ರಾಜೀನಾಮೆ ಕೊಡುವುದರೊಂದಿಗೆ ಈ ಪ್ರಕರಣ ಅಂತ್ಯ ಕಂಡಿತ್ತು.

ಅದಾಗಿ ಎರಡು ವರ್ಷಗಳ ಬಳಿಕ ಹರಿಯಾಣಾದ ಪ್ರಭಾವಿ ಕಾಂಗ್ರೆಸ್ ನಾಯಕ ವಿನೋದ್ ಶರ್ಮಾ ಅವರ ಸು(ಕು)ಪುತ್ರ ಮನು ಶರ್ಮಾ ದೆಹಲಿಯ ನೈಟ್ ಕ್ಲಬ್ ಒಂದರಲ್ಲಿ ಹಾರಿಸಿದ ಗುಂಡಿಗೆ ಜೆಸಿಕಾ ಲಾಲ್ ಎಂಬ ಹೈ ಪ್ರೊಫೈಲ್ಡ್ ಬಾರ್ ಅಟೆಂಡೆಂಟ್ ಅಸುನೀಗಿದಳು. ಈ ಪ್ರಕರಣವೂ ಸುದ್ದಿಯ ಕೇಂದ್ರಬಿಂದುವಾಗಿತ್ತು.

ಕೆಲವೇ ತಿಂಗಳುಗಳ ಹಿಂದೆ ಬೆಂಗಳೂರಿನ ಇನ್ ಫಂಟ್ರಿ ರಸ್ತೆಯಲ್ಲಿನ ಡಿಸ್ಕೊ ಥೆಕ್ ಒಂದಕ್ಕೆ ನುಗಿದ್ದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ಕುಣಿತದ ಹುಡುಗಿ ತನ್ನ ಜೊತೆ ಬರಲು ನಿರಾಕರಿಸಿದ್ದರಿಂದ ಗುಂಡು ಹಾರಿಸಿ ಸುದ್ದಿಯಾಗಿದ್ದ.

ಈ ಮೂರೂ ಘಟನೆಗಳನ್ನೇ ಹೋಲುವ ಇತ್ತೀಚಿನ ಸೇರ್ಪಡೆ-ಕಳೆದ ತಿಂಗಳು ಅಸುನೀಗಿದ ಬಿಜೆಪಿ ನೇತಾರ ಪ್ರಮೋದ್ ಮಹಾಜನ್ ಅವರ ಪುತ್ರ ರಾಹುಲ್ ಮಹಾಜನ್ ಮಾದಕ ದ್ರವ್ಯ ಪ್ರಕರಣ.

ನಾಲ್ಕೂ ಘಟನೆಗಳನ್ನು ತಾಳೆ ಹಾಕಿ ನೋಡಿ ಎಡವಟ್ಟಾಗಿದ್ದು ಎಲ್ಲಿ ಎಂದು ಯೋಚಿಸಿದರೆ ಸಿಗುವ ಉತ್ತರ- "ದೊಡ್ಡವರ" ಮಕ್ಕಳ ಧಾರ್ಷ್ಟ್ಯ, ಏನು ಮಾಡಿದರೂ ಪಾರಾಗಬಹುದು ಎಂಬ ಉಡಾಫೆ ಹಾಗೂ ಸತ್ಯದ ಮೇಲೆ ಬರೆ ಎಳೆದು ಅಪ್ಪಟ ಸುಳ್ಳಿನ ಗಿಲೀಟು ನೀಡಿ ಪಾರು ಮಾಡುವ ನ್ಯಾಯಾಂಗ ವ್ಯವಸ್ಥೆ.

ಈ ಹುಡುಗರ ಪ್ರಭಾವಿ ತಂದೆ-ತಾಯಿಯ ಹಿಂದಿನ ಜೀವನ ನೋಡಿದರೆ, ಅವರು ಕಷ್ಟಪಟ್ಟು ಮೇಲೆ ಬಂದವರಾಗಿರುತ್ತಾರೆ. ಆದರೆ ತಮ್ಮ ಮಕ್ಕಳಿಗೆ ಕಷ್ಟದ ನೆರಳೂ ತಾಕದ ರೀತಿಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಸಿರುತ್ತಾರೆ. ಇವರ ಮಕ್ಕಳಿಗೆ ಜೀವನ ಇರುವುದೇ ಮಜಾ ಉಡಾಯಿಸಲು.

ಇಂದು ಉನ್ನತ ಶಿಕ್ಷಣ ಪಡೆದವರೂ ಒಂದು ಚಿಕ್ಕ ಉದ್ಯೋಗ, ನಾಲ್ಕು ಕಾಸು ಸಂಪಾದಿಸಿ ನೆಮ್ಮದಿಯ ಜೀವನ ನಡೆಸಲು ಪರದಾಡುತ್ತಿರಬೇಕಾದರೆ, ಈ ಅಗವ್ಯ (ಅತಿ ಗಣ್ಯ ವ್ಯಕ್ತಿ)ರ ಮಕ್ಕಳು ದಿನಕ್ಕೊಂದು ಕಾರು, ಅಂಗಿ ಬದಲಾಯಿಸಿದಷ್ಟೇ ಸುಲಭವಾಗಿ ಬದಲಿಸುವ ಗರ್ಲ್ ಫ್ರೆಂಡ್ ಗಳು, ಮೋಜು-ಮಜಾ-ಮಸ್ತಿ‌ಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅದೂ ಶ್ರೀಸಾಮಾನ್ಯನ ಹಣದಿಂದ ಕಟ್ಟಿದ ಅಪ್ಪನ ಸರಕಾರಿ ಬಂಗಲೆಯಲ್ಲಿ (7 ಸಫ್ದರ್‌ಜಂಗ್ ರಸ್ತೆಯ ಬಂಗಲೆ)!

ರಾಹುಲ್ ಮಹಾಜನ್ ಪ್ರಕರಣದಲ್ಲಿ ಆಗಿದ್ದು ಕೂಡ ಇದೇ. ಈತನಿಗೇನು ಕೊರತೆ? ಅನಧಿಕೃತ ಮೂಲಗಳು ಪ್ರಕಾರ ಈತ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿಯ ಒಡೆಯ. ಒಂದೆಡೆ ಜನ ಹೇಗೆ ಹೊಟ್ಟೆ ಹೊರೆಯಬೇಕು ಎಂದು ಚಿಂತಿಸಿದರೆ, ಈತ ಇರುವ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬ ಜಾಯಮಾನದವ. ಇದಕ್ಕೆ ವಿವೇಕ್ ಮೈತ್ರಾ, ಸಾಹಿಲ್ ನಂಥವರ ಮೈತ್ರಿ.

ಇದಕ್ಕೆಲ್ಲ ಕಲಶವಿಟ್ಟಂತೆ ನಮ್ಮ ನ್ಯಾಯಾಂಗ ವ್ಯವಸ್ಥೆ.

ಈ ವ್ಯವಸ್ಥೆಯಲ್ಲಿನ ಲೋಪ-ದೋಷದಿಂದಾಗಿ ಯಾರು ಏನು ಮಾಡಿದರೂ ಪಾರಾಗಬಹುದು ಎಂಬ ಮನೋಭಾವನೆ ಬೆಳೆದುಬಿಟ್ಟಿದೆ. ವಿಶ್ವಜಿತ್ ಪ್ರಕರಣ ಏನಾಯಿತು? ಜೆಸ್ಸಿಕಾ ಲಾಲ್‌ಳನ್ನು ಮನು ಶರ್ಮಾ ಗುಂಡಿಟ್ಟು ಕೊಂದಿದ್ದು ಜಗತ್ತಿಗೇ ಗೊತ್ತಿದ್ದರೂ ಈಚೆಗೆ ಈಚೆಗೆ ದೆಹಲಿ ಹೈಕೋರ್ಟ್ ಈತನನ್ನು ಖುಲಾಸೆಗೊಳಿಸಿದ್ದು ಏನು ತೋರಿಸುತ್ತದೆ? ರಾಹುಲ್ ಮಹಾಜನ್ ಕೂಡ ಕಾನೂನಿನ ಇಂಥದೇ ಹಿಂಬಾಗಿಲ ಮೂಲಕ ನಗುತ್ತ ಒಂದು ದಿನ ಹೊರಬರುತ್ತಾನೆ.

ಪ್ರಜಾಪ್ರಭುತ್ವದ ಕಾವಲುಗಾರನಂತಿರುವ ಮಾಧ್ಯಮಗಳು ನಾಲ್ಕು ದಿನ ಈ ಬಗ್ಗೆ ವರದಿ ಮಾಡುತ್ತವೆ. ಆಮೇಲೆ ತಣ್ಣಗಾಗುತ್ತವೆ, ಕ್ರಮೇಣ ಇಂಥ ವಿಷಯಗಳು ಶ್ರೀಸಾಮಾನ್ಯರ ಮನಸ್ಸಿನಿಂದಲೂ ಮಾಸಿ ಹೋಗುತ್ತದೆ.

ಕನ್ನಡ ಸಿನಿಮಾವೊಂದರ ಹಾಡಿನ ಈ ಸಾಲುಗಳು ನೆನಪಾಗುತ್ತಿವೆ-

"ಈ ದೇಶದ್ ಕತೆ ಇಷ್ಟೇ ಕಣಮ್ಮೋ, ಇಲ್ಲಿ ನ್ಯಾಯಾ ನೀತೀಗ್ ಜಾಗ ಇಲ್ಲಮ್ಮೋ
ನ್ಯಾಯದ್ ಮನೆಗೀಗ್ಲೂ ಎರಡೆರಡಂತೆ ಬಾಗ್ಲು, ಹಿಂದೆ ಹೋಗಿ ಮುಂದೆ ಬರೋ ಈ ದೇಶದ್ ಕತೆ ಇಷ್ಟೇ ಕಣಮ್ಮೋ||"

----
http://vishwaputa.blogspot.com/

~.~
  • ವಿಶ್ವನಾಥ ರವರ ಬ್ಲಾಗ್
  • Login or register to post comments
  • 1789 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 7, 2006 - 11:57am — ahoratra

ಎಲ್ಲರೂ ಓದಲೇಬೇಕಾದ ಬ್ಲಾಗಿದು.

ahoratra's picture

ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಮತ್ತು ಅವರ ದಳ್ಳಾಳಿಗಳು ಸೇರಿ ನಮ್ಮ ಕಾನೂನು ವ್ಯವಸ್ತೆ ಮತ್ತು ನ್ಯಾಯಾಲಯಗಳನ್ನು ಅಂಜಿಕೆ ಹಾಗು ಹಣದ ಬಂಧನದಲ್ಲಿಟ್ಟು ದೇಶವನ್ನು ದುಃಖದ ಸರ್ವಾಧಿಕಾರಕ್ಕೆ ಕೊಂಡೊಯ್ಯುತ್ತಿರುವಾಗ, ಬಿಸಿರಕ್ತದ ದೇಶಭಕ್ತರಾದ ವಿಶ್ವನಾಥರ ಈ ಲೇಖನ ಶ್ಲಾಘನೀಯ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2006 - 7:29pm — ವಿಶ್ವನಾಥ

ಧನ್ಯವಾದ

ವಿಶ್ವನಾಥ's picture

ಅಹೋರಾತ್ರ ಅವರೇ,
ನಾನು ಬರೆದ "ದಾರಿ ತಪ್ಪಿದ ಮಕ್ಕಳು" ಪೋಸ್ಟ್ ಗೆ ನಿಮ್ಮ ಅನಿಸಿಕೆಗೆ ಧನ್ಯವಾದಗಳು.

ನಮ್ಮ ದೇಶದ ಕಾನೂನು ರಚಿಸುವವರ ಹುಂಬತನದಿಂದಾಗಿ ದಿನೇ ದಿನೇ ನ್ಯಾಯಾಂಗ ವ್ಯವಸ್ಥೆ ಅಧೋಗತಿಗಿಳಿಯುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಉಳ್ಳವರಿಗೊಂದು ಕಾನೂನು ಇಲ್ಲದವರಿಗೊಂದು ಇನ್ನೊಂದು ಕಾನೂನು ಎಂಬಂಥ ವಾತಾವರಣ ನಿರ್ಮಾಣವಾಗಿದೆ.

ನಿಮ್ಮ ಮೆಚ್ಚುಗೆಯ ಮಾತುಗಳಿಂದ ಇನ್ನೂ ಹೆಚ್ಚು ಹೆಚ್ಚು ಬರೆಯಲು ಸ್ಫೂರ್ತಿ ಸಿಕ್ಕಿದೆ. ಅದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.

ನಮಸ್ಕಾರ.
-ವಿಶ್ವನಾಥ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2006 - 10:27pm — ahoratra

ಹರ್ಷಾಮರ್ಷಭಯೋಧ್ವೇಗೈ ಮುಕ್ತೋಯಸ್ಸಚಮೇಪ್ರಿಯಹಃ//

ahoratra's picture

ಆತ್ಮೀಯ ವಿಶ್ವನಾಥರೆ, 

ಗೀತೆಯ ಈಮಾತು ನೆನಪಿಸಿತು ನಿಮ್ಮ ಬ್ಲಾಗು, ಎಲಾರಲ್ಲೂ ಇದ್ದ ವಿಚಾರವನ್ನೇ ಬಯ ತೊರೆದು ಬರೆಯುವ ನಿಮ್ಮ ಶೈಲಿ ಕೃಷ್ಣನಿಗೆ ಪ್ರಿಯವಾದುದು.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2006 - 8:44pm — ವಿಶ್ವನಾಥ

ನಮಸ್ಕಾರ

ವಿಶ್ವನಾಥ's picture

ಅಹೋರಾತ್ರರೇ,

ಇಂಡಿಯಾ ಶೈನಿಂಗ್ ಎಂದು ದೇಶದಲ್ಲೇ ಭಾರಿ ಪ್ರಚಾರಗೈದ ವ್ಯಕ್ತಿಯೊಬ್ಬರ ಪುತ್ರನೇ ತನ್ನ ಕುಟುಂಬಕ್ಕೆ ಮಸಿ ಬಳಿಯುವ ಕೆಲಸ ಮಾಡಿದನಲ್ಲಾ ಎಂದು ಎಂದು ನನಗೆ ಬೇಸರವಾಯಿತು. ಅದರ ಹಿನ್ನೆಲೆಯೇ ನನಗನ್ನಿಸಿದ ಈ ನಾಲ್ಕು ಮಾತುಗಳು.

"ಮಹಾಜನ" ರ ಮ(ಗ )ಕ್ಕಳು ಎಷ್ಟು ದುರ್ಜನರಲ್ಲವೇ?

ನಮಸ್ಕಾರ.

-ವಿಶ್ವನಾಥ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2006 - 9:39pm — ahoratra

ಯಥಾಪಿತೃ ತಥಾ ಪುತ್ರ.

ahoratra's picture

ಪ್ರಿಯ ವಿಶ್ವನಾಥರೆ,

ನೀವಿನ್ನೂ ಮುಗ್ಧರು, ಇವರಿಗೆ ಮೀರಿದವರು ಇವರಪ್ಪ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2006 - 2:07pm — Sunil Jayaprakash

ಪೂರಕವಾದ ಸುದ್ಧಿ : ದಾರಿ ತಪ್ಪಿದ ಮಕ್ಕಳು

Sunil Jayaprakash's picture

ಇದೇ ಧಾಟಿಯಲ್ಲಿ ಸಿಎನ್ಎನ್ ಅಲ್ಲೂ ಒಂದು ವರದಿ ಪ್ರಕಟವಾಗಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2006 - 7:37pm — ವಿಶ್ವನಾಥ

ಧನ್ಯವಾದ

ವಿಶ್ವನಾಥ's picture

ಸುನಿಲ ಜಯಪ್ರಕಾಶರೇ,
ದಾರಿ ತಪ್ಪಿದ ಮಕ್ಕಳ ಬಗ್ಗೆ ಬರೆದ ನನ್ನ ಲೇಖನದ ಧಾಟಿಯಲ್ಲೇ ಸಿಎನ್ ಎನ್ಐಬಿಎನ್ ನಲ್ಲೂ ವರದಿಯೊಂದು ಪ್ರಕಟವಾಗಿರುವುದು ನಿಜಕ್ಕೂ ಕಾಕತಾಳೀಯ.
ಲೇಖನ ಓದಿದ್ದಕ್ಕೆ ನಿಮಗೆ ಧನ್ಯವಾದಗಳು.
-ವಿಶ್ವನಾಥ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಟ್ಟ ಕಡೆಯ ವ್ಯಕ್ತಿ
  • ಪುಂಡಾಟಕ್ಕೆ ಕೊನೆಯೆಲ್ಲಿ?
  • ನ್ಯಾಯವೆಂಬ ಸೂರಿನೊಳಗೆ
  • ಶಾಂತಿನಾಥ ದೇಸಾಯಿ ಅವರ ಕಾದಂಬರಿ - ಬೀಜ
  • ನಿಮ್ಮನ್ನು ಭೂಮಿಗಿತ್ತವಳು ಭಾರವಾದಳೇ!?
Syndicate content

ಲೇಖಕರು

ವಿಶ್ವನಾಥ's picture

ಪರಿಚಯ

I am web journalist. Reading Kannada novels, watching art movies, travelling are my hobbies.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 36 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator