ಎಲ್ಲಾ ಕನ್ನಡದಲ್ಲಿ ಬರೆಯಲು... - 2
(ಮುಂದುವರೆಯುತ್ತಾ...)
ಬರಹದಿಂದ ಕಾಪಿ ಪೇಸ್ಟ್ ಮಾಡುವ ಬದಲು ನೇರವಾಗೇ ಬ್ರೌಸರ್‌ನಲ್ಲಿ ಟೈಪ್ ಮಾಡಲು ಯಾವುದೇ ಸಾಧನ ಇಲ್ಲವೇ ಅಂತ ಮತ್ತಷ್ಟು ಹುಡುಕಿದೆ. ಆಗ ಇಂಡಿಕ್‌ಐಎಂಇ ಅನ್ನೋ ತಂತ್ರಾಂಶ ಸಿಕ್ಕಿತು, ಆದರೆ ಅದು ಬರೀ ನೆಟ್ಸ್ಕೇಪ್ ಮತ್ತು ಪೈರ್‌ಪಾಕ್ಸ್‌ಗಳಿಗೆ ಮಾತ್ರ ಅಂತಿತ್ತು. ಆಗಲೇ, ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗೆ ನಾನೇ ಒಂದು ಐ.ಎಮ್.ಇ ಮಾಡ್ಬೇಕು ಅಂದುಕೊಂಡಿದ್ದು. ಈಗ ನೀವೂ ಇಂಡಿಕ್‌ಬ್ಬ್ಯಾಂಡ್ (ನಾ ತಯಾರಿಸಿದ ತಂತ್ರಾಂಶ) ಅನ್ನು shanka.homeip.net ಇಂದ ಡೌನ್‌ಲೋಡ್ ಮಾಡ್ಕೋಬಹುದು.
ನನ್ನ ತಂತ್ರಾಂಶ ಮಾಡಿದ ಮೇಲಿಂದ ನಾನು ಇನ್ನೂ ವಿಕಿಪೀಡಿಯಕ್ಕೆ ಹೋಗಿಲ್ಲ , ಯಾಕೆಂದ್ರೆ ನನಗೆ ಸಂಪದ ಸಿಕ್ಕಿತು!!!

- ಶಶಾಂಕ ರವರ ಬ್ಲಾಗ್
- Login or register to post comments
- 542 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಬಲ: ಎಲ್ಲಾ ಕನ್ನಡದಲ್ಲಿ ಬರೆಯಲು... - 2
ಶಶಾಂಕ ಅವರೇ,
ಕ್ಷಮಿಸಿ, ಇದಕ್ಕೆ ಉತ್ತರ ನೀಡಲು ಬಹಳ ಸಮಯ ತೆಗೆದುಕೊಂಡೆ. ನೀವು ಮಾಡಿರುವ IndicBand 0.1 ಐ.ಎಮ್.ಇ ಅನ್ನು ಬಳಸಿ ನೋಡಿದೆ. ನೋಡಿದಾಗ ನಿಜಕ್ಕೂ ಬಳಕೆಗೆ ಬರುತ್ತದೆ ಎನಿಸಿತು.
ಎರಡು ವಿಷಯಗಳಲ್ಲಿ, ಈಗ ಎಷ್ಟೋ ಜನರು ಬಳಸುತ್ತಿರುವ ಬರಹ ಐ.ಎಮ್.ಇಗೆ ಪೈಪೋಟಿ ನೀಡುತ್ತದೆ ಎಂದೆನಿಸಿತು.
೧. ಇದರ ಗಾತ್ರ, IndicBand 0.1 ಐ.ಎಮ್.ಇ ಕೇವಲ ೧೫೯ ಕೆ.ಬಿ ಇದೆ. ಹಾಗಾಗಿ ಡಯಲ್ ಅಪ್ ಬಳಸುವ ಗೆಳೆಯರಿಗೆ ಕಳುಹಿಸಬಹುದು. ಬರಹದ ಗಾತ್ರ ಸದ್ಯಕ್ಕೆ ೧.೨ ಎಮ್.ಬಿ ಆಸುಪಾಸಿನಲ್ಲಿದೆ.
೨. ಇದರ ಬಲವಿರುವುದು INSCRIPTನಲ್ಲಿ. ಇದಕ್ಕಾಗಿ ಮತ್ತೊಮ್ಮೆ ಸವಿಯೊದಗು. ನಾನಂತೂ ಎಲ್ಲರೂ INSCRIPT ಬಳಸುವಂತಾಗಲಿ ಎಂದು ಆಶಿಸುತ್ತೇನೆ. ಬರಹ ಐ.ಎಮ್.ಇಯಲ್ಲಿ ಇದು ಇಲ್ಲ.
ಆದರೆ ಕೆಲವೊಂದು ಮಾತು.
೧. ಬರಹ ಐ.ಎಮ್.ಇಯನ್ನು ಯಾವ ಅಪ್ಲಿಕೇಶನ್ ಓಡಿಸುವಾಗಲೂ ಬಳಸಬಹುದು. ಹಾಗಾಗಿ IndicBand 0.1 ಐ.ಎಮ್.ಇ ಕೇವಲ ಇಂಟರ್ನೆಟ್ಟಿಗೆ ಮಾತ್ರ ಸೀಮಿತವಾಗುತ್ತದೆ.
೨. MSIE ಅಲ್ಲದೆ ವಿಶೇಷವಾಗಿ ಫೈರ್ಫಾಕ್ಸ್ ನಲ್ಲಿಯೂ ಬಳಸುವಂತಾದರೆ ಇನ್ನೂ ಚೆನ್ನಾಗಿರುತ್ತದೆ.
ಅಂದ ಹಾಗೆ, ನಾನು ಬಳಸಿದ್ದು ವಿಂಡೋಸ್ ಎಕ್ಸ್.ಪಿಯಲ್ಲಿ, ಯಾರಾದರು ೨೦೦೦ ಮತ್ತು ೯೮ರಲ್ಲಿ ಪರೀಕ್ಷಿಸಿದರೆ ಚೆನ್ನಾಗಿರುತ್ತದೆ.
Re: ಬಲ: ಎಲ್ಲಾ ಕನ್ನಡದಲ್ಲಿ ಬರೆಯಲು... - 2
ಜಯಪ್ರಕಾಶ್, ನಿಮ್ಮ ಟಿಪ್ಪಣಿಗೆ ಧನ್ಯವಾದಗಳು. ಈ ತಂತ್ರಾಂಶವನ್ನು ವಿಂಡೋಸ್ ೯೮ ಮತ್ತು ಎಮ್.ಇ ಉಪಯೋಗಿಸುವವರಿಗೆ ಅಂತಲೇ ಮಾಡಿದ್ದು (ಏಕೆಂದರೆ ಅವರಿಗೆ ಯುನಿಕೋಡ್ ಸಪೋರ್ಟ್ ಕಮ್ಮಿ, ಇಂಟರ್‌ನೆಟ್‌ಗೆ ಸೀಮಿತ), ಆದ್ದರಿಂದ ಇದು MSIEಯಲ್ಲಿ (ಮಾತ್ರ) ವರ್ಕ್ ಆಗತ್ತೆ.
ಪೈರ್‌ಪಾಕ್ಸ್‌ಗೆ ಈಗಾಗಲೆ ಒಂದು ಐ.ಎಮ್.ಇ. ಇದೆ, ಆದರೆ ನಾನು ಅದನ್ನ ಉಪಯೋಗಿಸಿಲ್ಲ (http://indicime.mozdev.org).
Re: ಬಲ: ಎಲ್ಲಾ ಕನ್ನಡದಲ್ಲಿ; ಅರ್ಧ ಉಚ್ಛಾರಗಳು
ಈ ಟಿಪ್ಪಣಿ ಮೇಲಿನ ಚರ್ಚಾ ಸರಣಿಗೆ ಸಂಬಂಧಪಟ್ಟಿದ್ದಲ್ಲ ..
ಜಯಪ್ರಕಾಶ್, ಎಮ್, ಸಪೋರ್ಟ್, .. ಈ ರೀತಿಯ ಅರ್ಧ ಉಚ್ಛಾರದಲ್ಲಿ ಮುಗಿಯುವ ಪದಗಳನ್ನು ಹೇಗೆ ಟೈಪ್ ಮಾಡಿದ್ದೀರಿ?
ಉ: ಎಲ್ಲಾ ಕನ್ನಡದಲ್ಲಿ; ಅರ್ಧ ಉಚ್ಛಾರಗಳು
Capital 'F' ಉಪಯೋಗಿಸಿದರೆ ಅರ್ಧಾಕ್ಷರಗಳು ಹಾಗೆ ಉಳಿಯುತ್ತವೆ.
ಉದಾಹರಣೆಗೆ: ಪೋಲೀಸ್‌ನವರು = pOlIsFnavaru
ಬಸ್ ಹತ್ತಿ = basF hatti
Re: ಎಲ್ಲಾ ಕನ್ನಡದಲ್ಲಿ ಬರೆಯಲು... - 2
ಇನ್ ಸ್ಕ್ರಿಪ್ವ್ ಕಗಪ ವಿನ್ಯಾಸಕ್ಕಿಂತ ಒಳ್ಳೆಯದೇ? ಕಗಪ ವಿನ್ಯಾಸದಲ್ಲಿ ಕ ಬರೆಯಲು ಕೆ ಒತ್ತಿದರೆ ಸಾಕಲ್ಲಾ - ಬರಹದಲ್ಲಿ ಕೆ ಮತ್ತು ಎ ಎರಡೂ ಒತ್ತಬೇಕಲ್ಲಾ? ಇನ್ನು ಇನ್ ಸ್ಕ್ರಿಪ್ಟ್ ಯಾವ ಕೀಲಿ ಎಲ್ಲಿದೆ ಎಂದು ಮೊದಲು ಕಲಿಯಬೇಕೇನೋ? ನನಗೇನೋ ನೇರ ನುಡಿ ಸುಲಭವಾಗಿದೆ. ಆದ್ರೆ ವಿಂಡೋಸ್ ಎಕ್ಸ್ ಪಿ ಯಲ್ಲಿ ಉಪಯೋಗಿಸಲು ಇನ್ನೂ ಪರದಾಡುತ್ತಿದ್ದೇನೆ. ಈಗ ಬರಹ IME ಯಲ್ಲಿ ಕಷ್ಟ ಪಟ್ಟು ಬರೆಯುತ್ತಿದ್ದೇನೆ. ಮಧ್ಯದಲ್ಲಿ ಸ್ವರಗಳನ್ನು ಸೇರಿಸಲು ಮರೆತು ಹೋಗುತ್ತಿದೆ.
ಇಷ್ಟೆಲ್ಲಾ ಆದ ಮೇಲೆ ಬರಹ IMEಯಲ್ಲೇ ಕಗಪ ವಿನ್ಯಾಸ ಬಳಸಿದೆ! ಈ ರೀತಿ ಮಾಡ್ತಾ ಮಾಡ್ತಾ ಕಲೀ ಬೇಕಷ್ಟೆ ಅಲ್ಲವೇ? ಅದೇ ರೀತಿ ಫಾಂಟ್ ಬದಲಾಯಿಸಲೂ ಆಗುತ್ತದೆಯೇ?