ಪತ್ರಿಕೆಯ ಸುಡೋಕು ಸ್ಥಳ
ಪ್ರತಿದಿನ ಬೆಳಗ್ಗೆ ಪತ್ರಿಕೆಯ ಮುಖ್ಯ ವರದಿಗಳನ್ನು ಓದಿದ ಮೇಲೆ ನಾನು ಹುಡುಕೋದು ಪತ್ರಿಕೆಯ ಸುಡೋಕು ಸ್ಥಳ.
ಎಲ್ಲಾ ಪತ್ರಿಕೆಗಳು ಸುಡೋಕುಗಾಗಿ ಒಂದು ಸ್ಥಳ ಮೀಸಲಿಟ್ಟಿದೆ.ಸಂಜೆ ಪತ್ರಿಕೆಗಳೂ ಸಹ. ಉದಾಹರಣೆಗೆ ಉದಯವಾಣಿಯಲ್ಲಿ ಕೊನೆಯ ಪುಟಕ್ಕಿಂತ ಹಿಂದೆ,ವಿ.ಕರ್ನಾಟಕದಲ್ಲಿ ಕೊನೆಯ ಪುಟದಲ್ಲಿ, ಪ್ರಜಾವಾಣಿ,ಕನ್ನಡಪ್ರಭ...ದಲ್ಲಿ ಒಳಗಿನ ಪುಟಗಳಲ್ಲಿ.
ಆದರೆ ಹೆಚ್ಚಿನ ಪತ್ರಿಕೆಗಳು (ಕನ್ನಡಿಗರು busy?/ದಡ್ಡರೆಂದು ತಿಳಿದಿದ್ದಾರೇನೊ?)ಬರೀ ಸುಲಭದ ಸುಡೋಕು ಕೊಡುತ್ತಿದ್ದಾರೆ.ಇದರಿಂದಾಗಿ ನಾನು ಹಲವು ಪತ್ರಿಕೆಗಳನ್ನು ಬದಲಾಯಿಸುತ್ತಾ ಇದ್ದೆ.Times of Indiaದವರು ಸುಡೋಕು ಸ್ಪರ್ಧೆ ಇದ್ದಾಗ ಉತ್ತಮ ಸುಡೋಕು ಕೊಡುತ್ತಿದ್ದರು.ಡೆಕ್ಕನ್ ಹೆರಾಲ್ಡ್,ಪ್ರಜಾವಾಣಿ,ಕನ್ನಡಪ್ರಭ,ಸಂಜೆವಾಣಿಯ ಸುಡೋಕು ಸಹ ಪರವಾಗಿಲ್ಲ.ವಿಜಯ ಕರ್ನಾಟಕದಲ್ಲಿ ಉದಯ ಜಾದುಗರ್ ಕೊಡುತ್ತಿದ್ದ ಸುಡೋಕು(ಬಹುಮಾನ ಬೇರೆ)ಯಾರಿಗೂ ಇಷ್ಟವಾಗಿರಲಿಕ್ಕಿಲ್ಲ. ಈಗ ಬರುತ್ತಿರುವ ೪,೮ರ ಸುಡೋಕು ಅದಕ್ಕಿಂತ ಎಷ್ಟೋ ವಾಸಿ.
ನೆಟ್ ನಲ್ಲಿ ಬೇಕಾದಷ್ಟು ಸುಡೊಕು ಸಿಗುತ್ತದೆ. ಸುಡೊಕು ಪುಸ್ತಕಗಳು ಇವೆ. ಆದರೆ ಅವುಗಳಲ್ಲಿ ನನಗೆ ಆಸಕ್ತಿಯಿಲ್ಲ. ಪತ್ರಿಕೆಗಳಲ್ಲಿಯೇ ಬರಬೇಕು. ಅದಕ್ಕೇ ನಾನು ಹುಡುಕೋದು"ಪತ್ರಿಕೆಗಳ ಸುಡೋಕು ಸ್ಥಳ".

- ಗಣೇಶ ರವರ ಬ್ಲಾಗ್
- Login or register to post comments
- 443 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಪತ್ರಿಕೆಯ ಸುಡೋಕು ಸ್ಥಳ
ಇದು ಸುಡೋಕು ಬಗ್ಗೆ ಲೇಖನ! ನಾನು ಪತ್ರಿಕೆ ಸುಡುವದಕ್ಕಾಗಿ ಸ್ಥಳ ಅಂತ ತಿಳಿದೆ !
ಅಂದಹಾಗೆ ಮಯೂರದಲ್ಲಿ ಕನ್ನಡ ಸುಡೋಕು ಬರುತ್ತದೆ . ನೋಡಿದ್ದೀರಾ ? ಅಂಕಿಗಳ ಬದಲಾಗಿ ಅ, ಆ , ಇ, ಈ .... ಇರುತ್ತದೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಪತ್ರಿಕೆಯ ಸುಡೋಕು ಸ್ಥಳ
ಹೌದು."ಕನ್ನಡ ಶಬ್ದಗಳ" ಸುಡೋಕು "ಕರ್ಮವೀರ" ವಾರಪತ್ರಿಕೆಯಲ್ಲೂ ಬರುತಿತ್ತು.
ಆದರೆ "ಅನಿವಾಸಿ"ಯವರು ತಿಳಿಸಿದಂತೆ ಅಂಕಿಗಳೇ ಇಷ್ಟವಾಗುವುದು.
ಉ: ಪತ್ರಿಕೆಯ ಸುಡೋಕು ಸ್ಥಳ
ಹೋದ ವರ್ಷ ಬೆಂಗಳೂರಿನಿಂದ ಮದ್ರಾಸಿಗೆ ಓಡಾಡುವಾಗ ಸುಡೋಕು ಚಟ ಹತ್ತಿಕೊಂಡಿತು. ಒಂದಷ್ಟು ದಿನ ಚುರುಕಾಗಿ ಬಿಡಿಸುವ ಚಟಕ್ಕೂ ಬಿದ್ದಿದ್ದೆ. ಈಗ ಮತ್ತೆ ಸ್ವಲ್ಪ ಸಮತೋಲಕ್ಕೆ ಬಂದಿದೆ. ನೀವು ಹೇಳಿದ ಹಾಗೆ ಯಾಕೆ ಕನ್ನಡದ ಪೇಪರಲ್ಲಿ ಸುಲಭವಾಗಿರತ್ತೆ ಅಂತ ಸಿಟ್ಟು ಬಂದಿತ್ತು!
ಮಿಶ್ರಿಕೋಟಿಯವರೆ, ಕನ್ನಡದ ಅಕ್ಷರಗಳು, ಹಾಗೆ ಇಂಗ್ಲೀಷ್ ಅಕ್ಷರಗಳೂ ಸುಡೋಕದಲ್ಲಿ ನೋಡಿದ್ದೇನೆ. ಅದೇಕೋ ಅಂಕಿಗಳೇ ಪ್ರಿಯವಾಗುತ್ತವೆ ನನಗೆ.
ಉ: ಪತ್ರಿಕೆಯ ಸುಡೋಕು ಸ್ಥಳ
"...ಕನ್ನಡದ ಪೇಪರಲ್ಲಿ ಸುಲಭವಾಗಿರತ್ತೆ ಅಂತ ಸಿಟ್ಟು ಬಂದಿತ್ತು."
ಓದಿ ಸಮಾಧಾನವಾಯಿತು.ಕನ್ನಡ ಪತ್ರಿಕೆಗಳು ಗಮನಿಸಲಿ.
ಉ: ಪತ್ರಿಕೆಯ ಸುಡೋಕು ಸ್ಥಳ
ಗಣೇಶಣ್ಣಾ:
ಈ ಬರಹದ idea ನನಗೇನಾದರೂ ಬ್ಂದಿದ್ದರೆ, ನೀವು ಬರೆದಿದ್ದನ್ನೆಲ್ಲಾ ನಾನೂ ಬರೆಯುತ್ತಿದ್ದೆ.
ಅದರ ಮೇಲೆ ಕಕುರೊ, ಹಾಗೂ freecell.net ನ ಬಗ್ಗೂ ಬರೆಯುತ್ತಿದ್ದೆ.
sudokuಗಿಂತ ಕಕುರೊ ನನಗೆ ಇತ್ತೀಚಿಗೆ ಹೆಚ್ಚು ಇಷ್ಟವಾಗುತ್ತಿದೆ.
ಉ: ಪತ್ರಿಕೆಯ ಸುಡೋಕು ಸ್ಥಳ
ತಮ್ಮಾರಾಮ್, ಕಕುರೊ,freecell.net(?),ಬಗ್ಗೆ ಬರಿ.
ನನಗೂ ಕಕುರೊ ಮತ್ತು loop ಇಷ್ಟ.